ತೆಕ್ಕಟ್ಟೆ: ಸರಣಿ ಅಪಘಾತ ವಾಹನಗಳು ಜಖಂ

Team Udayavani, Oct 9, 2019, 8:30 PM IST

ತೆಕ್ಕಟ್ಟೆ : ಪಾದಚಾರಿಯೋರ್ವರು ಕಾರಿಗೆ ಅಡ್ಡಬಂದ ಪರಿಣಾಮ ಸರಣಿ ಅಪಘಾತ ಸಂಭವಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಕೊಮೆ ರಸ್ತೆಯಿಂದ ಸೈಕಲ್‌ನಲ್ಲಿ ಬಂದ ವಯೋವೃದ್ಧ ಪಾದಚಾರಿಯೋರ್ವರು ರಸ್ತೆ ಡಿವೈಡರ್ ಏರಿ ಏಕಾಏಕಿ ಚಲಿಸುತ್ತಿದ್ದ ಮಾರುತಿ ಆಲ್ಟೋ ಕಾರಿಗೆ ಅಡ್ಡ ಬಂದ ಪರಿಣಾಮ ಚಾಲಕನ ಸಮಯಪ್ರಜ್ಞೆಯಿಂದ ಪಾದಚಾರಿಯನ್ನು ಜೀವ ರಕ್ಷಿಸುವ ಭರದಲ್ಲಿ ಬ್ರೇಕ್ ಹಾಕಿದ್ದಾರೆ. ಅದೇ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಮಹೇಂದ್ರ ಟಿಯುವಿ ವಾಹನ, ಟೊಯೋಟಾ ಇಟಿಯಾಸ್ ಹಾಗೂ ಸ್ಕಾರ್ಪಿಯೊ ವಾಹನಗಳ ನಡುವೆ ಸರಣಿ ಅಪಘಾತ ನಡೆದಿದೆ. ಅಪಘಾತದಲ್ಲಿ ವಾಹನಗಳು ಜಖಂಗೊಂಡಿದ್ದು ಯಾವುದೇ ಸಾವುನೋವು ಸಂಭವಿಸಿಲ್ಲ.

ಸ್ಥಳಕ್ಕೆ ಕೋಟ ಪೊಲೀಸ್ ಠಾಣಾಧಿಕಾರಿ ನಿತ್ಯಾನಂದ ಗೌಡ ಧಾವಿಸಿ ಪರಿಶೀಲಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ