ಜನತಂತ್ರದ ಹಬ್ಬ: ಅಧಿಕಾರಿಗಳು, ಸಿಬಂದಿ ಜಾಗರಣೆ

ಮನೆಯೂ ಕಚೇರಿಯೂ ಆದ ಉಡುಪಿಯ ಡಿಮಸ್ಟರಿಂಗ್‌ ಕೇಂದ್ರ

Team Udayavani, Apr 21, 2019, 6:30 AM IST

ಉಡುಪಿ: ಕಣ್ಣುಜ್ಜುತ್ತಾ ಕೈಯಲ್ಲಿರುವ ಕಡತಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು, ಕಂಪ್ಯೂಟರ್‌ ಪರದೆಯನ್ನು ಎವೆಯಿಕ್ಕದೆ ದಿಟ್ಟಿಸುತ್ತಿರುವ ತಂತ್ರಜ್ಞರು, ಹದ್ದಿನ ಕಣ್ಣಿನಂತೆ ದಿಟ್ಟಿ ಹಾಯಿಸುವ ಪ್ಯಾರಾಮಿಲಿಟರಿ, ಸಶಸ್ತ್ರ ಪೊಲೀಸರ ದಂಡು..

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತಯಂತ್ರ (ಇವಿಎಂ) ಗಳನ್ನು ಸಂಗ್ರಹಿಸಿಡಲಾದ ಉಡುಪಿ ಅಜ್ಜರಕಾಡಿನ ಸೈಂಟ್‌ ಸಿಸಿಲೀಸ್‌ ಶಿಕ್ಷಣ ಸಂಸ್ಥೆಯೊಳಗಿನ ಪ್ರಾಂಗಣದಲ್ಲಿ ಮತದಾನ ಮುಗಿದ ಬಳಿಕ ಕಂಡುಬಂದ ದೃಶ್ಯವಿದು.

ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ನಿತ್ಯ ಚುನಾವಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದ ನೂರಾರು ಅಧಿಕಾರಿಗಳು, ಸಿಬಂದಿ ಪೈಕಿ ಸುಮಾರು 150ರಷ್ಟು ಮಂದಿ ಗುರುವಾರ ಬೆಳಗ್ಗೆ 6ರಿಂದ ಶುಕ್ರವಾರ ಅಪರಾಹ್ನ 3 ಗಂಟೆಯವರೆಗೂ ಬಿಡುವಿಲ್ಲದೆ ದುಡಿದಿದ್ದಾರೆ.

ಮತಯಂತ್ರಕ್ಕಾಗಿ ಕಾಯುತ್ತಾ…
ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ ಸಹಿತ ಜಿಲ್ಲಾ ಕೇಂದ್ರದಿಂದ ದೂರ ಇದ್ದ ಮತಗಟ್ಟೆಗಳ ಮತಯಂತ್ರಗಳು ಸೇರಿದಂತೆ ಎಲ್ಲ ಮತಯಂತ್ರಗಳು ಶುಕ್ರವಾರ ಬೆಳಗ್ಗೆ 6 ಗಂಟೆಯ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಉಡುಪಿಯ ಸ್ಟ್ರಾಂಗ್‌ ರೂಂ ತಲುಪಿದ್ದವು. ಉಡುಪಿ ನಗರದ ಹನುಮಂತನಗರ ಮತಗಟ್ಟೆಯ ಮತಯಂತ್ರ ಮೊದಲು ಸ್ಟ್ರಾಂಗ್‌ ರೂಂ ತಲುಪಿತ್ತು. ಅನಂತರ ಒಂದೊಂದೇ ಮತಗಟ್ಟೆಗಳಿಂದ ಮತಯಂತ್ರಗಳು ಬರುತ್ತಲೇ ಇದ್ದವು. ಮತಯಂತ್ರಗಳಿಗೆ ಸಂಬಂಧಿಸಿ ದಾಖಲೆ ಪರಿಶೀಲಿಸುವ ಪ್ರಕ್ರಿಯೆಯನ್ನು ಡಿಮಸ್ಟರಿಂಗ್‌ ಕೇಂದ್ರದಲ್ಲಿದ್ದ ಅಧಿಕಾರಿಗಳು ನಿರಂತರವಾಗಿ ನಡೆಸುತ್ತಲೇ ಇದ್ದರು.

ಚಿಕ್ಕಮಗಳೂರು ಜಿಲ್ಲೆಯ ಮತಯಂತ್ರಗಳು ಡಿಮಸ್ಟರಿಂಗ್‌ ಕೇಂದ್ರ ತಲುಪುವಾಗ ಮಧ್ಯಾಹ್ನ 1.30 !. ನಿದ್ದೆ ಬಿಟ್ಟಿದ್ದ ಅಧಿಕಾರಿ, ಸಿಬಂದಿ ಅದುವರೆಗೂ ಡಿಮಸ್ಟರಿಂಗ್‌ ಕೇಂದ್ರದ ಇತರ ಕೆಲಸಗಳನ್ನು ನಿರ್ವಹಿಸುತ್ತಾ ಇದ್ದರು. ಅನಂತರ ಚಿಕ್ಕಮಗಳೂರಿನ ಇವಿಎಂಗಳಿಗೆ ಸಂಬಂಧಿಸಿದ ಕೆಲಸ ಆರಂಭಿಸಿದರು. ಇದು ಮುಗಿಯವಾಗ ಅಪರಾಹ್ನ 3 ಗಂಟೆ. ಸ್ವತಃ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಎಡಿಸಿ ವಿದ್ಯಾ ಕುಮಾರಿ ಅವರು ಕೂಡ ಇತರ ಅಧಿಕಾರಿ ಸಿಬಂದಿಯ ಜತೆ ಬಳಲಿಕೆ ತೋರ್ಪಡಿಸದೆ ಕರ್ತವ್ಯ ನಿರತರಾಗಿದ್ದರು. ಎಡಿಸಿ ರಾತ್ರಿಯಿಡೀ ತನ್ನ ಸಿಬಂದಿಯ ಜತೆಗಿದ್ದರು. ಡಿಸಿ ಮತ್ತು ಎಸ್‌ಪಿ ಎರಡು ಮೂರು ಬಾರಿ ಕೇಂದ್ರದಿಂದ ನಿರ್ಗಮಿಸಿ ಮತ್ತೆ ವಾಪಸ್ಸಾಗಿದ್ದರು. ಕೆಲವು ಮಹಿಳಾ ಸಿಬಂದಿಯನ್ನು ರಾತ್ರಿ ವೇಳೆ ಮನೆಗೆ ಕಳುಹಿಸಿ ಬೆಳಗ್ಗೆ ಬೇಗ ಕೇಂದ್ರಕ್ಕೆ ಕರೆಸಿಕೊಳ್ಳಲಾಯಿತು.

ತಹಶೀಲ್ದಾರ್‌, ಸಹಾಯಕ ಚುನಾವಣಾಧಿಕಾರಿ, ಪೊಲೀಸರ ಬೆಂಗಾವಲು ವಾಹನದೊಂದಿಗೆ ಚಿಕ್ಕಮಗಳೂರಿನ ಮತಯಂತ್ರಗಳನ್ನು ತರಲಾಯಿತು. ವಾಹನಕ್ಕೆ ಅಳವಡಿಸಲಾಗಿದ್ದ ಜಿಪಿಎಸ್‌ನ ಮುಖಾಂತರ ಕೇಂದ್ರದಿಂದಲೇ ಹಿರಿಯ ಅಧಿಕಾರಿಗಳು ಗಮನವಿರಿಸಿದ್ದರು.

ಅಣಕು ಸ್ಲಿಪ್‌ಗ್ಳೂ ಸ್ಟ್ರಾಂಗ್‌ ರೂಮ್‌ಗೆ
ಮತದಾನದ ಮೊದಲು ನಡೆದಿದ್ದ ಅಣಕು ಮತದಾನದ ಸ್ಲಿಪ್‌ಗ್ಳನ್ನು ಕೂಡ ಈ ಬಾರಿ ಸ್ಟ್ರಾಂಗ್‌ ರೂಮ್‌ನಲ್ಲಿಯೇ ಇಡಲಾಗುತ್ತದೆ. ಈ ಹಿಂದೆ ಇವುಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತಿತ್ತು.

ವಿದ್ಯುತ್‌ ಸಂಪರ್ಕ ಕಡಿತ
ಸ್ಟ್ರಾಂಗ್‌ ರೂಮ್‌ನೊಳಗೆ ಜನರೇಟರ್‌ ಸೇರಿದಂತೆ ಯಾವುದೇ ರೀತಿಯ
ವಿದ್ಯುತ್ಛಕ್ತಿ ಇರದಂತೆ ನೋಡಿಕೊಳ್ಳಲಾಗಿದೆ. ವಿದ್ಯುತ್‌ ಇಲಾಖೆಯ ಅಧಿಕಾರಿಗಳೇ ಖುದ್ದಾಗಿ ಆಗಮಿಸಿ ಕೊಠಡಿಯ ಎಲ್ಲ ರೀತಿಯ ವಿದ್ಯುತ್‌ ಸಂಪರ್ಕಗಳನ್ನು ಕಡಿದು ಹಾಕಿರುವ ಬಗ್ಗೆ ದೃಢೀಕರಣ ಪತ್ರ ನೀಡಿದರು. ಯಾವುದೇ ರೀತಿಯ ವಿದ್ಯುತ್‌ ಇದ್ದರೂ ಶಾರ್ಟ್‌ ಸರ್ಕ್ನೂಟ್‌ ಆಗಿ ಮತಯಂತ್ರಗಳಿಗೆ ಹಾನಿಯಾಗುವ ಅಪಾಯ ಇರುವುದರಿಂದ ಈ ರೀತಿಯ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ.

2 ಗಂಟೆ ನಿದ್ದೆ
“ರಾತ್ರಿ ಇಡೀ ಜಾಗರಣೆಯಲ್ಲಿದ್ದೆ. ಕೆಲವು ಮಹಿಳಾ ಸಿಬಂದಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದೆವು. ನಾನು ಬೆಳಗ್ಗೆ 5 ಗಂಟೆಗೆ ಮನೆಗೆ ತೆರಳಿದೆ. ಸ್ವಲ್ಪ ನಿದ್ದೆ ಮಾಡಿದೆ. 7 ಗಂಟೆಗೆ ವಾಪಸಾದೆ’ ಎಂದು ಓರ್ವ ಮಹಿಳಾ ನೋಡಲ್‌ ಅಧಿಕಾರಿ ಹೇಳಿದರು.

– ಸಂತೋಷ್‌ ಬೊಳ್ಳೆಟ್ಟು


ಈ ವಿಭಾಗದಿಂದ ಇನ್ನಷ್ಟು

 • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

 • ಉಡುಪಿ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅತ್ಯಧಿಕ ಮತಗಳ ಅಂತರದಲ್ಲಿ ಜಯ ಗಳಿಸಿದ್ದು, ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದೆ. ಈ ಕ್ಷೇತ್ರಕ್ಕೆ...

 • ಬೈಂದೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಅತ್ಯಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ...

 • ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಈ ಪೈಕಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ಕಾಂಗ್ರೆಸ್‌ - ಜೆಡಿಎಸ್‌ ಮೈತ್ರಿಗಿಂತ...

 • ಗಂಗೊಳ್ಳಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಹಿನ್ನೆಲೆಯಲ್ಲಿ ಗಂಗೊಳ್ಳಿ ಗ್ರಾ. ಪಂ. ಕಚೇರಿ ಎದುರು ಹಾಗೂ ಮ್ಯಾಂಗನೀಸ್‌ ರಸ್ತೆ ವಠಾರದಲ್ಲಿ ಗುರುವಾರ...

ಹೊಸ ಸೇರ್ಪಡೆ

 • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

 • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

 • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

 • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

 • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

 • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...