ಹೆಬ್ರಿಯಲ್ಲಿ ಸೇವ್‌ ವಾಟರ್‌ ಸಾಕ್ಷ್ಯಚಿತ್ರದ ಚಿತ್ರೀಕರಣ

Team Udayavani, Apr 25, 2017, 2:46 PM IST

25-MNG-4.jpg

ಹೆಬ್ರಿ: ಒಂದೆಡೆ ಬಿಸಿಲ ಬೇಗೆ, ಇನ್ನೊಂದಡೆ ಕುಡಿಯುವ ನೀರಿಗೂ ಹಾಹಾಕಾರ. ಎಲ್ಲೆಡೆ ಕೆರೆ ಬಾವಿಗಳು ಬತ್ತಿವೆ, ದಿನಾಲು ಬರುತ್ತಿದ್ದ
ನಳ್ಳಿ ನೀರು ಈಗ ವಾರಕ್ಕೆ ಒಮ್ಮೆ ಮಾತ್ರ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನಮಗೆ ಏನೂ ತಿಳಿದಿಲ್ಲ ಎಂದು ಅಲ್ಪಸ್ವಲ್ಪವಿರುವ ನೀರನ್ನು ಹಾಳುವ ಮಾಡುವ ಜನ ಒಂದೆಡೆ. ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡು “ಸೇವ್‌ ವಾಟರ್‌’ ಎಂಬ ಶೀರ್ಷಿಕೆಯಲ್ಲಿ ಸಾಕ್ಷ್ಯ ಚಿತ್ರದ ಚಿತ್ರೀಕರಣ ಹೆಬ್ರಿ ಬಸ್ಸು ತಂಗು ದಾಣದ ವಠಾರದಲ್ಲಿ ಎ. 23ರಂದು ನಡೆಯಿತು.

ಹೆಬ್ರಿ ಚಾಣಕ್ಯ ಟ್ಯುಟೋರಿಯಲ್‌ ಕಾಲೇಜು ಆಶ್ರಯದಲ್ಲಿ ಎ. 19ರಿಂದ ಎ. 25ರ ವರೆಗೆ ಹೆಬ್ರಿ ಸಮಾಜ ಮಂದಿರದಲ್ಲಿ ನಡೆಯುತ್ತಿರುವ
ಚಾಣಕ್ಯ-2017 ಬೇಸಗೆ ರಜಾ ಶಿಬಿರದಲ್ಲಿ ಯುನಿಸೆಫ್ ಪ್ರಸಾರ ಭಾರತಿ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಪ್ರಕಾಶ್‌ ಸುವರ್ಣ ಕಟಪಾಡಿ ಅವರಿಂದ ಚಲನಚಿತ್ರ ಅಭಿನಯ, ನೃತ್ಯ, ನಿರ್ದೇಶನ, ಚಿತ್ರೀಕರಣ ಮೊದಲಾದ ವಿಷಯದ ಕುರಿತು ಪ್ರಾಯೋಗಿಕ ತರಬೇತಿಯ ಬಳಿಕ ಶಿಬಿರಾರ್ಥಿಗಳು ನಟಿಸಿರುವ ಕಿರು ಸಾಕ್ಷ್ಯ ಚಿತ್ರಕ್ಕೆ ಹೆಬ್ರಿ ಗ್ರಾ. ಪಂ. ಅಧ್ಯಕ್ಷ ಸುಧಾಕರ ಹೆಗ್ಡೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ರಾಜಸಮಯವನ್ನು ಮೊಬೈಲ್‌, ಟಿ.ವಿ. ಎಂದು ಹಾಳು ಮಾಡದೇ ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ತಾವು ಪರಿಪೂರ್ಣರಾಗುವುದರೊಂದಿಗೆ ತಮ್ಮಲ್ಲಿರುವ ಪ್ರತಿಭಾ ವಿಕಸನಕ್ಕೆ ಅವಕಾಶ ಸಿಕ್ಕಿದಂತಾಗುತ್ತದೆ. ಪರಿಸರ ಕಾಳಜಿ, ಸ್ವತ್ಛತೆ, ಪಕ್ಷಿಸಂಕುಲ ಉಳಿಸಿ ಅಭಿಯಾನ, ನೀರು ಹಿತಮಿತ ಬಳಕೆ ಮೊದಲಾದ ವಿಚಾರಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಜಾಗೃತಿ ಮಾಡಿಸುವ ಇಂತಹ ಬೇಸಗೆ ಶಿಬಿರವನ್ನು ಆಯೋಜಿಸಿರುವ ಹೆಬ್ರಿಯ ಚಾಣಕ್ಯ ಸಂಸ್ಥೆಯ ಸಾಧನೆ ಶ್ಲಾಘನೀಯ ಎಂದರು.

ಹೆಬ್ರಿಯಲ್ಲಿ ಮೊದಲಬಾರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತ ಸಂಪನ್ಮೂಲ ವ್ಯಕ್ತಿಗಳಿಂದ ವೈವಿಧ್ಯಮಯ ತರಬೇತಿಯನ್ನು ಹೆಬ್ರಿ ಚಾಣಕ್ಯ ಟ್ಯೂಟೋರಿಯಲ್‌ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದು ತರಬೇತಿಯೊಂದಿಗೆ ಉತ್ತಮ ಮಾಹಿತಿ ಮಾರ್ಗದರ್ಶನ ನೀಡುತ್ತಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದ್ದು ಶಿಬಿರಾರ್ಥಿಗಳಲ್ಲಿ ಸ್ವತ್ಛತೆ, ಆರೋಗ್ಯ, ಜೀವನ ಶೈಲಿ ಅರಿವು 
ಮೂಡಿಸಿರುವುದರೊಂದಿಗೆ ಅವರ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸಲಾಗುತ್ತಿದೆ. ಎಲ್ಲೆಡೆ ನೀರಿನ ಸಮಸ್ಯೆಯನ್ನು ಮನಗಂಡ
ಶಿಬಿರದ ಆಯೋಜಕರು ಚಿತ್ರ ನಿರ್ದೇಶಕ ಪ್ರಕಾಶ್‌ ಸುವರ್ಣ ಅವರ ಪರಿಕಲ್ಪನೆಯಂತೆ ಚಲನ ಚಿತ್ರನಟನೆಯ ತರಬೇತಿಯೊಂದಿಗೆ ಸೇವ್‌ ವಾಟರ್‌ ಎಂಬ ಕಾನ್ಸೆಪ್ಟ್ನ್ನು ಮಕ್ಕಳಲ್ಲಿ ತುಂಬಿ ಸಮಾಜ ಮಂದಿರದಿಂದ ಹೆಬ್ರಿ ಸರ್ಕಲ್‌ ವರೆಗೆ ಸೇವ್‌ ವಾಟರ್‌ ಎಂಬ ಘೋಷದೊಂದಿಗೆ ಮಕ್ಕಳ ಮೆರವಣಿಗೆ ಹೊರಟು ಜನರಲ್ಲಿ ಜಾಗೃತಿ ಮೂಡಿಸಿ ಸರ್ಕಲ್‌ ಬಳಿ ಸೇರಿದ ಶಿಬಿರಾರ್ಥಿಗಳಿಂದ ಸೇವ್‌ ವಾಟರ್‌ ವಿಚಾರದ ಕುರಿತು ಅನಿಸಿಕೆಗಳನ್ನು ಒಳಗೊಂಡ ಕಿರುಚಿತ್ರದ ಚಿತ್ರೀಕರಣದ ಜತೆ ಶಿಬಿರಾರ್ಥಿಗಳಿಗೆ ನಿರ್ದೇಶನ,
ನಟನೆ, ಛಾಯಾಚಿತ್ರಗ್ರಹಣ ಮೊದಲಾದ ವಿಚಾರದ ಕುರಿತು ಮಾಹಿತಿ ನೀಡಲಾಯಿತು. 

ಶಿಬಿರಾರ್ಥಿಗಳಾದ ನಿಭಾ, ನಿಧಿ, ಪ್ರಸಿನ್‌, ಸಂಖ್ಯಾ, ಶರದಿ, ಆದರ್ಶ, ಓಂಕಾರ್‌, ಚಿರಂಜೀವಿ, ರಿತಿಕಾ, ಸೃಷ್ಟಿ ಎಸ್‌. ಹೆಗ್ಡೆ ಮೊದಲಾದವರು ನಟಿಸಿದ್ದಾರೆ. ಚಿತ್ರಕ್ಕೆ ಮಹೇಶ ಬಚ್ಚಪ್ಪು, ಗಣೇಶ್‌ ಹೇರಳೆ, ವೀರಭದ್ರ ಸಂತೋಷ್‌ ಶೆಟ್ಟಿ, ರವಿ ಬಚ್ಚಪ್ಪು,
ಕರುಣಾಕರ ಶೆಟ್ಟಿ ಮೊದಲಾದವರು ಸಹಕರಿಸಿದ್ದಾರೆ. ಈ ಸಂದರ್ಭ ಚಿತ್ರನಟ ಸಂಜೀವ ಸುವರ್ಣ, ಚಾಣಕ್ಯ ಟ್ಯುಟೋರಿಯಲ್‌ ಕಾಲೇಜಿನ ಪ್ರಾಂಶು ಪಾಲೆ ವೀಣಾ ಯು. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಹೊಸ ಸರಕಾರಿ ಹಾಸ್ಟೆಲ್‌ಗೆ 6.5 ಕೋ.ರೂ. ಬಿಡುಗಡೆ

ಹೊಸ ಸರಕಾರಿ ಹಾಸ್ಟೆಲ್‌ಗೆ 6.5 ಕೋ.ರೂ. ಬಿಡುಗಡೆ

ದ.ಕ. ಜಿಲ್ಲೆಯಲ್ಲಿ ಮರಳು ಹೇರಳವಾಗಿ ಲಭ್ಯ: ಡಿಸಿ ;”ಮರಳು ಮಿತ್ರ’ ಮೂಲಕ ಮಿತ ದರದಲ್ಲಿ ಲಭ್ಯ

ದ.ಕ. ಜಿಲ್ಲೆಯಲ್ಲಿ ಮರಳು ಹೇರಳವಾಗಿ ಲಭ್ಯ: ಡಿಸಿ ;”ಮರಳು ಮಿತ್ರ’ ಮೂಲಕ ಮಿತ ದರದಲ್ಲಿ ಲಭ್ಯ

ಬೆಳ್ತಂಗಡಿ ತಾಲೂಕಿಗೆ ಜಿಲ್ಲಾಧಿಕಾರಿ ಭೇಟಿ: ಚಾರ್ಮಾಡಿ ಘಾಟಿ, ಭೂಕುಸಿತ ಪ್ರದೇಶ ಪರಿಶೀಲನೆ

ಬೆಳ್ತಂಗಡಿ ತಾಲೂಕಿಗೆ ಜಿಲ್ಲಾಧಿಕಾರಿ ಭೇಟಿ: ಚಾರ್ಮಾಡಿ ಘಾಟಿ, ಭೂಕುಸಿತ ಪ್ರದೇಶ ಪರಿಶೀಲನೆ

ಈಡನ್‌ನಲ್ಲಿ ಆರ್‌ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ

ಈಡನ್‌ನಲ್ಲಿ ಆರ್‌ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ ಸೂಪರ್‌ ಜೈಂಟ್ಸ್‌

cmಸಿಎಂ ದಾವೋಸ್‌ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ

ಸಿಎಂ ದಾವೋಸ್‌ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ

ತಪ್ಪುಗಳನ್ನು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ

ತಪ್ಪುಗಳನ್ನು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ

ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು; 91.07 ಲಕ್ಷ ಕೆ.ಜಿ. ಹಾಲು ಶೇಖರಣೆ

ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು; 91.07 ಲಕ್ಷ ಕೆ.ಜಿ. ಹಾಲು ಶೇಖರಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಸರಕಾರಿ ಹಾಸ್ಟೆಲ್‌ಗೆ 6.5 ಕೋ.ರೂ. ಬಿಡುಗಡೆ

ಹೊಸ ಸರಕಾರಿ ಹಾಸ್ಟೆಲ್‌ಗೆ 6.5 ಕೋ.ರೂ. ಬಿಡುಗಡೆ

ಪತ್ನಿಗೆ ಕಿರುಕುಳ ನೀಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್‌ ವಶಕ್ಕೆ

ಕಾಪು : ಪತ್ನಿಗೆ ಕಿರುಕುಳ ನೀಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್‌ ವಶಕ್ಕೆ

ಮಣಿಪಾಲ: ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾದ ಬೈಕ್ ; ವಿದ್ಯಾರ್ಥಿ ಸಾವು

ಮಣಿಪಾಲ: ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾದ ಬೈಕ್ ; ವಿದ್ಯಾರ್ಥಿ ಸಾವು

tender

ಮಳೆ ಸಿದ್ಧತೆ, ಟೆಂಡರ್‌ ರದ್ದತಿ, ಕಾಮಗಾರಿ ವಿಳಂಬ

ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಸಾಧನೆ : ಸಾಧಕರಿಗೆ ಉದಯವಾಣಿ ಅಭಿನಂದನೆ

ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಸಾಧನೆ : ಸಾಧಕರಿಗೆ ಉದಯವಾಣಿ ಅಭಿನಂದನೆ

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

ಹೊಸ ಸರಕಾರಿ ಹಾಸ್ಟೆಲ್‌ಗೆ 6.5 ಕೋ.ರೂ. ಬಿಡುಗಡೆ

ಹೊಸ ಸರಕಾರಿ ಹಾಸ್ಟೆಲ್‌ಗೆ 6.5 ಕೋ.ರೂ. ಬಿಡುಗಡೆ

ದ.ಕ. ಜಿಲ್ಲೆಯಲ್ಲಿ ಮರಳು ಹೇರಳವಾಗಿ ಲಭ್ಯ: ಡಿಸಿ ;”ಮರಳು ಮಿತ್ರ’ ಮೂಲಕ ಮಿತ ದರದಲ್ಲಿ ಲಭ್ಯ

ದ.ಕ. ಜಿಲ್ಲೆಯಲ್ಲಿ ಮರಳು ಹೇರಳವಾಗಿ ಲಭ್ಯ: ಡಿಸಿ ;”ಮರಳು ಮಿತ್ರ’ ಮೂಲಕ ಮಿತ ದರದಲ್ಲಿ ಲಭ್ಯ

ಬೆಳ್ತಂಗಡಿ ತಾಲೂಕಿಗೆ ಜಿಲ್ಲಾಧಿಕಾರಿ ಭೇಟಿ: ಚಾರ್ಮಾಡಿ ಘಾಟಿ, ಭೂಕುಸಿತ ಪ್ರದೇಶ ಪರಿಶೀಲನೆ

ಬೆಳ್ತಂಗಡಿ ತಾಲೂಕಿಗೆ ಜಿಲ್ಲಾಧಿಕಾರಿ ಭೇಟಿ: ಚಾರ್ಮಾಡಿ ಘಾಟಿ, ಭೂಕುಸಿತ ಪ್ರದೇಶ ಪರಿಶೀಲನೆ

ಈಡನ್‌ನಲ್ಲಿ ಆರ್‌ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ

ಈಡನ್‌ನಲ್ಲಿ ಆರ್‌ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ ಸೂಪರ್‌ ಜೈಂಟ್ಸ್‌

cmಸಿಎಂ ದಾವೋಸ್‌ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ

ಸಿಎಂ ದಾವೋಸ್‌ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.