ರಜೆ ಸರಿದೂಗಿಸಲು ಶನಿವಾರ ಅಥವಾ ರವಿವಾರ ತರಗತಿ

Team Udayavani, Aug 19, 2019, 5:58 AM IST

ಮಂಗಳೂರು/ಉಡುಪಿ: ಭಾರೀ ಮಳೆ, ಪ್ರವಾಹ ದಿಂದಾಗಿ ಶಾಲೆಗಳಿಗೆ ನೀಡಿದ್ದ ರಜೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಶನಿವಾರ ಅಥವಾ ರವಿವಾರ ತರಗತಿಗಳನ್ನು ನಡೆಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ವಿಪರೀತ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಸರಣಿ ರಜೆ ನೀಡಿತ್ತು. ವಿದ್ಯಾರ್ಥಿ ಗಳಿಗೆ ಸತತ ಐದು ದಿನಗಳ ರಜೆ ದೊರಕಿತ್ತು. ಆದರೆ ಇದರಿಂದ ಪಠ್ಯ ಅಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಪರಿಹಾರವಾಗಿ ಶನಿವಾರ ಮಧ್ಯಾಹ್ನದ ಅನಂತರ ಅಥವಾ ರವಿವಾರ ತರಗತಿ ನಡೆಸಲು ಸೂಚಿಸಲಾಗಿದೆ. ಕಳೆದ ಮಳೆಗಾಲದಲ್ಲೂ ಭಾರೀ ಮಳೆ ಉಂಟಾದ ವೇಳೆ ಘೋಷಿಸಿದ ರಜೆಗಳನ್ನು ಹೆಚ್ಚುವರಿ ತರಗತಿ ನಡೆಸಿ ಸರಿದೂಗಿಸಲಾಗಿತ್ತು.

ನೆರೆ ಪೀಡಿತ ಪ್ರದೇಶಗಳ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ನಿಗಾ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬಂದ ಸೂಚನೆಯಂತೆ ಪರಿಸ್ಥಿತಿ ಸಹಜಕ್ಕೆ ಬಂದ ಬಳಿಕ ಹೆಚ್ಚುವರಿ ತರಗತಿ ಆರಂಭಿಸ ಬಹುದು. ರಸ್ತೆ, ಸೇತುವೆ ಹಾನಿಯಾಗಿರುವ ಕಡೆ ವಿದ್ಯಾರ್ಥಿ ಗಳನ್ನು ಹಾಜರಾಗಲು ಒತ್ತಾಯಿಸಬೇಕಾಗಿಲ್ಲ. ಅಲ್ಲದೆ ನೆರೆ ಪೀಡಿತ ಭಾಗಗಳ ವಿದ್ಯಾರ್ಥಿಗಳ ಆರೋಗ್ಯದ ಕಡೆಗೂ ಗಮನ ನೀಡಬೇಕು.

ಶಾಲೆ ಸ್ಥಿತಿ ಪರಿಶೀಲಿಸಿದ ಬಳಿಕ ತರಗತಿ

ನೆರೆ ಪೀಡಿತ ಪ್ರದೇಶಗಳಲ್ಲಿ ಶಾಲೆ ಆರಂಭಿಸುವ ಮುನ್ನ ಎಂಜಿನಿಯರ್‌ ಮೂಲಕ ಕಟ್ಟಡದ ಸ್ಥಿತಿಗತಿ ಪರಿಶೀಲಿಸಿ, ಕಟ್ಟಡದ ಕ್ಷಮತಾ ದೃಢಪತ್ರ ಪಡೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ಮೂರು ದಿನಗಳೊಳಗೆ ನಿರ್ಧಾರ

ಶನಿವಾರವಾದರೆ ಮುಂದಿನ ಹತ್ತು ದಿನಗಳ ಕಾಲ ಮಧ್ಯಾಹ್ನದ ಬಳಿಕ ತರಗತಿ ನಡೆಯುತ್ತದೆ. ಶನಿವಾರವೇ ಅಥವಾ ರವಿವಾರವೇ ಎಂಬ ಬಗ್ಗೆ ನಿರ್ಧಾರವಾಗಿಲ್ಲ. ಮೂರು ದಿನಗಳೊಳಗೆ ಈ ಬಗ್ಗೆ ನಿರ್ಧರಿಸಿ ತಿಳಿಸಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ