ಸಂಕಷ್ಟಗಳನ್ನೇ ಸವಾಲಾಗಿಸಿಕೊಂಡು ಗೆದ್ದ ಅನಿಕೇತ್
ಕಾರ್ಕಳ: ಅಪ್ಪ ಹೃದ್ರೋಗಿ, ಅಮ್ಮ ಆಶಾ ಕಾರ್ಯಕರ್ತೆ
Team Udayavani, May 29, 2022, 5:55 AM IST
ಕಾರ್ಕಳ: ಶಾಲೆಗೆ ತೆರಳಲು ಸರಿಯಾದ ಬಸ್ ವ್ಯವಸ್ಥೆಯಿಲ್ಲ. ಆನ್‌ಲೈನ್ ಕಲಿಕೆಗೆ ಮೊಬೈಲ್ ಸಿಗ್ನಲ್ ಇಲ್ಲ. ಹೀಗೆ ಮೂಲ ಸೌಕರ್ಯಗಳ ಕೊರತೆ ಇದ್ದರೂ ಯಶಸ್ಸಿನ ಹಾದಿ ತುಳಿದ ಅನಿಕೇತ್ ನ ಸಾಧನೆ ಕಡಿಮೆ ಏನಲ್ಲ.
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಅನಿಕೇತ್ ಎಸೆಸೆಲ್ಸಿಯಲ್ಲಿ 624 ಅಂಕ ಗಳಿಸಿದ್ದಾನೆ.
ಪೂರ್ಣಾಂಕಕ್ಕೆ ಒಂದೇ ಒಂದು ಅಂಕ ಕಡಿಮೆ. ಕುಂಟಾಡಿ ಪಡ್ಯ ನಿವಾಸಿ ನಿಶಿಕಾಂತ್ ಶೆಟ್ಟಿ -ಸುವರ್ಣಲತಾ ದಂಪತಿಯ ಪುತ್ರ ಅನಿಕೇತ್. ತಂದೆ ಆರು ವರ್ಷಗಳ ಹಿಂದೆ ಹೃದಯ ಚಿಕಿತ್ಸೆಗೆ ಒಳಗಾಗಿದ್ದು, ಹೆಚ್ಚಿನ ಕೆಲಸ ಮಾಡಲು ಕಷ್ಟ. ತಾಯಿ ಆಶಾ ಕಾರ್ಯಕರ್ತೆಯಾಗಿದ್ದು, ಮಾಸಿಕ 4 ಸಾವಿರ ರೂ. ಆದಾಯವಿದೆ. ಬಾಡಿಗೆ ಮನೆಯೇ ಆಶ್ರಯ. ಇಂತಹ ಸ್ಥಿತಿಯಲ್ಲೂ ದಂಪತಿ ತಮ್ಮ ಮೂವರು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಹಿರಿಯ ಪುತ್ರ ಆಕಾಶ್ 12ನೇ ತರಗತಿ ಓದುತ್ತಿದ್ದು, ಕಿರಿಯವ ಅನೂಪ್ 9ನೇ ತರಗತಿಯಲ್ಲಿದ್ದಾರೆ.
ಮೂರ್ನಾಲ್ಕು ಕಿ.ಮೀ. ಕಾಲ್ನಡಿಗೆ
ಅನಿಕೇತ್ ಮನೆಯಿಂದ ಶಾಲೆಗೆ ತೆರಳಲು 12 ಕಿ.ಮೀ. ದೂರ ಕ್ರಮಿಸಬೇಕು. ಮನೆಯ ಬಳಿ ಸರಕಾರಿ ಬಸ್ ಬಾರದ. ಖಾಸಗಿ ಬಸ್ ಅನಿವಾರ್ಯ. ಇರುವ ಸೀಮಿತ ಸಂಖ್ಯೆಯ ಬಸಗಳನ್ನೇ ಆಶ್ರಯಿಸಿ ಶಾಲೆ ತಲುಪಬೇಕು. ಖಾಸಗಿ ವಾಹನದವರು ನಿಲ್ಲಿಸಿದರೆ ಹತ್ತಿಕೊಂಡು ಹೋಗಬೇಕು. ಇಲ್ಲವಾದರೆ ದಿನದಲ್ಲಿ ಕನಿಷ್ಠ ಮೂರ್ನಾಲ್ಕು ಕಿ.ಮೀ. ಕಾಲ್ನಡಿಗೆ ಅನಿವಾರ್ಯ.
ನೆಟ್‌ವರ್ಕ್‌ಗಾಗಿ ಪರದಾಟ
ಎಸೆಸೆಲ್ಸಿಯಲ್ಲಿ 8 ತಿಂಗಳು ಕೊರೊನಾದಿಂದಾಗಿ ಆನ್‌ಲೈನ್ ತರಗತಿ ಇತ್ತು. ಈ ಅವಧಿಯಲ್ಲಿ ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಮನೆಯಲ್ಲಿ ಸರಿಯಾಗಿ ನೆಟ್‌ವರ್ಕ್ ಸಿಗುತ್ತಿರಲಿಲ್ಲ. ಸಿಗ್ನಲ್ ಹುಡುಕಾಟ ತ್ರಾಸದಾಯಕವಾಗಿತ್ತು. ಆದರೂ ಸತತ ಪ್ರಯತ್ನ ನಡೆಸಿ ಕಲಿಯುತ್ತಿದ್ದೆ. ಮನೆಯಲ್ಲಿ ಕೂಡ ಉತ್ತಮ ಪ್ರೋತ್ಸಾಹ ಸಿಕ್ಕಿತ್ತು ಎಂದು ಅನಿಕೇತ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಿಇಒ, ಶಿಕ್ಷಕವೃಂದ
ಮನೆಗೆ ತೆರಳಿ ಅಭಿನಂದನೆ
ಟ್ಯೂಶನ್‌ಗೆ ತೆರಳದೆ ಸರಕಾರಿ ಶಾಲೆಯಲ್ಲಿ ಕಲಿತು ಸಾಧನೆ ಮಾಡಿದ ಬಗ್ಗೆ ಹೆಮ್ಮೆಯಿದೆ. ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕರು ತೋರಿದ ಪ್ರೀತಿಗೆ ಆಭಾರಿಯಾಗಿದ್ದೇನೆ. ಮುಂದೆ ಮತ್ತಷ್ಟು ಆಸಕ್ತಿಯಿಂದ ಕಲಿತು ಎಂಜಿನಿಯರ್ ಆಗಬೇಕೆನ್ನುವ ಕನಸಿದೆ ಎನ್ನುತ್ತಾರೆ ಅನಿಕೇತ್. ತಾಲೂಕಿನಲ್ಲಿ ಸರಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್, ಶಾಲೆಯ ಮುಖ್ಯ ಶಿಕ್ಷಕಿ ಹರ್ಷಿಣಿ, ಶಿಕ್ಷಕ ವೃಂದ ಸಹಿತ ಪ್ರಮುಖರು ಮನೆಗೆ ತೆರಳಿ ಅಭಿನಂದಿಸಿದ್ದಾರೆ.
ಮಗನ ಸಾಧನೆ ಬಗ್ಗೆ ಖುಷಿಯಿದೆ. ಅವನು ಇಷ್ಟು ಸಾಧನೆ ಮಾಡುತ್ತಾನೆ ಎಂದು ಕನಸು ಕೂಡ ಕಂಡಿರಲಿಲ್ಲ. ಅವನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಮುಂದೆಯೂ ಅವನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತೇವೆ.
-ಸುವರ್ಣಲತಾ, ಅನಿಕೇತ್‌ನ ತಾಯಿ
ನಿತ್ಯ ಶಿಕ್ಷಕರಿಗೆ ಕರೆ
ಪರೀಕ್ಷೆ ಸಮಯದಲ್ಲಿ ಬೆಳಗ್ಗೆ 4.30ಕ್ಕೆ ಎದ್ದು ಓದುತ್ತಿದ್ದೆ. ರಾತ್ರಿ 12ರ ತನಕ ಅಭ್ಯಾಸ ಮಾಡುತ್ತಿದ್ದೆ. ನಿತ್ಯವೂ ಪಠ್ಯದಲ್ಲಿ ಮೂಡುವ ಸಂಶಯಗಳನ್ನು ಶಿಕ್ಷಕರಿಗೆ ಕರೆ ಮಾಡಿ ಪರಿಹರಿಸಿಕೊಳ್ಳುತ್ತಿದ್ದೆ. ಶಿಕ್ಷಕರ ಸಲಹೆ-ಸೂಚನೆಯಂತೆ ಅಭ್ಯಾಸ ನಡೆಸಿದ್ದರಿಂದ ಉನ್ನತ ಅಂಕ ಗಳಿಸಲು ಸಾಧ್ಯವಾಯಿತು.
–ಅನಿಕೇತ್
ಕಲಿಕಾ ಯಶೋಗಾಥೆ: ಸಾಧಕರನ್ನು ಹೆಸರಿಸಿ
ವಿವಿಧ ಸಮಸ್ಯೆ-ಸಂಕಷ್ಟಗಳ ನಡುವೆಯೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿ ರುವ ವಿದ್ಯಾರ್ಥಿಗಳ ಸಾಧನೆಯನ್ನು ವಿವರಿ ಸುವ ಉದಯವಾಣಿಯ ಅಂಕಣವಿದು. ದುಡಿಮೆಯೊಂದಿಗೆ ಶಾಲೆಗೆ ಹೋಗಿ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಬಗ್ಗೆ, ತೀರಾ ಬಡತನದಲ್ಲಿ ಎಲ್ಲ ಅಡೆ-ತಡೆಗಳನ್ನು ಮೀರಿ ಸಾಧನೆ ಮಾಡಿದ ವಿದ್ಯಾರ್ಥಿಗಳು ನಿಮ್ಮ ಸುತ್ತಮುತ್ತಲಿನಲ್ಲಿದ್ದರೆ ನಮಗೆ ತಿಳಿಸಿ. ವಿದ್ಯಾರ್ಥಿಯ ಹೆಸರು, ಶಾಲೆಯ ಹೆಸರು, ಊರು, ಸಂಪರ್ಕ ಸಂಖ್ಯೆಯನ್ನು ವಾಟ್ಸ್‌ಆ್ಯಪ್ ಮಾಡಿ. ಅರ್ಹರ ಸಾಧನೆಯನ್ನು ಪ್ರಕಟಿಸಲಾಗುವುದು.
ವಾಟ್ಸ್‌ಆ್ಯಪ್ ಸಂಖ್ಯೆ: 7616774529
– ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್
13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್
ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?
ಹೊಸ ಸೇರ್ಪಡೆ
ಕಿಡಿಗೇಡಿಗಳ ಬಂಧನಕ್ಕೆ ಯುವ ವೇದಿಕೆ ಆಗ್ರಹ
ಅನ್ಯಪಕ್ಷ ಅಧಿಕಾರದಲ್ಲಿರುವುದು ಬಿಜೆಪಿಗೆ ಅಪಥ್ಯ: ವಾರ್ಡ್ ವಿಂಗಡಣೆ ವಿರುದ್ಧ ಎಚ್ ಡಿಕೆ ಗರಂ
26/11 ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ಥಾನ
‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರವಿಮರ್ಶೆ: ಸಿನಿ ಕನಸಿನ ಹುಡುಗರ ಜಾಲಿರೈಡ್
ಹೋಗುವವರು ಹೋಗಿ.. ನಾನು ಹೊಸ ಶಿವಸೇನೆ ರಚಿಸುತ್ತೇನೆ: ಉದ್ಧವ್ ಠಾಕ್ರೆ