ಸುನೀತಾಳ ಕಥೆ.. ಅಮ್ಮ ಪಾರ್ವತಿಯ ವ್ಯಥೆ..

Team Udayavani, Sep 9, 2019, 5:04 AM IST

ಕಾಸರಗೋಡು : ಊಟದಲ್ಲೂ ನಿದ್ದೆಯಲ್ಲೂ ಆ ತಾಯಿ ಪುತ್ರಿಗೆ ಕಾವಲಾಗಿ ನಿಂತದ್ದು ಸುಮಾರು ಐದು ದಶಕ….. ಆದರೀಗ ವೃದ್ಧ ಮಾತೆಗೆ ಮುಪ್ಪಾವರಿಸಿದೆ. ತನ್ನ ಕಾಲಾನಂತರ‌ ಹೆತ್ತ ಕುಡಿಯ ಗತಿಯೇನು ಎಂಬ ಚಿಂತೆಯಲ್ಲಿ ತಲೆಯ ಮೇಲಾಕಾಶ ಕೆಳಗೆ ಈ ಭೂಮಿ ಎಂಬ ಸ್ಥಿತಿಯಲ್ಲಿದ್ದ ಅವರತ್ತ ಸ್ನೇಹದ ನೆರಳು ಚಾಚಲ್ಪಟ್ಟಿದೆ. ಯಾರಿಗೂ ಬೇಡವಾದ ತಾಯಿ ಹಾಗೂ ಪುತ್ರಿ ಇನ್ನು ಸ್ನೇಹದ ಮನೆಯ ಅಕ್ಕರೆಯಲ್ಲಿ ಸುರಕ್ಷಿತರು.

ಕಾಸರಗೋಡಿನ ಮಧೂರು ಗ್ರಾಮ ಪಂಚಾಯತ್‌ನ 17ನೇ ವಾರ್ಡು ಮನ್ನಿಪ್ಪಾಡಿ ಲಕ್ಷ ಮನೆ ಕಾಲನಿ ಬಳಿಯ 78ರ ಹರೆಯದ ವಯೋವೃದ್ಧೆ ಪಾರ್ವತಿ ಹಾಗೂ 47ರ ಹರೆಯಕ್ಕೆ ಬಂದಿದ್ದರೂ ಲೋಕದ ಪರಿವೆಯೇ ಇಲ್ಲದಂತಿರುವ ಪುತ್ರಿ ಸುನೀತಾಳ ಬಾಳಗೋಳು ನಿಜಕ್ಕೂ ಕರುಣಾಜನಕ. ಕುರುಚಲು ಜೋಪಡಿಯಲ್ಲಿ ದಿನದೂಡುವ ಅವರಿಗೆ ನೆಂಟರಿಷ್ಟರು, ಆಸುಪಾಸಿನ ಮಂದಿ ನೀಡುವ ಆಹಾರವೇ ಗತಿ. ನೋಡುಗರ ಕಣ್ಣಿಗೆ ಮರುಕ ಹುಟ್ಟಿದರೂ ಅವರ ಪುನರ್ವಸತಿ ಸಾಧ್ಯವಾಗದ ಮಾತು. ಸ್ಥಳೀಯ ಗ್ರಾ.ಪಂ. ಅಧಿಕೃತರು, ಆರೋಗ್ಯ ಇಲಾಖೆ ಅಧಿಕಾರಿಗಳು ಇವರ ಬಗ್ಗೆ ಕಾಳಜಿ ವಹಿಸಿ ತಕ್ಕ ನೆರವು ನೀಡಿದ್ದರು. ಆದರೆ, ಸೂಕ್ತ ಸಂರಕ್ಷಣೆ ಇವರಿಗೆ ಅನಿವಾರ್ಯವಾಗಿತ್ತು.

ಸುನೀತಾ ಎಳವೆಯಲ್ಲಿ ಸಹಜ ಸ್ಥಿತಿ ಯಲ್ಲಿದ್ದರೂ ಮುಂದೆ ಮನೋತಾಳ ತಪ್ಪಿತ್ತು. ದೈಹಿಕ ಸ್ಥಿತಿಯೂ ಸೊರಗಿ ಹೋಗಿತ್ತು. ತನ್ನಷ್ಟಕ್ಕೆ ಗೊಣಗುತ್ತಾ ಕೆಲವೊಮ್ಮೆ ಹಿಂಸಾ ಪ್ರವೃತ್ತಿಯನ್ನೂ ತೋರಿಸುತ್ತಿದ್ದಳು. 10 ವರ್ಷಗಳ ಹಿಂದೆ ಕೈ ಹಿಡಿದ ಪತಿ ನಿಧನ ಹೊಂದಿದ ಬಳಿಕ ಮನೆಯಲ್ಲಿ ಪಾರ್ವತಿ ಮತ್ತು ಪುತ್ರಿ ಮಾತ್ರ. ಉಳಿದ ಮಕ್ಕಳ ವಿವಾಹ ನೆರವೇರಿತ್ತು. ಇದರಿಂದಾಗಿ ಸುನೀತಾಳ ಬಗ್ಗೆ ಕಾಳಜಿ ವಹಿಸುವವರು ಇಲ್ಲವಾಯಿತು. ಅವರಿವರ ಮನೆಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ಪುತ್ರಿಯನ್ನು ತನ್ನ ತೆಕ್ಕೆಯಲ್ಲಿ ಜೋಪಾನವಾಗಿ ರಕ್ಷಿಸುತ್ತಿದ್ದ ಪಾರ್ವತಿಗೆ ಮುಪ್ಪಾವರಿಸಿತು. ದೇಹ ಸೊರಗಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ