ಅಪಾಯಕಾರಿ ಕೋಡಿ ಕೆಳಕೇರಿ ಗುಂಡಿಗೆ ಸೇತುವೆ ಭಾಗ್ಯ

13.55ಕೋಟಿ ವೆಚ್ಚದಲ್ಲಿ ರಸ್ತೆ, ಸೇತುವೆ ನಿರ್ಮಾಣ ; ಕೃಷಿ,ಮೀನುಗಾರಿಕೆ, ಪ್ರವಾಸಿ ಚಟುವಟಿಕೆಗೆ ಅನುಕೂಲ

Team Udayavani, Nov 14, 2019, 5:38 AM IST

ಕೋಟ: ಸಾಸ್ತಾನ ಸಮೀಪ ಕೋಡಿಕನ್ಯಾಣ ಫಲವತ್ತದ ಕೃಷಿಭೂಮಿ ಹಾಗೂ ಮೀನುಗಾರಿಕೆ, ಉತ್ತಮ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಸುಂದರ ತಾಣ. ಇಲ್ಲಿ ಹರಿಯುವ ಸೀತಾನದಿಗೆ ಕೋಡಿ ಕೆಳಕೇರಿ ಎನ್ನುವಲ್ಲಿ ಸೇತುವೆ ನಿರ್ಮಿಸಿ ಈ ಭಾಗದ ಕೃಷಿಭೂಮಿಗೆ ಸಂಪರ್ಕ ಕಲ್ಪಿಸಬೇಕು ಎನ್ನುವುದು ಸ್ಥಳೀಯರ ಹಲವು ದಶಕಗಳ ಕನಸಾಗಿತ್ತು. ಇದೀಗ ಇವರ ಬೇಡಿಕೆ ಫಲಿಸಿದ್ದು ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯ ಅನುದಾನದಲ್ಲಿ 8.4 ಮೀ ಅಗಲ, 200 ಮೀ. ಉದ್ದದ ಒಟ್ಟು 13.55ಕೋಟಿ ವೆಚ್ಚದ ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಟೆಂಡರ್‌ ನಡೆದಿದೆ.

ದುರಂತ ಕಲಿಸಿತ್ತು ಪಾಠ
ಇಲ್ಲಿನ ಸೀತಾನದಿ ಕೆಳಕೇರಿ ಮತ್ತು ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಗುಂಡ್ಮಿ ತಗ್ಗಿನಬೆ„ಲು ಮಧ್ಯದಲ್ಲಿ ಹರಿಯುತ್ತದೆ ಹಾಗೂ ಕೋಡಿ ನಿವಾಸಿಗಳ ಹತ್ತಾರು ಎಕ್ರೆ ಗದ್ದೆ ಗುಂಡ್ಮಿ ತಗ್ಗಿನಬೈಲಿನಲ್ಲಿದ್ದು ಕೃಷಿ ಚಟುವಟಿಕೆಗಾಗಿ ತುಂಬಿ ಹರಿಯುವ ಹೊಳೆ ದಾಟಬೇಕಾಗಿತ್ತು. ಹೀಗೆ 10 ವರ್ಷದ ಇಲ್ಲಿನ ಕೃಷಿಕ ಮಹಿಳೆಯರು ನದಿಯನ್ನು ದಾಟಿ ನೆಲಗಡಲೆ ಬೆಳೆಯನ್ನು ಕಿತ್ತು, ವಾಪಾಸಾಗುತ್ತಿರುವಾಗ ನದಿಯ ಸೆಳೆತಕ್ಕೆ ಸಿಲುಕಿ ಇಬ್ಬರು ಮƒತಪಟ್ಟಿದ್ದರು ಮತು ಮೂರ್‍ನಾಲ್ಕು ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದರು. ದುರಂತದ ಅನಂತರ ಸೇತುವೆಗಾಗಿ ಹೋರಾಟ ತೀವ್ರಗೊಂಡಿತ್ತು. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ರಾಜ್ಯ ಯೋಜನಾ ಅನುಷ್ಠಾನ ಘಟಕ ಮತ್ತು ಚಂಡಮಾರುತ ಉಪಶಮನ ಯೋಜನೆಯ ಮೂಲಕ ಸೇತುವೆಗೆ ಹಣ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೃಷಿ ಮೀನುಗಾರಿಕೆ,
ಪ್ರವಾಸಿತಾಣವಾಗಿ
ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದಿರುವುದರಿಂದ ಈ ಭಾಗದ ಕೃಷಿಚಟುಟವಿಕೆಗೆ ಸಾಕಷ್ಟು ಹಿನ್ನಡೆಯಾಗಿತ್ತು ಹಾಗೂ ಹಲವು ಎಕ್ರೆ ಗದ್ದೆ ಹಡಿಲು ಹಾಕಲಾಗಿತ್ತು. ಇದೀಗ ಸೇತುವೆ, ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಕೃಷಿಚಟುವಟಿಕೆಗೆ ಸಹಾಯವಾಗಲಿದೆ ಮತ್ತು ಈ ಪ್ರದೇಶ ಸುತ್ತಲು ಹಸಿರು ಹಾಗೂ ನೀರಿನಿಂದ ಕೂಡಿದ್ದು ಅತ್ಯಂತ ರಮಣೀಯ ಪ್ರಕೃತಿ ಸೌಂದರ್ಯವನ್ನು ಹೊಂದಿದೆ ಹೀಗಾಗಿ ಪ್ರವಾಸಿ ತಾಣವಾಗಿಯೂ ಮುಂದೆ ಅಭಿವೃದ್ಧಿ ಹೊಂದುವ ಅವಕಾಶವಿದೆ.

ಸಾಲಿಗ್ರಾಮ ಸಂಪರ್ಕ ಹತ್ತಿರ
ಸೇತುವೆ ನಿರ್ಮಾಣವಾದ ಮೇಲೆ ಕೋಡಿ ಕನ್ಯಾಣ ಭಾಗದವರು ಸಾಲಿಗ್ರಾಮ ಭಗವತಿ ರಸ್ತೆಯ ಮೂಲಕ ಡಿವೈನ್‌ ಪಾರ್ಕ್‌ ಹಾಗೂ ಸಾಲಿಗ್ರಾಮವನ್ನು ಸುಮಾರು 2 ಕಿ.ಮೀ ಹತ್ತಿರದಿಂದ ಸಂಪರ್ಕಿಸಬಹುದಾಗಿದೆ.

ಕನಸು ನನಸಾಗಿದೆ
ಈ ಭಾಗದಲ್ಲಿ ಸೇತುವೆ ನಿರ್ಮಾಣವಾಗಬೇಕು ಎನ್ನುವುದು ನಮ್ಮೂರಿನ ಜನರ ಹಲವು ವರ್ಷಗಳ ಬೇಡಿಕೆಯಾಗಿದೆ. ಇದೀಗ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಸಹಕಾರದಿಂದ ಈ ಕನಸು ನನಸಾಗಿದ್ದು ಊರಿನವರಿಗೆ ಸಂತಸ ತಂದಿದೆ.
-ಉದಯ ಕಾಂಚನ್‌ ಕೋಡಿ,
ಸ್ಥಳೀಯ ನಿವಾಸಿ

ಶೀಘ್ರ ಕಾಮಗಾರಿ
ರಾಜ್ಯ ಯೋಜನಾ ಅನುಷ್ಠಾನ ಘಟಕ ಮತ್ತು ಚಂಡಮಾರುತ ಉಪಶಮನ ಯೋಜನೆಯ ಅನುದಾನದಲ್ಲಿ 13.55ಕೋಟಿ ವೆಚ್ಚದಲ್ಲಿ ಸೇತುವೆ, ರಸ್ತೆಗೆ ಹಣ ಬಿಡುಗಡೆಯಾಗಿ ಟೆಂಡರ್‌ ಆಗಿದೆ. ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.
-ಹರೀಶ್‌,
ಕಿರಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪಿಡಬ್ಲೂéಡಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮೈಸೂರು: "ಸಾಲ ತಂದಾದರೂ ಸರ್ಕಾರ ರೈತರ ನೆರವಿಗೆ ಬರಲಿದೆ. ರೈತರ ಜೀವನದಲ್ಲಿ ಬದಲಾವಣೆ ತರಲು ಎಲ್ಲ ರೀತಿಯ ಯತ್ನ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ...

  • ಬೆಂಗಳೂರು: "ಪ್ರಯೋಜನಕ್ಕೆ ಬಾರದ ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತ್ಯಜಿಸಿ, ವೈಜ್ಞಾನಿಕ ಮನೋಭಾವದಿಂದ ದೇಶದ ಪ್ರಗತಿಗೆ ಶ್ರಮಿಸಬೇಕು' ಎಂದು ನಾಡಿನ ಜನತೆಗೆ...

  • ಮಂಡಲವಾಸ್‌(ರಾಜಸ್ಥಾನ): ಹನಿ ನೀರಿಗೂ ಪರದಾಡಿದ್ದೆವು, ಕಿಮೀಗಟ್ಟಲೇ ದೂರ ಸಾಗಿ ನೀರು ತರಲು ಹಲವು ತಾಸುಗಳನ್ನೇ ಮೀಸಲಿಡುತ್ತಿದ್ದೆವು, ಮಳೆ ಬಂದ ಎರಡೇ ತಾಸಿಗೆ...

  • ಬೆಂಗಳೂರು: ಬಿಜೆಪಿ ಹಾಗೂ ಸಂಘ ಪರಿವಾರದಿಂದ ಸಂವಿಧಾನ ರಕ್ಷಿಸುವ ಹೊಣೆಯನ್ನು ಕಾಂಗ್ರೆಸ್‌ ಮಾಡಬೇಕಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕರು ಶಪಥಗೈಯುವ ಮೂಲಕ 71ನೇ...

  • ವಿಜಯಪುರ: "ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಿ.ಸಿ. ಪಾಟೀಲ ಅವರನ್ನು ಬಲಿಕೊಟ್ಟು ಸಚಿವನಾಗುವ ದುರಾಸೆ ನನಗಿಲ್ಲ. ಒಂದೊಮ್ಮೆ ಪಕ್ಷ ನನಗೆ ಅಧಿಕಾರ ನೀಡಬಯಸಿದರೆ...