ಅತ್ತೂರಲ್ಲಿ ಸಂತ ಲಾರೆನ್ಸ್‌ ಪ್ರತಿಮೆ ಅನಾವರಣ

Team Udayavani, Jan 19, 2020, 5:35 PM IST

ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದಲ್ಲಿ 15 ಅಡಿ ಎತ್ತರದ ಸಂತ ಲಾರೆನ್ಸ್‌ ಶಿಲಾವಿಗ್ರಹವನ್ನು ಜ. 19ರಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್‌ ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಅನಾವರಣಗೊಳಿಸಿದರು.

ಸಹಾಯಕ ಧರ್ಮಗುರು ವಂ| ರೋಯ್‌ ಲೋಬೋ, ಅತ್ತೂರು ಬಸಿಲಿಕಾದ ನಿರ್ದೇಶಕ ವಂ| ಜಾರ್ಜ್‌ ಡಿ’ಸೊಜಾ, ಉಡುಪಿಯ ಧರ್ಮಗುರು ವಂ| ಸ್ಟೀಫ‌ನ್‌ ಡಿ’ಸೋಜಾ, ಜೋನ್‌ ಗ್ಲ್ಯಾಡಿಸ್‌ ಡಿ’ಸಿಲ್ವಾ ಉಪಸ್ಥಿತರಿದ್ದರು.

32 ಅಡಿಯ ಸ್ತಂಭ ಹಾಗೂ 15 ಅಡಿ ಎತ್ತರವಿರುವ ಈ ಏಕಶಿಲಾ ಪ್ರತಿಮೆಯನ್ನು ಕುಂಟಲ್ಪಾಡಿ ದಿ| ಲೀನಾ ಡಿ’ಸಿಲ್ವಾ ಅವರ ಸ್ಮರಣಾರ್ಥ ಅವರ ಕುಟುಂಬಸ್ಥರು ನಿರ್ಮಿಸಿದ್ದರು.

ಜ. 26ರಿಂದ 30ರವರೆಗೆ ಅತ್ತೂರು ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿರುವ ಸಾಂತ್‌ಮಾರಿ ನಡೆಯಲಿರುವ ಹಿನ್ನೆಲೆಯಲ್ಲಿ ರವಿವಾರ ನವದಿನಗಳ ಪ್ರಾರ್ಥನಾ ಮುಹೂರ್ತ ಜರಗಿತು. ಶಾಸಕ ವಿ. ಸುನಿಲ್‌ ಕುಮಾರ್‌, ವಿವಿಧ ಕ್ಷೇತ್ರದ ಜನಪ್ರತಿನಿಧಿ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ