Udayavni Special

ತೌಕ್ತೆ ಚಂಡ ಮಾರುತ ಪ್ರಭಾವ: ಕಾಪು ಲೈಟ್ ಹೌಸ್ ಸುತ್ತಮುತ್ತಲಿನಲ್ಲಿ ಆತಂಕ

Team Udayavani, May 15, 2021, 3:07 PM IST

ತೌಕ್ತೆ ಚಂಡ ಮಾರುತ ಪ್ರಭಾವ: ಕಾಪು ಲೈಟ್ ಹೌಸ್ ಸುತ್ತಮುತ್ತಲಿನಲ್ಲಿ ಆತಂಕ

ಕಾಪು : ಅರಬ್ಬಿ ಸಮುದ್ರದಲ್ಲಿ ತೌಕ್ತೆ ಚಂಡ ಮಾರುತದ ಪರಿಣಾಮ ಕಡಲು ರೌದ್ರಾವತಾರ ತಾಳಿದೆ. ಕಾಪು ಲೈಟ್ ಸಮೀಪದಲ್ಲಿ ಕಡಲು ವಿಸ್ತಾರಗೊಂಡಿದ್ದು ಸಮುದ್ರ ತೀರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಸಮುದ್ರ ವಿಸ್ತಾರಗೊಂಡು ಸಮುದ್ರ ಕೊರೆತದ ಭೀತಿ ಎದುರಾಗಿದ್ದು, ಲೈಟ್ ಹೌಸ್ ನ ಸುತ್ತಲೂ ಸಮುದ್ರದ ನೀರು ಆವರಿಸಿಕೊಂಡಿದೆ.

ಕಾಪು ಬೀಚ್ ಸುತ್ತಮುತ್ತಲಿನ ಲೈಟ್ ಹೌಸ್ ವಾರ್ಡ್, ಕೋಟೆ ಕೊಪ್ಪಲ, ಸುಬ್ಬಯ್ಯ ತೋಟ, ಬೈರುಗುತ್ತು ತೋಟ, ಗರಡಿ ವಾರ್ಡ್, ಲಕ್ಷ್ಮೀ ನಗರ ವ್ಯಾಪ್ತಿಯ 30 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.

ಘಟನಾ ಪ್ರದೇಶಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್, ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ತಹಶೀಲ್ದಾರ್ ಪ್ರತಿಭಾ ಆರ್., ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಗ್ರಾ.ಪಂ. ಮಾಜಿ ಅಧ್ಯಕ್ಷ ವಿಕ್ರಂ ಕಾಪು, ಪುರಸಭೆ ಇಂಜಿನಿಯರ್ ಪ್ರತಿಮಾ, ಗಂಗಾಧರ್ ಸುವರ್ಣ, ನವೀನ್ ಅಮೀನ್, ಗ್ರಾಮ ಕಾರಣಿಕ ವಿಜಯ್ ಮೊದಲಾದವರು ಭೇಟಿ ನೀಡಿದರು.

ಶಾಸಕ ಲಾಲಾಜಿ‌ ಆರ್. ಮೆಂಡನ್ ಮಾತನಾಡಿ, ಕಾಪು ಬೀಚ್ ಮತ್ತು ಲೈಟ್ ಹೌಸ್ ವಾರ್ಡ್ ನಲ್ಲಿ ಕಳೆದ ಮಳೆಗಾಲದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಮತ್ತೆ ಸಮುದ್ರದಿಂದ ಉಕ್ಕಿದ ನೀರು ಎಲ್ಲೆಡೆ ಹರಿಯುತ್ತಿದೆ. ಚಂಡ ಮಾರುತದ ಪರಿಣಾಮದಿಂದಾಗಿ ಈ ರೀತಿಯಾಗಿದ್ದು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇಲ್ಲಿನ‌ ಸಮಸ್ಯೆ ಪತಿಹರಿಸಲು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಜನರ ಪ್ರಾಣ ರಕ್ಷಣೆಯೇ ನಮ್ಮ ಮುಖ್ಯ ಗುರಿಯಾಗಿದೆ ಎಂದರು.‌

ಕಾಪು ತಹಸೀಲ್ದಾರ್ ಪ್ರತಿಭಾ ಆರ್‌. ಮಾತನಾಡಿ, ಜನರ ಪ್ರಾಣ ರಕ್ಷಣೆಗೆ ಪೂರಕವಾಗಿ ತೊಂದರೆಗೊಳಗಾದ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗುವುದು‌. ಕಾಪು ಸುನಾಮಿ ಸೆಂಟರ್ ನಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಲಾಗಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಗಂಜಿ ಕೇಂದ್ರಗಳ ಪ್ರಾರಂಭಕ್ಕೆ ಸೂಚನೆ ನೀಡಲಾಗಿದೆ. ಜನ – ಜಾನುವಾರುಗಳ‌ ರಕ್ಷಣೆಗೆ ವಿಶೇಷ ಒತ್ತು‌ ನೀಡಲಾಗುವುದು ಎಂದರು.

ಟಾಪ್ ನ್ಯೂಸ್

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

Cristiano Ronaldo sets another record, becomes first person to reach 300 million followers mark on Instagram

ಇನ್ ಸ್ಟಾಗ್ರಾಮ್ ನಲ್ಲಿ 300ಮಿಲಿಯನ್ ಫಾಲೋವರ್ಸ್ ದಾಟಿದ ಫುಟ್ ಬಾಲ್ ಸ್ಟಾರ್ ಆಟಗಾರ ರೊನಾಲ್ಡೋ

ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

ದಕ್ಷಿಣ ಕನ್ನಡ : ಅಗತ್ಯ ವಸ್ತು ಖರೀದಿಗೆ ಅವಧಿ ವಿಸ್ತರಣೆ, ನೈಟ್ ಕರ್ಫ್ಯೂ ಮುಂದುವರಿಕೆ

ದಕ್ಷಿಣ ಕನ್ನಡ : ಅಗತ್ಯ ವಸ್ತು ಖರೀದಿಗೆ ಅವಧಿ ವಿಸ್ತರಣೆ, ನೈಟ್ ಕರ್ಫ್ಯೂ ಮುಂದುವರಿಕೆ

incident held at kapu

ಪೊಲಿಪು : ಮೂರು ಮನೆಗಳಿಗೆ ಸಿಡಿಲು ಬಡಿದು ಅಪಾರ ಹಾನಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

incident held at kapu

ಪೊಲಿಪು : ಮೂರು ಮನೆಗಳಿಗೆ ಸಿಡಿಲು ಬಡಿದು ಅಪಾರ ಹಾನಿ

ಮೃಗಶಿರಾ ಮಳೆಯ ಆರ್ಭಟ : ಕುಂಜೂರು ಬೈಲ್ ನಲ್ಲಿ ನೆರೆ

ಮೃಗಶಿರಾ ಮಳೆಯ ಆರ್ಭಟ : ಕುಂಜೂರು ಬೈಲ್ ನಲ್ಲಿ ನೆರೆ

ಸಮಾಜ ಸೇವಕ ಸುಧಾಕರ್ ಶೆಟ್ಟಿ ಮಟ್ಟಿಬೈಲು ನಿಧನ

ಸಮಾಜ ಸೇವಕ ಸುಧಾಕರ್ ಶೆಟ್ಟಿ ಮಟ್ಟಿಬೈಲು ನಿಧನ

ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ : ಪತ್ರಿಕೆ ವಿತರಕನ ಸಮಯ ಪ್ರಜ್ಞೆ; ತಪ್ಪಿದ ಅವಘಡ

ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ : ಪತ್ರಿಕೆ ವಿತರಕನ ಸಮಯ ಪ್ರಜ್ಞೆ; ತಪ್ಪಿದ ಅವಘಡ

ಮಡಾಮಕ್ಕಿ : ನೆಟ್‌ವರ್ಕ್‌ಗಾಗಿ ಎತ್ತರದ ಗುಡ್ಡದಲ್ಲಿ ಟೆಂಟ್‌

ಮಡಾಮಕ್ಕಿ : ನೆಟ್‌ವರ್ಕ್‌ಗಾಗಿ ಎತ್ತರದ ಗುಡ್ಡದಲ್ಲಿ ಟೆಂಟ್‌

MUST WATCH

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಹೊಸ ಸೇರ್ಪಡೆ

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

covid news

ಕೋವಿಡ್‌ಗೆ ಬಲಿ ಆದ ರೈತರ ಕೈಹಿಡಿದ ಅಪೆಕ್ಸ್

20-11

ದೂಡಾದಿಂದ ಅಮರ್‌ ಜವಾನ್‌ ಸ್ಮಾರಕ ನಿರ್ಮಾಣ

20-10

ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ: ಸಚಿವ ಈಶ್ವರಪ್ಪ

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.