Udayavni Special

ಚುನಾವಣಾ ಬಹಿರಂಗ ಪ್ರಚಾರ ಇಂದು ಅಂತ್ಯ


Team Udayavani, May 10, 2018, 6:00 AM IST

s-4.jpg

ಉಡುಪಿ: ವಿಧಾನಸಭೆ ಚುನಾವಣೆಗಾಗಿ ಆಯಾ ಪಕ್ಷಗಳಲ್ಲಿ ಸ್ಪರ್ಧೆಗೆ ಅಭ್ಯರ್ಥಿಗಳ ಘೋಷಣೆಯಾದಂದಿನಿಂದ ಶುರುವಾಗಿದ್ದ ಚುನಾವಣ ಬಹಿರಂಗ ಪ್ರಚಾರ ಕಾರ್ಯ ಮೇ 10ರ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಚುನಾವಣ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಜನರಲ್ಲಿ ಕುತೂಹಲವು ಹೆಚ್ಚಾಗುತ್ತಿದೆ.

ರೋಡ್‌ ಶೋ, ಸಾರ್ವಜನಿಕ ವೇದಿಕೆಗಳ ಮೂಲಕ ಪ್ರಚಾರ ಗುರುವಾರ ಸಮಾಪನಗೊಳ್ಳಲಿದೆ. ಪ್ರಮುಖ 2 ರಾಷ್ಟ್ರೀಯ ಪಕ್ಷಗಳು ಜಿಲ್ಲೆಯಲ್ಲಿ ಭಾರೀ ಜಿದ್ದಾಜಿದ್ದಿಯಲ್ಲಿ ಪ್ರಚಾರ ಕಾರ್ಯ ನಡೆಸಿವೆ. ಒಂದು ಪಕ್ಷದವರು ಉಡುಪಿಯಲ್ಲಿ ಪ್ರಧಾನಿ ಮೋದಿಯನ್ನು ಕರೆಸಿ ಮೋದಿ ಮೇನಿಯಾವನ್ನು ಸೃಷ್ಟಿಸಿದ್ದರೆ, ಎದುರಾಳಿ ಪಕ್ಷ ಸುಮ್ಮನೆ ಕುಳಿತಿರಲಿಲ್ಲ. ರಾಷ್ಟ್ರೀಯ ನಾಯಕರಾದ ಗುಲಾಂ ನಬಿ ಆಜಾದ್‌, ನಟ-ಸಂಸದ ರಾಜ್‌ ಬಬ್ಬರ್‌ ಅವರ ಮೂಲಕ ಪ್ರಚಾರ ಕಾರ್ಯ ನಡೆಸಿದೆ.

ಬೈಂದೂರಿನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಪ್ರಚಾರ ಕಾರ್ಯ ನಡೆಸಿದ್ದಾರೆ. ಕಾರ್ಕಳದಲ್ಲಿ ರಾಜನಾಥ್‌ ಸಿಂಗ್‌, ಉಡುಪಿಗೆ ಅಮಿತ್‌ ಶಾ ಬಂದು ಚುನಾವಣ ತಂತ್ರಗಾರಿಕೆಯನ್ನು ಹೆಣೆದು ಹೋಗಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ಸಹಿತ ಬಿ.ಕೆ. ಹರಿಪ್ರಸಾದ್‌, ಡಿ.ಕೆ. ಶಿವಕುಮಾರ್‌ ಮೊದಲಾದ ನಾಯಕರು ಜಿಲ್ಲೆಗೆ ಬಂದು ಹೋಗಿದ್ದಾರೆ. ಪಕ್ಷಗಳ ಚುನಾವಣ ರಾಜ್ಯ ಉಸ್ತುವಾರಿಗಳು ಆಗಾಗ್ಗೆ ಬಂದು ಹೋಗಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಪತ್ನಿ, ಮಕ್ಕಳು, ಅಳಿಯಂದಿರು, ಸಂಬಂಧಿಕರ ಮೂಲಕ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಸಾಧು ಕೋಕಿಲ ಸಹಿತ ಅಲ್ಲಲ್ಲಿ ಸ್ಥಳೀಯ ನಟ-ನಟಿಯರೂ ಪ್ರಚಾರ ಕಾರ್ಯದಲ್ಲಿ ಕಂಡುಬಂದಿದ್ದಾರೆ.

ಜಿಲ್ಲೆಯ ಏಕೈಕ ಮಹಿಳಾ ಅಭ್ಯರ್ಥಿ ಕಾಪುವಿನಲ್ಲಿ ರಾಜಕೀಯ ಮುಖಂಡರ “ಬೆಂಡೆ’ತ್ತಲು ಅಣಿಯಾಗಿದ್ದಾರೆ. ಕಾಂಗ್ರೆಸ್ಸಿಗರು ರಾಜ್ಯದಲ್ಲಿನ ಹಾಗೂ ಕ್ಷೇತ್ರದಲ್ಲಿನ ತಮ್ಮ 5 ವರ್ಷಗಳ ಸಾಧನೆಯನ್ನು ಪ್ರಮುಖ ಚುನಾವಣ ಅಸ್ತ್ರವನ್ನಾಗಿಸಿಕೊಂಡಿದ್ದರೆ, ಹಿಂದೂ ವಿರೋಧಿ ನೀತಿ, ಅಭಿವೃದ್ಧಿಯಾಗಿಲ್ಲ ಎನ್ನುವ ಆರೋಪಗಳನ್ನು ಪ್ರಮುಖ ಅಸ್ತ್ರ ವನ್ನಾಗಿಸಿರುವ ಬಿಜೆಪಿ ಅಖಾಡದಲ್ಲಿ ಸೆಣಸಾಡುತ್ತಿದೆ. ಮೇ 12ರಂದು ಹೆಚ್ಚಿನ ಮತದಾರರ ಒಲವು ಯಾರ ಕಡೆಗಿದೆ ಎಂದು ತಿಳಿಯಲಿದೆ. ಮೇ 15ರಂದು ಬಹಿರಂಗವಾಗಿ ಗೊತ್ತಾಗಲಿದೆ.

ಅಲೆಯೋ? ಮೋಡಿಯೋ?
ಈ ಬಾರಿ ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯನವರ ಆಡಳಿತ ಪರ ಅಲೆ ಇದೆ ಎಂದು ಕಾಂಗ್ರೆಸಿಗರು ಹೇಳಿದರೆ, ನರೇಂದ್ರ ಮೋದಿ ಪರ ಅಲೆ ನಮ್ಮ ಕಡೆಗಿದೆ, ಯಡಿಯೂರಪ್ಪನವರೇ ನಮ್ಮ ಸಿಎಂ ಎಂದು ಬಿಜೆಪಿಗರು ಹೇಳುತ್ತಾರೆ. ಅತ್ತ ಜೆಡಿಎಸ್‌ ಅಭ್ಯರ್ಥಿಗಳೇನೂ ಹಿಂದೆ ಬಿದ್ದಿಲ್ಲ. ಕುಮಾರಣ್ಣನೇ ಕಿಂಗ್‌ಮೇಕರ್‌. ಅವರೇ ಮುಂದಿನ ಸಿಎಂ ಅಂತ ಹೇಳಿ ಮತದಾರರನ್ನು ಸೆಳೆಯುತ್ತಿದ್ದಾರೆ. ಅನ್ಯ ಪಕ್ಷ, ಪಕ್ಷೇತರರು ಅವರಷ್ಟಕ್ಕೆ ಪ್ರಚಾರ ನಡೆಸುತ್ತಲಿದ್ದಾರೆ. 

ಅಭ್ಯರ್ಥಿಗಳಲ್ಲಿ  ಆತಂಕ!
ಬೈಂದೂರು, ಕುಂದಾಪುರ, ಕಾರ್ಕಳ, ಉಡುಪಿ ಮತ್ತು ಕಾಪು ಈ ಎಲ್ಲ ಕ್ಷೇತ್ರಗಳಲ್ಲಿ ಮೊದಲಿಗೆ ಪಕ್ಷದ ಮುಖಂಡರು ತಾವು ಈ ಕ್ಷೇತ್ರವನ್ನು ಗೆಲ್ಲುತ್ತೇವೆಂದು ಪಕ್ಕಾ ಹೇಳಿದ್ದರು. ಆದರೆ ಅನಂತರದ ಕೆಲವು ಬೆಳವಣಿಗೆಗಳು ನಿರೀಕ್ಷೆಗಳನ್ನೇ ಉಲ್ಟಾ ಮಾಡಿದಂತಿವೆ. ಒಂದೇ ಪಕ್ಷ/ಅಭ್ಯರ್ಥಿ ಪರ ಜನರ ಒಲವಿದ್ದಂತೆ ಈಗ ಕಂಡುಬರುತ್ತಿಲ್ಲ. ಯಾವುದೋ “ಹವಾ’ ಕೆಲಸ ಮಾಡಿದಂತಿದೆ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ. ಕಾರ್ಯಕರ್ತರು, ಮತದಾರರು ಈಗ ಯೋಚನಾಶೀಲರಾಗಿದ್ದಾರೆ. ಹಾಗಾಗಿ ಗೆದ್ದೇ ಗೆಲ್ಲುತ್ತೇವೆಂದು ಅಂದು ಕೊಂಡಿದ್ದ ಅಭ್ಯರ್ಥಿಗಳಲ್ಲೂ ಆತಂಕ ಕಾಡತೊಡಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

Padikkal-ABD

ಫಿಂಚ್, ಪಡಿಕ್ಕಲ್ ಫಿಪ್ಟೀ ; ABD ಮಸ್ತ್ ಬ್ಯಾಟಿಂಗ್ ಮುಂಬೈ ಗೆಲುವಿಗೆ 202 ರನ್ ಗಳ ಟಾರ್ಗೆಟ್

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ರೈತರ ಸಾವು

ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಿದ್ಯುತ್ ಅವಘಡ ಎತ್ತು ಸೇರಿ ಇಬ್ಬರು ರೈತರ ಸಾವು

0

ಆರ್ ಸಿಬಿ – ಮುಂಬೈ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಟಬ್‌ಗ ಬಿದ್ದ ಆನೆ ಮರಿ; ಗಜ ಸ್ನಾನದ ವೈಖರಿಗೆ ಮನಸೋತ ನೆಟ್ಟಿಗರು!

ಟಬ್‌ಗ ಬಿದ್ದ ಆನೆ ಮರಿ; ಗಜ ಸ್ನಾನದ ವೈಖರಿಗೆ ಮನಸೋತ ನೆಟ್ಟಿಗರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯಾವರ ಗ್ರಾಮೀಣ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

ಉದ್ಯಾವರ ಗ್ರಾಮೀಣ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

udupi-tdy-1

ಶೀಘ್ರದಲ್ಲೇ ಪೊಲೀಸ್‌ ಠಾಣೆಗಳು ಮೇಲ್ದರ್ಜೆಗೆ

ಬೆಳ್ವೆ : ಹೊಂಡಗಳಿಂದ ತುಂಬಿದ ರಾಜ್ಯ ಹೆದ್ದಾರಿ

ಬೆಳ್ವೆ : ಹೊಂಡಗಳಿಂದ ತುಂಬಿದ ರಾಜ್ಯ ಹೆದ್ದಾರಿ

ಅರಾಟೆ ಸೇತುವೆ : ಐದು ತಿಂಗಳ ಹಿಂದೆ ನಡೆದಿತ್ತು ಪರಿಶೀಲನೆ

ಅರಾಟೆ ಸೇತುವೆ : ಐದು ತಿಂಗಳ ಹಿಂದೆ ನಡೆದಿತ್ತು ಪರಿಶೀಲನೆ

LIVE: ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ತೋರಿದ ಕರಾವಳಿ: ಎಲ್ಲೆಲ್ಲಿ ಹೇಗಿದೆ?

LIVE: ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ತೋರಿದ ಕರಾವಳಿ: ಎಲ್ಲೆಲ್ಲಿ ಹೇಗಿದೆ?

MUST WATCH

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

Isiri-tdy-3

ವಿಮೆ ಇದ್ದವನೇ ಶೂರ!

Padikkal-ABD

ಫಿಂಚ್, ಪಡಿಕ್ಕಲ್ ಫಿಪ್ಟೀ ; ABD ಮಸ್ತ್ ಬ್ಯಾಟಿಂಗ್ ಮುಂಬೈ ಗೆಲುವಿಗೆ 202 ರನ್ ಗಳ ಟಾರ್ಗೆಟ್

ಯಾವುದು ಬೇಕೋ ಆರಿಸಿಕೊಳ್ಳಿ…

ಯಾವುದು ಬೇಕೋ ಆರಿಸಿಕೊಳ್ಳಿ…

ಮಂಡ್ಯ: 207 ಮಂದಿಗೆ ಹೊಸದಾಗಿ ಕೋವಿಡ್ 19 ಸೋಂಕು : 79 ಮಂದಿ ಬಿಡುಗಡೆ

ಮಂಡ್ಯ: 207 ಮಂದಿಗೆ ಹೊಸದಾಗಿ ಕೋವಿಡ್ 19 ಸೋಂಕು : 79 ಮಂದಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.