ಉಡುಪಿ: ಇ-ಖಾತಾ ಸರ್ವರ್ ಸಮಸ್ಯೆ ಪರಿಹಾರ… ಗ್ರಾಹಕರಿಗೆ ಆನ್‌ಲೈನ್ ಸೇವೆ ಲಭ್ಯ
Team Udayavani, Nov 22, 2022, 11:32 AM IST
ಉಡುಪಿ : ಮಂಗಳೂರು ಮಹಾನಗರ, ಉಡುಪಿ ನಗರಸಭೆ ಸಹಿತವಾಗಿ ರಾಜ್ಯದ ಬಹುತೇಕ ಎಲ್ಲ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನಿವೇಶನ, ಕಟ್ಟಡಗಳ ಆಸ್ತಿ ಹಕ್ಕಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ದಾಖಲಿಸುವ ಇ-ಖಾತಾ ಸರ್ವರ್ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಗ್ರಾಹಕರಿಗೆ ಆನ್‌ಲೈನ್ ಸೇವೆ ಲಭ್ಯವಾಗುತ್ತಿದೆ.
“ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಸರ್ವರ್ ಸಮಸ್ಯೆ: ಹತ್ತು ದಿನಗಳಾದರೂ ಕೇಳುವವರಿಲ್ಲ’ ಎಂಬ ಶೀರ್ಷಿಕೆಯಡಿ ನ. 18ರಂದು ಉದಯವಾಣಿ ವರದಿ ಮಾಡಿತ್ತು. ಎಚ್ಚೆತ್ತುಕೊಂಡ ಅಧಿಕಾರಿಗಳು, ಸಾಫ್ಟ್ವೇರ್ ಅಪ್‌ಡೇಟ್ ಕಾರ್ಯ ಚುರುಕುಗೊಳಿಸಿದ್ದಾರೆ. ಸೋಮವಾರ ದಿಂದ ಸಮಸ್ಯೆ ಬಹುಪಾಲು ನಿವಾರಣೆಯಾಗಿದೆ.
ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ… ಸಹಿತ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ನಿವೇಶನ ಮಾಲಕರು ಇ-ಖಾತಾಕ್ಕಾಗಿ ಚಲನ್ ಮೂಲಕ ಶುಲ್ಕ ಪಾವತಿಸಿ, ನಿವೇಶನ, ಕಟ್ಟಡ ಗುರತಿಸಿ, ಪರಿಶೀಲಿಸಿ ಅದರ ಮಾಹಿತಿಯನ್ನು ಇ-ಖಾತಾದಲ್ಲಿ ದಾಖಲಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಡಿಜಿಟಲ್ ಮೂಲಕ ಯಾವ ಸೇವೆಯು ಸಾಧ್ಯವಾ ಗುತ್ತಿರ ಲಿಲ್ಲ. ಈ ಬಗ್ಗೆ ಉದಯವಾಣಿ ವಿಸ್ತೃತವರದಿ ಮಾಡಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಪೌರಾಡಳಿತ ಇಲಾಖೆಯ ಗಮನ ಸೆಳೆದಿತ್ತು. ಇ-ಖಾತಾ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗಿದೆ. ಈಗ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಲ ರೀತಿಯ ಸೇವೆಗಳು ಆನ್‌ಲೈನ್‌ನಲ್ಲಿ ನೀಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಇದನ್ನೂ ಓದಿ : ವಿಧ್ವಂಸಕ ಕೃತ್ಯಕ್ಕೆ ಕರಾವಳಿ ಕಾರ್ಯಸ್ಥಾನ? ಕುಕ್ಕರ್ ಘಟನೆ ಬಿಚ್ಚಿಡುತ್ತಿದೆ ಸ್ಫೋಟಕ ಮಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ
ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು
ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?
ಸಬ್‌ರಿಜಿಸ್ಟ್ರಾರ್ ಕಚೇರಿಗಳು ಇನ್ನು ಸ್ಮಾರ್ಟ್
ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣಗಳು ದೂರ:ಸುಪ್ರೀಂ