
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರಿಯಾಂಕಾ ಆಚಾರ್ಯ ಅವರ ಸ್ಟ್ರಿಂಗ್ ಆರ್ಟ್ ಸೇರ್ಪಡೆ
Team Udayavani, May 24, 2022, 6:13 PM IST

ಶಿರ್ವ : ಬಂಟಕಲ್ಲು 92ನೇ ಹೇರೂರು ನಿವಾಸಿ ಯುವ ಚಿತ್ರ ಕಲಾವಿದೆ ಪ್ರಿಯಾಂಕಾ ಆಚಾರ್ಯ ಅವರು ರಚಿಸಿದ ವಿರಾಟ್‌ವಿಶ್ವಕರ್ಮ ಕಲಾಕೃತಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಗೊಂಡಿದೆ.
ಪ್ರಿಯಾಂಕಾ ಅವರು ತನ್ನ ತಂದೆಯ ಮಾರ್ಗದರ್ಶನದಂತೆ ಸ್ಟ್ರಿಂಗ್ ಆರ್ಟ್ ಮೂಲಕ ರಚಿಸಿದ 37.5 x 38 ಇಂಚಿನ ವಿರಾಟ್ ವಿಶ್ವಕರ್ಮ ಕಲಾಕೃತಿಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಮಾರ್ಚ್‌ತಿಂಗಳಲ್ಲಿ ಕಳುಹಿಸಿದ್ದರು. ಎಪ್ರಿಲ್ ತಿಂಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನವರು ಅದನ್ನು ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳಿಸಿದ್ದಾರೆ.
ಯುವ ಚಿತ್ರ ಕಲಾವಿದೆಯಾಗಿರುವ ಪ್ರಿಯಾಂಕಾ ಕಳೆದ ಒಂದೂವರೆ ವರ್ಷದಿಂದ ಸ್ವ ಪರಿಶ್ರಮದಿಂದ ಸ್ಟ್ರಿಂಗ್ ಆರ್ಟ್ ಕಲಿಯುತ್ತಿದ್ದು, ಈ ವರೆಗೆ ಸುಮಾರು 150ಕಲಾಕೃತಿಗಳನ್ನು ರಚಿಸಿದ್ದಾರೆ. ಅವರು ರಚಿಸಿದ ವಿವಿಧ ಕಲಾಕೃತಿಗಳು ಹೈದರಾಬಾದ್, ಚೆನೈ, ದಿಲ್ಲಿ, ಪುಣೆ, ಹರ್ಯಾಣ,ಮುಂಬಯಿ ಮತ್ತು ಬೆಂಗಳೂರಿಗೆ ರವಾನೆಯಾಗಿವೆ. ಬಂಟಕಲ್ಲಿಗೆ ಆಗಮಿಸಿದ್ದ ಅಂತರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಅವರಿಗೆ ತಾನು ರಚಿಸಿದ ಕಲಾಕೃತಿಯನ್ನು ನೀಡುವ ಮೂಲಕ ಮೇರು ಕಲಾವಿದನ ಮೆಚ್ಚುಗೆ ಗಳಿಸಿದ್ದಾರೆ.
ಇದನ್ನೂ ಓದಿ : ಮಳೆಗೆ ನಾಗರಹೊಳೆ ಉದ್ಯಾನಕ್ಕೆ ಜೀವಕಳೆ
ಬಂಟಕಲ್ಲು ಹೇರೂರು ಕೃಷ್ಣ ಆಚಾರ್ಯ ಮತ್ತು ಯಶೋದಾ ಆಚಾರ್ಯ ದಂಪತಿಗಳ ಪುತ್ರಿಯಾಗಿರುವ ಪ್ರಿಯಾಂಕಾ ಆಚಾರ್ಯ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿಸಿಎ ಪದವಿ ಪಡೆದು ಪ್ರಸ್ತುತ ಐಟಿ ಕಂಪೆನಿಯೊಂದರಲ್ಲಿ ಪ್ರೋಗ್ರಾಮ್ಮರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Desi Swara: ಮನದ ಬಾಗಿಲನು ತೆರೆದು ಅರಿಯುವ ಬನ್ನಿ

ಕ್ರಿಕೆಟ್ ಆಸ್ಟ್ರೇಲಿಯಕ್ಕಿಂತ 28 ಪಟ್ಟು ಶ್ರೀಮಂತವಾಗಿದೆ ಬಿಸಿಸಿಐ! ಆದಾಯ ಎಷ್ಟು ಗೊತ್ತಾ?

Karwar; ಇಂದಿರಾ ಕ್ಯಾಂಟಿನ್ ನಲ್ಲಿ ಉಪಹಾರ ಸವಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

Desi Swara :ಬ್ರಿಟನ್-ಕರ್ನಾಟಕದ ಜಾನಪದ ಕಲೆಗಳ ಅನಾವರಣ

Vijayapura; ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ: ಸಚಿವ ಎಂ.ಬಿ.ಪಾಟೀಲ