ಇಂದು ವಿಭಿನ್ನ ಸಾಧಕರೊಂದಿಗೆ “ಜೀವನ ಕಥನ’

ಉದಯವಾಣಿ ಸುವರ್ಣ ವರ್ಷ; ಮಕ್ಕಳ ದಿನಾಚರಣೆ ಸಡಗರಕ್ಕೆ ಮಕ್ಕಳ ಸಂವಾದ

Team Udayavani, Nov 13, 2019, 4:25 AM IST

ಮಣಿಪಾಲ: ಸುವರ್ಣ ಸಂಭ್ರಮದಲ್ಲಿರುವ “ಉದಯವಾಣಿ’ಯು ಮಕ್ಕಳ ದಿನಾಚರಣೆಯನ್ನು ಇನ್ನಷ್ಟು ಅರ್ಥ ಪೂರ್ಣಗೊಳಿಸುವ ನೆಲೆಯಲ್ಲಿ ವಿವಿಧ ವೃತ್ತಿಗಳ ಸಾಧಕರ ಜತೆಗೆ “ಜೀವನ ಕಥನ’ ಮಕ್ಕಳ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಇದು ನ.13ರಂದು ಬೆಳಗ್ಗೆ 11 ಗಂಟೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ನಡೆಯಲಿದೆ.

ನಮ್ಮ ದೈನಿಕ ಬದುಕಿನ ಜತೆಗೆ ಹಾಸುಹೊಕ್ಕಾಗಿದ್ದು, ಅವುಗಳ ಕಾರ್ಯನಿರ್ವಹಣೆಯ ಸೂಕ್ಷ್ಮಗಳು, ಒಳನೋಟಗಳು ಮಕ್ಕಳಿಗೆ ಕುತೂ ಹಲಕಾರಿಯೂ ಮಾಹಿತಿಯುಕ್ತವೂ ಆಗಿರುವ ವಿಭಿನ್ನ ವೃತ್ತಿಗಳ ಸಾಧಕರು ಈ ಸಂವಾದ ಕಾರ್ಯ ಕ್ರಮವನ್ನು ನಡೆಸಿಕೊಡಲಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳು ಈ ಸಂವಾದಕ್ಕೆ ಆತಿಥ್ಯ ಒದಗಿಸಲಿವೆ. ವಿವಿಧ ಕ್ಷೇತ್ರಗಳ ಸಾಧಕರು ಆಗಮಿಸಿ ಕುತೂಹಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಸಂವಾದವನ್ನು ಅರ್ಥಪೂರ್ಣಗೊಳಿಸಲಿದ್ದಾರೆ. ಮಕ್ಕಳ ದಿನಾಚರಣೆಯನ್ನು ಸಂಭ್ರಮ ಮಾತ್ರಕ್ಕೆ ಸೀಮಿತ ಗೊಳ್ಳದೆ ಮಕ್ಕಳ ಜ್ಞಾನ ಮತ್ತು ಕೌಶಲವೃದ್ಧಿಗೆ ಪೂರಕವಾಗಬೇಕು ಎಂಬುದೇ ಕಾರ್ಯಕ್ರಮವನ್ನು ಆಯೋಜನೆಯ ಉದ್ದೇಶ.

ಕಾರ್ಯಕ್ರಮ ಎಲ್ಲೆಲ್ಲಿ ನಡೆಯಲಿದೆ ಮತ್ತು ಸಂವಾದ ನಡೆಸಿಕೊಡುವ ಸಾಧಕರ ವಿವರ ಹೀಗಿದೆ:


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ