ಮಸ್ಕತ್‌ನಲ್ಲಿ ಪುತ್ತಿಗೆ ಶ್ರೀಗಳಿಂದ ಆಂಜನೇಯ, ಮಧ್ವರ ವಿಗ್ರಹ ಪ್ರತಿಷ್ಠೆ

Team Udayavani, Dec 14, 2019, 5:37 PM IST

ಉಡುಪಿ: ಓಮಾನ್‌ನ ರಾಜಧಾನಿ ಮಸ್ಕತ್‌ನಲ್ಲಿರುವ ಶ್ರೀಕೃಷ್ಣಮಂದಿರದಲ್ಲಿ ಶುಕ್ರವಾರ ಆಂಜನೇಯ ಮತ್ತು ಮಧ್ವರ ವಿಗ್ರಹಗಳನ್ನು ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಶುಕ್ರವಾರ ಪಂಚಾಮೃತ ಅಭಿಷೇಕಾದಿಗಳನ್ನು ನಡೆಸಿ ಪ್ರತಿಷ್ಠಾಪನೆ ಮಾಡಿದರು.

ಆಶೀರ್ವಚನ ನೀಡಿದ ಸ್ವಾಮೀಜಿಯವರು, ಇಂದು ಮಸ್ಕತ್‌ ನಾಗರಿಕರಿಗೆ ಸುಯೋಗ. ಒಂದೇ ಮೂಲರೂಪದ ಎರಡು ಅವತಾರ ರೂಪಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದರಿಂದ ಸಕಲ ಸಜ್ಜನರ ಸಾಧನೆಗೆ ಅನುಕೂಲವಾಗಲಿದೆ ಎಂದರು.

ಪುತ್ತಿಗೆ ಮಠದ ವೈದಿಕರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸುಮಾರು 50 ಮಂದಿ ವಾಯುಸ್ತುತಿ ಪುರಶ್ಚರಣೆ ಮಾಡಿದರೆ, ಮಹಿಳೆಯರು ವಾದಿರಾಜಸ್ವಾಮಿಗಳು ರಚಿಸಿದ ಲಕ್ಷ್ಮೀಶೋಬಾನೆಯ ಪಾರಾಯಣ ಮಾಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ