ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ
Team Udayavani, Jul 27, 2019, 7:34 PM IST
ಪಡುಬಿದ್ರಿ: ಶಾಲಾ ವಿದ್ಯಾರ್ಥಿನಿಗೆ ವರ್ಷವೊಂದರ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಇನ್ನಾ ಗ್ರಾಮದ ಫೆಲಿಕ್ಸ್ ಡಿ’ ಸೋಜಾ(55) ಎಂಬಾತನನ್ನು ಪಡುಬಿದ್ರಿ ಎಸ್ಐ ಸುಬ್ಬಣ್ಣ ಅವರು ಜು. 26ರಂದು ಬಂಧಿಸಿದ್ದಾರೆ.
ಬಾಲಕಿಯು ವರ್ಷದ ಹಿಂದೆ ಆರೋಪಿಯ ವಾಹನದಲ್ಲಿ ಶಾಲೆಗೆ ತೆರಳುತ್ತಿದ್ದಳು. ಈಗ ರಿಕ್ಷಾ ಮೂಲಕ ಶಾಲೆಗೆ ಹೋಗುತ್ತಿದ್ದಾಗಲೂ ಆರೋಪಿಯು ಕೈ ಸನ್ನೆಗಳ ಮೂಲಕ ಬಾಲಕಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದ. ಸಮಾಜ ಕಲ್ಯಾಣ ಇಲಾಖಾಧಿಕಾರಿ ಪ್ರಭಾಕರ ಆಚಾರ್ಯ ಅವರು ಬಾಲಕಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ವರ್ಷದ ಹಿಂದೆಯೂ ಆತ ಕಿರುಕುಳ ನೀಡಿದ್ದ ವಿಷಯ ಬಹಿರಂಗವಾಯಿತು. ಈ ಅಧಿಕಾರಿಯ ಸೂಚನೆಯಂತೆ ಆರೋಪಿಯನ್ನು ಪೋಕೊÕà ಕಾಯಿದೆ ಅಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ