ಕಮಲಶಿಲೆ: ನಾಳೆ ಭೋಜನ ಶಾಲೆ ಉದ್ಘಾಟನೆ

Team Udayavani, Apr 16, 2019, 6:31 AM IST

ಸಿದ್ದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡ 3 ಅಂತಸ್ತಿನ ನೂತನ ಭೋಜನ ಶಾಲೆ ಲೋಕಾರ್ಪಣೆ ಮತ್ತು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಗೆ ಬ್ರಹ್ಮಕುಂಭಾಭಿಷೇಕವು ಎ. 17ರಂದು ನಡೆಯಲಿದೆ.

ಬೆಳಗ್ಗೆ 9ಕ್ಕೆ ಶ್ರೀ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳಿಂದ ದೇವಸ್ಥಾನದ ರಜತದ್ವಾರ ಉದ್ಘಾಟನೆ, ಅನಂತರ ನೂತನ ಶ್ರೀ ಬ್ರಾಹ್ಮೀ ಭೋಜನ ಶಾಲೆ ಲೋಕಾರ್ಪಣೆ, ಧೂಳಿಪಾದಪೂಜೆ ಹಾಗೂ ಭಿಕ್ಷಾವಂದನೆ, ಪೂರ್ವಾಹ್ನ 10ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ 12ಕ್ಕೆ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ದೇವಿಗೆ ಬ್ರಹ್ಮಕುಂಭಾಭಿಷೇಕ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೇವಸ್ಥಾ ನದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್‌. ಸಚ್ಚಿದಾನಂದ ಚಾತ್ರ, ಡಾ| ಜಿ. ಶಂಕರ್‌, ಬೆಂಗಳೂರು ಉದ್ಯಮಿ ರಮೇಶ ರೆಡ್ಡಿ, ರೇಷ್ಮೆ ಆಮದು ಮತ್ತು ರಫ್ತುರರಾದ ವಿ.ವೈ. ಇಂದ್ರಾಣಿ ಮತ್ತು ವಿ.ಟಿ. ಸೋಮಶೇಖರ ಬೆಂಗಳೂರು, ಉದ್ಯಮಿ ಕೊಡ್ಲಾಡಿ ಚಂದ್ರಶೇಖರ ಶೆಟ್ಟಿ, ಸುಮನ ಕೆ. ಶರ್ಮ ಮತ್ತು ಕೆ.ಎಂ.ಕೆ. ಶರ್ಮ ಚಿಕ್ಕಮಗಳೂರು, ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ. ಲಕ್ಷ್ಮೀಶ ಯಡಿಯಾಳ, ದೇವಸ್ಥಾನದ ಸಹ ಮೊಕ್ತೇಸರರಾದ ಬರೆಗುಂಡಿ ಶ್ರೀನಿವಾಸ ಚಾತ್ರ ಹಾಗೂ ಎ. ಚಂದ್ರಶೇಕರ ಶೆಟ್ಟಿ ಹೆನ್ನಾಬೈಲು ಭಾಗವಹಿಸಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ