ಮತ ಎಣಿಕೆ ಪ್ರಕ್ರಿಯೆ ಪರಿಪೂರ್ಣ: ಉಡುಪಿ ಡಿಸಿ

Team Udayavani, May 25, 2019, 6:00 AM IST

ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭೆ ಚುನಾವಣೆಯ ಮತ ಎಣಿಕೆಯ ಎಲ್ಲ ಪ್ರಕ್ರಿಯೆಗಳು “ಪರ್ಫೆಕ್ಟ್ ಅಂದರೆ ಪರ್ಫೆಕ್ಟ್’ (ಪರಿಪೂರ್ಣ) ಆಗಿ ನಡೆದಿವೆ. ಒಂದು ಸಣ್ಣ ಲೋಪವೂ ಇಲ್ಲ ಎಂದು ಕ್ಷೇತ್ರದ ಚುನಾವಣಾಧಿಕಾರಿ, ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಸೂಕ್ಷ್ಮ ವಿವರಗಳನ್ನು ಕೂಡ ಅಚ್ಚುಕಟ್ಟಾಗಿ ನಡೆಸಿದ್ದೇವೆ. ನಿಗದಿತ ವೇಳೆಗೆ ಅಂದರೆ 7.30ಕ್ಕೆ ಭದ್ರತಾ ಕೊಠಡಿ(ಸ್ಟ್ರಾಂಗ್‌ ರೂಮ್‌) ತೆರೆದು 8 ಗಂಟೆಗೆ ಮತ ಎಣಿಕೆ ಆರಂಭಿಸಲಾಗಿದೆ. ಸಂಜೆ 5 ಗಂಟೆಯ ವೇಳೆಗೆ ಎಲ್ಲ ಫ‌ಲಿತಾಂಶ ಸಿದ್ಧವಾಗಿತ್ತು. ವಿವಿ ಪ್ಯಾಟ್‌ ಕೌಂಟಿಂಗ್‌ ನಡೆಯುತ್ತಿತ್ತು. 6 ಗಂಟೆಗೆ ಎಲ್ಲವೂ ಪೂರ್ಣಗೊಂಡಿತ್ತು. ಆನ್‌ಲೈನ್‌ ಪ್ರಕ್ರಿಯೆ ಆಗಿ 6.30ರ ವೇಳೆಗೆ ವಿಜಯಿ ಅಭ್ಯರ್ಥಿಗೆ ಪ್ರಮಾಣಪತ್ರ ನೀಡಿದೆವು ಎಂದವರು ಹೇಳಿದ್ದಾರೆ.

41 ವಿವಿ ಪ್ಯಾಟ್‌ಗಳ ಎಣಿಕೆ
ಪ್ರತಿ ವಿಧಾನಸಭಾ ಕ್ಷೇತ್ರಗಳ ತಲಾ 5 ಮತ್ತು ಚಿಕ್ಕಮಗಳೂರಿನ ಒಂದು ಮತಗಟ್ಟೆಯ ಹೆಚ್ಚುವರಿ ವಿವಿ ಪ್ಯಾಟ್‌ ಸೇರಿದಂತೆ ಒಟ್ಟು 41 ವಿವಿ ಪ್ಯಾಟ್‌ಗಳಲ್ಲಿನ ಸ್ಲಿಪ್‌ ಎಣಿಸಲಾಗಿದೆ. ಇದಕ್ಕೆ 2 ತಾಸು ತಗಲಿದೆ ಎಂದು ತಿಳಿಸಿದ್ದಾರೆ.

ಮೇ 27ರ ವರೆಗೆ ನೀತಿ ಸಂಹಿತೆ
ಚುನಾವಣಾ ನೀತಿ ಸಂಹಿತೆ 27ರ ವರೆಗೆ ಜಾರಿಯಲ್ಲಿದ್ದು, ಅದುವರೆಗೆ ಜಿ.ಪಂ. ಅಧ್ಯಕ್ಷರು, ಶಾಸಕರ ಕಚೇರಿ ಇತ್ಯಾದಿ ತೆರೆದಿರುವುದಿಲ್ಲ. ಹೊಸ ಯೋಜನೆ, ಟೆಂಡರ್‌ಗೆ ಅವಕಾಶವಿಲ್ಲ. ಸರಕಾರದ ಕೆಲವು ಸೌಲಭ್ಯಗಳು ಕೂಡ ಲಭ್ಯವಾಗುವುದಿಲ್ಲ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಸ್ಯಾಂಟಿಯಾಗೋ: 38 ಜನರನ್ನು ಹೊತ್ತೂಯ್ಯುತ್ತಿದ್ದ ಚಿಲಿಯ ಯುದ್ಧ ವಿಮಾನ ಸೋಮವಾರ ಸಂಜೆ ಕಾಣೆಯಾಗಿದೆ. ಸಿ-130 ಹರ್ಕ್ಯುಲಸ್‌ ವಿಮಾನದಲ್ಲಿ 17 ಸಿಬ್ಬಂದಿ ಮತ್ತು 12 ಪ್ರಯಾಣಿಕರು...

  • ರಾಯ್ಪುರ: ತಲೆಗೆ 40 ಲಕ್ಷ ರೂ. ಬಹುಮಾನ ಹೊತ್ತಿದ್ದ ಛತ್ತೀಸ್‌ಗಢದ ಪ್ರಮುಖ ನಕ್ಸಲ್‌ ನಾಯಕ ರಾಮಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಂಗಳವಾರ...

  • ರಾಂಚಿ: ಜಾರ್ಖಂಡ್‌ನ‌ಲ್ಲಿ ಸೋಮವಾರ ರಾತ್ರಿ ಸಿಆರ್‌ಪಿಎಫ್ ಯೋಧರೊಬ್ಬರು ಪಾನಮತ್ತರಾಗಿ ತಮ್ಮ ಸಹೋದ್ಯೋಗಿ ಯೋಧ ಮತ್ತು ಅಧಿಕಾರಿ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ....

  • ಹೊಸದಿಲ್ಲಿ: ಹೋಂಡಾ ಕಾರ್ಸ್‌ ಇಂಡಿಯಾವು ಮಂಗಳವಾರ ಬಿಎಸ್‌6 ಮಾದರಿಯ ಪೆಟ್ರೋಲ್‌ ಆವೃತ್ತಿಯ ಹೋಂಡಾ ಸಿಟಿ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸದಿಲ್ಲಿಯಲ್ಲಿ...

  • ಹೊಸದಿಲ್ಲಿ: ದಕ್ಷಿಣ ಕೊರಿಯಾದ ಆಟೋಮೊಬೈಲ್‌ ದಿಗ್ಗಜ ಹ್ಯುಂಡೈ ಮೋಟಾರ್‌ ಇಂಡಿಯಾ ಮುಂದಿನ ಜನವರಿಯಿಂದ ತನ್ನ ಎಲ್ಲ ಕಾರುಗಳ ದರವನ್ನೂ ಏರಿಕೆ ಮಾಡುವುದಾಗಿ ಘೋಷಿಸಿದೆ....