Udayavni Special

ಸಮುದ್ರಕ್ಕಿಳಿದ ಸಾಂಪ್ರದಾಯಿಕ ನಾಡದೋಣಿಗಳು


Team Udayavani, Jul 26, 2018, 6:35 AM IST

2507mle7b.jpg

ಮಲ್ಪೆ: ನಾಡದೋಣಿ ಮೀನುಗಾರಿಕೆ ಋತು ಆರಂಭವಾಗಿ ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ಇದೀಗ ಕೆಲವೇ ದೋಣಿಗಳು ಸಮುದ್ರಕ್ಕೆ ಇಳಿದಿವೆ.  

ಬುಧವಾರ ಕಡಲ ಅಬ್ಬರದ ನಡುವೆಯೇ ಮಲ್ಪೆ ಬಂದರು ವ್ಯಾಪ್ತಿಯ ಬಹುತೇಕ ಟ್ರಾಲ್‌ದೋಣಿಗಳು ಸಹಿತ ಡಿಸ್ಕೋ ದೋಣಿಗಳು ಮೀನುಗಾರಿಕೆಗೆ ತೆರಳಿದ್ದು ಕೆಲವೇ ದೋಣಿಗಳಿಗೆ ಅಲ್ಪ ಪ್ರಮಾಣದಲ್ಲಿ ಸಿಗಡಿ ಮೀನು ಸಹಿತ ಸಣ್ಣ ಪುಟ್ಟ ಮೀನುಗಳು ಲಭಿಸಿವೆ. 

ಮಳೆಗಾಲದ ಯಾಂತ್ರಿಕ ಮೀನುಗಾರಿಕಾ ನಿಷೇಧದ ಅವಧಿ ಕೊನೆಗೊಳ್ಳುತ್ತಾ ಬಂದಿದ್ದು ಕಡಲಲ್ಲಿ ಎದ್ದಿರುವ ತೂಫಾನ್‌ ತಣ್ಣಗಾಗದ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರರು ತೀವ್ರ ನಷ್ಟ ಹೊಂದಿದ್ದಾರೆ.  

ಈ ಸಲ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಕಳೆದ 55 ದಿನಗಳಿಂದ ಸಮುದ್ರಕ್ಕೆ ಇಳಿಯಲಾಗದೆ ನಾಡದೋಣಿ ಮೀನುಗಾರರು ದಡದಲ್ಲೇ ಉಳಿದಿದ್ದರು. ಜೂನ್‌ ತಿಂಗಳಲ್ಲಿ ಶುರುವಾಗಬೇಕಾಗಿದ್ದ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರಿಗೆ ಜುಲೈ ಮುಗಿಯುತ್ತ ಬಂದರೂ ಆರಂಭಗೊಂಡಿರಲಿಲ್ಲ.  ಜೂನ್‌ನಿಂದ ನಿರಂತರವಾಗಿ ಸುರಿಯುತ್ತಿದ್ದ ಗಾಳಿ ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮೀನುಗಾರರಿಗೆ ಕಡಲಿಗಿಳಿಯಲು ಸಾಧ್ಯವಾಗಿಲ್ಲ.

ನಾಡದೋಣಿ ಕಡಲಿಗಿಳಿಯದ ಕಾರಣ ಎಲ್ಲ ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನಿಗೆ ಕೊರತೆ ಉಂಟಾಗಿತ್ತು. ದೂರದ ತಮಿಳುನಾಡು, ಆಂಧ್ರದ, ಕೇರಳದ ಅಥವಾ ಮೀನು ಸಂಸ್ಕರಣ ಘಟಕಗಳಿಂದ ತರಿಸಿಕೊಂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬುಧವಾರ ಮಲ್ಪೆ ಬಂದರಿನಲ್ಲಿ ಅಗಷ್ಟೆ ಹಿಡಿದು ತಂದ ತಾಜಾ ಮೀನಿಗೆ ಜನರು ಮುಗಿ ಬೀಳುತ್ತಿರುವುದು ಕಂಡು ಬಂದಿದೆ. 

ಸಮುದ್ರದಲ್ಲಿ ಮೀನು ಇದೆ. ಆದರೆ ಗಾಳಿ ಮತ್ತು ಕಡಲ ಅಬ್ಬರದಿಂದಾಗಿ ಮೀನು ಹಿಡಿದು ತರಲು ಆಗುತ್ತಿಲ್ಲ. ಯಾಂತ್ರಿಕ ಮೀನುಗಾರಿಕೆ ನಿಷೇಧದ ಅವಧಿ ಜು. 31ಕ್ಕೆ ಮುಗಿಯುತ್ತದೆ. ಹಾಗಾಗಿ ಎರಡು ದಿನಗಳಲ್ಲಿ ಟ್ರಾಲ್‌ದೋಣಿಗಳು ಮೀನುಗಾರಿಕೆಗೆ ತೆರಳಿವೆ. ಅಲ್ಪಸ್ವಲ್ಪ ಮೀನು ಲಭಿಸಿದೆ.
– ಪುರಂದರ ಕೋಟ್ಯಾನ್‌, 
ಪಡುಕರೆ ನಾಡದೋಣಿ ಮೀನುಗಾರ

ಟಾಪ್ ನ್ಯೂಸ್

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ಒಂದೇ ದೋಣಿಯಲ್ಲಿ ಮುಂಬೈ ಇಂಡಿಯನ್ಸ್‌ -ಪಂಜಾಬ್‌ ಕಿಂಗ್ಸ್‌

ಒಂದೇ ದೋಣಿಯಲ್ಲಿ ಮುಂಬೈ ಇಂಡಿಯನ್ಸ್‌ -ಪಂಜಾಬ್‌ ಕಿಂಗ್ಸ್‌

ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?

ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?

ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ವಂಚನೆ: ಐವರ ಬಂಧನ

ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ವಂಚನೆ: ಐವರ ಬಂಧನ

ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ಹೈಕೋರ್ಟ್‌ ಮೊರೆ ಹೋದ ತಂದೆ

ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ಹೈಕೋರ್ಟ್‌ ಮೊರೆ ಹೋದ ತಂದೆ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನದಿಯಲ್ಲಿ ಮುಳುಗಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿ ಸಾವು

ಕೋಟ: ನದಿಯಲ್ಲಿ ಮುಳುಗಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿ ಸಾವು

ಕಾಪು ಬೀಚ್‌ನಲ್ಲಿ ಮತ್ತೆ ಪ್ರವಾಸಿಗರು, ಮಕ್ಕಳು ಮತ್ತು ವಿಹಾರಾರ್ಥಿಗಳ ಕಲರವ

ಕಾಪು ಬೀಚ್‌ನಲ್ಲಿ ಮತ್ತೆ ಪ್ರವಾಸಿಗರು, ಮಕ್ಕಳು ಮತ್ತು ವಿಹಾರಾರ್ಥಿಗಳ ಕಲರವ

ಜಿಲ್ಲೆಯಲ್ಲಿ ಮತ್ತೆ ಹೆಲಿಟೂರಿಸಂ ಆರಂಭ ನಿರೀಕ್ಷೆ

ಜಿಲ್ಲೆಯಲ್ಲಿ ಮತ್ತೆ ಹೆಲಿಟೂರಿಸಂ ಆರಂಭ ನಿರೀಕ್ಷೆ

ಕಲಿಕೆಯಾಗಿ ಯಕ್ಷಗಾನ: ಪ್ರೊ|ಯಡಪಡಿತ್ತಾಯ ಆಶಯ

ಕಲಿಕೆಯಾಗಿ ಯಕ್ಷಗಾನ: ಪ್ರೊ|ಯಡಪಡಿತ್ತಾಯ ಆಶಯ

ತಂತ್ರಜ್ಞಾನ ಬಳಕೆಯಿಂದ ದೇಶ ಪ್ರಗತಿ: ಡಾ| ಈಶ್ವರ ಪ್ರಸಾದ್‌

ತಂತ್ರಜ್ಞಾನ ಬಳಕೆಯಿಂದ ದೇಶ ಪ್ರಗತಿ: ಡಾ| ಈಶ್ವರ ಪ್ರಸಾದ್‌

MUST WATCH

udayavani youtube

ದೇವಸ್ಥಾನಕ್ಕೆ ಬೀಗ ದೇವರ ದರ್ಶನಕ್ಕಾಗಿ ಬಾಗಿಲ ಬಳಿ ಕಾದು ನಿಂತ ಬಸವ

udayavani youtube

ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ

udayavani youtube

ಭಾರತದಲ್ಲಿ ಹಸಿರು ಕ್ರಾಂತಿ: ಫಲ ಏನಾಯ್ತು?

udayavani youtube

ಪ್ರಿಯಕರನ ಮೋಹಕ್ಕೆ ಬಿದ್ದು ತಾಳಿ ಕಟ್ಟಿದ ಗಂಡನಿಗೇ ಇಟ್ಳು ಮುಹೂರ್ತ

udayavani youtube

Horror, Romance, Comedyಯಲ್ಲಿ ಅನಂತ ನಾಗ್ ಅವ್ರ ಆಯ್ಕೆ ಯಾವುದಂದ್ರೆ…?

ಹೊಸ ಸೇರ್ಪಡೆ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ಒಂದೇ ದೋಣಿಯಲ್ಲಿ ಮುಂಬೈ ಇಂಡಿಯನ್ಸ್‌ -ಪಂಜಾಬ್‌ ಕಿಂಗ್ಸ್‌

ಒಂದೇ ದೋಣಿಯಲ್ಲಿ ಮುಂಬೈ ಇಂಡಿಯನ್ಸ್‌ -ಪಂಜಾಬ್‌ ಕಿಂಗ್ಸ್‌

ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?

ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.