ಸಿಂಗಾಪುರ ಗೃಹ ಸಚಿವ ಕೊಲ್ಲೂರು ಕ್ಷೇತ್ರ ಭೇಟಿ
Team Udayavani, May 14, 2022, 11:43 PM IST
ಕೊಲ್ಲೂರು: ಸಿಂಗಾಪುರದ ಗೃಹಸಚಿವ ಕಾಶಿ ವಿಶ್ವನಾಥನ್ ಮುರುಗನ್ ಅವರು ಶನಿವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಕಾರ್ಯನಿರ್ವಹಣಾ ಧಿಕಾರಿ ಮಹೇಶ, ಅರ್ಚಕ ಡಾ| ಕೆ.ಎನ್. ನರಸಿಂಹ ಅಡಿಗ, ತಹಶೀಲ್ದಾರ ಶೋಭಾ ಲಕ್ಷ್ಮೀ, ಸಮಿತಿ ಸದಸ್ಯರಾದ ಗೋಪಾಲಕೃಷ್ಣ ನಾಡ, ಜಯಾನಂದ ಹೋಬಳಿದಾರ, ಡಾ| ಅತುಲ್ ಕುಮಾರ್ ಶೆಟ್ಟಿ, ರತ್ನಾ ಆರ್ ಕುಂದರ್, ಸಂಧ್ಯಾ ರಮೇಶ ಉಪಸ್ಥಿತರಿದ್ದು, ಸಚಿವರನ್ನು ಸ್ವಾಗತಿಸಿ, ಗೌರವಿಸಿದರು.