ಕೊಲ್ಲೂರು ಪರಿಸರದಲ್ಲಿ ಬಿರುಸಿನ ಕೃಷಿ ಚಟುವಟಿಕೆ

Team Udayavani, Jul 16, 2019, 5:51 AM IST

ಕೊಲ್ಲೂರು: ಸತತ 10 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಪರಿಸರದ ಕೃಷಿಕರು ಬಿರುಸಿನ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.

ಜಡ್ಕಲ್‌, ಮುದೂರು, ಇಡೂರು, ವಂಡ್ಸೆ, ಕೆರಾಡಿ, ಹೊಸೂರು, ಬೆಳ್ಳಾಲ, ಮೂಡಮುಂದು, ನೆಂಪು, ನೂಜಾಡಿ, ದೇವಲ್ಕುಂದ ಪರಿಸರದಲ್ಲಿ ಕೃಷಿ ಕಾರ್ಯ ಚುರುಕಿನಿಂದ ನಡೆಯುತ್ತಿದೆ.

ರೈತರಲ್ಲಿ ಮಂದಹಾಸ
ಜೂನ್‌ ತಿಂಗಳಲ್ಲಿ ಕಡಿಮೆ ಪ್ರಮಾಣದ ಮಳೆಯಿಂದಾಗಿ ಚಿಂತಾಗ್ರಸ್ತರಾದ್ದ ಈ ಭಾಗದ ಕೃಷಿಕರು ಇದೀಗ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹರ್ಷಿತರಾಗಿದ್ದಾರೆ.

ತೆಂಗು, ಕಂಗು, ಬಾಳೆ ಭತ್ತ ಬೆಳೆಯುವ ಕೃಷಿಕರು ದಿನವಿಡೀ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾರ್ಮಿಕರ ಕೊರತೆ
ಭತ್ತದ ಗದ್ದೆಯ ಉಳುಮೆಗೆ ವಿವಿಧ ವಿನೂತನ ಮಾದರಿಯ ಯಂತ್ರಗಳ ಬಳಕೆ ನಡೆಯುತ್ತಿದೆ. ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಗ್ರಾಮೀಣ ಪ್ರದೇಶದ ಅನೇಕ ಕಾರ್ಮಿಕರು ಉದ್ಯೋಗವನ್ನರಸಿ ನಗರ ಪ್ರದೇಶಗಳಿಗೆ ತೆರಳಿರುವುದರಿಂದ ಇರುವ ಕಾರ್ಮಿಕರಿಗೆ ದುಬಾರಿ ಕೂಲಿ ತೆರಬೇಕಾದ ಪ್ರಸಂಗ ಎದುರಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ