ಮರಳುಗಾರಿಕೆ ಆರಂಭ

Team Udayavani, Dec 11, 2019, 4:24 AM IST

ಕಂಡ್ಲೂರಿನಲ್ಲಿ ನಡೆಯುತ್ತಿರುವ ಮರಳುಗಾರಿಕೆ.

ಕುಂದಾಪುರ: ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಮರಳುಗಾರಿಕೆ ಮಂಗಳವಾರದಿಂದ ಆರಂಭವಾಗಿದೆ. ಕೆಲವು ವರ್ಷಗಳಿಂದ ನಿಂತಿದ್ದ ಮರಳುಗಾರಿಕೆಗೆ ಅನುಮತಿ ದೊರೆತು ಒಂದಷ್ಟು ದಿನ ಮರಳು ಸಾಗಾಟವಾಗಿತ್ತು. ಅನಂತರ ಲಾರಿಯಲ್ಲಿ ಮರಳು ತುಂಬಿಸಿದ ಬಳಿಕ ವೇ ಬ್ರಿಡ್ಜ್ನಲ್ಲಿ ತೂಕ ಮಾಡಿಯೇ ವಿತರಿಸಬೇಕೆಂದು ಜಿಲ್ಲಾಡಳಿತ ಶರತ್ತು ವಿಧಿಸಿದ ಕಾರಣ ಮರಳುಗಾರಿಕೆ ಸ್ಥಗಿತವಾಗಿತ್ತು. ತೂಗದೇ ಮರಳು ನೀಡಿದರೆ ಒದ್ದೆ ಮರಳು ಲಾರಿಯಲ್ಲಿ ತುಂಬಿಸಿ ಹೆಚ್ಚು ತೂಕ ಬಂದು, ಖರೀದಿಸಿದವರಿಗೆ ಮೋಸವಾಗುವ ಸಾಧ್ಯತೆಯನ್ನು ಜಿಲ್ಲಾಡಳಿತ ಮನಗಂಡಿತ್ತು. ಪರಿಣಾಮವಾಗಿ ಗಣಿ ಇಲಾಖೆಯು ಮರಳುಗಾರಿಕೆಗೆ ನೀಡಿದ್ದ ಪರವಾನಿಗೆಯನ್ನು ಅಮಾನತು ಮಾಡಿತ್ತು.

ನೂರಾರು ಲಾರಿಗಳು ಮರಳು ತುಂಬಿಸಿ ಸಾಗಾಟ ಮಾಡಲಾಗದ ಪರಿಸ್ಥಿತಿಯಿದ್ದು, ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕ ಲೋಡು ಮಾಡಿದ ಲಾರಿಗಳನ್ನು ಕಳುಹಿಸಲು ಗಣಿ ಇಲಾಖೆ ಕ್ರಮ ಕೈಗೊಂಡಿತ್ತು. ಮಂಗಳವಾರದಿಂದ ಮತ್ತೆ ಮರಳುಗಾರಿಕೆ ಆರಂಭವಾಗಿದೆ. ಕಂಡ್ಲೂರು ಮತ್ತು ಬಳ್ಕೂರಿನಲ್ಲಿ ಮರಳು ತೆಗೆಯಲು ಅನುಮತಿ ಇದ್ದು, ಸೋಮವಾರದಿಂದ ಶನಿವಾರದ ವರೆಗೆ ನಿಗದಿಪಡಿಸಿದ ಹಣ ಪಾವತಿಸಿ ಮರಳು ಪಡೆಯಬಹುದಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ