ಜೆಡಿಎಸ್‌ಗೆ ಎದುರಾದ ಅಗ್ನಿಪರೀಕ್ಷೆ


Team Udayavani, Mar 15, 2019, 12:30 AM IST

jds.jpg

ಉಡುಪಿ: ಕಾಂಗ್ರೆಸ್‌-ಜೆಡಿಎಸ್‌ ಟಿಕೆಟ್‌ ಹಗ್ಗಜಗ್ಗಾಟದಲ್ಲಿ ಉಡುಪಿ  -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ದಕ್ಕಿದೆ. ಇಲ್ಲಿ ಜೆಡಿಎಸ್‌ ದುರ್ಬಲವಾಗಿದ್ದರೂ ಇಂದಿರಾ ಗಾಂಧಿ ಗೆದ್ದು ಪ್ರಧಾನಿಯಾದ ಕ್ಷೇತ್ರವನ್ನು  ಕಾಂಗ್ರೆಸ್‌ ಬಿಟ್ಟುಕೊಟ್ಟದ್ದು ಮತ್ತು ಜೆಡಿಎಸ್‌ ಪಡೆದುಕೊಂಡದ್ದು ಎರಡೂ ಅಚ್ಚರಿ. 

ಲೋಕಸಭಾ ಚುನಾವಣೆ: ಪಡೆದ ಮತ
2014ರ ಲೋಕಸಭಾ ಚುನಾವಣೆಯಲ್ಲಿ ಚಲಾವಣೆ ಯಾದ 10,34,108 ಮತಗಳಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆಗೆ 5,81,168, ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆಯವರಿಗೆ 3,99,525, ಜೆಡಿಎಸ್‌ನ ವಿ. ಧನಂಜಯ ಕುಮಾರರಿಗೆ 14,895 ಮತಗಳು ದೊರಕಿದ್ದವು. ಆಗ ಪೈಪೋಟಿ ಇದ್ದದ್ದು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ. ಜೆಡಿಎಸ್‌ ಆರಂಕಿಯನ್ನೂ ತಲುಪಿ ರಲಿಲ್ಲ. ಹಾಗೆ ನೋಡಿದರೆ 2012 ರ ಲೋಕಸಭಾ ಉಪ ಚುನಾವಣೆಯಲ್ಲೇ ಒಟ್ಟು ಚಲಾಯಿತ ಮತಗಳ 8, 52, 824 ಮತಗಳ ಪೈಕಿ ಜೆಡಿಎಸ್‌ ಅಭ್ಯರ್ಥಿ ಭೋಜೇಗೌಡರು 72, 080 ಮತಗಳನ್ನು ಪಡೆದಿದ್ದರು. ಆಗ ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ 3,98,723 ಪಡೆದು ಆಯ್ಕೆಯಾಗಿದ್ದರು. ಬಿಜೆಪಿಯ ವಿ. ಸುನಿಲ್‌ಕುಮಾರ್‌ 3,52,999 ಮತ ಪಡೆದಿದ್ದರು. 2009ರ ಚುನಾವಣೆಯಲ್ಲೂ ಬಿಜೆಪಿಯ ಸದಾನಂದ ಗೌಡರು 4,01,441 ಗಳಿಸಿ ಗೆದ್ದಿದ್ದರೆ, ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆಯವರು 3,74,423 ಮತ ಗಳಿಸಿದ್ದರು. ಆಗ ಜೆಡಿಎಸ್‌ ಸ್ಪರ್ಧಿಸಿ ರಲಿಲ್ಲ. ಅಂದರೆ ಕಾಂಗ್ರೆಸ್‌ ನಿರ್ದಿಷ್ಟ ಸಂಖ್ಯೆಯ ಮತದಾರರ ಬೆಂಬಲವಿದ್ದರೆ, ಲಕ್ಷ ಮತ ಗಳಿಸಲೂ ಜೆಡಿಎಸ್‌ ಪ್ರಯಾಸ ಪಟ್ಟಿರುವುದು ಸ್ಪಷ್ಟ. 

ಈ ಮಧ್ಯೆ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾದ ಡಾ| ಆರತಿ ಕೃಷ್ಣರಿಗೆ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ. ದೇವೇಗೌಡರು ಬುಧವಾರ ರಾತ್ರಿ ದೂರವಾಣಿ ಕರೆ ಮಾಡಿ ಸ್ಪರ್ಧೆಗೆ ಆಹ್ವಾನಿಸಿದ್ದಾರೆನ್ನಲಾಗಿದೆ. ಆದರೆ ಆರತಿಯವರು ದಿಲ್ಲಿಗೆ ತೆರಳಿ ಕಾಂಗ್ರೆಸ್‌ನಿಂದ ಟಿಕೆಟ್‌ ಗೆ ಪ್ರಯತ್ನಿಸುತ್ತಾರೆನ್ನಲಾಗಿದೆ.  ಆರತಿಯವರ ತಂದೆ ಬೇಗಾನೆ ರಾಮಯ್ಯನವರಿಗೂ ದೇವೇಗೌಡರಿಗೂಉತ್ತಮ ಸಂಬಂ ಧವಿದೆ. ಹೀಗಾಗಿ ಆರತಿಯವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ದೇವೇಗೌಡರ ಸಹಕಾರ ಯಾಚಿಸಿದ್ದರು. 

ಇದರ ನಡುವೆಯೇ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮತ್ತೂಬ್ಬ ಟಿಕೆಟ್‌ ಆಕಾಂಕ್ಷಿ ಎಐಸಿಸಿ ಸದಸ್ಯ ಅಮೃತ್‌ ಶೆಣೈ, ಪಕ್ಷದ ಹೈಕಮಾಂಡ್‌ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವೆ. ಬಳಿಕ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿ ಪಕ್ಷೇತರ ನಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದಿದ್ದಾರೆ.  ಜೆಡಿಸ್‌ಗೆ ತಮಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಕ್ಷೇತ್ರವಾರು ಬಿಜೆಪಿಯು 3,55,518 ಮತ ಪಡೆದಿದ್ದರೆ, ಕಾಂಗ್ರೆಸ್‌ 2,33,586 ಗಳಿಸಿತ್ತು. ಜೆಡಿಎಸ್‌ಗೆ  6,589 ಮತಗಳು ಲಭಿಸಿತ್ತು. 

ಹಾಗೆಯೇ ಚಿಕ್ಕಮಗಳೂರು ಕ್ಷೇತ್ರವಾರು ಲೆಕ್ಕದ ಪ್ರಕಾರ ಬಿಜೆಪಿಗೆ  2,35,377 ಮತಗಳು ದಕ್ಕಿದ್ದರೆ, ಕಾಂಗ್ರೆಸ್‌ಗೆ 1,86,853 ಸಿಕ್ಕಿತ್ತು. ಜೆಡಿಎಸ್‌ ತುಸು ಸಮಾಧಾನಕಾರವೆಂಬ ಸಾಧನೆ ಪ್ರದರ್ಶಿಸಿ  84,753 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು. 

ಜೆಡಿಎಸ್‌ ಸಾಧನೆ
ಲೋಕಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಮತ ಗಳಿಸಿದ್ದು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಐದಂಕಿ ಮುಟ್ಟದ ಜೆಡಿಎಸ್‌ ಅಭ್ಯರ್ಥಿಗಳು ಚಿಕ್ಕಮಗ ಳೂರು ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಧಾನಕರ ಮತ ಪಡೆದದ್ದು ಗೋಚರಿಸುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗಳು ವೈಯಕ್ತಿಕ ವರ್ಚಸ್ಸಿನ ಆಧಾರದಲ್ಲಿ ಮತ ಗಳಿಸಿರಬಹುದು. 8 ವಿಧಾನಸಭಾ ಕ್ಷೇತ್ರಗಳ ಪೈಕಿ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಆದ ಕಾರಣ ಬಿಜೆಪಿ ಬಳಿಕ ಕಾಂಗ್ರೆಸ್‌ ಉತ್ತಮ ಸ್ಥಿತಿಯಲ್ಲಿದೆ. 

“ಎರಡೂ ಜಿಲ್ಲೆಗಳ ಕಾಂಗ್ರೆಸ್‌ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದರೆ ಸ್ಥಾನ ಕೈತಪ್ಪುವುದನ್ನು ತಡೆಯಬಹುದಿತ್ತು ಎನ್ನುತ್ತಾರೆ ಕೆಲವು ಕಾಂಗ್ರೆಸ್‌ ನಾಯಕರು.

ಟಯರ್‌ ಸುಟ್ಟು ಕಾಂಗ್ರೆಸ್‌ ಪ್ರತಿಭಟನೆ
ಉಡುಪಿ: ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದನ್ನು ವಿರೋಧಿಸಿ ಗುರುವಾರ ರಾತ್ರಿ ಜಿಲ್ಲಾ ಕಾಂಗ್ರೆಸ್‌ ಭವನದ ಎದುರು ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ ಕಾರ್ಯಕರ್ತರು ಟಯರ್‌ ಸುಟ್ಟು ಪ್ರತಿಭಟನೆ ನಡೆಸಿದರು. ನಾಯಕರಾದ ವಿಶ್ವಾಸ್‌ ಅಮೀನ್‌, ಯತೀಶ ಕರ್ಕೇರ, ಪ್ರಖ್ಯಾತ ಶೆಟ್ಟಿ, ಮಹಮ್ಮದ್‌ ಇಮ್ರಾನ್‌ ಪಾಲ್ಗೊಂಡಿದ್ದರು.

ಮೈಸೂರು- ಉಡುಪಿ ಅದಲು ಬದಲು?
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿ ಮೈಸೂರನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಇದೆಯೆ? ಬುಧವಾರದ ಮಾತುಕತೆಯಲ್ಲಿ ಡಾ| ಜಿ. ಪರಮೇಶ್ವರ್‌ ಅವರ ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಸಿದ್ದರಾಮಯ್ಯನವರ ಮೈಸೂರನ್ನು ಉಳಿಸಿಕೊಳ್ಳಲಾಯಿತು. ಈಗ ಅದನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಮಾತುಕತೆ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು.

–  ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

kangana

“ನಾಲ್ಕನೇ” ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ನಟಿ ಕಂಗನಾ

ದೀಪಾವಳಿಗೆ ಮುಂಚಿತವಾಗಿ ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ

 ದೀಪಾವಳಿ: ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ, ಸುರಕ್ಷಿತವಾಗಿರುವುದು ಹೇಗೆ?

1-33

ಮಾವನಿಗೆ ದಾದಾ ಸಾಹೇಬ್ ಫಾಲ್ಕೆ, ಅಳಿಯನಿಗೆ ಅತ್ಯುತ್ತಮ ನಟ ಪ್ರಶಸ್ತಿ

Untitled-1

ಗೋವಾದಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ: ಪಿ.ಚಿದಂಬರಂ

1-rr

ಪಾಕ್ ವಿರುದ್ಧ ಸೋಲಿನ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ

Untitled-1

ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗಿ ಬಾಲಕ ನೀರುಪಾಲು

25ramamandira

ಅಯೋಧ್ಯೆ ರಾಮ ಮಂದಿರದ ತಳಪಾಯಕ್ಕೆ ಕರ್ನಾಟಕದ ಶಿಲೆಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಕಾಪು: ಗೆಳೆಯರೆ ಶಾಲೆಗೆ ಹೊರಡೋಣ ಬನ್ನಿ ಕಾರ್ಯಕ್ರಮಕ್ಕೆ ಶಾಸಕ ಲಾಲಾಜಿ‌ ಮೆಂಡನ್ ಚಾಲನೆ

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ರಾಜ್ಯದಲ್ಲಿ ಏಕರೂಪ ದರ ನಿಗದಿಯಿಂದ ಕಡಿವಾಣ ಸಾಧ್ಯ

ರಾಜ್ಯದಲ್ಲಿ ಏಕರೂಪ ದರ ನಿಗದಿಯಿಂದ ಕಡಿವಾಣ ಸಾಧ್ಯ

ವ್ಯಾಕ್ಸಿನೇಶನ್‌: ಉಡುಪಿ ಜಿಲ್ಲೆಯಲ್ಲಿ ಮಣಿಪಾಲ ಕೇಂದ್ರ ಪ್ರಥಮ

ವ್ಯಾಕ್ಸಿನೇಶನ್‌: ಉಡುಪಿ ಜಿಲ್ಲೆಯಲ್ಲಿ ಮಣಿಪಾಲ ಕೇಂದ್ರ ಪ್ರಥಮ

ಜಿಲ್ಲೆಯಾದ್ಯಂತ 1-5ನೇ ತರಗತಿ ಇಂದಿನಿಂದ ಆರಂಭ

ಜಿಲ್ಲೆಯಾದ್ಯಂತ 1-5ನೇ ತರಗತಿ ಇಂದಿನಿಂದ ಆರಂಭ

MUST WATCH

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

udayavani youtube

ಅಡಿಕೆಯನ್ನು ಸುಲಭವಾಗಿ ಬೆಳೆಯುವ ಹಲವು ವಿಧಾನಗಳು

udayavani youtube

ಭೂಕುಸಿತ ಪತ್ತೆಗೆ ಹೊಸ ಸ್ವದೇಶಿ ತಂತ್ರಜ್ಞಾನ ಸಿದ್

ಹೊಸ ಸೇರ್ಪಡೆ

gow theft – protest

ಗೋ ಕಳ್ಳಸಾಗಾಣಿಕೆ ತಡೆಯಲು ಕ್ರಮಕ್ಕೆ ಆಗ್ರಹ; ರಸ್ತೆ ತಡೆ ಮಾಡಿ ಪ್ರತಿಭಟನೆ

ಯಡಿಯೂರಪ್ಪ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

ಯಡಿಯೂರಪ್ಪ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

kangana

“ನಾಲ್ಕನೇ” ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ನಟಿ ಕಂಗನಾ

ಡಾ| ನಾಗಲೋಟಿಮಠ ಬದುಕು ಯುವಕರಿಗೆ ಆದರ್ಶ

ಡಾ| ನಾಗಲೋಟಿಮಠ ಬದುಕು ಯುವಕರಿಗೆ ಆದರ್ಶ

ದೀಪಾವಳಿಗೆ ಮುಂಚಿತವಾಗಿ ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ

 ದೀಪಾವಳಿ: ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ, ಸುರಕ್ಷಿತವಾಗಿರುವುದು ಹೇಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.