ಕಾನೂನು ಸುವ್ಯವಸ್ಥೆಗೂ, ಕಲೆ ಸಂಸ್ಕೃತಿಗೂ ಸಣ್ಣ ಜಿಲ್ಲೆಗಳು ಸಹಕಾರಿ


Team Udayavani, Aug 24, 2017, 8:50 AM IST

udupi.jpg

ಉಡುಪಿ: ಸಣ್ಣ ಸಣ್ಣ ಜಿಲ್ಲೆಗಳು ರಚನೆಯಾದರೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಕೂಲ ಎಂಬುದು ಅನುಭವಸಿದ್ಧ ವಿಷಯ. ಕೇವಲ ಇಷ್ಟಕ್ಕೇ ನಿಲ್ಲುವುದಿಲ್ಲ. ಕಾನೂನು ಸುವ್ಯವಸ್ಥೆ, ಕಲೆ, ಸಂಸ್ಕೃತಿ ಕ್ಷೇತ್ರಕ್ಕೂ ಇದರ ವಿಸ್ತಾರ ಹರಡಿದೆ. 
ಜಿಲ್ಲಾ ಕೇಂದ್ರದಲ್ಲಿ ಸಶಸ್ತ್ರ ಮೀಸಲು ಪಡೆ ಇತ್ಯಾದಿ ಸುರûಾ ಬಲವಿರುತ್ತದೆ.  ದೂರದೂರುಗಳಲ್ಲಿ ಗಲಭೆ ಸಂಭವಿಸಿದರೆ ಜಿಲ್ಲಾ ಕೇಂದ್ರದಿಂದ ಸುರûಾ ಪಡೆಗಳು ಹೋಗುವಾಗ ಕೈಮೀರುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ಜಿಲ್ಲಾಧಿಕಾರಿಯವರ ಮೇಲೆ ಮರಳು ಮಾಫಿಯಾ ಹಲ್ಲೆ ನಡೆಸಿದ ಸಂದರ್ಭವನ್ನು ನೆನಪಿಸಿಕೊಳ್ಳ ಬಹುದು. ಒಂದು ವೇಳೆ ಅವಿಭಜಿತ ದ.ಕ. ಜಿಲ್ಲೆಯಾಗಿದ್ದರೆ ಮಂಗಳೂರಿನಿಂದ ಪೊಲೀಸ್‌ ಬಲದ ಸಹಾಯ ಬೇಕಿದ್ದರೆ ಕನಿಷ್ಠ ಎರಡು ಗಂಟೆ ಕಾಯಬೇಕಿತ್ತು. ಪೊಲೀಸ್‌ ನೇಮಕಾತಿಯಂತಹ ಸಂದರ್ಭಗಳಲ್ಲಿಯೂ ಅನುಕೂಲಕರ. ಪೊಲೀಸ್‌ ಠಾಣಾ ಹೊಸ ಕಟ್ಟಡ, ಸಿಬಂದಿ ವಸತಿಗೃಹ ಮೊದಲಾದ ಮೂಲಭೂತ ಸೌಕರ್ಯಗಳ ಒದಗಣೆಗೂ ಜಿಲ್ಲೆ ರಚನೆ ಸಹಕಾರಿಯಾಗಿದೆ. ಹೊಸ ಠಾಣೆಗಳನ್ನು ರಚಿಸಲೂ ಇದು ಸಹಕಾರಿಯಾಗಿದೆ. 

ಸಾರ್ವಜನಿಕರು ದೂರುಗಳನ್ನು ನೇರವಾಗಿ ಎಸ್ಪಿಯವರಿಗೆ ನೀಡಬೇಕಾದರೆ ಹಿಂದೆ ಮಂಗಳೂರಿಗೆ ಹೋಗಬೇಕಿತ್ತು. ಈಗ ಹಾಗಲ್ಲ. ಹೆಚ್ಚೆಂದರೆ ಒಂದೆರಡು ಗಂಟೆಗಳ ಅವಧಿಯಲ್ಲಿ ಅವರು ಎಸ್ಪಿಯವರನ್ನು ಸಂಪರ್ಕಿಸಲು ಸಾಧ್ಯವಿದೆ. ಉನ್ನತಾಧಿಕಾರಿಗಳು ದೂರವಿದ್ದಷ್ಟೂ ಅವರು ಜನರಿಂದಲೂ ಸಹಜವಾಗಿ ದೂರ ಇರುತ್ತಾರೆ. ಉನ್ನತಾಧಿಕಾರಿಗಳು ಹತ್ತಿರವಿದ್ದಾಗ ಜನಸಾಮಾನ್ಯರಿಗೂ ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಕುದುರಲು ಸಾಧ್ಯವಾಗುತ್ತದೆ ಮತ್ತು ಕೈಕೆಳಗಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ಹೆಚ್ಚಿಗೆ ಜಾಗರೂಕತೆ ವಹಿಸುತ್ತಾರೆ. 

ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಇರುತ್ತದೆ. ಇಲಾಖೆಗೆ ಬರುವ ಅನುದಾನ ಉಡುಪಿ ಜಿಲ್ಲೆಗೂ ಅನ್ವಯವಾದ ಕಾರಣ ಇಲಾಖೆಯ ವಿವಿಧ ಯೋಜನೆಗಳಿಗೆ ಬಹಳಷ್ಟು ಸಹಕಾರಿಯಾಗಿದೆ. ಆರಂಭದಲ್ಲಿ ಕೆಲವೇ ಲಕ್ಷ ರೂ.ಗಳಿಗೆ ಮೀಸಲಾದ ಅನುದಾನ ಈಗ 50-60 ಲ.ರೂ. ವರೆಗೆ ತಲುಪಿದೆ. ಇದರಿಂದ ಅದೆಷ್ಟೋ ಪರಿಶಿಷ್ಟ ಜಾತಿ, ಪಂಗಡದ ಕಲಾವಿದರಿಗೆ ಅನುಕೂಲವಾಗಿದೆ. ಶಾಲೆಗಳಲ್ಲಿಯೂ ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜನೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುತ್ತವೆ. ರಾಜ್ಯ ಮಟ್ಟದ ಯಕ್ಷಗಾನ ಬಯಲಾಟ ಅಕಾಡೆಮಿ ಸ್ಥಾಪನೆಯಾದ ಅಂದಿನಿಂದ ಅಧ್ಯಕ್ಷರು, ಸದಸ್ಯರ ನೇಮಕಾತಿಯಲ್ಲಿ, ಪ್ರಶಸ್ತಿ ಆಯ್ಕೆಯಲ್ಲಿ ಪ್ರತ್ಯೇಕ ಜಿಲ್ಲೆಯಾದ ಕಾರಣ ನಿರ್ದಿಷ್ಟ ಪಾಲು ಸಿಗುತ್ತದೆ. ಎಷ್ಟೋ ಬಾಲ ಕಲಾವಿದರೂ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಪ್ರತಿಭೆಯನ್ನು ತೋರುತ್ತಿದ್ದಾರೆ. 

ಪೊಲೀಸ್‌ ಅಧೀಕ್ಷಕರ ಸೇವೆ
1. ಸವಿತಾ ಹಂದೆ (25-8-1997ರಿಂದ 4-7-1998)
2. ಡಾ|ಎಂ.ಎ.ಸಲೀಂ (4-7-1998ರಿಂದ 13-6-2000)
3. ಅಮೃತ್‌ಪಾಲ್‌ (16-6-2000ರಿಂದ 25-7-2003)
4. ಎಸ್‌.ಮುರುಗನ್‌ (25-7-2003ರಿಂದ 10-5-2006)
5. ಡಾ|ಸುಬ್ರಹ್ಮಣ್ಯೇಶ್ವರ ರಾವ್‌ (29-5-2006ರಿಂದ 8-10-2007)
6. ದೇವಜ್ಯೋತಿ ರೇ (10-10-2006ರಿಂದ 14-7-2008)
7. ಪ್ರವೀಣ್‌ ಮಧುಕರ್‌ ಪವಾರ್‌ (14-7-2008ರಿಂದ 24-3-2011)
8. ಡಾ| ವೈ.ಎಸ್‌.ರವಿಕುಮಾರ್‌ (25-03-2011ರಿಂದ 26-1-2012)
9. ಡಾ|ಬೋರಲಿಂಗಯ್ಯ ಎಂ.ಬಿ. (27-1-2012ರಿಂದ 1-8-2014)
10. ಪಿ.ರಾಜೇಂದ್ರಪ್ರಸಾದ್‌ (11-8-2014ರಿಂದ 1-1-2015)
11. ಕೆ.ಅಣ್ಣಾಮಲೈ  (1-1-2015ರಿಂದ 3-8-2016)
12. ಕೆ.ಟಿ. ಬಾಲಕೃಷ್ಣ (11-8-2016ರಿಂದ 10-8-2017)
13. ಡಾ| ಸಂಜೀವ ಎಂ. ಪಾಟೀಲ್‌ (10-8-2017ರಿಂದ)

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.