ಸೀತಾನದಿ ಉಳಿಸಿ: ಶ್ರಮದಾನ

Team Udayavani, May 18, 2019, 6:15 AM IST

ಬ್ರಹ್ಮಾವರ: ಮಾಬುಕಳ ಸೇತುವೆ ಬಳಿ ಇರುವ ಕಸ, ತ್ಯಾಜ್ಯದ ರಾಶಿಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಸೀತಾ ನದಿ ಉಳಿಸಿ ಎನ್ನುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೇ 19ರಂದು ಬೆಳಗ್ಗೆ 7ರಿಂದ ಶ್ರಮದಾನ ಜರಗಲಿದೆ. ಮಾಬುಕಳ ಸೇತುವೆ ಬಳಿ ರಾ.ಹೆ.ಯ ಇಕ್ಕೆಲಗಳಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ. ವಾಹನ ಸವಾರರು ತ್ಯಾಜ್ಯ ಎಸೆಯುವುದರಿಂದ ಅಸಹ್ಯ ವಾತಾವರಣ ಸೃಷ್ಟಿಯಾಗಿದೆ.

ಭಾರೀ ಪ್ರಮಾಣದ ಕಸ ನದಿಯನ್ನು ಸೇರಿ ನೀರು ಕಲುಷಿತಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸ್ವಚ್ಛ ಸ್ವಸ್ಥ ಹಾಗೂ ಸುಂದರತೆಗಾಗಿ ಶ್ರಮದಾನ ನಡೆಯಲಿದೆ. ಇಲ್ಲಿನ ತ್ಯಾಜ್ಯ ಸಮಸ್ಯೆ ಕುರಿತು ಉದಯವಾಣಿಯಲ್ಲಿ ವರದಿ ಪ್ರಕಟಗೊಂಡಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ