ಎಸೆಸೆಲ್ಸಿ: ಈ ಬಾರಿ ಪೂರ್ಣ ಪ್ರಮಾಣದ ಪರೀಕ್ಷೆ
ಕೋವಿಡ್ ಪೂರ್ವದ ಪದ್ಧತಿಯಂತೆ ನಡೆಸಲು ಇಲಾಖೆ ಸಿದ್ಧತೆ
Team Udayavani, Jan 16, 2022, 7:05 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಕೊರೊನಾ ಆರ್ಭಟದ ನಡುವೆಯೂ ಎಸೆಸೆಲ್ಸಿ ಪರೀಕ್ಷೆಗೆ ಸರಕಾರ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಕಳೆದ ಸಾಲಿನಲ್ಲಿ ಸಂಪೂರ್ಣವಾಗಿ ಬಹು ಆಯ್ಕೆಯ ಪ್ರಶ್ನೆಗಳನ್ನಷ್ಟೇ ಕೇಳುವ ಮೂಲಕ ಸರಳವಾಗಿ ಎರಡೇ ದಿನಗಳಲ್ಲಿ ನಡೆಸಲಾಗಿತ್ತು. ಈ ವರ್ಷ ಮಾ. 28ರಿಂದ ಎ. 11ರ ವರೆಗೆ ಪೂರ್ಣ ಪ್ರಮಾಣದಲ್ಲಿ, ಕೊರೊನಾ ಪೂರ್ವದಲ್ಲಿದ್ದಂತೆ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, ತಾತ್ಕಾಲಿಕ ವೇಳಾಪಟ್ಟಿಯನ್ನೂ ಪ್ರಕಟಿಸಿದೆ.
ಶೇ. 70ರಷ್ಟು ಪಾಠ ಪೂರ್ಣ
ಕೊರೊನಾದ ನಡುವೆಯೂ ಹೆಚ್ಚು ಭೌತಿಕ ತರಗತಿ ನಡೆದಿರುವುದರಿಂದ ಈಗಾಗಲೇ ಶೇ. 70ರಷ್ಟು ಪಠ್ಯ ಬಹುತೇಕ ಶಾಲೆಗಳಲ್ಲಿ ಪೂರ್ಣಗೊಂಡಿದೆ. ಉಳಿದದ್ದು ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಮುಗಿಯಲಿದೆ. ಬಳಿಕ ಪುನರ್ ಮನನ ಪ್ರಕ್ರಿಯೆ ನಡೆಯಲಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆ ನಡೆಯ ಲಿದೆ. ಶಾಲೆಗಳಲ್ಲೂ ನಿಯಮ ಪಾಲಿಸಿ ತರಗತಿ ನಡೆಸಲಾಗುತ್ತಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿ ಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಚಾಲಕನಿಗೆ ಪೀಡ್ಸ್ ; ಬರೋಬ್ಬರಿ 10ಕಿ.ಮೀ. ಬಸ್ ಚಲಾಯಿಸಿದ ಪ್ರಯಾಣಿಕ ಮಹಿಳೆ! ವಿಡಿಯೋ ವೈರಲ್
ಜಿಲ್ಲೆಗಳಿಗೆ ಸೂಚನೆ
ಪಠ್ಯಕ್ರಮ, ಬೋಧನೆಯ ವಿಷಯ,ಪರೀಕ್ಷಾ ಸಿದ್ಧತೆ, ಪರೀಕ್ಷೆ ಹೇಗಿರಲಿದೆ ಮತ್ತು ಅಂಕಗಳ ಹಂಚಿಕೆ ಹೇಗಿರುತ್ತದೆ ಎಂಬ ಮಾಹಿತಿ ನೀಡಲಾಗಿದೆ. ಕಲಿಕೆಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದ್ದು, ಪರೀಕ್ಷೆ ಯಥಾಪ್ರಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿ ಎಸೆಸೆಲ್ಸಿ ಪರೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಲಿದ್ದೇವೆ. ತಾತ್ಕಾ ಲಿಕ ವೇಳಾಪಟ್ಟಿಯನ್ನು ಪ್ರಕ ಟಿಸಿದ್ದೇವೆ. ಕೊರೊನಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಪರೀಕ್ಷೆ ನಡೆಸುತ್ತೇವೆ.
– ಬಿ.ಸಿ. ನಾಗೇಶ್,
ಶಿಕ್ಷಣ ಸಚಿವ