ಶತಮಾನ ಕಂಡ ಶಾಲೆಯಲ್ಲಿ ಸರಕಾರಿ ಶಿಕ್ಷಕರಿಲ್ಲ

Team Udayavani, Apr 2, 2019, 6:30 AM IST

ಶಿರ್ವ: ಗ್ರಾಮೀಣ ಪ್ರದೇಶದ ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಿ ಸದೃಢ ಮತ್ತು ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ಸದುದ್ದೇಶದಿಂದ ಶಿರ್ವದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯು ಶತಮಾನದ ಹಿಂದೆ ಆರಂಭಗೊಂಡಿತು. 1918ರಲ್ಲಿ ಶಿರ್ವದ ಶಿಕ್ಷಣ ಪ್ರೇಮಿ ಮಾರ್ಟಿನ್‌ ಮೆಂಡೋನ್ಸಾ ಅವರು ಸಂಸ್ಥೆಯನ್ನು ಸ್ಥಾಪಿಸಿ ಹಿಂದೂ ಶಾಲೆ ಎಂದು ಹೆಸರಿಟ್ಟು ಜ್ಞಾನ ಪ್ರಸಾರದ ಕೈಂಕರ್ಯವನ್ನು ಆರಂಭಿಸಿ ಸರ್ವ ಧರ್ಮ ಸೌಹಾರ್ದತೆಗೆ ಸಾಕ್ಷಿಯಾದರು.

ವಿದ್ಯಾವರ್ಧಕ ಸಂಘದ ಆಡಳಿತ
ಶಿರ್ವ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಚೈತನ್ಯವನ್ನು ತುಂಬಿ ಅವರ ಬದುಕನ್ನು ರೂಪಿಸುವ ಉದ್ದೇಶದಿಂದ ದಿ| ಮುದ್ದು ಶೆಟ್ಟಿಯವರ ನೇತೃತ್ವದಲ್ಲಿ ಹಾಗೂ ಅಸಂಖ್ಯಾತ ವಿದ್ಯಾಭಿಮಾನಿಗಳ ಕಠಿನ ಪರಿಶ್ರಮದಿಂದ 1944ರಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪನೆಗೊಂಡಿತು. 1945ರಲ್ಲಿ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾವರ್ಧಕ ಸಂಘದ ಆಡಳಿತಕ್ಕೆ ಒಳಪಟ್ಟ ಅನಂತರ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆಗೈದ ಶಿಕ್ಷಕರ ತಂಡದೊಂದಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ನೀಡಿ ಜನಪ್ರಿಯ ಶಾಲೆಯಾಗಿ ಬೆಳೆದು ಬಂತು. ಹಲವು ದಶಕಗಳಿಂದ ಪ್ರತೀವರ್ಷ ಸಂಸ್ಥೆಯಲ್ಲಿ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸಿರುವುದು ಮಾತ್ರವಲ್ಲದೆ, 8 ಮಂದಿ ಶಿಕ್ಷಕರು ಪೂರ್ಣಕಾಲಿಕ ಸೇವೆ ಸಲ್ಲಿಸಿದ್ದರು. ಕಾಲಕ್ರಮೇಣ ವಿದ್ಯಾರ್ಥಿಗಳಸಂಖ್ಯೆ ಇಳಿಮುಖವಾದರೂ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಇಲ್ಲಿಯೇ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸರಕಾರದ ನಿರ್ಲಕ್ಷé ಧೋರಣೆಯ ಫಲವಾಗಿ ಅನುದಾನಿತ ಶಿಕ್ಷಕರ ಕೊರತೆಯಿದ್ದರೂ ಸೇವೆಯಲ್ಲಿರುವ 7 ಶಿಕ್ಷಕರ ವೇತನವನ್ನು ಆಡಳಿತ ಮಂಡಳಿ, ಹಳೆವಿದ್ಯಾರ್ಥಿ ಸಂಘ ಮತ್ತು ದಾನಿಗಳ ನೆರವಿನಿಂದ ಭರಿಸಲಾಗುತ್ತಿದೆ.

ಸರಕಾರಕ್ಕೆ ಹಳೆ ವಿದ್ಯಾರ್ಥಿಗಳ ಮನವಿ
ಶತಮಾನ ಪೂರೈಸಿರುವ ಶಾಲೆಯನ್ನು ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಆಂಗ್ಲಮಾಧ್ಯಮ ಶಾಲೆಗಳಲಿ° ನೀಡುತ್ತಿರುವ ಶಿಕ್ಷಣಕ್ಕೆ ಸರಿಸಾಟಿಯಾಗಿ ಉತ್ತಮ ಗುಣಮಟ್ಟದ ಸಂಸ್ಕಾರಯುತ, ಮೌಲ್ಯಾಧಾರಿತ ಶಿಕ್ಷಣವನ್ನು ಉಚಿತವಾಗಿ ಎಲ್ಲಾ ಮಕ್ಕಳಿಗೆ ನೀಡಲು ಹಳೆವಿದ್ಯಾರ್ಥಿ ಸಂಘ ಬದ್ಧವಾಗಿದೆ. ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗನು ಗುಣವಾಗಿ ಸರಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವಂತೆ ಅನುದಾನಿತ ಶಾಲೆಗಳಿಗೂ ಸರಕಾರ ಇಲಾಖೆಯ ಮೂಲಕ ಶಿಕ್ಷಕರನ್ನು ನೇಮಿಸಿ ಶತಮಾನ ಕಂಡಿರುವ ಕನ್ನಡ ಮಾಧ್ಯಮ ಶಾಲೆಯನ್ನು ಪುನಶ್ಚೇತನಗೊಳಿಸುವಂತೆ ಹಳೆವಿದ್ಯಾರ್ಥಿಗಳು ಸರಕಾರಕ್ಕೆ ಮನವಿ ಮಾಡಿದ್ದಾರೆ.

ಶತಮಾನೋತ್ಸವ ಸಂಭ್ರಮ
ಶತಮಾನ ಪೂರೈಸಿರುವ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಹಾಗೂ ದಾನಿಗಳ ಸಹಕಾರದಿದೊಂದಿಗೆ ಸಂಸ್ಥೆಯು ಶತಮಾನೋತ್ಸವವನ್ನು ಅರ್ಥಪೂರ್ಣ ಹಾಗೂ ಅವಿಸ್ಮರಣೀಯವಾಗಿ ಆಚರಿಸಲು ಯೋಜನೆ ರೂಪಿಸಲಾಗಿದೆ.

ಶಾಲಾ ಶತಮಾನೋತ್ಸವ ಸಮಿತಿ ಮತ್ತು ಶಾಲಾ ಹಳೆವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಸುಮಾರು 50ಲ.ರೂ.ವೆಚ್ಚದಲ್ಲಿ ಶಾಲಾ ಕಟ್ಟಡ ನವೀಕರಣ,ವಿದ್ಯಾರ್ಥಿಗಳಿಗೆ ಉಚಿತ ವಾಹನದ ವ್ಯವಸ್ಥೆ,ಶೌಚಾಲಯ ನಿರ್ಮಾಣ, ಗೌರವ ಶಿಕ್ಷಕರ ವೇತನದ ವ್ಯವಸ್ಥೆ ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ಅಳವಡಿಸಿಕೊಂಡು ಎ. 27 ರಂದು ಶತಮಾನೋತ್ಸವ ಸಂಭ್ರಮ ಆಚರಿಸಲು ಸಜ್ಜುಗೊಂಡಿದೆ.

ನಿವೃತ್ತ ಶಿಕ್ಷಕರೇ ಪ್ರಭಾರ ಮುಖ್ಯ ಶಿಕ್ಷಕರು
ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಶಾಲೆಯಲ್ಲಿ ಪ್ರಸ್ತುತ 130 ವಿದ್ಯಾರ್ಥಿಗಳಿದ್ದು 7ಗೌರವ ಶಿಕ್ಷಕರಿದ್ದಾರೆ. ಶತಮಾನ ಪೂರೈಸಿದ ಶಾಲೆಯಾದರೂ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಸರಕಾರದ ನಿರ್ಲಕ್ಷéದ ಧೋರಣೆಯಿಂದ ನಿವೃತ್ತ ಶಿಕ್ಷಕರ ಸ್ಥಾನದಲ್ಲಿ ಹೊಸ ಶಿಕ್ಷಕರ ನೇಮಕಕ್ಕೆ ಅವಕಾಶವಿಲ್ಲದೆ ಇಲಾಖೆಯಿಂದ ಅಧಿಕೃತ ಶಿಕ್ಷಕರಿಲ್ಲ. ಶಾಲಾಡಳಿತ ಮಂಡಳಿ ನಿವೃತ್ತ ಶಿಕ್ಷಕರೋರ್ವರನ್ನು ಮನವೊಲಿಸಿ ತಾತ್ಕಾಲಿಕ ನೆಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಮತ್ತು ಕ್ಲಾಸಿಗೊಬ್ಬರಂತೆ ಗೌರವ ಶಿಕ್ಷಕರನ್ನು ನೇಮಿಸಿ ವ್ಯವಸ್ಥಿತವಾಗಿ ಶಾಲೆಯನ್ನು ನಡೆಸಿಕೊಂಡು ಬರುತ್ತಿದೆ. ಕಳೆದೊಂದು ವರ್ಷದಿಂದ ನಿವೃತ್ತ ಶಿಕ್ಷಕ ವಾಸು ಆಚಾರ್‌ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ