ಆಗ ಕಿರಾಣಿ ಅಂಗಡಿಯ ಹುಡುಗ; ಈಗ ಸಚಿವ

Team Udayavani, Aug 21, 2019, 5:05 AM IST

kirani

ಕೋಟ: ಅತಿ ಹಿಂದುಳಿದ ವರ್ಗದ ಮತ್ತು ರಾಜಕೀಯ ಹಿನ್ನೆಲೆಯೇ ಇಲ್ಲದ ಕುಟುಂಬದಲ್ಲಿ ಜನಿಸಿ, ಬಡತನದ ಕಾರಣಕ್ಕೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸಿ ಕಿರಾಣಿ ಅಂಗಡಿ ಕಾರ್ಮಿಕನಾಗಿ ಬೆಳೆದ ಕೋಟ ಶ್ರೀನಿವಾಸ ಪೂಜಾರಿ ಈಗ 2ನೇ ಅವಧಿಗೆ ರಾಜ್ಯ ಕ್ಯಾಬಿನೆಟ್‌ ದರ್ಜೆ ಸಚಿವರಾಗಿದ್ದಾರೆ. ಕಿರಾಣಿ ಅಂಗಡಿಯಲ್ಲಿ ಸಾಮಗ್ರಿ ಕಟ್ಟಿಕೊಡುವಲ್ಲಿಂದ ವಿಧಾನ ಸೌಧದ ಮೆಟ್ಟಿಲೇರುವ ತನಕದ ಪೂಜಾರಿ ಯವರ ಯಾನ ಗಮನಿಸುವಂಥದ್ದು.

1960ರ ಜ. 1ರಂದು ಕೋಟತಟ್ಟುವಿ ನಲ್ಲಿ ಆಣ್ಣಪ್ಪ ಪೂಜಾರಿ ಮತ್ತು ಲಚ್ಚಿ ಪೂಜಾರಿ ಅವರ ಪುತ್ರನಾಗಿ ಜನಿಸಿದ ಶ್ರೀನಿವಾಸ ಕೋಟ ಶಾಂಭವೀ ಶಾಲೆಯಲ್ಲಿ 7ನೇ ತರಗತಿ ಶಾಲಾ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿದ್ದರು.

ಕಿರಾಣಿ ಅಂಗಡಿ ಹುಡುಗ
1974ರಲ್ಲಿ 14ನೇ ವಯಸ್ಸಿಗೆ ಕೋಟದ ವಾಸುದೇವ ನಾಯಕ್‌ ಅವರ ಕಿರಾಣಿ
ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಬಿಡುವಿನ ವೇಳೆಯಲ್ಲಿ ಕೃಷಿ ಕೂಲಿಯಾಗಿಯೂ ದುಡಿಯುತ್ತಿದ್ದರು. 15 ವರ್ಷಗಳ ಅನಂತರ ಛಾಯಚಿತ್ರಗ್ರಾಹಕನಾದರು. ಕ್ರಮೇಣ ಕೋಟದಲ್ಲಿ ಸ್ವಾತಿ ಸ್ಟುಡಿಯೋ ತೆರೆದರು. ಈ ವೃತ್ತಿ 2008ರಲ್ಲಿ ವಿಧಾನ ಪರಿಷತ್‌ ಸದಸ್ಯನಾಗಿ ಆಯ್ಕೆಯಾಗುವ ತನಕ ಮುಂದುವರಿಯಿತು. ಇವೆಲ್ಲ ಏಳುಬೀಳುಗಳ ನಡುವೆ ಶಾಂತಾ ಅವರ ಬಾಳಸಂಗಾತಿಯಾದರು; ಸ್ವಾತಿ, ಶಶಿಧರ, ಶ್ರುತಿ ಮಕ್ಕಳಾಗಿ ಮನೆ ಬೆಳಗಿದರು.

ರಾಜಕೀಯ ಜೀವನ
1993ರಲ್ಲಿ ಕೋಟತಟ್ಟು ಗ್ರಾ.ಪಂ. ಸದಸ್ಯನಾದರು. ಬಿಜೆಪಿ ಜತೆ ಗುರುತಿಸಿ ಕೊಂಡು ಉಪಾಧ್ಯಕ್ಷರಾದರು. ಗ್ರಾ.ಪಂ. ಸದಸ್ಯನಾಗಿರುವಾಗಲೇ 1996ರ ಉಡುಪಿ ತಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದರು. ಅನಂತರ 1999 ಮತ್ತು 2004ರಲ್ಲಿ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆ. ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಪರಾಭವಗೊಂಡರು. 2006ರಲ್ಲಿ ಪಂ. ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದು ಸದಸ್ಯರಾಗಿದರು. 2008ರಲ್ಲಿ ಸ್ಥಳೀಯಾ ಡಳಿತದ ಸ್ಥಾನದಿಂದ ಉಡುಪಿ-ದ.ಕ. ಅವಳಿ ಜಿಲ್ಲೆಗಳ ಪ್ರತಿನಿಧಿಯಾಗಿ ವಿಧಾನ ಪರಿಷತ್‌ಗೆ ಮೊದಲ ಬಾರಿಗೆ ಆಯ್ಕೆಯಾದರು. ಮತ್ತೆ 2010ರಲ್ಲಿ ಅವಿರೋಧವಾಗಿ ಆಯ್ಕೆಯಾದರು. 2012ರಲ್ಲಿ ರಾಜ್ಯ ಬಂದರು, ಒಳನಾಡು ಜಲಸಾರಿಗೆ ಮತ್ತು ಮುಜರಾಯಿ ಸಚಿವ ಸ್ಥಾನವನ್ನು ಉತ್ತಮ ವಾಗಿ ನಿಭಾಯಿಸಿದರು. 2015ರಲ್ಲಿ ಮತ್ತೂಮ್ಮೆ ವಿಧಾನಪರಿಷತ್‌ ಸದಸ್ಯನಾಗಿ ಆಯ್ಕೆಗೊಂಡು 2018ರಲ್ಲಿ ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕರಾದರು.

ಬಸ್‌ ಟಿಕೆಟ್‌ ಹೋರಾಟ
ಅದೊಂದು ದಿನ ಬೆಂಗಳೂರಿಗೆ ತೆರಳಿ ವಾಪಸಾಗುವಾಗ ಬಸ್‌ನಲ್ಲಿ ಶ್ರೀನಿವಾಸ ಪೂಜಾರಿಯವರಿಗೆ ಮೀಸಲಾಗಿದ್ದ ಆಸನ ಬಿಟ್ಟು ಬೇರೆ ಸೀಟ್‌ನಲ್ಲಿ
ಕುಳ್ಳಿರಿಸ ಲಾಯಿತು. ಇದನ್ನು ಪ್ರತಿಭಟಿಸಿ ಅವರು ಬಳಕೆದಾರರ ವೇದಿಕೆಯ ಮೂಲಕ ಹೋರಾಟ ಆರಂಭಿಸಿದರು. ಅನಂತರ ಇವರ ಪರ ತೀರ್ಪು
ಬಂದು ಬಸ್‌ನವರಿಗೆ ದಂಡ ವಿಧಿಸಲಾಯಿತು.

ಈ ಘಟನೆ ಅವರಲ್ಲಿ ಹೋರಾಟದ ಕಿಚ್ಚು ಹೆಚ್ಚುವಂತೆ ಮಾಡಿತು. 1989ರಲ್ಲಿ ಶೇಂದಿ ನಿಷೇಧ ಕಾಯ್ದಿ ಜಾರಿಗೆ ಬಂದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಸಂಘಟಿಸಿದ್ದರ ಫಲವಾಗಿ ಅಂದಿನ ಸರಕಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಂದಿ ನಿಷೇಧ ಕೈಬಿಟ್ಟಿತ್ತು. ಬಂಗಾರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ಮೂರ್ತೆದಾರರ ಪರ ದೊಡ್ಡ
ಹೋರಾಟ ಸಂಘಟಿಸಿದ್ದರು.

ಹೋರಾಟ ಮತ್ತು ಕಾರ್ಯವೈಖರಿಯನ್ನು ಗುರುತಿಸಿ ಪಕ್ಷ ನನಗೆ ಈ ಜವಾಬ್ದಾರಿ ನೀಡಿದೆ. ಇದನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿದ್ದೇನೆ.
– ಕೋಟ ಶ್ರೀನಿವಾಸ ಪೂಜಾರಿ

ಹೋರಾಟ- ವಾಕ್‌ ಚಾತುರ್ಯ
ಹೋರಾಟದ ಮನೋಭಾವ ಮತ್ತು ಪ್ರಕರ ವಾಕ್‌ ಚಾತುರ್ಯ ಪೂಜಾರಿಯವರಿಗೆ ವರದಾನ. ಕತೆ – ಉಪಕತೆಗಳನ್ನು ಹೇಳುತ್ತ ಮಂತ್ರಮುಗ್ಧಗೊಳಿಸುವಂತೆ ಮಾತನಾಡುವ ಶಕ್ತಿ, ಅಧ್ಯಯನಶೀಲತೆ, ಪೂರ್ವ ತಯಾರಿಯೊಂದಿಗೆ ವಿಷಯ ಮಂಡನೆ ಇವರ ವಿಶೇಷತೆ.

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ

Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ

Veerappa Moily; ದೇಶಕ್ಕೆ ಕ್ರಿಕೆಟ್‌ ಕಾಮೆಂಟ್ರಿಯನ್‌ ಬೇಕಿಲ್ಲ

Veerappa Moily; ದೇಶಕ್ಕೆ ಕ್ರಿಕೆಟ್‌ ಕಾಮೆಂಟ್ರಿಯನ್‌ ಬೇಕಿಲ್ಲ

Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.