ಸಮಸ್ಯೆಗಳ ಆಗರ ಬೆಳ್ಮಣ್‌ ಇಟ್ಟಮೇರಿ ಅಂಗನವಾಡಿ

Team Udayavani, Jun 25, 2019, 5:44 AM IST

ಬೆಳ್ಮಣ್‌: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಇಟ್ಟಮೇರಿ ಅಂಗನವಾಡಿಯ ಶೌಚಾಲಯದ ಪೈಪ್‌ಲೈನ್‌ ಸಂಪರ್ಕ 2 ವರ್ಷಗಳಿಂದ ತೆರೆದ ಸ್ಥಿತಿಯಲ್ಲಿದ್ದು ಪುಟಾಣಿಗಳ ಜತೆ ಅಂಗನವಾಡಿ ಕಾರ್ಯಕರ್ತೆಯರು ದಿನ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಈ ಆಂಗನವಾಡಿಯ ತ್ಯಾಜ್ಯ ಗುಂಡಿಯ ಪೈಪ್‌ಲೈನ್‌ ಸಂಪರ್ಕ ತೆರೆದ ಸ್ಥಿತಿಯಲ್ಲಿದ್ದ ಬಗ್ಗೆ ಬೆಳ್ಮಣ್‌ ಗ್ರಾಮ ಪಂಚಾಯತ್‌ಗೆ ಮನವಿ ನೀಡಿದ್ದರೂ ಈ ವರೆಗೂ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳು ಇತ್ತ ಸುಳಿದಿಲ್ಲ. ಸ್ವಚ್ಛ ಭಾರತದ ಕೂಗು ದೇಶಾದ್ಯಂತ ಬಲವಾಗಿದ್ದರೂ ಇಲ್ಲಿ ಮಾತ್ರ ಕ್ಷೀಣಿಸಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಯುವ ಸಂಘಟನೆ ದುರಸ್ತಿ ಮಾಡಿತ್ತು

ಕಳೆದ 6 ತಿಂಗಳ ಹಿಂದೆ ಇಲ್ಲಿನ ಯುವಕ ಮಂಡಲ ಈ ಶೌಚದಾಲಯದ ತ್ಯಾಜ್ಯ ಗುಂಡಿಯ ತೆರೆದ ಪೈಪ್‌ಲೈನನನ್ನು ಮುಚ್ಚಿ ಒಂದಿಷ್ಟು ಮುಕ್ತಿ ನೀಡಿದ್ದರೂ ಮತ್ತೆ ಗುಂಡಿ ತೆರೆದುಕೊಂಡು ದುರ್ನಾತ ಬೀರುತ್ತಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಪುಟಾಣಿಗಳು ಸಂಕಷ್ಟ ಪಡುವಂತಾಗಿದೆ. ಸ್ಥಳೀಯಾಡಳಿತ ನಿದ್ರಾವಸ್ಥೆಯಲ್ಲಿದ್ದು ಶೀಘ್ರ ದುರಸ್ಥಿಗೆ ಮುಂದಾಗ ಬೇಕೆಂಬುದು ಹೆತ್ತವರ ಆಗ್ರಹ.

ಬೆಂಕಿ ಉಗುಳುವ ಪರಿವರ್ತಕ

ಅಂಗನವಾಡಿ ಪಕ್ಕದಲ್ಲೇ ಇರುವ ವಿದ್ಯುತ್‌ ಪರಿವರ್ತಕ (ಟಿ.ಸಿ) ಸದಾ ಬೆಂಕಿ ಉಗುಳುತ್ತಿದ್ದು ಇನ್ನಷ್ಟು ಅಪಾಯಕ್ಕೆ ಎಡೆ ಮಾಡಿದೆ. ಇಲ್ಲಿ ಬೇಸಗೆಯಲ್ಲಿ ಹಲವು ಬಾರಿ ಬೆಂಕಿ ಆವರಿಸಿದ್ದೂ ಇದೆ. ಬೆಳ್ಮಣ್‌ ಮೆಸ್ಕಾಂ ಸಿಬಂದಿ ಈ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಟ್ಟಡದ ಮೇಲೆ ಮರದ ಗೆಲ್ಲು

ಅಂಗನವಾಡಿ ಕಟ್ಟಡದ ಮೇಲೆ ಬಾಗಿರುವ ಮರದ ಗೆಲ್ಲುಗಳು ಬೀಳುವ ಸ್ಥಿತಿಯಲ್ಲಿವೆ. ಗಾಳಿ ಮಳೆಗೆ ಇವು ಮುರಿದು ಬೀಳಬಹುದು ಎಂಬ ಆತಂಕ ಹೆತ್ತವರು ಮತ್ತು ಅಂಗನವಾಡಿ ಕಾರ್ಯಕರ್ತೆ ಯರನ್ನು ಕಾಡುತ್ತಿದೆ.

ಕೂಡಲೇ ರಿಪೇರಿ

ಈ ಅಂಗನವಾಡಿನ ಕಟ್ಟಡದ ಜಾಗದ ಬಗ್ಗೆ ಗೊಂದಲ ಇದೆ. ಆಂಗನವಾಡಿ ಇಂದ ಯಾವುದೇ ಮನವಿ ಬಂದಿಲ್ಲ. ಶೌಚಾಲಯದ ತ್ಯಾಜ್ಯ ಗುಂಡಿಯ ಬಳಿ ಮರದ ಬೇರು ಬಂದ ಕಾರಣ ಪೈಪ್‌ಲೈನ್‌ ತೆರೆಯಲ್ಪಟ್ಟಿದೆ. ಕೂಡಲೇ ರಿಪೇರಿ ಮಾಡಲಾಗುವುದು.
– ವಾರಿಜಾ, ಬೆಳ್ಮಣ್‌ ಗ್ರಾ.ಪಂ. ಅಧ್ಯಕ್ಷೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕಲಬುರಗಿ: ಸಾರ್ವಜನಿಕರು ಹಾಗೂ ವಿಶೇಷವಾಗಿ ಶಾಲಾ ಮಕ್ಕಳನ್ನು ಗ್ರಂಥಾಲಯದೆಡೆಗೆ ಆಕರ್ಷಿಸಿ ಅವರಲ್ಲಿ ಪುಸ್ತಕ ಓದುವ ಹವ್ಯಾಸ ಮತ್ತು ಗ್ರಂಥಾಲಯಗಳ ಮಹತ್ವದ ಕುರಿತು...

  • ಜಗಳೂರು: ಸೂರು ಇಲ್ಲದವರು ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡ ಮನೆಯನ್ನು ಸರ್ಕಾರ ಸಕ್ರಮಗೊಳಿಸಿ ನಿಮಗೆ ಹಕ್ಕುಪತ್ರ ನೀಡಿದ್ದು, ಇದನ್ನು...

  • ಭಾರತ ವಿರುದ್ದದ ಮೊದಲೆರಡು ಟಿ ಟ್ವೆಂಟಿ ಪಂದ್ಯಗಳಿಗೆ 14 ಆಟಗಾರರ ತಂಡವನ್ನು ಆಯ್ಕೆ ಮಾಡಿರುವ ವೆಸ್ಟ್‌ ಇಂಡೀಸ್‌ ಸುನೀಲ್‌ ನರೈನ್‌ ಮತ್ತು ಕೈರನ್‌ ಪೊಲ್ಲಾರ್ಡ್‌...

  • ಹೊನ್ನಾಳಿ: ಪಟ್ಟಣದಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸುವ ದ್ವಿಚಕ್ರ ಹಾಗೂ ಇತರ ವಾಹನ ಸವಾರರಿಗೆ ದಂಡ ವಿಧಿಸುವ ಮೂಲಕ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಸೋಮವಾರ...

  • ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಸುಮಾರು 1800 ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರ ನೇಮಕಾತಿ ಅರ್ಹತೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರ...

  • ಧಾರವಾಡ: ಎಲ್ಲೆಂದರಲ್ಲಿ ಸತ್ತು ಬೀಳುತ್ತಿವೆ ಕಪ್ಪೆ, ಇಲಿ, ಹಾವು, ಪಕ್ಷಿಗಳು, ಸುರಿಯುವ ಮಳೆಯಲ್ಲೂ ಸುಟ್ಟು ಹೋಗುತ್ತಿದೆ ಹಸಿರು ಹುಲ್ಲು, ತಿಳಿಯದೇ ಎರಡು ಹಿಡಿ...