Udayavni Special

ಗ್ರಾ.ಪಂ. ಚುನಾವಣೆಗೆ 194 ಮುಕ್ತ ಚಿಹ್ನೆಗಳ ಆಯ್ಕೆ: ಯಾವ ಯಾವ ಚಿಹ್ನೆಗಳು, ಇಲ್ಲಿದೆ ಮಾಹಿತಿ


Team Udayavani, Oct 29, 2020, 3:56 PM IST

ಗ್ರಾ.ಪಂ. ಚುನಾವಣೆಗೆ194 ಮುಕ್ತ ಚಿಹ್ನೆಗಳ ಆಯ್ಕೆ: ಯಾವ ಯಾವ ಚಿಹ್ನೆಗಳು, ಇಲ್ಲಿದೆ ಮಾಹಿತಿ

ಉಡುಪಿ: ಸದ್ಯದಲ್ಲಿಯೇ ನಡೆಯುವ ಗ್ರಾಮ ಪಂಚಾಯತ್ ಚುನಾವಣೆ ರಾಜಕೀಯ ಪಕ್ಷರಹಿತವಾಗಿ ನಡೆಯಲಿದ್ದು ರಾಜ್ಯ ಚುನಾವಣ ಆಯೋಗ 194 ಮುಕ್ತ ಚಿಹ್ನೆಗಳನ್ನು ಆಯ್ಕೆ ಮಾಡಿದೆ. ಮೇಲ್ನೋಟಕ್ಕೆ 197 ಚಿಹ್ನೆಗಳನ್ನು ಆಯ್ದುಕೊಂಡಿದ್ದರೂ ಇದರಲ್ಲಿ ಮೂರನ್ನು ಕೈಬಿಡಲಾಗಿದೆ.

ಹವಾನಿಯಂತ್ರಕ, ಅಲಮೇರ, ಆಟೋರಿಕ್ಷಾ, ಬೇಬಿ ವಾಕರ್‌, ಬಲೂನ್‌, ಬಳೆ, ಹಣ್ಣು ಇರುವ ಬಾಸ್ಕೆಟ್‌, ಬ್ಯಾಟ್‌, ಬಾಟ್ಸಮನ್‌, ಬ್ಯಾಟರಿ ಟಾರ್ಚ್‌, ಮುತ್ತಿನ ಹಾರ, ಬೆಲ್ಟ್, ಬೆಂಚ್‌, ಬೈಸಿಕಲ್‌ ಪಂಪು, ದುರ್ಬೀನು, ಬಿಸ್ಕತ್ತು, ಕಪ್ಪು ಹಲಗೆ, ಹಾಯಿ ದೋಣಿ ಮತ್ತು ನಾವಿಕ, ಪೆಟ್ಟಿಗೆ, ಬ್ರೆಡ್‌, ಬ್ರಿಕ್ಸ್‌, ಸೂಟ್‌ಕೇಸ್‌, ಬ್ರಶ್‌, ಬಕೆಟ್‌, ಕೇಕ್‌, ಕ್ಯಾಲ್ಕುಲೇಟರ್‌, ಕೆಮರಾ, ಕ್ಯಾನ್‌, ದಪ್ಪ ಮೆಣಸಿನಕಾಯಿ (ದೊಣ್ಣೆ ಮೆಣಸು), ಕಾರ್ಪೆಟ್‌, ಕೇರಂ ಬೋರ್ಡ್‌, ಹೂಕೋಸು, ಚೈನ್‌, ಬೀಸುವ ಕಲ್ಲು, ಲಟ್ಟಣಿಗೆ, ಪಾದರಕ್ಷೆ, ಚದುರಂಗ ಫ‌ಲಕ, ಚಿಮಣಿ, ಕ್ಲಿಪ್‌, ಕೋಟು, ತೆಂಗಿನ ತೋಟ, ಬಣ್ಣದ ತಟ್ಟೆ, ಮಂಚ, ಕ್ರೇನ್‌, ಕ್ಯೂಬ್‌, ಕಪ್‌ ಮತ್ತು ಸಾಸರ್‌, ಕಟ್ಟಿಂಗ್‌ ಫ್ಲೈಯರ್‌, ವಜ್ರ, ಡೀಸೆಲ್‌ ಪಂಪು, ಡಿಶ್‌ ಆ್ಯಂಟೆನ, ಡೋಲಿ, ಡೋರ್‌ ಬೆಲ್‌, ಡ್ರಿಲ್‌ ಮೆಶಿನ್‌, ಡಂಬೆಲ್ಸ್‌, ವಿದ್ಯುತ್‌ ಕಂಬ, ಲಕೋಟೆ, ಎಕ್ಸ್‌ಟೆನ್ಶನ್‌ ಬೋರ್ಡ್‌, ಕೊಳಲು, ಕಾರಂಜಿ, ಲಂಗ, ಫ್ರೈಯಿಂಗ್‌ ಪಾನ್‌, ಲಾಳಿಕೆ, ಗ್ಯಾಸ್‌ ಸಿಲಿಂಡರ್‌, ಗ್ಯಾಸ್‌ ಒಲೆ, ಗಿಫ್ಟ್ ಪ್ಯಾಕ್‌, ಗಾಜಿನ ಲೋಟ, ಗ್ರಾಮ ಫೋನ್‌, ದ್ರಾಕ್ಷಿ, ಹಸಿ ಮೆಣಸಿನ ಕಾಯಿ, ಹಾರ್ಮೋನಿಯಂ, ಟೋಪಿ, ಹೆಡ್‌ಫೋನ್‌, ಹೆಲ್ಮೆಟ್‌, ಹಾಕಿ ಮತ್ತು ಚೆಂಡು, ಐಸ್‌ಕ್ರೀಂ, ನೀರು ಬಿಸಿ ಮಾಡುವ ರಾಡ್‌, ಇಸ್ತ್ರೀ ಪೆಟ್ಟಿಗೆ, ಬೆಂಡೆಕಾಯಿ, ಲಾಚ್‌, ಅಂಚೆ ಪೆಟ್ಟಿಗೆ, ಲೈಟರ್‌, ಊಟದ ಡಬ್ಬಿ, ಬೆಂಕಿ ಪೊಟ್ಟಣ, ಮೈಕ್‌, ಮಿಕ್ಸಿ, ನೇಲ್‌ ಕಟ್ಟರ್‌, ನೆಕ್‌ ಟೈ, ನೂಡಲ್ಸ್‌ ಬೌಲ್‌, ಬಾಣಲೆ, ಪ್ಯಾಂಟ್‌, ಕಡಲೆಕಾಯಿ, ಪೀಯರ್ಸ್‌, ಬಟಾಣಿ, ಏಳು ಕಿರಣಗಳ ಪೆನ್‌ ನಿಬ್‌, ಪೆನ್‌ ಸ್ಟಾಂಡ್‌, ಪೆನ್ಸಿಲ್‌ ಬಾಕ್ಸ್‌, ಪೆನ್ಸಿಲ್‌ ಶಾರ್ಪನರ್‌, ಲೋಲಕ, ಕುಟ್ಟಾಣಿ, ಪೆಟ್ರೋಲ್‌ಪಂಪ್‌, ಫೋನ್‌ ಚಾರ್ಜರ್‌, ತಲೆದಿಂಬು, ಅನಾನಸ್‌, ಕರಣಿ (ಪ್ಲಾಸ್ಟರಿಂಗ್‌ ಟ್ರೊವಲ್‌), ಆಹಾರ ತುಂಬಿದ ತಟ್ಟೆ, ತಟ್ಟೆ ಸ್ಟಾಂಡ್‌, ಮಡಕೆ, ಪ್ರಶರ್‌ ಕುಕ್ಕರ್‌, ಪಂಚಿಂಗ್‌ ಮೆಶಿನ್‌, ರೇಜರ್‌, ರೆಫ್ರಿಜರೇಟರ್‌, ಉಂಗುರ, ರೋಡ್‌ರೋಲರ್‌, ರೂಮ್‌ ಕೂಲರ್‌, ರೂಮ್‌ ಹೀಟರ್‌, ಸೆಫ್ಟಿ ಪಿನ್‌, ಗರಗಸ, ಸ್ಕೂಲ್‌ ಬ್ಯಾಗ್‌, ಕತ್ತರಿ, ಹೊಲಿಗೆಯಂತ್ರ, ಬೂಟ್‌, ಸ್ಕಿಪ್ಪಿಂಗ್‌ ರೋಪ್‌, ಸ್ಲೇಟು, ಸೋಪ್‌ ಡಿಶ್‌, ಕಾಲು ಚೀಲ, ಸ್ಟಾಪ್ಲರ್‌, ಸ್ಟೆತೋಸ್ಕೋಪ್‌, ಸ್ಟೂಲ್‌, ಉಯ್ನಾಲೆ, ಸಿರಿಂಜ್‌, ಮೇಜು, ಟೀ ಫಿಲ್ಟರ್‌, ದೂರವಾಣಿ, ದೂರದರ್ಶನ, ಟೆನ್ನಿಸ್‌ ರಾಕೆಟ್‌- ಚೆಂಡು, ಟೆಂಟ್‌, ಟಿಲ್ಲರ್‌, ಟಾಫೀಸ್‌, ಹಲ್ಲುಜ್ಜುವ ಬ್ರಶ್‌, ಹಲ್ಲುಜ್ಜುವ ಪೇಸ್ಟ್‌, ಟ್ರ್ಯಾಕ್ಟರ್‌ ಓಡಿಸುವ ರೈತ, ಟ್ರೇ, ತ್ರಿಕೋನ, ಟ್ರಕ್‌, ತುತ್ತೂರಿ, ಟೈಪ್‌ರೈಟರ್‌, ಟಯರ್‌, ವಾಕ್ಯೂಮ್‌ ಕ್ಲೀನರ್‌, ಪಿಟೀಲು, ವಾಕಿಂಗ್‌ ಸ್ಟಿಕ್‌, ವಾಲ್‌ ಹುಕ್‌, ವ್ಯಾಲೆಟ್‌, ವಾಲ್ನಟ್‌, ಕಲ್ಲಂಗಡಿ, ಬಾವಿ, ವೀಲ್‌ ಬ್ಯಾರೋ, ಸೀಟಿ (ವಿಜಿಲ್‌), ಕಿಟಕಿ, ಉಣ್ಣೆ-ಸೂಜಿ, ಬ್ರೆಡ್‌ ಟೋಸ್ಟರ್‌, ಸಿಸಿಟಿವಿ ಕ್ಯಾಮರ, ಗಣಕಯಂತ್ರ, ಗಣಕಯಂತ್ರದ ಮೌಸ್‌, ಬಾಗಿಲ ಹಿಡಿ, ಕಾಲ್ಚೆಂಡು (ಫ‌ುಟ್ಬಾಲ್‌), ಕಾಲ್ಚೆಂಡು ಆಟಗಾರ, ಕಬ್ಬಿನ ರೈತ, ಶುಂಠಿ, ಕೈಗಾಡಿ, ಹೆಲಿಕಾಪ್ಟರ್‌, ಗಂಟೆ ಲೋಟ (ಹವರ್‌ ಗ್ಲಾಸ್‌), ಹಲಸಿನ ಹಣ್ಣು, ಕೆಟಲ್‌, ಅಡುಗೆ ಮನೆ ಸಿಂಕ್‌, ಮಹಿಳೆಯ ಕೈಚೀಲ, ಲ್ಯಾಪ್‌ಟಾಪ್‌, ಲೂಡೋ, ಕಹಳೆ ಊದುವ ವ್ಯಕ್ತಿ, ಪೆನ್‌ಡ್ರೈವ್‌, ರೋಬೋಟ್‌, ರಬ್ಬರ್‌ ಸ್ಟಾಂಪ್‌ (ಠಸ್ಸೆ), ಹಡಗು, ಶಟ್ಟರ್‌, ಸಿತಾರ್‌, ಸೋಫಾ, ಸ್ಪಾನರ್‌, ಸ್ಟಂಪ್ಸ್‌, ಸ್ವಿಚ್‌ ಬೋರ್ಡ್‌, ಟಿವಿ ರಿಮೋಟ್‌, ಜಾವಲಿನ್‌ ಎಸೆತ, ಇಕ್ಕಳ (ಟಾಂಗ್ಸ್‌), ಟ್ಯೂಬ್‌ ಲೈಟ್‌, ನೀರಿನ ತೊಟ್ಟಿ, ಮೊರ (ವಿನೋವರ್‌) ಇವಿಷ್ಟು ಚಿಹ್ನೆಗಳಲ್ಲಿ ಯಾವುದಾದರೂ ಒಂದನ್ನು ಅಭ್ಯರ್ಥಿಗಳು ಆಯ್ದುಕೊಳ್ಳಬೇಕಾಗಿದೆ.

ಇದನ್ನೂ ಓದಿ:ಬೆಳಪು ನಲ್ಲಿ ಪೊಲೀಸ್‌ ಸಂಶೋಧನಾ ಕೇಂದ್ರ, ವಸತಿ ಗೃಹ, ಕವಾಯತು ಮೈದಾನ ನಿರ್ಮಾಣಕ್ಕೆ ಚಿಂತನೆ

ಒಂದು ಕ್ಷೇತ್ರದಲ್ಲಿ ಹಲವು ಅಭ್ಯರ್ಥಿಗಳಿರುವಾಗ ಹಲವು ಚಿಹ್ನೆಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಇದರಲ್ಲಿ ಬ್ಯಾಟ್‌, ಬ್ಯಾಟರಿ ಟಾರ್ಚ್‌, ಕೊಳಲು, ಸಿರಿಂಜ್‌ನಂತಹ ಚಿಹ್ನೆಗಳು ಒಂದೇ ರೀತಿ ಕಾಣುವುದರಿಂದ ಮತದಾನ ಮಾಡುವ ಮತದಾರರಿಗೆ ಸ್ವಲ್ಪ ಗೊಂದಲ ಉಂಟಾಗುವ ಸಾಧ್ಯತೆಗಳಿವೆ. ಒಂದೊಂದು ವಾರ್ಡ್‌ನಲ್ಲಿ ಸಾಮಾನ್ಯ, ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಎ, ಬಿ, ಪರಿಶಿಷ್ಟ ಜಾತಿ/ ಪಂಗಡ ಹೀಗೆ ಮೂರ್‍ನಾಲ್ಕು ಅಭ್ಯರ್ಥಿಗಳಿರಬಹುದು. ಒಂದು ವಾರ್ಡ್‌ನಲ್ಲಿ ನಾಲ್ಕು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದಲ್ಲಿ ಎಲ್ಲ ಅಭ್ಯರ್ಥಿಗಳು ಪ್ರತ್ಯೇಕ ಚಿಹ್ನೆ ಆಯ್ದುಕೊಳ್ಳಬೇಕು. ಒಂದು ವಾರ್ಡ್‌ನಲ್ಲಿ ಒಬ್ಬ ಅಭ್ಯರ್ಥಿ ಆಯ್ದುಕೊಂಡ ಚಿಹ್ನೆಯನ್ನು ಇನ್ನೊಂದು ವಾರ್ಡ್‌ ಅಭ್ಯರ್ಥಿ ಆಯ್ದು ಕೊಳ್ಳಬಹುದೇ ವಿನಾ ಅದೇ ವಾರ್ಡ್‌ನಲ್ಲಿ ಸಾಧ್ಯವಿಲ್ಲ.

ಮತಗಟ್ಟೆ ಮತ್ತು ಮತದಾರರ ವಿವರಗಳನ್ನು ಸಂಗ್ರಹಿಸಲಾಗಿದ್ದು ಗ್ರಾಮ ಪಂಚಾಯತ್ ಚುನಾವಣೆಯನ್ನು ನಡೆಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಚುನಾವಣ ಆಯೋಗದ ನಿರ್ದೇಶನದಂತೆ ನಡೆಸಲಾಗಿದೆ ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಹೇಳಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

2021ರಲ್ಲಿ ಮತ್ತೆ ಬರಲಿದೆ ಟ್ವಿಟರ್‌ ಬ್ಲೂ ಟಿಕ್‌

2021ರಲ್ಲಿ ಮತ್ತೆ ಬರಲಿದೆ ಟ್ವಿಟರ್‌ ಬ್ಲೂ ಟಿಕ್‌

ಉಗ್ರ ನಿಗ್ರಹಕ್ಕೆ ಬೆಚ್ಚಿದ ಜೈಶ್‌

ಉಗ್ರ ನಿಗ್ರಹಕ್ಕೆ ಬೆಚ್ಚಿದ ಜೈಶ್‌

ಅಬ್ಬಟಬಾದ್‌ ನೆನಪಿಸಿಕೊಳ್ಳಿ: ಭಾರತ

ಅಬ್ಬಟಬಾದ್‌ ನೆನಪಿಸಿಕೊಳ್ಳಿ: ಭಾರತ

3 ಏಕೀಕೃತ ಸೇನಾ ವ್ಯವಸ್ಥೆಗೆ ಅನುಮತಿ

3 ಏಕೀಕೃತ ಸೇನಾ ವ್ಯವಸ್ಥೆಗೆ ಅನುಮತಿ

ಜಗತ್ತಿನ ನೇತೃತ್ವ ವಹಿಸಲು ಅಮೆರಿಕ ಮತ್ತೆ ಸಿದ್ಧ: ಬೈಡೆನ್‌

ಜಗತ್ತಿನ ನೇತೃತ್ವ ವಹಿಸಲು ಅಮೆರಿಕ ಮತ್ತೆ ಸಿದ್ಧ: ಬೈಡೆನ್‌

ಕೋವಿಡ್: ಹೊಸ ಮಾರ್ಗಸೂಚಿ: ರಾತ್ರಿ ಕರ್ಫ್ಯೂ ವಿಧಿಸಲು ರಾಜ್ಯಗಳಿಗೆ ಅವಕಾಶ

ಕೋವಿಡ್: ಹೊಸ ಮಾರ್ಗಸೂಚಿ: ರಾತ್ರಿ ಕರ್ಫ್ಯೂ ವಿಧಿಸಲು ರಾಜ್ಯಗಳಿಗೆ ಅವಕಾಶ

ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನ ಇನ್ನಿಲ್ಲ..

ಫುಟ್ಬಾಲ್ ದಂತಕಥೆ ಡಿಗೋ ಮರಡೋನ ಇನ್ನಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಲ್ಪೆ ಬಾಪುತೋಟ 3ನೇ ಹಂತದ ಬಂದರು ಪ್ರದೇಶ

ರಸ್ತೆ ತಿರುವಿನಲ್ಲಿ ಬೆಳೆದ ಗಿಡ ಗಂಟಿಗಳು; ಅಪಾಯಕ್ಕೆ ಆಹ್ವಾನ

ವೇತನವಿಲ್ಲ, ವಿಶೇಷ ಆರ್ಥಿಕ ಪ್ಯಾಕೇಜ್‌ ಕೂಡ ಇಲ್ಲ

ವೇತನವಿಲ್ಲ, ವಿಶೇಷ ಆರ್ಥಿಕ ಪ್ಯಾಕೇಜ್‌ ಕೂಡ ಇಲ್ಲ

Udupiಮಮತೆಯ ತೊಟ್ಟಿಲು ತೂಗಿದ ನ್ಯಾಯಾಧೀಶೆ

ಮಮತೆಯ ತೊಟ್ಟಿಲು ತೂಗಿದ ನ್ಯಾಯಾಧೀಶೆ

ದೀಪಾವಳಿ ವೇಳೆ ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಇಳಿಕೆ

ದೀಪಾವಳಿ ವೇಳೆ ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಇಳಿಕೆ

ಕಾರ್ಯಕರ್ತೆಯರ ಕೈಗೆ ಬಂದ ಪೋಷಣ್‌ ಅಭಿಯಾನ್‌ ಮೊಬೈಲ್‌

ಕಾರ್ಯಕರ್ತೆಯರ ಕೈಗೆ ಬಂದ ಪೋಷಣ್‌ ಅಭಿಯಾನ್‌ ಮೊಬೈಲ್‌

MUST WATCH

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

ಹೊಸ ಸೇರ್ಪಡೆ

ಮಲ್ಪೆ ಬಾಪುತೋಟ 3ನೇ ಹಂತದ ಬಂದರು ಪ್ರದೇಶ

ರಸ್ತೆ ತಿರುವಿನಲ್ಲಿ ಬೆಳೆದ ಗಿಡ ಗಂಟಿಗಳು; ಅಪಾಯಕ್ಕೆ ಆಹ್ವಾನ

ಬೆದ್ರೋಡಿ ಡಾಮರು ಮಿಶ್ರಣ ಘಟಕ: ಪರಿಸರ ಮಾಲಿನ್ಯ ಸ್ಥಳೀಯರಿಂದ ಆರೋಪ

ಬೆದ್ರೋಡಿ ಡಾಮರು ಮಿಶ್ರಣ ಘಟಕ: ಪರಿಸರ ಮಾಲಿನ್ಯ ಸ್ಥಳೀಯರಿಂದ ಆರೋಪ

ವೇತನವಿಲ್ಲ, ವಿಶೇಷ ಆರ್ಥಿಕ ಪ್ಯಾಕೇಜ್‌ ಕೂಡ ಇಲ್ಲ

ವೇತನವಿಲ್ಲ, ವಿಶೇಷ ಆರ್ಥಿಕ ಪ್ಯಾಕೇಜ್‌ ಕೂಡ ಇಲ್ಲ

ನಾಳೆಯೇ ಡಿಬಿಎಸ್‌ನಲ್ಲಿ ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ವಿಲೀನ

ನಾಳೆಯೇ ಡಿಬಿಎಸ್‌ನಲ್ಲಿ ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ವಿಲೀನ

50 ವರ್ಷಗಳ ಬಳಿಕ ಬಿಹಾರ ಸ್ಪೀಕರ್‌ ಸ್ಥಾನಕ್ಕೆ ಚುನಾವಣೆ

50 ವರ್ಷಗಳ ಬಳಿಕ ಬಿಹಾರ ಸ್ಪೀಕರ್‌ ಸ್ಥಾನಕ್ಕೆ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.