Udayavni Special

ಉಡುಪಿ ಜಿಲ್ಲೆಯಲ್ಲಿ ತಾಪಮಾನ ಏರಿಕೆ

ಬಿಸಿಲ ಧಗೆ ತಣಿಸಲು ಜ್ಯೂಸ್‌, ಹಣ್ಣುಗಳಿಗೆ ಬೇಡಿಕೆ

Team Udayavani, Feb 27, 2020, 5:12 AM IST

2502UDKC2A

ಉಡುಪಿ: ಬಿಸಿಲಿನ ಧಗೆ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದು, 35 ಡಿಗ್ರಿವರೆಗೆ ತಲುಪಿದೆ. ಮುಂದಿನ ದಿನಗಳಲ್ಲಿ ತಾಪಮಾನ ಇನ್ನೂ ಒಂದೆರಡು ಡಿಗ್ರಿ ಹೆಚ್ಚಳವಾಗುವ ಸಾಧ್ಯತೆ ಇದೆ.

ಏರಿಳಿತ!
ಮಾರ್ಚ್‌ನ ಕೆಲವು ದಿನಗಳಲ್ಲಿ ಬಿಸಿಲು ತಾಪ ಏರಿಕೆ ಕಂಡರೂ ಉಳಿದಂತೆ ಹೆಚ್ಚಿನ ವ್ಯತ್ಯಾಸ ಕಾಣದು. ಜಿಲ್ಲೆಯಲ್ಲಿ ಮಂಗಳವಾರ 33 ಡಿಗ್ರಿ ತಾಪಮಾನ ಕಂಡು ಬಂದಿದ್ದು, ಫೆ. 26ಕ್ಕೆ 34 ಡಿಗ್ರಿ, ಫೆ. 27 ರಂದು 34 ಡಿಗ್ರಿಗೆ ಏರಿಕೆಯಾಗಲಿದೆ. ಬಳಿಕ ನಿಧಾನವಾಗಿ ಇಳಿಕೆ ಕಾಣಲಿದೆ. ಫೆ.28ರಂದು 32 ಡಿಗ್ರಿ, ಫೆ. 29 ರಂದು 32 ಡಿಗ್ರಿ ತಲುಪಿ ಮಾ.10ಕ್ಕೆ 31 ಡಿಗ್ರಿಗೆ ತಲುಪಲಿದೆ.

ಮಾರ್ಚ್‌ ತಿಂಗಳ ತಾಪಮಾನ
2020 ಮಾ.26ರಂದು 34 ಡಿಗ್ರಿ ಗರಿಷ್ಠ, ಕನಿಷ್ಠ ಮಾ.1ರಂದು 23 ಡಿಗ್ರಿ ದಾಖಲಾಗಲಿದೆ. ಉಳಿದಂತೆ 2019ರ ಮಾ. 14ರಂದು 35 ಡಿಗ್ರಿ ಗರಿಷ್ಠ, ಮಾ. 2ರಂದು 21 ಡಿಗ್ರಿ ಕನಿಷ್ಠ, 2018ರಲ್ಲಿ ಮಾ.2ರಂದು 36 ಡಿಗ್ರಿ ಗರಿಷ್ಠ, ಮಾ. 1ರಂದು 22 ಡಿಗ್ರಿ ಕನಿಷ್ಠ, 2017ರ ಮಾ.1ರಂದು 38 ಡಿಗ್ರಿ ಗರಿಷ್ಠ, ಮಾ.12ರಂದು 22 ಡಿಗ್ರಿ ಕನಿಷ್ಠ, 2016ರಲ್ಲಿ ಮಾ.3ರಂದು 35 ಡಿಗ್ರಿ ಗರಿಷ್ಠ, ಮಾ. 17ರಂದು 24 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿತ್ತು.

ಕಲ್ಲಂಗಡಿ, ಎಳನೀರಿಗೆ ಬೇಡಿಕೆ
ಉಷ್ಣಾಂಶ ಹೆಚ್ಚಿಗೆಯಾದ ಕಾರಣ ಎಳನೀರು, ವಿವಿಧ ಜ್ಯೂಸ್‌, ಕಲ್ಲಂಗಡಿ, ವಿವಿಧ ತಂಪು ಪಾನೀಯಗಳ ಮಾರಾಟ ಹೆಚ್ಚಳವಾಗಿವೆ. ನಗರದ ಕೆಲವು ಕಡೆಗಳಲ್ಲಿ ಕಲ್ಲಂಗಡಿ, ಅನಾನಸು, ಮುಳ್ಳು ಸೌತೆ ಮಾರಾಟ ಜೋರಾಗಿದೆ. ಎಳನೀರಿನ ಬೇಡಿಕೆ ಹೆಚ್ಚುತ್ತಿದ್ದು 35 ರೂ. ಬೆಲೆ ಇದೆ, ಕೆಲ ಮಾಲ್‌ಗ‌ಳಲ್ಲಿ 24 ರೂ.ಗೂ ಲಭ್ಯವಿದೆ. ಕಾಪು, ಮಲ್ಪೆ ಹಾಗೂ ಇತರ ಕಡಲ ಕಿನಾರೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ.

ತುಸು ಹೆಚ್ಚಳ
ತಾಪಮಾನ ಇತ್ತೀಚೆಗೆ 34.8 ಡಿಗ್ರಿ, 35.4 ಡಿಗ್ರಿ, 36ಡಿಗ್ರಿ ವರೆಗೆ ತಲುಪಿದೆ. ಕಳೆದ ವರ್ಷ ಬಿಸಿ ಗಾಳಿ ಪ್ರಮಾಣ ಹೆಚ್ಚಿದ್ದರಿಂದ ಸೆಕೆಯ ಪ್ರಮಾಣ ಹೆಚ್ಚಿತ್ತು. ಇತ್ತೀಚಿನ ದಿನಗಳಲ್ಲಿ ಭೂಮಿಯಲ್ಲಿ ನೀರಿನ ತೇವಾಂಶ ಕಡಿಮೆ, ಗಾಳಿಯ ಪ್ರಮಾಣ ಕಡಿಮೆಯಿಂದ ಸೆಕೆಯ ಅನುಭವ ಆಗುತ್ತಿದೆ. ಮುಂದಿನ ತಿಂಗಳು 1ರಿಂದ 2 ಡಿಗ್ರಿಯಷ್ಟು ಮಾತ್ರ ತಾಪಮಾನ ಹೆಚ್ಚಾಗಲಿದ್ದು, ಅಕಾಲಿಕ ಮಳೆಯ ಸಾಧ್ಯತೆ ಕಡಿಮೆ ಇದೆ.
-ರಂಜಿತ್‌ ಟಿ.ಎಚ್‌.,ತಾಂತ್ರಿಕ ಅಧಿಕಾರಿ, ಗ್ರಾಮೀಣ ಕೃಷಿ ಹವಾಮಾನ ಮನ್ಸೂಚನಾ ಘಟಕ, ಬ್ರಹ್ಮಾವರ

ಬೀಚ್‌ಗೆ ಜನರ ಲಗ್ಗೆ
ಮಲ್ಪೆ ಬೀಚ್‌ನಲ್ಲಿ ಬೆಳಗ್ಗಿನ ಹೊತ್ತಿಗಿಂತ ಸಂಜೆ 4ರಿಂದ 7ರವರೆಗೆ ಹೆಚ್ಚಿನ ಮಂದಿ ಭೇಟಿ ನೀಡುತ್ತಿದ್ದು, ದಿನಂಪ್ರತಿ 3 ಸಾವಿರ ಮಂದಿ ಭೇಟಿ ನೀಡುತ್ತಾರೆ. ವೀಕೆಂಡ್‌ನ‌ಲ್ಲಿ 10 ಸಾವಿರ ಮಂದಿ ಭೇಟಿ ನೀಡುತ್ತಾರೆ ಎಂದು ಮಲ್ಪೆ ಬೀಚ್‌ ಅಭಿವೃದ್ಧಿ ನಿಗಮದ ಸಿಇಒ ಸುದೇಶ್‌ ಹೇಳುತ್ತಾರೆ. ಇದೇ ವೇಳೆ ಕಾಪುವಿನಲ್ಲೂ ವಾರಾಂತ್ಯ 6- 7 ಸಾವಿರ ಮಂದಿ ಭೇಟಿ ನೀಡುತ್ತಿದ್ದಾರೆ ಎಂದು ಕಾಪು ಬೀಚ್‌ ಅಭಿವೃದ್ಧಿ ನಿಗಮದ ಸಿಇಒ ಯತೀಶ್‌ ಬೈಕಂಪಾಡಿ ಹೇಳುತ್ತಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರವಿ ಶಾಸ್ತ್ರೀ, ಹರ್ಷ ಬೋಗ್ಲೆಯಲ್ಲ.. ಈತನೇ ನನ್ನ ನೆಚ್ಚಿನ ಕಾಮೆಂಟೇಟರ್ ಎಂದ ವಿರಾಟ್

ರವಿ ಶಾಸ್ತ್ರೀ, ಹರ್ಷ ಬೋಗ್ಲೆಯಲ್ಲ.. ಈತನೇ ನನ್ನ ನೆಚ್ಚಿನ ಕಾಮೆಂಟೇಟರ್ ಎಂದ ವಿರಾಟ್

ಪ್ಲಾಸ್ಮಾವನ್ನು ದಾನ ಮಾಡಿದ ಕೋವಿಡ್-19 ಸೋಂಕಿತ

ಪ್ಲಾಸ್ಮಾವನ್ನು ದಾನ ಮಾಡಿದ ಕೋವಿಡ್-19 ಸೋಂಕಿತ

ವಿಶ್ವ ಆರೋಗ್ಯ ದಿನ

ವಿಶ್ವ ಆರೋಗ್ಯ ದಿನ

ಕೋವಿಡ್-19 ಗೆ ಬಲಿಯಾದ ದಾಖಲೆಗಳ ಸರದಾರ, ಫುಟ್ ಬಾಲ್ ತಾರೆ ಟಾಮ್ ಡೆಂಮ್ಸೆ

ಕೋವಿಡ್-19 ಗೆ ಬಲಿಯಾದ ದಾಖಲೆಗಳ ಸರದಾರ, ಫುಟ್ ಬಾಲ್ ತಾರೆ ಟಾಮ್ ಡೆಂಮ್ಸೆ

covid-19-in-china

ಜನವರಿ ನಂತರ, ಮೊದಲ ಬಾರಿಗೆ ಚೀನಾದಲ್ಲಿ ಸೋಂಕಿನಿಂದ ಯಾರೂ ಮೃತರಾಗಿಲ್ಲ: ವರದಿ

borish-jhonson

ಕೋವಿಡ್-19: ತೀವ್ರ ಹದಗೆಟ್ಟ ಬ್ರಿಟನ್ ಪ್ರಧಾನಿ ಆರೋಗ್ಯ: ಐಸಿಯುಗೆ ದಾಖಲು

donald-trump

ಔಷಧಿ ರಫ್ತು ನಿಷೇಧ: ಭಾರತದ ಮೇಲೆ ಅಮೆರಿಕಾ ಪ್ರತೀಕಾರದ ಎಚ್ಚರಿಕೆ! ಟ್ರಂಪ್ ಹೇಳಿದ್ದೇನು ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು, ನಾಳೆ ಸೂಪರ್‌ ಮೂನ್‌

ಇಂದು, ನಾಳೆ ಸೂಪರ್‌ ಮೂನ್‌

ಉಡುಪಿ: ವಿದೇಶದಿಂದ ಬಂದವರ ಹೋಂ ಕ್ವಾರಂಟೈನ್‌ ಅವಧಿ ಮುಕ್ತಾಯ

ಉಡುಪಿ: ವಿದೇಶದಿಂದ ಬಂದವರ ಹೋಂ ಕ್ವಾರಂಟೈನ್‌ ಅವಧಿ ಮುಕ್ತಾಯ

ಉಡುಪಿ: ನಾಲ್ವರು ಐಸೊಲೇಶನ್‌ ವಾರ್ಡ್‌ಗೆ ದಾಖಲು

ಉಡುಪಿ: ನಾಲ್ವರು ಐಸೊಲೇಶನ್‌ ವಾರ್ಡ್‌ಗೆ ದಾಖಲು

ಕೋವಿಡ್ 19 ತಾತ್ಸಾರ ತೋರಿದರೆ ಪರಿಣಾಮ ಭೀಕರ

ಕೋವಿಡ್ 19 ತಾತ್ಸಾರ ತೋರಿದರೆ ಪರಿಣಾಮ ಭೀಕರ

ನಿಜಾಮುದ್ದೀನ್‌ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಲಿ

ನಿಜಾಮುದ್ದೀನ್‌ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಲಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ರವಿ ಶಾಸ್ತ್ರೀ, ಹರ್ಷ ಬೋಗ್ಲೆಯಲ್ಲ.. ಈತನೇ ನನ್ನ ನೆಚ್ಚಿನ ಕಾಮೆಂಟೇಟರ್ ಎಂದ ವಿರಾಟ್

ರವಿ ಶಾಸ್ತ್ರೀ, ಹರ್ಷ ಬೋಗ್ಲೆಯಲ್ಲ.. ಈತನೇ ನನ್ನ ನೆಚ್ಚಿನ ಕಾಮೆಂಟೇಟರ್ ಎಂದ ವಿರಾಟ್

07-April-02

ಪೌರ ಕಾರ್ಮಿಕರ ಕಾಳಜಿ ಸುರಂಗ!

ಬಿಟ್‌ಸಾಂಗ್‌ನಲ್ಲೇ ಲವ್‌, ಮದುವೆ, ಮಕ್ಕಳು…

ಬಿಟ್‌ಸಾಂಗ್‌ನಲ್ಲೇ ಲವ್‌, ಮದುವೆ, ಮಕ್ಕಳು…

07-April-01

ಹೋಂ ಕ್ವಾರಂಟೈನ್‌ಗಳ ಸೇವೆಯಲ್ಲಿ ಆಶಾ ಕಾರ್ಯಕರ್ತೆಯರು

ಪ್ಲಾಸ್ಮಾವನ್ನು ದಾನ ಮಾಡಿದ ಕೋವಿಡ್-19 ಸೋಂಕಿತ

ಪ್ಲಾಸ್ಮಾವನ್ನು ದಾನ ಮಾಡಿದ ಕೋವಿಡ್-19 ಸೋಂಕಿತ