ಕುಂದಾಪುರ : ವೈಭವೋಪೇತ ಪುರಮೆರವಣಿಗೆ

 ಇಂದು ಶ್ರೀ ಮಹಾಕಾಳಿ ದೇವಿಗೆ ಸ್ವರ್ಣ ಮುಖವಾಡ ಸಮರ್ಪಣೆ

Team Udayavani, Jan 26, 2020, 8:54 PM IST

ಕುಂದಾಪುರ: ಆರಾಧ್ಯದೇವಿ, ಮಾತೃ ಸ್ವರೂಪಿಣಿ ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನದ 30 ನೇ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಸ್ವರ್ಣ ಮುಖವಾಡ ಸಮರ್ಪಣೆ ಜ.27 ರಂದು ನಡೆಯಲಿದ್ದು, ರವಿವಾರ ಸಂಜೆ ಖಾರ್ವಿ ಸಮುದಾ ಯದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದ ಪುರ ಮೆರವಣಿಗೆಯು ವಾದ್ಯ ಘೋಷಗಳೊಂದಿಗೆ ನಡೆಯಿತು.

ಶೃಂಗೇರಿಯ ಉಭಯ ಶ್ರೀಗಳಿಂದ ಅಶೀರ್ವಾದ ಪಡೆದು ಕುಂದಾಪುರಕ್ಕೆ ಆಗಮಿಸಿದ ಶ್ರೀ ಮಹಾಕಾಳಿ ದೇವಿಗೆ ಸಮರ್ಪಿಸಲಿರುವ ಸ್ವರ್ಣ ಮುಖವಾಡ, ಶ್ರೀ ನಾಗ ದೇವರ ರಜತ ಕವಚವನ್ನು ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿ ಸ್ವಾಗತಿಸಲಾಯಿತು. ಅಲ್ಲಿಂದ ಆರಂಭಗೊಂಡ ಸ್ವರ್ಣ ಮುಖವಾಡ ಹಾಗೂ ಹೊರ ಕಾಣಿಕೆಯ ಪುರ ಮೆರವಣಿಗೆಯು ಪಾರಿಜಾತ ಸರ್ಕಲ್‌ ಮೂಲಕವಾಗಿ ಹೊಸ ಬಸ್‌ ನಿಲ್ದಾಣವಾಗಿ ಶ್ರೀ ಮಹಾಕಾಳಿ ದೇವಸ್ಥಾನದವರೆಗೆ ಅದ್ಧೂರಿಯಾಗಿ ನೆರವೇರಿತು.

3 ಸಾವಿರಕ್ಕೂ ಮಿಕ್ಕಿ ಮಂದಿ ಚೆಂಡೆ ವಾದನ, ಯುವತಿಯರ ಕುಣಿತ ಭಜನೆ, ಸಂಪ್ರದಾಯ ಬದ್ಧವಾಗಿ ಒಂದೇ ಬಣ್ಣದ ಸೀರೆಯುಟ್ಟ ಮಹಿಳಾಮಣಿಗಳು, ಹೊರೆಕಾಣಿಕೆ ಹೊತ್ತಂತಹ ಹತ್ತಾರು ವಾಹನಗಳೊಂದಿಗೆ ಮೆರವಣಿಗೆ ಸಾಗಿ ಬಂತು. ದೇವಸ್ಥಾನದಲ್ಲಿ ಸಂಜೆ ಬ್ರಹ್ಮಕಲಶ ಸ್ಥಾಪನೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಈ ಪುರ ಮೆರವಣಿಗೆಯಲ್ಲಿ ಕೊಂಕಣ ಖಾರ್ವಿ ಸಮುದಾದಯದ 3 ಸಾವಿರಕ್ಕೂ ಮಿಕ್ಕಿ ಮಂದಿ ಪಾಲ್ಗೊಂಡಿದ್ದರು. ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನದ 30 ನೇ ವರ್ಷದ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಜ.23 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಶ್ರೀ ಅಮ್ಮನವರ ಪುಷ್ಪಾಲಂಕೃತ ಪಲ್ಲಕ್ಕಿ ಉತ್ಸವದ ಪುರ ಮೆರವಣಿಗೆಯು ಜ.24 ರಂದು ಮದ್ದುಗುಡ್ಡೆಯಲ್ಲಿ ಹಾಗೂ ಜ.25 ರಂದು ಬಹಾದ್ದೂರ್‌ ಷಾ ವಾರ್ಡಿನಲ್ಲಿ ನೆರವೇರಿತು.

ಇಂದು ಸಮರ್ಪಣೆ
ಶ್ರೀ ಮಹಾಕಾಳಿ ದೇವಿಗೆ ಸ್ವರ್ಣ ಮುಖವಾಡ ಸಮರ್ಪಣೆಯು ಜ.27 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಅದಕ್ಕೂ ಮೊದಲು ಶ್ರೀ ನಾಗದೇವರಿಗೆ ರಜತ ಮುಖ ಕವಚ ಧಾರಣೆ ನೆರವೇರಲಿದೆ. ಸಂಜೆ ರಂಗಪೂಜೆ, ಮಹಾ ಮಂಗಳಾರತಿ, ಪ್ರತಿಷ್ಠಾ ಪಲ್ಲಕ್ಕಿ ಉತ್ಸವ, ಪುರ ಮೆರವಣಿಗೆ, ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಶ್ರೀ ಮಹಾಕಾಳಿ ದೇವಸ್ಥಾನ ಕುಂದಾಪುರದ ಅಧ್ಯಕ್ಷ ಪ್ರಕಾಶ್‌ ಖಾರ್ವಿ, ಆಡಳಿತ ಮೊಕ್ತೇಸರರಾದ ಪಾಂಡುರಂಗ ಸಾರಂಗ, ಆನಂದ ನಾಯ್ಕ, ಶಂಕರ ನಾಯ್ಕ, ಅಖೀಲ ಭಾರತ ಕೊಂಕಣ ಖಾರ್ವಿ ಮಹಾ ಸಭಾದ ಮಾಜಿ ಅಧ್ಯಕ್ಷ ಕೆ.ವಿ. ಖಾರ್ವಿ, ವಿದ್ಯಾರಂಗ ಮಿತ್ರ ಮಂಡಳಿಯ ಅಧ್ಯಕ್ಷ ದಿನಕರ ಪಠೇಲ್‌, ಪುರಸಭಾ ಸದಸ್ಯರಾದ ಸಂದೀಪ್‌ ಖಾರ್ವಿ, ರಾಘವೇಂದ್ರ ಖಾರ್ವಿ, ಚಂದ್ರಶೇಖರ ಖಾರ್ವಿ, ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಆಶ್ರಯ ಮನೆ ನಿರ್ಮಾಣ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆರಂಭಿಸಿರುವ ವಿಜಿಲ್‌ ಮೊಬೈಲ್‌ ಆ್ಯಪ್‌ನ ಗೊಂದಲ ಇನ್ನೂ ನಿವಾರಣೆ ಆಗಿಲ್ಲ. ಆ್ಯಪ್‌...

  • ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. "ಹುಚ್ಚಾಸ್ಪತ್ರೆ' ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ....

  • ಕುಲುಮೆಯ ಬೆಂಕಿ ಮುಂದೆ, ದುಡಿದು ದಣಿವ ಜೀವ. ಪ್ರಾಯ 65 ದಾಟಿದೆ. ಕಮ್ಮಾರಿಕೆಯಿಂದ ಬಂದ ನಾಲ್ಕಾರು ಕಾಸನ್ನು ವೀರಾಚಾರಿ ಅವರು ಬ್ಯಾಂಕಿನಲ್ಲಿ ಕೂಡಿಡದೆ, ನಮ್ಮೆಲ್ಲರ...

  • ರಷ್ಯಾ ಮೂಲದ ಸೀಬರ್ಡ್‌ಗಳಿಗೆ, ಕಾರವಾರದ ಕಡಲತಡಿ ಪಕ್ಷಿಕಾಶಿ ಇದ್ದಂತೆ. ಆದರೆ, ದುರಾದೃಷ್ಟ. ಈ ಬಾರಿ ಇಲ್ಲಿ ಸೀಬರ್ಡ್‌ನ ಚಿಲಿಪಿಲಿ ಕೇಳಿಸುತ್ತಿಲ್ಲ. ದೂರದ ಊರಿನ...

  • ಚಟುವಟಿಕೆಯ ಚಿಲುಮೆ ರೋನಿಕಾ ಲವಲವಿಕೆಯಿಂದ ರಂಗಪ್ರವೇಶಿಸಿ, ಆತ್ಮವಿಶ್ವಾಸದಿಂದ ನೃತ್ಯ ಪ್ರಸ್ತುತಪಡಿಸಿದ ಬಗೆ ಮುದ ತಂದಿತ್ತು. ಅಂಗಶುದ್ಧಿ, ಕಲಾನೈಪುಣ್ಯದ...