Udayavni Special

ಜನರಿಗೆ ಮುಳುವಾದ ತರಾತುರಿಯ ಕಾಮಗಾರಿ 


Team Udayavani, May 24, 2018, 6:00 AM IST

1105ra1e-4.jpg

ಪಡುಬಿದ್ರಿ: ಹೆಜಮಾಡಿಯ ಮುಟ್ಟಳಿವೆ ಪ್ರದೇಶದಲ್ಲಿ ಹೆಜಮಾಡಿ ಮತ್ತು ಪಡುಬಿದ್ರಿಯ ನಡಿಪಟ್ಣ ಪ್ರದೇಶವನ್ನು ಸಂಪರ್ಕಿಸಲು ನಬಾರ್ಡ್‌ನ 80ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 65ಮೀಟರ್‌ ಉದ್ದಕ್ಕೆ ರಚಿಸಲಾದ ಸೇತುವೆ ಮತ್ತು 2 ಕೋಟಿ ರೂ.ವೆಚ್ಚದ ಅವೈಜ್ಞಾನಿಕ ಸಮುದ್ರ ತಡೆಗೋಡೆ ಕಾಮಗಾರಿಗಳಿಂದಾಗಿ ಪಡುಬಿದ್ರಿ ಪಡುಹಿತ್ಲು, ನಡಾಲು ಭಾಗದ ರೈತರ ಗದ್ದೆಗಳಲ್ಲಿ ನೀರು ತುಂಬಿದೆ.
 
ಸೇತುವೆ, ರಸ್ತೆಗಳನ್ನು ಕಾರ್ಯಗತಗೊಳಿಸಿ ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಅನುಕೂಲಕ್ಕೆ ಈ ರಸ್ತೆ ಬಳಸಲು ಉದ್ದೇಶಿಸ ಲಾಗಿತ್ತು. ಆದರೆ ಮಳೆಗಾಲಕ್ಕೂ ಮುನ್ನವೇ ಕಾಮಗಾರಿಯಲ್ಲಿನ ಸಮಸ್ಯೆಯಿಂದ ಜಮೀನಿನಲ್ಲಿ ನೀರು ತುಂಬಿರುವುದು ಸಮಸ್ಯೆ ತಂದೊಡ್ಡಿದೆ.

ಆರಂಭದಲ್ಲೇ ವಿರೋಧವಿತ್ತು
5 ದೊಡ್ಡ ಪೈಪ್‌ಗ್ಳನ್ನು ಹಾಕಿ ನಿರ್ಮಿಸ ಲಾಗುತ್ತಿದ್ದ ಸೇತುವೆ ಅವೈಜ್ಞಾನಿಕ ವಾಗಿದೆ ಎಂದು ಜನರು ಆಕ್ಷೇಪಿಸಿದ್ದರು. ಆದರೆ ಇಲಾಖೆ ಎಂಜಿನಿಯರ್‌ಗಳು ಇಲ್ಲಿ ಮಳೆ ಗಾಲದಲ್ಲಿ ಕಾಮಿನಿ ನದಿಯ ನೀರು ಈ ಸೇತುವೆ ಮೂಲಕವೇ ಸಮುದ್ರ ಸೇರಲಿದೆ. ರಸ್ತೆ, ಸೇತುವೆಗಳಿಗೇನೂ ಹಾನಿಯಾಗದು. ಜನರಿಗೂ ತೊಂದರೆಯಾಗದು ಎಂದಿದ್ದರು.  

ಇದೀಗ ಕಾಮಿನಿ ನದಿಯು ತಗ್ಗಲ್ಲಿದೆ. ಸೇತುವೆ ಎತ್ತರದಲ್ಲಿದೆ. ಮರಳು ದಿಣ್ಣೆಗಳನ್ನು ಕಡಿದು ಸೇತುವೆ ಎದುರು ನೀರು ಹರಿಯಲು ತೋಡು ಮಾಡಿಕೊಡಲಾಗಿದೆ. ಸಮುದ್ರ ಇಳಿತ ಇದ್ದಾಗ ಒಂದಷ್ಟು ನೀರು ಹರಿದು ಹೋಗುತ್ತಿದ್ದರೂ, ಉಬ್ಬರ ಸಂದರ್ಭಗಳಲ್ಲಿ ನೀರು ಹಿಂದಕ್ಕೆ ಬರುತ್ತಿದೆ. ಇದರಿಂದ ಮರಳು ರಾಶಿ ಮತ್ತೆ ಸೃಷ್ಟಿಯಾಗುತ್ತಿದೆ. ಇದೂ ನೆರೆ ಪರಿಸ್ಥಿತಿ ಉಂಟುಮಾಡಲು ಕಾರಣವಾಗಿದೆ.  

ಆರಂಭದ ಮಳೆಗೆ ನೆರೆ 
ಸಮುದ್ರ ಮತ್ತು ಕಾಮಿನಿ ನದಿ ಮಧ್ಯೆ ನಿರ್ಮಾಣವಾದ ಹೊಸ ರಸ್ತೆ, ಸೇತುವೆಯಿಂದಾಗಿ ನೀರು ಸಮುದ್ರ ಸೇರದೆ, ಮೊದಲ ಮಳೆಗೇ ಆಸುಪಾಸಿನ ಜಾಗಗಳಿಗೆ ನೀರು ನುಗ್ಗಿ ನೆರೆ ಪರಿಸ್ಥಿತಿ ತಲೆದೋರಿದೆ. ಸಾಮಾನ್ಯವಾಗಿ ಇಲ್ಲಿ ವರ್ಷವೂ ಸ್ಥಳೀಯರು ಪಡುಬಿದ್ರಿ ಗ್ರಾ.ಪಂ. ನೀಡುವ 15 ಸಾವಿರ ಬಳಸಿ ಮರಳು ದಿಬ್ಬಗಳನ್ನು ತೆರವುಗೊಳಿಸುತ್ತಿದ್ದರು. ಇದರಿಂದ ನೀರು ಸರಾಗ ಹರಿದುಹೋಗುತ್ತಿತ್ತು. 

ಅವೈಜ್ಞಾನಿಕ
ಸೇತುವೆ ಕಾರ್ಯ
ಸೇತುವೆ ಕಾರ್ಯ ಅವೈಜ್ಞಾನಿಕವಾಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಇನ್ನು ಮಳೆಗಾಲದಲ್ಲಿ ದೋಣಿಗಳನ್ನು ನದಿ ಪಾತ್ರಕ್ಕೆ ತರುತ್ತಿದ್ದೆವು. ಆದರೀಗ ತೂಬಿನ ರೀತಿಯ ಸೇತುವೆಯಿಂದ ದೋಣಿಗಳನ್ನೂ ತರಲು ಸಾಧ್ಯವಿಲ್ಲದಂತಾಗಿದೆ. 
– ಗಂಗಾಧರ ಕರ್ಕೇರ,
ಸ್ಥಳೀಯರು

ಪರಿಹಾರ ಕಲ್ಪಿಸಿ
ಸೇತುವೆ ಅಡಿಯ ಮಣ್ಣು ಸಮುದ್ರ ಕೊರೆತಕ್ಕೊಳಗಾದರೆ, ಸೇತುವೆ ಬಾಳಿಕೆ ಬರಲು ಸಾಧ್ಯವಿಲ್ಲ. ಈ ಬಗ್ಗೆ ಕೂಡಲೇ ಪರಿಹಾರ ಕಲ್ಪಿಸಬೇಕಿದೆ. 
– ಲೋಹಿತಾಕ್ಷ ಸುವರ್ಣ, ಪಡುಹಿತ್ಲು  

ಆರಾಮ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

KUDಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

ಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

Capitals-New-01

ಚೇಸಿಂಗ್ ನಲ್ಲಿ ಮುಗ್ಗರಿಸಿದ ಡೆಲ್ಲಿ ; ಸನ್ ರೈಸರ್ಸ್ ಗೆ 15 ರನ್ ಜಯ

ಫ್ರೆಂಚ್‌ ಓಪನ್‌-2020; ಮುಗುರುಜಾ 3 ಗಂಟೆ ಹೋರಾಟ

ಫ್ರೆಂಚ್‌ ಓಪನ್‌-2020; ಮುಗುರುಜಾ 3 ಗಂಟೆ ಹೋರಾಟ

ಕಾರ್ತಿಕ್‌ ಬಳಗಕ್ಕೆ ಕಾದಿದೆ ರಾಜಸ್ಥಾನ್‌ ಟೆಸ್ಟ್‌

ಕಾರ್ತಿಕ್‌ ಬಳಗಕ್ಕೆ ಕಾದಿದೆ ರಾಜಸ್ಥಾನ್‌ ಟೆಸ್ಟ್‌

ಹೆದ್ದಾರಿ ಸಚಿವರಿಗೆ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ಹೆದ್ದಾರಿ ಸಚಿವರಿಗೆ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ಚಿಕ್ಕಬಳ್ಳಾಪುರ: 5 ಕೋಟಿ 93 ಲಕ್ಷ ತೆರಿಗೆ ವಸೂಲಿ ಗುರಿ

ಚಿಕ್ಕಬಳ್ಳಾಪುರ: 5 ಕೋಟಿ 93 ಲಕ್ಷ ತೆರಿಗೆ ವಸೂಲಿ ಗುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

udupiಪ್ರಮುಖ ರಸ್ತೆಗಳಲ್ಲೇ ಹರಿಯುತ್ತಿದೆ ತ್ಯಾಜ್ಯ ನೀರು!

ಪ್ರಮುಖ ರಸ್ತೆಗಳಲ್ಲೇ ಹರಿಯುತ್ತಿದೆ ತ್ಯಾಜ್ಯ ನೀರು!

ನಕ್ಷೆ ನೀಡಲು ಸೂಚನೆ; ಶೀಘ್ರ ಇತ್ಯರ್ಥಕ್ಕೆ ಡಿಸಿ ಆದೇಶ

ನಕ್ಷೆ ನೀಡಲು ಸೂಚನೆ; ಶೀಘ್ರ ಇತ್ಯರ್ಥಕ್ಕೆ ಡಿಸಿ ಆದೇಶ

KUDಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

ಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

ಜಿಲ್ಲೆಯ 30 ಸಾವಿರಕ್ಕೂ ಅಧಿಕ ಕೃಷಿಕರಿಗೆ ಪ್ರಯೋಜನ

ಜಿಲ್ಲೆಯ 30 ಸಾವಿರಕ್ಕೂ ಅಧಿಕ ಕೃಷಿಕರಿಗೆ ಪ್ರಯೋಜನ

ಬಸ್ರೂರು ಬಸ್‌ ನಿಲ್ದಾಣ ಸಮೀಪ ಅಪಾಯಕಾರಿ ತಿರುವು

ಬಸ್ರೂರು ಬಸ್‌ ನಿಲ್ದಾಣ ಸಮೀಪ ಅಪಾಯಕಾರಿ ತಿರುವು

MUST WATCH

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆಹೊಸ ಸೇರ್ಪಡೆ

udupiಪ್ರಮುಖ ರಸ್ತೆಗಳಲ್ಲೇ ಹರಿಯುತ್ತಿದೆ ತ್ಯಾಜ್ಯ ನೀರು!

ಪ್ರಮುಖ ರಸ್ತೆಗಳಲ್ಲೇ ಹರಿಯುತ್ತಿದೆ ತ್ಯಾಜ್ಯ ನೀರು!

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

ನಕ್ಷೆ ನೀಡಲು ಸೂಚನೆ; ಶೀಘ್ರ ಇತ್ಯರ್ಥಕ್ಕೆ ಡಿಸಿ ಆದೇಶ

ನಕ್ಷೆ ನೀಡಲು ಸೂಚನೆ; ಶೀಘ್ರ ಇತ್ಯರ್ಥಕ್ಕೆ ಡಿಸಿ ಆದೇಶ

KUDಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

ಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

ಜಿಲ್ಲೆಯ 30 ಸಾವಿರಕ್ಕೂ ಅಧಿಕ ಕೃಷಿಕರಿಗೆ ಪ್ರಯೋಜನ

ಜಿಲ್ಲೆಯ 30 ಸಾವಿರಕ್ಕೂ ಅಧಿಕ ಕೃಷಿಕರಿಗೆ ಪ್ರಯೋಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.