ದೃಷ್ಟಿ ಕಳೆದುಕೊಂಡ ಗರುಡನಿಗೆ ನೇತ್ರಾಲಯದಲ್ಲಿ ಚಿಕಿತ್ಸೆ

Team Udayavani, Feb 11, 2018, 8:15 AM IST

s-22.jpg

ಉಡುಪಿ: ಯಾವುದೋ ಕಾರಣದಿಂದ ತನ್ನ ಎರಡೂ ನೇತ್ರಗಳ ದೃಷ್ಟಿಯನ್ನು ಕಳೆದುಕೊಂಡಿರುವ ಗರುಡ ಪಕ್ಷಿಯೊಂದಕ್ಕೆ ಉಡುಪಿಯ ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ  ಶನಿವಾರ ಚಿಕಿತ್ಸೆ ಆರಂಭಿಸಲಾಗಿದೆ. ವಿಷ್ಣುವಿನ ವಾಹನ ಎಂಬ ನಂಬಿಕೆಯುಳ್ಳ  ಗರುಡನಿಗೆ ನೇತ್ರಚಿಕಿತ್ಸೆ  ಅಪರೂಪದ ಪ್ರಕರಣ.

ಈ ಬಿಳಿ ಕತ್ತಿನ ಗರುಡ (ಬ್ರಾಹ್ಮಿಣಿ ಕೈಟ್‌) ಫೆ. 9ರಂದು ಉಡುಪಿಯ ಶ್ರೀಕೃಷ್ಣ ಮಠದ ಸಮೀಪ, ಪೇಜಾವರ ಮಠದ ಆವರಣದಲ್ಲಿರುವ ಮರದಿಂದ ಕೆಳಕ್ಕೆ ಬಿತ್ತು. ಇದನ್ನು ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಗಮನಕ್ಕೆ ತಂದಾಗ ಅದಕ್ಕೆ ಕಣ್ಣು ಕಾಣದಿರುವ ಸ್ಥಿತಿಯನ್ನು ತಿಳಿದು ಪ್ರಾಥಮಿಕ ಆರೈಕೆ ಮಾಡಿದ್ದರು. ಬಳಿಕ ಪ್ರಸಾದ್‌ ನೇತ್ರಾಲಯದ ಆಡಳಿತ ನಿರ್ದೇಶಕ ಡಾ| ಕೃಷ್ಣಪ್ರಸಾದ್‌ ಅವರನ್ನು ಸಂಪರ್ಕಿಸಿ, ಪಕ್ಷಿಗೆ ಚಿಕಿತ್ಸೆ ನೀಡುವಂತೆ ಕೋರಿದರು. ಅದರಂತೆ ಫೆ. 10ರ ಬೆಳಗ್ಗೆ ಗರುಡ ಪಕ್ಷಿಯನ್ನು ಪ್ರಸಾದ್‌ ನೇತ್ರಾಲಯಕ್ಕೆ ಕೊಂಡೊಯ್ಯಲಾಯಿತು.

ವೈದ್ಯರ ತಂಡದಿಂದ ಪರೀಕ್ಷೆ: ಡಾ| ಕೃಷ್ಣಪ್ರಸಾದ್‌ ನೇತೃತ್ವದಲ್ಲಿ ನೇತ್ರತಜ್ಞರಾದ ಡಾ| ಹರಿಪ್ರಸಾದ್‌, ಡಾ| ಚೆನ್ನಪ್ಪ, ಡಾ| ಪರೇಶ್‌ ಪೂಜಾರಿ ಮತ್ತು ಡಾ| ಶಮಂತ್‌ ಶೆಟ್ಟಿಯವರ ತಂಡವು ಗರುಡ ಪಕ್ಷಿಯ ನೇತ್ರಪರೀಕ್ಷೆಯನ್ನು ನಡೆಸಿದೆ. ವಿದ್ಯುತ್‌ ತಂತಿಗೆ ಸಿಲುಕಿ ಆಘಾತ (ಎಲೆಕ್ಟ್ರಿಕಲ್‌ ಕ್ಯಾಟರ್ಯಾಕ್ಟ್) ಅಥವಾ ಆಂತರಿಕ ಒತ್ತಡದಿಂದ ಕಣ್ಣಿನ ಕಪ್ಪುಗುಡ್ಡೆ ಬೆಳ್ಳಗಾಗಿರುವುದು- ಈ ಎರಡರಲ್ಲೊಂದು ಕಾರಣದಿಂದ ಗರುಡ ದೃಷ್ಟಿ ಕಳೆದುಕೊಂಡಿರಬಹುದು. ವೈರಲ್‌ ಸೋಂಕು ಕೂಡ ಉಂಟಾಗಿದೆ ಎಂದು ಡಾ| ಕೃಷ್ಣಪ್ರಸಾದ್‌ ಹೇಳಿದ್ದಾರೆ.

ಐ ಡ್ರಾಪ್‌-ಪ್ರಾಥಮಿಕ ಚಿಕಿತ್ಸೆ
ತಪಾಸಣೆ ನಡೆಸಿದ ಬಳಿಕ ಡಾ| ಕೃಷ್ಣಪ್ರಸಾದ್‌ ಅವರು ಗರುಡನ ಕಣ್ಣಿನ ಕಪ್ಪುಗುಡ್ಡೆ ಶುದ್ಧಗೊಳಿ ಸುವ ಹಾಗೂ ಕಣ್ಣಿನ ಒತ್ತಡ ಕಡಿಮೆ ಮಾಡುವ ಔಷಧಿಯನ್ನು ಹಾಕಿದ್ದಾರೆ. ವೈದ್ಯರ ಸಲಹೆಯಂತೆ ಪ್ರತಿದಿನ ಮಠದಲ್ಲಿಯೇ ಐ ಡ್ರಾಪ್‌ ಹಾಕಲಾಗುತ್ತದೆ.

ವನ್ಯಜೀವಿ ಅಧಿಕಾರಿಗಳ ಭೇಟಿ
ಮಾಹಿತಿ ಪಡೆದ ವನ್ಯಜೀವಿ ವಿಭಾಗದ ಅಧಿ ಕಾರಿಗಳು ಮಠಕ್ಕೆ ಭೇಟಿ ಕೊಟ್ಟು ನಿಯಮದಂತೆ ನೀವಿದನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಸೂಚಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು ಹಕ್ಕಿಯನ್ನು ನೀವೇ ಕೊಂಡೊಯ್ದು ಆರೈಕೆ ಮಾಡಿ ಎಂದರು. ಆದರೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಅನಂತರ “ಈಗ ನೀವೇ ಆರೈಕೆ ಮಾಡಿ’ ಎಂದು ಹೇಳಿ ಹೋಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಹಕ್ಕಿಗಳು ಹೀಗೆ ಸಿಕ್ಕಿದಾಗ ಏನು ಮಾಡಬೇಕು. ವನ್ಯಜೀವಿ, ಪಕ್ಷಿಗಳಿಗೆ ಒದಗಿದ ತುರ್ತು ಸಂದರ್ಭಗಳಲ್ಲಿ ಹೇಗೆ ಸ್ಪಂದಿಸಬೇಕು ಎನ್ನುವ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಬೇಕು ಎಂದು ಪೇಜಾವರ ಶ್ರೀಗಳು ವಿನಂತಿಸಿಕೊಂಡಿದ್ದಾರೆ.

ಕಾನೂನಿನ ತೊಡಕಾಗದೇ?

ಪ್ರಾಣಿ, ಪಕ್ಷಿ ಪ್ರಭೇದ‌ಗಳ ರಕ್ಷಣೆ ಕುರಿತಂತೆ ಪ್ರತ್ಯೇಕ ಕಾನೂನು ಇರುವುದರಿಂದ ಕಾನೂನಿನ ತೊಡಕಾಗದೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಚರ್ಚಿಸಿದ್ದೇನೆ. ವೈದ್ಯನಾಗಿ ಮೊದಲು ಜೀವ ಉಳಿಸುವುದು ನನ್ನ ಕರ್ತವ್ಯ. ನಾನು ಉಚಿತವಾಗಿ ಗರುಡನಿಗೆ ಚಿಕಿತ್ಸೆ ನೀಡಲಿದ್ದೇನೆ. ಮನುಷ್ಯನ ಕಣ್ಣಿಗಿಂತ ಸಣ್ಣ ಕಣ್ಣಾಗಿರುವ ಕಾರಣ ಕ್ಲಿಪ್‌ ಸಣ್ಣದಾಗಬೇಕು. ಗರುಡನ ಕಣ್ಣಿನ ಶಸ್ತ್ರಚಿಕಿತ್ಸೆಗೆ ಬೇಕಾಗಬಹುದಾದ ಸಣ್ಣ ಸಲಕರಣೆಗಳನ್ನು ತಯಾರಿಸಿ ಕೊಡಲು ಕಂಪೆನಿಗೆ ತಿಳಿಸಿದ್ದೇನೆ. ಪಕ್ಷಿಯ ಸಂರಕ್ಷಣೆ ದೃಷ್ಟಿಯಲ್ಲಿ ಚಿಕಿತ್ಸೆ, ಪಾಲನೆ ಮಾಡುತ್ತಿರುವ ಕಾರಣ ಕಾನೂನು ತೊಡಕಾಗದು ಎಂದು ಡಾ| ಕೃಷ್ಣಪ್ರಸಾದ್‌ ಹೇಳುತ್ತಾರೆ.

ಗರುಡ: ಸಾಕುವುದೂ ಬಿಡುವುದೂ ಕಷ್ಟ
ಗರುಡ ಮಾಂಸಾಹಾರಿ. ತರಕಾರಿ, ಹಣ್ಣು ತಿನ್ನುವುದಿಲ್ಲ. ಹಾಗಾಗಿ ಅದನ್ನು ಸಾಕುವುದು ಕಷ್ಟ. ದೃಷ್ಟಿ ಕಳೆದುಕೊಂಡಿರುವ ಈ ಗರುಡನನ್ನು ಹಾಗೆಯೇ ಬಿಡುವುದು ಕೂಡ ಕಷ್ಟ. ಇನ್ನು ಅದು ವನ್ಯಜೀವಿಯಾಗಿ ಈ ಹಿಂದಿನಂತೆ ಬದುಕುವುದು ಕಷ್ಟಸಾಧ್ಯ. ಮನುಷ್ಯನಿಗೆ ನಿಕಟವಾಗಿ ಬದುಕಿದರೂ ಅಚ್ಚರಿ ಪಡಬೇಕಾಗಿಲ್ಲ. ವಲಸೆ ಹಕ್ಕಿಗಳಾದರೆ ಆಹಾರ ಸಿಗದಿದ್ದರೂ ದೇಹದಲ್ಲಿ ಶೇಖರವಾಗಿರುವ ಕೊಬ್ಬನ್ನು ಕರಗಿಸಿ ಬಳಸುತ್ತಾ ಹಲವು ದಿನಗಳ ವರೆಗೆ ಚೈತನ್ಯಭರಿತವಾಗಿ ಬದುಕುತ್ತವೆ. ಆದರೆ ಗಿಡುಗ- ಗರುಡಗಳು ನಿತ್ಯ ಆಹಾರ ಬಯಸುವುದರಿಂದ ಅದರ ದೇಹದ ಕೊಬ್ಬಿನಂಶದ ಮೇಲೆ ಬದುಕುವ ರೀತಿ ಅವಲಂಬನೆಯಾಗುತ್ತದೆ. 
ಡಾ| ಎನ್‌.ಎ. ಮಧ್ಯಸ್ಥ, ಪಕ್ಷಿ ಶಾಸ್ತ್ರಜ್ಞ

15 ದಿನಗಳ ಚಿಕಿತ್ಸೆಯ ಬಳಿಕ ಶಸ್ತ್ರಚಿಕಿತ್ಸೆ
ಬೆಳ್ಳಗಾಗಿ ಕಣ್ಣುಗಳನ್ನು ಆವರಿಸಿರುವ ಕಪ್ಪುಗುಡ್ಡೆಯು ಔಷಧದಿಂದಲೇ ಸರಿಹೋದರೆ ಗರುಡನಿಗೆ ಶೇ. 60-70 ರಷ್ಟು ದೃಷ್ಟಿ ಸಾಮರ್ಥ್ಯ ಮರಳ ಬಹುದು. ಹೀಗಾದರೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಿಲ್ಲ. ಕರಿಗುಡ್ಡೆ ಕಪ್ಪಾಗಿ ಪರಿವರ್ತನೆಗೊಂಡೂ ಹೊರಗಡೆಯಿಂದ ಪೊರೆ ಆವರಿಸಿ ಕಣ್ಣು ಕಾಣದೆ ಇದ್ದರೆ 15 ದಿನಗಳ ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಗು ವುದು. ಪಶುವೈದ್ಯರ ಜತೆಗೆ ಚರ್ಚಿಸ ಲಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯ ಉಂಟಾದರೆ ಅವರ ಸಹಕಾರ ಪಡೆಯಲಾಗುವುದು. ಗರುಡ, ಮಠದಲ್ಲಿಯೇ ಆರೈಕೆ ಪಡೆಯು ತ್ತಾನೆ, ಅಲ್ಲಿಗೇ ತೆರಳಿ ಚಿಕಿತ್ಸೆ ನೀಡಲಿದ್ದೇನೆ ಎಂದು ಡಾ| ಕೃಷ್ಣಪ್ರಸಾದ್‌ ಹೇಳಿದ್ದಾರೆ.

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.