ಕುಂದಾಪುರ ಫ್ಲೈಓವರ್ ಕಾಮಗಾರಿ ತ್ವರಿತಕ್ಕೆ ಮನವಿ

ಸಚಿವ ಗಡ್ಕರಿ ಭೇಟಿಯಾದ ಸಂಸದೆ ಶೋಭಾ

Team Udayavani, Jul 11, 2019, 5:22 AM IST

ಕುಂದಾಪುರ: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಮಂಗಳವಾರ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರನ್ನು ಭೇಟಿಯಾಗಿ ಕುಂದಾಪುರದ ಮೇಲ್ಸೆತುವೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕಾಗಿ ಮನವಿ ಸಲ್ಲಿಸಿದರು.

ಇಲ್ಲಿನ ಶಾಸ್ತ್ರೀ ವೃತ್ತದಲ್ಲಿನ ಪೂರ್ಣಗೊಳ್ಳದ ಮೇಲ್ಸೇತುವೆ ಕಾಮಗಾರಿ ಯಿಂದಾಗಿ ಆಗುತ್ತಿರುವ ತೊಂದರೆಗಳನ್ನು ಸಚಿವರಿಗೆ ವಿವರಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಮನವಿ ಮಾಡಿದರು. ಇದಲ್ಲದೆ ನವಯುಗ ಕಂಪೆನಿಯ ಕಾಮಗಾರಿ ಅಪೂರ್ಣವಾಗಿದ್ದು, ಪಡುಬಿದ್ರಿ ಪೇಟೆಯಲ್ಲಿ ಸರ್ವಿಸ್‌ ರಸ್ತೆ ಕಾಮಗಾರಿ, ಬಸ್ರೂರು ಮೂರು ಕೈ ಬಳಿಯ ಅಂಡರ್‌ಪಾಸ್‌ ಕಾಮಗಾರಿ ಅರ್ಧಕ್ಕೆ ನಿಂತಿದೆ. ಬೀಜಾಡಿ ಸರ್ವಿಸ್‌ ರಸ್ತೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಆಗಬೇಕಾಗಿದೆ. ಸಾಲಿಗ್ರಾಮದಲ್ಲಿ ಎರಡೂ ಬದಿ ಸರ್ವಿಸ್‌ ರಸ್ತೆ ಕಾಮಗಾರಿ ಆರಂಭವಾಗಿಲ್ಲ. ಚಿಕ್ಕನ್‌ಸಾಲ್‌ನಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಂಬಲಪಾಡಿ ಜಂಕ್ಷನ್‌ನಲ್ಲಿ ಫ್ಲೈಓವರ್ ಅಥವಾ ಅಂಡರ್‌ಪಾಸ್‌ ಅಗತ್ಯವಿದೆ. ಅಂಬಾಗಿಲುವಿನಲ್ಲಿ ಇನ್ನೂ ಸರ್ವಿಸ್‌ ರಸ್ತೆ ಆಗಿಲ್ಲ. ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಸರ್ವಿಸ್‌ ರಸ್ತೆ ಬೇಕಿದೆ ಎನ್ನುವುದರ ಕುರಿತು ಸಂಸದರು ಸಚಿವರ ಗಮನ ಸೆಳೆದರು. ಕೇಂದ್ರ ಸಚಿವ ಸುರೇಶ್‌ ಅಂಗಡಿ ಜತೆಗಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ