ಪಡುಬಿದ್ರಿಯಲ್ಲಿ ಸಮುದ್ರ ಅಬ್ಬರ: ಕೊಚ್ಚಿ ಹೋದ ತಾತ್ಕಾಲಿಕ ರಸ್ತೆ

Team Udayavani, Jun 24, 2019, 5:20 AM IST

ಪಡುಬಿದ್ರಿ: ಬ್ಲೂ ಫ್ಲ್ಯಾಗ್‌ ಯೋಜನಾ ಪ್ರದೇಶವಾದ ಪಡುಬಿದ್ರಿ ಎಂಡ್‌ ಪಾಯಿಂಟ್ ಬಳಿ ಸಮುದ್ರದ ಅಬ್ಬರದ ಅಲೆಗಳಿಂದಾಗಿ ಕಡಲ ತೀರದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮಣ್ಣಿನ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ.

ಸಮುದ್ರ ತೀರದಲ್ಲಿ ಈ ಹಿಂದೆ ಇದ್ದ ಗಿಡಗಂಟಿಗಳ ತೆರವು ಮಾಡಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಾಣ ಮಾಡಿ ಬ್ಲೂ ಪ್ಲ್ರಾಗ್‌ ಬೀಚ್ ಯೋಜನಾ ಪ್ರದೇಶಕ್ಕೆ ವಾಹನಗಳ ಮೂಲಕ ಸಾಮಗ್ರಿಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಮಳೆಗಾಲದಲ್ಲಿ ಕಡಲ ಅಬ್ಬರ ಹೆಚ್ಚಾದ ಪರಿಣಾಮ ರಸ್ತೆ ಕೊಚ್ಚಿ ಹೋಗಿದೆ. ತಳಪಾಯದ ಕಾಮಗಾರಿಗಳಿಗಾಗಿ ಅಗೆಯಲಾದ ಗುಂಡಿಗಳಿಗೆ ಸಮುದ್ರದ ಉಸುಕು ಬೀಸಲ್ಪಡುತ್ತಿದೆ. ಈ ಭಾಗದಲ್ಲಿ ಕಡಲ ತೆರಗಳ ಅಬ್ಬರ ಮುಂದುವರಿದಿದ್ದು ಸಮುದ್ರ ಕೊರೆತದ ಲಕ್ಷಣವೂ ಗೋಚರಿಸಿದೆ.

ಸುಮಾರು 500 ಮೀಟರ್‌ ಸರಕಾರಿ ಜಮೀನಿನಲ್ಲಿ ಕೇಂದ್ರ ಸರಕಾರದ ಅನುದಾನವಾದ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನವಾಗಲಿರುವ ಬ್ಲೂ ಪ್ಲ್ರಾಗ್‌ ಬೀಚ್ ಯೋಜನೆಗೆ ಅನುಕೂಲವಾಗುವಂತೆ 50 ಲಕ್ಷ ರೂ ವೆಚ್ಚದಲ್ಲಿ 300 ಮೀಟರ್‌ ವ್ಯಾಪ್ತಿಯಲ್ಲಿ ಕೆಐಆರ್‌ಡಿಎಲ್ ಹಾಗೂ ಸಣ್ಣ ನೀರಾವರಿ ಇಲಾಖೆ ಮೂಲಕ ಎಂಡ್‌ ಪಾಯಿಂಟ್ ಪೂರ್ವ ಭಾಗದಲ್ಲಿನ ಕಾಮಿನಿ ನದಿಗೆ ತಡೆಗೋಡೆ ಕಾಮಗಾರಿ ನಡೆಸಲಾಗುತ್ತಿದೆ. ಪಡುಬಿದ್ರಿ ಹೆಜಮಾಡಿ ಮುಟ್ಟಳಿವೆಯನ್ನು ನಿನ್ನೆಯಷ್ಟೇ ತೆರೆದು ಕೊಡಲಾಗಿರುವುದರಿಂದ ನದಿ ನೀರಿನ ಅಬ್ಬರವೂ ನಿನ್ನೆಯಷ್ಟೇ ಕಡಿಮೆಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ