ಉತ್ತರಿಸುವ ಮುನ್ನ ಪ್ರಶ್ನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ

ಉದಯವಾಣಿ ಫೋನ್‌ ಇನ್‌ ಕಾರ್ಯಕ್ರಮ

Team Udayavani, Mar 15, 2020, 6:48 AM IST

Phone-In-Puc

ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಉದಯವಾಣಿ ದಿನಪತ್ರಿಕೆಯು ಶುಕ್ರವಾರವೂ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಫೋನ್‌ ಇನ್‌ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಮಾಜಶಾಸ್ತ್ರದಲ್ಲಿ ಉಡುಪಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಶೇಖರ್‌, ಇಂಗ್ಲಿಷ್‌ನಲ್ಲಿ ಮುಂಡ್ಕೂರಿನ ವಿದ್ಯಾವರ್ಧಕ ಪ.ಪೂ. ಕಾಲೇಜಿನ ಶಿಕ್ಷಕ ಕೆ. ವಿವೇಕಾನಂದ ಹೆಗ್ಡೆ ಮತ್ತು ಕಾರ್ಕಳದ ಎಂ.ವಿ. ಶಾಸ್ತ್ರಿ ಹೈಸ್ಕೂಲಿನ ಶಿಕ್ಷಕ ಪ್ರಕಾಶ್‌ ರಾವ್‌, ಕನ್ನಡಕ್ಕೆ ಕಾವಡಿ ಸರಕಾರಿ ಪ.ಪೂ. ಕಾಲೇಜಿನ ಅಧ್ಯಾಪಕ ಕಿರಣ್‌ ಹೆಗ್ಡೆ ಮತ್ತು ಹಿಂದಿಯಲ್ಲಿ ಕಲ್ಯಾಣಪುರದ ಡಾ| ಟಿಎಂಎ ಪೈ ಹೈಸ್ಕೂಲಿನ ಶಿಕ್ಷಕ ವೆಂಕಟೇಶ್‌ ಎಚ್‌.ಎನ್‌. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಸಮಾಜಶಾಸ್ತ್ರ
 4 ಅಂಕಗಳ‌ ಪ್ರಶ್ನೆಗಳಿಗೆ ದೀರ್ಘ‌ ಉತ್ತರಗಳು ಪರೀಕ್ಷೆ ಕೊಠಡಿಯಲ್ಲಿ ಮರೆತು ಹೋಗುತ್ತವೆ. ಜ್ಞಾಪಕದಲ್ಲಿ ಇರಿಸಿಕೊಳ್ಳುವುದು ಹೇಗೆ?
-ಶ್ರೀಪ್ರಿಯಾ, ಪುತ್ತೂರು

ದೀರ್ಘ‌ ಉತ್ತರಗಳನ್ನು ಸರಿಯಾಗಿ ಗ್ರಹಿಸಿ ಕೊಂಡು ಓದಬೇಕು. ಮುಖ್ಯ ಅಂಶಗಳನ್ನು ಸರಳವಾಗಿ ಪಟ್ಟಿ ಮಾಡಿಕೊಳ್ಳಬೇಕು. ಆಗ ಮಾತ್ರ ಅದು ನಿಮ್ಮ ನೆನಪಿನಲ್ಲಿ ಉಳಿಯಲು ಸಾಧ್ಯ. ಮುಖ್ಯವಾಗಿ ಅದನ್ನು ಮತ್ತೆ ಮತ್ತೆ ಓದಬೇಕಾಗುತ್ತದೆ.

  4 ಅಂಕಗಳ ಪ್ರಶ್ನೆ ಕೇಳಬಹುದಾದ ಪ್ರಮುಖ ಪಾಠಗಳು ಯಾವುವು?
-ನಾಗರಾಜ್‌, ಕೋಟ
ಇತಿಹಾಸದಲ್ಲಿ 4 ಅಂಕದ 2 ಪ್ರಶ್ನೆಗಳಿರುತ್ತವೆ. ಅದರಲ್ಲಿ ಒಂದಕ್ಕೆ ಆಯ್ಕೆ ಇರುತ್ತದೆ. ರಾಜ್ಯ ಶಾಸ್ತ್ರ ಮತ್ತು ಭೂಗೋಳದಲ್ಲಿ 4 ಅಂಕಗಳ ತಲಾ ಒಂದು ಪ್ರಶ್ನೆ ಇರುತ್ತದೆ. ಇದಕ್ಕೆ ಆಯ್ಕೆ ಇಲ್ಲ. ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟ, ಗಾಂಧಿಯುಗ, ರಾಜ್ಯಶಾಸ್ತ್ರದಲ್ಲಿ ವಿಶ್ವಸಂಸ್ಥೆ ಯ ಮುಖ್ಯ ಗುರಿಗಳು, ಯುಎನ್‌ ಸಾಧನೆ, ಜನರಲ್‌ ಅಸೆಂಬ್ಲಿ ಮತ್ತು ಸೆಕ್ಯೂರಿಟಿ ಕೌನ್ಸಿ ಲ್‌ನ ಕಾರ್ಯವೈಖರಿ ಕುರಿತ ಪ್ರಶ್ನೆ ನಿರೀಕ್ಷಿಸಬಹುದು.

  ಭಾರತಕ್ಕೆ ಯೂರೋಪಿಯನ್ನರ ಆಗಮನ ಪಾಠದಲ್ಲಿ ಯಾವ ರೀತಿಯಾದ ಪ್ರಶ್ನೆಗಳನ್ನು ನಿರೀಕ್ಷಿಸಬಹುದು?
-ಸ್ವಾತಿ, ಕೋಟೇಶ್ವರ
ಈ ಬಾರಿ ಪರೀಕ್ಷೆಗೆ ನೀಲ ನಕಾಶೆ ಇಲ್ಲ. ಆದರೂ ಪಾಠದ ಆದ್ಯತೆಯ ಮೇಲೆ ಭಾರತಕ್ಕೆ ಯೂರೋಪಿಯನ್ನರ ಆಗಮನ ಪಾಠದ ಮೇಲೆ 1 ಅಂಕದ ಒಂದು ಪ್ರಶ್ನೆ ಮತ್ತು 2 ಅಂಕಗಳ ಪ್ರಶ್ನೆ ಬರುವ ಸಾಧ್ಯತೆ ಹೆಚ್ಚಿದೆ. ಇಲ್ಲಿ ಭಾರತಕ್ಕೆ ಯೂರೋಪಿಯನ್ನರ ಆಗಮನ ಮತ್ತು ಅದಕ್ಕೆ ಕಾರಣವಾದ ಅಂಶಗಳು, ಪರಿಣಾಮವೇನು, ಕಾನ್‌ಸ್ಟಾಂಟಿನೋಪಲ್‌ ಪತನ, ಪ್ಲಾಸಿ ಕದನದ ಕಾರಣ ಮತ್ತು ಪರಿಣಾಮ, ಬಕ್ಸಾರ್‌ ಕದನದ ಕಾರಣ ಮತ್ತು ಪರಿಣಾಮ, ದ್ವಿಮುಖ ಸರಕಾರದ ಪರಿಣಾಮಗಳು ಪ್ರಮುಖ ಪ್ರಶ್ನೆಗಳು.

  ಬ್ಯಾಂಕ್‌ ರೇಟ್‌ ಪಾಲಿಸಿ ಎಂದರೇನು?
-ಕುಮಾರ್‌, ದೊಡ್ಡಣಗುಡ್ಡೆ
ಆರ್‌ಬಿಐ ವಿವಿಧ ಬ್ಯಾಂಕ್‌ಗಳಿಗೆ ಬೇಕಾದ ಸಾಲಗಳನ್ನು ಯಾವ ಬಡ್ಡಿ ದರದಲ್ಲಿ ನೀಡುತ್ತದೆ ಅನ್ನುವುದು ಬ್ಯಾಂಕ್‌ ರೇಟ್‌ ಪಾಲಿಸಿ.

  ನಕಾಶೆ ಗುರುತಿಸುವಾಗ ಪ್ರದೇಶ ಗಳನ್ನು ನೇರವಾಗಿ ಕೊಡುತ್ತಾರೆಯೇ?
-ಸುಜಾನ್‌, ಕುಂದಾಪುರ
ಭೂಗೋಳ ವಿಭಾಗದಿಂದ ಮ್ಯಾಪ್‌ ನೀಡು ತ್ತಾರೆ. ಪಠ್ಯದ ವಿವರಣೆಯಲ್ಲಿ ನೀಡಿರುವ ಮತ್ತು ನಕಾಶೆಯಲ್ಲಿ ನೀಡಿರುವ ಸ್ಥಳಗಳನ್ನು ಮಾತ್ರ ಪರೀಕ್ಷೆಯಲ್ಲಿ ಕೊಡುತ್ತಾರೆ. ಎರಡು ಪ್ರಶ್ನೆಗಳನ್ನು ನೇರವಾಗಿ ಕೇಳಬಹುದು. ಉದಾ., ಭಾರತದ ಅತ್ಯಂತ ಉದ್ದವಾದ ನದಿ, ಗುರುತ್ವ ಅಣೆಕಟ್ಟು, ಭಾರತವನ್ನು ಸಮಭಾಗವಾಗಿ ವಿಭಜಿಸುವ ಅಕ್ಷಾಂಶ ರೇಖೆ ಯಾವುದು ಇತ್ಯಾದಿ.

  ಒಂದನೇ, ಎರಡನೇ ವಿಶ್ವ ಯುದ್ಧದ ಪರಿಣಾಮಗಳೇನು – ಪ್ರಶ್ನೆಗೆ ಹೇಗೆ ಉತ್ತರಿಸಬೇಕು?
-ದೀಕ್ಷಿತಾ, ಮಂಗಳೂರು
ಒಂದನೇ ವಿಶ್ವ ಯುದ್ಧದ ಪರಿಣಾಮಗಳನ್ನು ಬರೆಯುವಾಗ 5 ಕೋಟಿಯಷ್ಟು ಜನರು ಸಾವಿಗೀಡಾದರು ಮತ್ತು ಗಾಯಗೊಂಡರು. ಲಕ್ಷಾಂತರ ಮಂದಿ ನೋವುಗಳಿಗೆ ತುತ್ತಾದರು. ಅನೇಕ ಸ್ವತಂತ್ರ ರಾಷ್ಟ್ರಗಳು ಉದಯವಾದವು. ಆಸ್ಟ್ರೊ ಹಂಗರಿ ಸಾಮ್ರಾಜ್ಯ ಕಣ್ಮರೆಯಾಯಿತು. ಉಗ್ರ ರಾಷ್ಟ್ರೀಯತೆ ಬೆಳೆಯಿತು. ನಿರುದ್ಯೋಗ ಮತ್ತು ಬಡತನ ಮುಂತಾದ ಸಮಸ್ಯೆಗಳಿಗೆ ಕಾರಣವಾಯಿತು. ಹಿಟ್ಲರ್‌ನಂತಹ ಸರ್ವಾಧಿ ಕಾರಿಗಳ ಏಳಿಗೆಗೆ ಕಾರಣವಾಯಿತು. ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ನಷ್ಟ ಉಂಟಾಯಿತು. 1919 ವಸೈಲ್ಸ್‌ ಒಪ್ಪಂದಕ್ಕೆ ಸಹಿ ಹಾಕಲಾಯಿತು. ವಸೈìಲ್ಸ್‌ ಒಪ್ಪಂದ ದಡಿಯಲ್ಲಿ ಜರ್ಮನಿ ಸೇರಿದಂತೆ ಇತರ ದೇಶಗಳನ್ನು ಶಿಕ್ಷೆಗೆ ಗುರಿಪಡಿಸಲಾಯಿತು. ಲೀಗ್‌ ಆಫ್ ನೇಶನ್ಸ್‌ ಸ್ಥಾಪನೆಯಾಯಿತು, ಟರ್ಕಿ ವಿಭಜನೆಗೊಂಡಿತು – ಈ ಅಂಶಗಳನ್ನು ಬರೆಯಬೇಕು. ಎರಡನೇ ಮಹಾಯುದ್ಧದ ಪರಿಣಾಮವಾಗಿ ಯುಎನ್‌ಎ ಸ್ಥಾಪನೆ ಆಯಿತು. ಮೊದಲ ಮತ್ತು ಎರಡನೇ ವಿಶ್ವ ಯುದ್ಧದ ಕಾರಣ ಹಾಗೂ ಪರಿಣಾಮಗಳು ಇತಿಹಾಸದ ಕೊನೆಯ ಭಾಗದಲ್ಲಿ ಇವೆ. ಅದನ್ನು ಗಮನವಿಟ್ಟು ಓದಿಕೊಳ್ಳಬೇಕು.

  ಅಸ್ಪೃಶ್ಯತೆ ನಿವಾರಣೆಯಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಪಾತ್ರವೇನು? ಗಾಂಧಿ ಯುಗ ಪಾಠದಲ್ಲಿ ಎಷ್ಟು ಪ್ರಶ್ನೆಗಳು ಬರುತ್ತವೆ? 3‌ನೇ ಕರ್ನಾಟಕ ಯುದ್ಧದ ಪರಿಣಾಮವೇನು?
-ಸನ್ವಿತಾ, ಮಂಗಳೂರು
ಅಸ್ಪೃಶ್ಯತೆ ನಿವಾರಣೆಯಲ್ಲಿ ಅಂಬೇಡ್ಕರ್‌ ಕೊಡುಗೆಗಳನ್ನು ಟಿಪ್ಪಣಿ ಮಾಡಿಕೊಳ್ಳಬೇಕು. ಸಂವಿಧಾನ ರಚನೆಯ ಕುರಿತು ಬರೆಯಬೇಕು. ಗಾಂಧಿ ಯುಗದಲ್ಲಿ 4 ಅಂಕಗಳ ಪ್ರಶ್ನೆ ಬರುತ್ತದೆ. 3ನೇ ಕರ್ನಾಟಕ ಯುದ್ಧದಲ್ಲಿ ಪ್ಯಾರಿಸ್‌ ಒಪ್ಪಂದ, ಫ್ರೆಂಚರು ಅನೇಕ ಪ್ರದೇಶಗಳನ್ನು ಕಳೆದುಕೊಂಡು ಪಾಂಡಿಚೇರಿ, ಕಾರೈಕಲ್‌, ಮಾಹೆ ಪ್ರದೇಶಗಳಿಗೆ ಸೀಮಿತವಾದುದು, ಬ್ರಿಟಿಷರು ಬಲಿಷ್ಠರಾದುದು ಅಂಶಗಳನ್ನು ಬರೆಯಬೇಕು. ಗಾಂಧಿ ಯುಗದಲ್ಲಿ 3 ಅಂಕಗಳ ಪ್ರಶ್ನೆ ಕೇಳಬಹುದು. ಅಸಹಕಾರ ಚಳವಳಿ, ಬೆಳವಣಿಗೆ, ದಂಡಿ ಸತ್ಯಾಗ್ರಹ, ಕ್ವಿಟ್‌ ಇಂಡಿಯಾ ಚಳವಳಿ, ಸುಭಾಸ್‌ಚಂದ್ರ ಬೋಸ್‌, ನೆಹರೂ, ಅಂಬೇಡ್ಕರ್‌ ಬಗ್ಗೆ, ದಂಗೆಗಳು, ಬುಡಕಟ್ಟು ದಂಗೆಗಳ ಬಗ್ಗೆ ಕೇಳಬಹುದು.

  ಭಾರತದ ಸಮಸ್ಯೆಗಳು -ಪರಿಹಾರ ಗಳಲ್ಲಿ ಬರುವ ಪ್ರಶ್ನೆಗಳ್ಯಾವುವು?
-ನಾಗರತ್ನಾ, ಅಂಗರಗುಂಡಿ
ನಿರುದ್ಯೋಗದ ಕಾರಣ ಮತ್ತು ಪರಿಹಾರ, ಕೋಮುವಾದ ಸಮಾಜದ ಶತ್ರು ಹೇಗೆ, ಕೋಮುವಾದದ ಪರಿಣಾಮವೇನು, ಭಾರತ ದಲ್ಲಿ ಮಹಿಳೆಯರ ಸ್ಥಾನಮಾನ ಸುಧಾರಿಸಲು ಕೈಗೊಂಡ ಕ್ರಮಗಳೇನು, ಭ್ರಷ್ಟಾಚಾರಕ್ಕೆ ಕಾರಣ, ಪರಿಣಾಮ ಮತ್ತು ಪರಿಹಾರ ಉಪಾಯಗಳು, ಭಯೋತ್ಪಾದನೆಯ ಪರಿಣಾಮವೇನು, ಅದನ್ನು ನಿಯಂತ್ರಿಸುವುದು ಹೇಗೆ -ಈ ಎಲ್ಲ ಪ್ರಶ್ನೆಗಳು 3 ಅಂಕಗಳಿಗೆ ಬರುವ ಸಾಧ್ಯತೆ ಇದೆ.

  ಯಾವೆಲ್ಲ ಕಾಯ್ದೆಗಳನ್ನು ಪ್ರಾಮುಖ್ಯ ನೀಡಿ ಕಲಿಯಬೇಕು?
-ವಿಜಯಾ, ಉಡುಪಿ
1773ರ ರೆಗ್ಯುಲೇಟಿಂಗ್‌ ಕಾಯ್ದೆ, 1909ರ ಮಿಂಟೋ ಮಾರ್ಲೆ, 1919ರ ಮೋಂಟಾಗೋ, 1935ರ ಭಾರತ ಸರಕಾರದ ಕಾಯ್ದೆ ಸಂವಿಧಾನ ರೂಪಿಸುವಲ್ಲಿ ಮೈಲುಗಲ್ಲು- ಇವಿಷ್ಟು ಪರೀಕ್ಷೆಯ ದೃಷ್ಟಿಯಿಂದ ಪ್ರಾಮುಖ್ಯವಾಗಿವೆ.

  ಧಾರ್ಮಿಕ -ಸಾಮಾಜಿಕ ಸುಧಾರಣೆಗಳಿಂದ ಯಾವ ಪ್ರಶ್ನೆಗಳು ಬರಬಹುದು?
-ರಂಜಿತಾ, ಪುತ್ತೂರು, ಸನ್ವಿತಾ ಮಂಗಳೂರು
3 ಅಂಕಗಳ ಪ್ರಶ್ನೆಗಳು ಬರುವ ಸಾಧ್ಯತೆ ಇದೆ. ಮುಖ್ಯವಾಗಿ ಬ್ರಹ್ಮ ಸಮಾಜದ ಮುಖ್ಯ ಅಂಶಗಳು, ಆರ್ಯ ಸಮಾಜ, ಪ್ರಾರ್ಥನಾ ಸಮಾಜದ ಗುರಿಗಳು, ಸತ್ಯಶೋಧಕ ಸಮಾಜ, ರಾಮಕೃಷ್ಣ ಮಿಷನ್‌, ನಾರಾಯಣಗುರು ಅವರ ಧರ್ಮಪರಿಪಾಲನಾ ಯೋಗ ಮುಖ್ಯ. 2 ಅಂಕಗಳ ಪ್ರಶ್ನೆಗೆ 4 ಅಂಶಗಳನ್ನು ಬರೆಯಬೇಕು, 3 ಅಂಕಗಳ ಪ್ರಶ್ನೆಗೆ 6 ಅಂಶಗಳು, 4 ಅಂಕಗಳ ಪ್ರಶ್ನೆಗೆ 8 ಅಂಶಗಳು ಬರೆಯಬೇಕು.

ಇಂಗ್ಲಿಷ್‌
l  ಇಂಗ್ಲಿಷ್‌ನಲ್ಲಿ ಸ್ಟೋರಿ ಡೆವಲಪಿಂಗ್‌ ಯಾವ ರೀತಿ ಬರೆದರೆ ಒಳ್ಳೆಯದು?
 -ದುರ್ಗಾಸ್ವಾತಿ, ಬೈಲೂರು
3-4 ಅಂಕಗಳಿಗೆ ಬರುವ ಈ ರೀತಿಯ ಪ್ರಶ್ನೆಗಳಿಗೆ ಪ್ಯಾರಾಗ್ರಾಫ್ ಮಾಡಿ ವಿಸ್ತರಿಸಿ ಬರೆದರೆ ಒಳ್ಳೆಯದು. ಪ್ರಬಂಧ ಬರೆಯುವಾಗಲೂ 4 ಅಂಶಗಳನ್ನು ಪ್ರಧಾನವಾಗಿ ಇರಿಸಿ ವಿಸ್ತರಿಸುತ್ತಾ ಬರೆಯಬೇಕು. ಮುಖ್ಯ ಅಂಶಗಳಿದ್ದರೆ ಪ್ಯಾರಾಗ್ರಾಫ್ ಮಾಡಿದರೆ ಉತ್ತಮ.

  ಇಂಗ್ಲಿಷ್‌ ಪ್ರಬಂಧ ಹೇಗೆ ಬರೆಯಬೇಕು?
ರಾಮಾಜಿ, ಜಮಖಂಡಿ
ಪ್ರಬಂಧ ಬರೆಯುವ ಮುನ್ನ ಸ್ಪಷ್ಟವಾದ ಪೀಠಿಕೆ (introduction) ಇರಬೇಕು. ಉದಾಹರಣೆಗೆ, “ಎ ವಿಸಿಟ್‌ ಟು ಎ ಪ್ಲೇಸ್‌ ಇಂಟ್ರೆಸ್ಟ್‌’ ಎಂಬ ವಿಷಯವಾಗಿದ್ದರೆ ನಮ್ಮ ಉತ್ತರ ತಾಜ್‌ಮಹಲ್‌ ಕಟ್ಟಡದ ಬಗ್ಗೆ ಆಗಿದ್ದರೆ ನಮಗೆ ಗೊತ್ತಿರುವ 8-10 ಅಂಶಗಳನ್ನು ಬರೆಯಬೇಕು. ಕೊನೆಯಲ್ಲಿ ಒಂದು ಉಪಸಂಹಾರ ಅಥವಾ ಕನ್‌ಕ್ಲೂಶನ್‌ ಇದ್ದರೆ ಒಳ್ಳೆಯದು. ಇವಿಷ್ಟು ಅಲ್ಲದೆ ಈ ಬಾರಿ ಚಿತ್ರ ಬರವಣಿಗೆ (picture writing) ಎಂಬ ಹೊಸ ಮಾದರಿ ಯ ಪ್ರಶ್ನೆ ನೀಡಲಾಗಿದೆ. ಇದರಲ್ಲಿ ಮರ ಕಡಿಯುವಂತಹ ಚಿತ್ರವಿದ್ದರೆ ಆ ಬಗ್ಗೆ ಒಮ್ಮೆ ಕಲ್ಪಿಸಿಕೊಳ್ಳಬೇಕು. ಮರಗಳ ಬಗ್ಗೆ, ಅರಣ್ಯಗಳ ಬಗ್ಗೆ ನಮಗೆ ತಿಳಿದಿರುವ ವಿಚಾರಗಳನ್ನು ಪ್ರಸ್ತಾವಿಸಿದರೆ ಉತ್ತಮ. ಸ್ಟೋರಿ ಡೆವಲಪ್‌ ಮಾಡುವಾಗ ಹೆಚ್ಚು ಪಾಯಿಂಟ್ಸ್‌ಗಳಿದ್ದರೆ ಆ ಬಗ್ಗೆ ವಿವರಣೆಯನ್ನೂ ಬರೆಯಬೇಕಾಗುತ್ತದೆ. ಗ್ರಾಮರ್‌ ಸಹಿತ ವಿಷಯಕ್ಕೆ ಹೆಚ್ಚು ಒತ್ತು ನೀಡಬೇಕು. ಪ್ರಬಂಧ, ಚಿತ್ರ ಬರವಣಿಗೆಗಳನ್ನು ಬರೆಯುವಾಗ ನಮ್ಮ ಸ್ವಂತಿಕೆಯೂ ಹೆಚ್ಚು ಪ್ರಾಮುಖ್ಯ ವಹಿಸುತ್ತದೆ.

  ಇಂಗ್ಲಿಷ್‌ ಗ್ರಾಮರ್‌ ಪ್ರಶ್ನೆಗಳು ಪೂರ್ವಸಿದ್ಧತ ಪರೀಕ್ಷೆಯಲ್ಲಿ ಬಂದಂತೆಯೇ ಬರುತ್ತವೆಯೇ?
-ಪ್ರಭುಶಂಕರ್‌, ಮಂಗಳೂರು
ಪ್ರಶ್ನೆಗಳು ಅದೇ ಮಾದರಿಯಲ್ಲಿರುತ್ತವೆ. ಮೊದಲ ನಾಲ್ಕು ಪ್ರಶ್ನೆಗಳು ಬಹು ಆಯ್ಕೆಯ ಪ್ರಶ್ನೆಗಳಾಗಿರುತ್ತವೆ. ಬಿಟ್ಟ ಪದ ತುಂಬಿಸುವುದು,jumbled letters ಸಹಿತ verb-noun ಗಳನ್ನು ತಿಳಿದುಕೊಂಡರೆ ಒಳ್ಳೆಯದು. 2 ಅಂಕಗಳ ಪ್ರಶ್ನೆಗಳನ್ನು ಹೆಚ್ಚು ತಿಳಿದುಕೊಳ್ಳಬೇಕು. ಪದ್ಯ ವಿಷಯದಲ್ಲಿ 4 ಅಂಕಗಳ ಪ್ರಶ್ನೆಗಳಿರುತ್ತವೆ. ಕನಿಷ್ಠ 3 ಪದ್ಯಗಳ (Grand ma climbs a tree, Jazz poem 2, The Song of India) ಸಾರಾಂಶಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು.

  ಯಾವ ವಿಷಯದಿಂದ ಪ್ರಬಂಧಗಳನ್ನು ಕೇಳಬಹುದು?
-ಮನಿಷಾ, ಮುದರಂಗಡಿ
ಇಂಗ್ಲಿಷ್‌ ವಿಷಯದಲ್ಲಿ ಪರಿಸರಕ್ಕೆ ಹಾನಿ ಸಂಬಂಧಿ ಸಿದಂತೆ Ban on Plastic, Environmental Pollution, Swach Bharath or The importance of cleanliness ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು.

ಸಿಂಪಲ್‌ ಸೆಂಟೆನ್ಸ್‌ (simple sentence) ಬಗ್ಗೆ ತಿಳಿಸುವಿರಾ?
 -ರಾಶಿ, ಹಿರಿಯಡ್ಕ
ಸಿಂಪಲ್‌ ಸೆಂಟೆನ್ಸ್‌ಗೆ ಲಿಂಕರ್‌ಗಳ ಮೂಲಕ ಶಬ್ದಗಳ ಜೋಡಣೆ ಮಾಡಬೇಕು. ಸಿಂಪಲ್‌ ಸೆಂಟೆನ್ಸ್‌ಗೆ ಕಾಂಪ್ಲೆಕ್ಸ್‌ ಶಬ್ದವನ್ನು ಬಳಕೆ ಮಾಡಬಾರದು. ಸಿಂಪಲ್‌ ಸೆಂಟೆನ್ಸ್‌ನಲ್ಲಿ stepping into the classroom teacher started teaching ವಾಕ್ಯವನ್ನು ಲಿಂಕರ್‌ ಮೂಲಕ ಸೇರಿಸಿದಾಗ Teacher entered the classroom and started teaching ಆಗುತ್ತದೆ.

  ಡಿಸ್ಕವರಿ, ಅಂಬೇಡ್ಕರ್‌ ಪಾಠಗಳಿಂದ ಯಾವ ಪ್ರಶ್ನೆ ಬರಬಹುದು?
-ವೈಷ್ಣವಿ, ಕಾರವಾರ
“ಡಿಸ್ಕವರಿ’ ಪಾಠದಿಂದ ಎಕ್ಸ್‌ಟ್ರ್ಯಾಕ್ಟ್ಗೆ 15ರಿಂದ 16 ಪ್ರಶ್ನೆಗಳು ಬರಬಹುದು. 2 ಅಂಕಗಳ ಪ್ರಶ್ನೆಗಳನ್ನೇ ಹೆಚ್ಚಾಗಿ ಕೇಳುತ್ತಾರೆ. 4 ಅಂಕಗಳ ಪ್ರಶ್ನೆಗಳನ್ನು ಕೇಳುವುದು ಕಡಿಮೆ. ಅಂಬೇಡ್ಕರ್‌ ಪಾಠದಿಂದ 2 ಅಂಕಗಳ‌ ಪ್ರಶ್ನೆಗಳು ಬರುತ್ತವೆ. ಎಕ್ಸ್‌ಟ್ರ್ಯಾಕ್ಟ್ ಕೇಳುವ ಸಾಧ್ಯತೆಗಳಿವೆ. 4 ಅಂಕಗಳ ಪ್ರಶ್ನೆಗಳಿಗೆ ಈ ಪಾಠದಲ್ಲಿ ಅಧಿಕ ಆದ್ಯತೆ ಇರುವುದಿಲ್ಲ.

  ಇಂಗ್ಲಿಷ್‌ನಲ್ಲಿ ಗ್ರಾಮರ್‌ ಯಾವ ರೀತಿ ಬರಬಹುದು?
-ತೃಪ್ತಿ, ಸುರತ್ಕಲ್‌
ಬೋರ್ಡ್‌ ನಡೆಸಿದ ಪೂರ್ವಸಿದ್ಧತ ಪರೀಕ್ಷೆಯಲ್ಲಿ ಬಂದಂತೆ ಮಲ್ಟಿಪಲ್‌ ಚಾಯ್ಸ ಪ್ರಶ್ನೆಗಳು ಇರುತ್ತವೆ. ಉಳಿದಂತೆ ಬಿಟ್ಟಪದ ತುಂಬುವುದು ಬರಬಹುದು. ಗ್ರಾಮರ್‌ಗೆ 12 ಪ್ರಶ್ನೆಗಳು ಬರುತ್ತವೆ. ಪ್ರತೀ ಪಾಠದ ಕೊನೆಯ ಗ್ಲಾಸರಿಯಿಂದ 1 ಅಂಕದ ಪ್ರಶ್ನೆಗಳು ಬರುತ್ತವೆ. Active voice, passive voice ಬಗ್ಗೆ ಹೆಚ್ಚು ತಿಳಿದುಕೊಂಡರೆ ಒಳ್ಳೆಯದು. ವ್ಯಂಜನ ಪದಗಳು, ಸ್ವರಾಕ್ಷರಗಳನ್ನು ಸರಿಯಾಗಿ ತಿಳಿದುಕೊಂಡಿರಬೇಕು.

ಇವನ್ನು ಗಮನಿಸಿ
  ಈ ವರ್ಷ ವಿದ್ಯಾರ್ಥಿಗಳು ಲೆಟರ್‌ ರೈಟಿಂಗ್‌ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕಾರಣ ಅತಿ ಹೆಚ್ಚು 5 ಅಂಕಗಳನ್ನು ಇದಕ್ಕೆ ನಿಗದಿಪಡಿಸಲಾಗಿದೆ.
  ಕನಿಷ್ಠ ಒಂದು ಪದ್ಯವನ್ನಾದರೂ ಕಂಠಪಾಠ ಮಾಡಬೇಕು. ಕ್ವಾಲಿಟಿ ಆಫ್ ಮರ್ಸಿ ಆರ್‌ ದಿ ಬ್ಲೆ„ಂಡ್‌ ಬಾಯ್‌ ಈ ಎರಡರಲ್ಲಿ ಒಂದು ಪದ್ಯವನ್ನಾದರೂ ಕಂಠಪಾಠ ಮಾಡಬೇಕು.

ಕನ್ನಡ
  ಲೋಪ ಸಂಧಿ ಎಂದರೇನು?
-ಸ್ವಾತಿ, ಹಿರಿಯಡ್ಕ
ಎರಡು ಶಬ್ದಗಳು ಸೇರಿ ಸಂಧಿಯಾಗುತ್ತದೆ. ಪೂರ್ವಪದದ ಕೊನೆಯ ಸ್ವರವು ಬಿಟ್ಟು ಹೋಗಿ ಒಂದೇ ಪದವಾಗುವುದನ್ನು ಲೋಪ ಸಂಧಿ ಅನ್ನುತ್ತಾರೆ. ಉದಾ: ನಾವು +ಎಲ್ಲ = ನಾವೆಲ್ಲ (“ಉ’ ಕಾರ ಲೋಪ), ಬೇರೆ+ ಒಂದು =ಬೇರೊಂದು (“ಎ’ ಕಾರ ಲೋಪ ಸಂಧಿ).

   ಸಂದರ್ಭ ಸಹಿತ ವಿವರಿಸಿ ಪ್ರಶ್ನೆಗೆ ಹೇಗೆ ಉತ್ತರಿಸಬೇಕು? ಕವಿ ಪರಿಚಯ ಪ್ರಶ್ನೆಯನ್ನು ಉತ್ತರಿಸುವುದು ಹೇಗೆ?
-ವಿಂಧ್ಯಾ, ಕುಂದಾಪುರ
ಪಾಠ ಮತ್ತು ಪದ್ಯ ಭಾಗದಿಂದ ತಲಾ ಮೂರು ಸಂದರ್ಭ ಹೇಳಿಕೆಗಳು ಬರುತ್ತವೆ. ಸಂದರ್ಭ ಬರೆ
ಯುವಾಗ ಮೊದಲು ಆ ವಾಕ್ಯದ ಕವಿ, ಆಯ್ದುಕೊಂಡ ಕೃತಿ, ಪಾಠ/ ಪದ್ಯದ ಹೆಸರನ್ನು ಬರೆಯಬೇಕು. ಆ ಹೇಳಿಕೆಯನ್ನು ಯಾರು, ಯಾರಿಗೆ, ಯಾವಾಗ ಹೇಳಿದರು ಎಂಬುದನ್ನು ಬರೆಯಬೇಕು. ಆ ಹೇಳಿಕೆಯ ಸ್ವಾರಸ್ಯವನ್ನು ಒಂದೆರಡು ವಾಕ್ಯಗಳಲ್ಲಿ ನಿಮ್ಮ ಮಾತಿನಲ್ಲಿ ಬರೆಯಬೇಕು.
 ಕವಿ ಪರಿಚಯ ಮಾಡುವಾಗ ವಾಕ್ಯರೂಪ ದಲ್ಲಿ ಬರೆಯಬೇಕು. ಮೊದಲು ಕವಿಯ ಸ್ಥಳ, ಕಾಲ ಹಾಗೂ ಎರಡು ಯಾವುದಾದರೂ ಕೃತಿ ಗಳನ್ನು ಹಾಗೂ ಪ್ರಶಸ್ತಿ ಬರೆಯಬೇಕು.

  ರೂಢನಾಮ ಮತ್ತು ಅಂಕಿತನಾಮ ಎಂದರೇನು?
-ರಶ್ಮಿ, ಹಿರಿಯಡ್ಕ
  ರೂಢಿಯಿಂದ ಬಂದ ಸಾಮಾನ್ಯ ವಾಚಕ ಗಳು ರೂಢನಾಮಗಳು. ಉದಾ.: ನದಿ, ಬೆಟ್ಟ, ಮನೆ, ಶಾಲೆ.
  ಉಪಯೋಗಕ್ಕೆ ಇರಿಸಿಕೊಂಡ ಹೆಸರು ಗಳೆಲ್ಲ ಅಂಕಿತ ನಾಮಗಳು. ಉದಾ.: ಸೀತಾ, ಚಂದ್ರ, ರಾಜು ಇತ್ಯಾದಿ.

   ಕಂಠಪಾಠ ಪದ್ಯ ಮತ್ತು ಸಾರಾಂಶ ಬರೆಯಲು ಯಾವ ಪದ್ಯಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಬೇಕು?
-ಸನೀಟಾ ಡಿ’ಸೋಜಾ, ಮಂಗಳೂರು
  ಪದ್ಯಭಾಗದಲ್ಲಿ ಒಟ್ಟು 8 ಪದ್ಯಗಳಲ್ಲಿ 16 ಪ್ಯಾರಾಗಳು ಕಂಠಪಾಠಕ್ಕಿವೆ. ಇವುಗಳಲ್ಲಿ ಪ್ರತೀ ಪದ್ಯದಿಂದ ಒಂದೊಂದು ಪ್ಯಾರಾ ವನ್ನು ಕಲಿತರೆ ಸಾಕು, ಪೂರ್ಣ ಅಂಕ ಸಿಗುತ್ತದೆ.
  ಸಾರಾಂಶ ಬರೆಯಲು ಸಾಮಾನ್ಯವಾಗಿ ಜಿ. ಎಸ್‌. ಶಿವರುದ್ರಪ್ಪನವರ “ಸಂಕಲ್ಪ ಗೀತೆ’ ಅನ್ನುವ ಪದ್ಯಭಾಗದಿಂದ ಕೇಳುವ ಸಾಧ್ಯತೆ ಇದೆ.

ಗಾದೆ ಮಾತು ಮತ್ತು ಪ್ರಬಂಧವನ್ನು ಬರೆಯುವ ಕ್ರಮ ಹೇಗೆ?
-ರಮೇಶ, ಹಾಸನ
ಪಠ್ಯಪುಸ್ತಕದಲ್ಲಿ ಹತ್ತು ಗಾದೆಗಳು ಇವೆ. ಅವುಗಳಲ್ಲಿ ಒಂದನ್ನು ಕೇಳಬಹುದು. ಇದಲ್ಲದೆ ಪಠ್ಯದ ಹೊರಗಿನಿಂದ ಒಂದು ಗಾದೆ ಮಾತು ಕೇಳುತ್ತಾರೆ. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಬರೆಯಬೇಕು. ಗಾದೆಯ ಅರ್ಥವನ್ನು ಎರಡು ವಾಕ್ಯಗಳಲ್ಲಿ ಮೊದಲು ಬರೆದು ಅನಂತರ ಅದರ ಸ್ವಾರಸ್ಯವನ್ನು ಬರೆಯಬೇಕು. ಪ್ರಬಂಧ ಬರೆಯುವಾಗ ಪಠ್ಯಪುಸ್ತಕದಲ್ಲಿ ಸೈದ್ಧಾಂತಿಕ ಭಾಷಾಭ್ಯಾಸದಲ್ಲಿ ಕೊಟ್ಟಿರುವ ವಿಷಯಗಳ ಜತೆಗೆ ಪ್ರಚಲಿತ ವಿಷಯಗಳ ಬಗ್ಗೆ ಕೇಳಲಾಗುತ್ತದೆ. ಅವುಗಳಲ್ಲಿ ಒಂದು ವಿಷಯವನ್ನು ಆಯ್ಕೆ ಮಾಡಿ ಬರೆಯಬೇಕು. ಮೂರು ಪ್ಯಾರಾಗಳಲ್ಲಿ ಬರೆಯುವುದು ಸೂಕ್ತ. ಮೊದಲ ಪ್ಯಾರಾದಲ್ಲಿ ಪೀಠಿಕೆ/ ಪ್ರವೇಶವನ್ನು ನಾಲ್ಕೈದು ವಾಕ್ಯಗಳಲ್ಲಿ ಬರೆಯಬೇಕು. ಅನಂತರ 2ನೇ ಪ್ಯಾರಾದಲ್ಲಿ ಪ್ರಬಂಧದ ಬೆಳವಣಿಗೆ ಮತ್ತು 3ನೇ ಪ್ಯಾರಾದಲ್ಲಿ ಮುಕ್ತಾಯ/ ಉಪಸಂಹಾರವನ್ನು ನಿಮ್ಮ ಅಭಿಪ್ರಾಯವಾಗಿ ಬರೆಯಬೇಕು.

  ಪತ್ರಲೇಖನ ಹೇಗೆ ಬರೆಯಬೇಕು?
-ಶ್ರೀನಿಧಿ, ಸುಳ್ಯ
ಪತ್ರಗಳಲ್ಲಿ 2 ವಿಷಯಕ್ಕೆ ಕೇಳಿರುತ್ತಾರೆ. ಒಂದು ವ್ಯಾವಹಾರಿಕ ಪತ್ರ, ಇನ್ನೊಂದು ಖಾಸಗಿ ಪತ್ರ. ಇದರಲ್ಲಿ ವ್ಯಾವಹಾರಿಕ ಪತ್ರ ಬರೆದರೆ ಪೂರ್ಣ ಅಂಕ ಸುಲಭವಾಗಿ ಪಡೆಯಬಹುದು. ಇದಕ್ಕಾಗಿ ಇಂದ, ರಿಗೆ, ಮಾನ್ಯರೇ, ವಿಷಯ, ಒಕ್ಕಣೆ ಮತ್ತು ಕೊನೆಯಲ್ಲಿ ದಿನಾಂಕ, ಸ್ಥಳ, ಹೊರ ವಿಳಾಸ ಬರೆದರೆ ಸಾಕಾಗುತ್ತದೆ.

  ಕನ್ನಡದಲ್ಲಿ 100 ಅಂಕ ಗಳಿಸುವುದು ಹೇಗೆ?
-ವಿದ್ಯಾ, ಉಡುಪಿ
ಇಡೀ ಪಠ್ಯಪುಸ್ತಕಕ್ಕೆ ಹೆಚ್ಚು ಗಮನ ಕೊಟ್ಟು
ಅಭ್ಯಾಸ ಮಾಡಬೇಕು. ಪಠ್ಯದಲ್ಲಿರುವ ಅಭ್ಯಾಸ ಪ್ರಶ್ನೆಗಳ ಜತೆಗೆ ಪಾಠದ ಮಧ್ಯದ ಪ್ರಶ್ನೆಗಳು, ಹೇಳಿಕೆಗಳನ್ನು ಕೇಳುವುದರಿಂದ ಇಡೀ ಪಠ್ಯಪುಸ್ತಕವನ್ನು ಓದಬೇಕು. ಎಲ್ಲ ಪಾಠ ಮತ್ತು ಪದ್ಯಗಳ ಕೊನೆಯಲ್ಲಿರುವ ಸೈದ್ಧಾಂತಿಕ ಭಾಷಾಭ್ಯಾಸದ ಪ್ರಶ್ನೆಗಳಿಗೆ ಹೆಚ್ಚು ಗಮನ ಕೊಡಬೇಕು.
  ವ್ಯಾಕರಣ ಮತ್ತು ಒಂದು ಅಂಕದ ಪ್ರಶ್ನೆಗಳಿಗೆ ಹೆಚ್ಚು ಗಮನ ಕೊಡಬೇಕು.
  ಪ್ರಶ್ನೆಗಳಿಗೆ ಪೂರ್ಣವಾಕ್ಯಗಳಲ್ಲಿ ಉತ್ತರಿಸ ಬೇಕು. ಸುಂದರವಾದ ಅಕ್ಷರಗಳಲ್ಲಿ ತಪ್ಪಿಲ್ಲದಂತೆ ಬರೆಯಬೇಕು.
  ಭಾಷಾ ಶುದ್ಧಿ ಮತ್ತು ಶೈಲಿಗೆ ಹೆಚ್ಚು ಮಹತ್ವ ಕೊಟ್ಟು ಬರೆದರೆ ನೂರಕ್ಕೆ ನೂರು ಅಂಕಗಳನ್ನು ಪಡೆಯುವ ಸಾಧ್ಯತೆಯಿರುತ್ತದೆ.

ಹಿಂದಿ
ಹಿಂದಿಯಲ್ಲಿ ಗ್ರಾಮರ್‌ ಹೇಗೆ ಕೇಳಬಹುದು? “ಮೇರಾ ಬಚ್‌ಪನ್‌’ನಿಂದ ಯಾವ ಪ್ರಶ್ನೆ ಕೇಳಬಹುದು?
-ಸುಶ್ಮಿತಾ, ಕುಂದಾಪುರ
ಹಿಂದಿ ಗ್ರಾಮರ್‌ಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡುತ್ತಾರೆ. ಸಂಧಿ, ಸಮಾಸ, ಪ್ರೇರಣಾರ್ಥಗಳಿಂದ 1 ಅಂಕದ ಪ್ರಶ್ನೆಗಳನ್ನು ಕೇಳಬಹುದು. “ಮಾತೃಭೂಮಿ’ ಪದ್ಯದಿಂದ 2-3 ಅಂಕಗಳ ಪ್ರಶ್ನೆಗಳು ಬರಬಹುದು. “ಅಭಿನವ ಮನುಷ್ಯ’ 2-3 ಅಂಕಕ್ಕೆ ಕೇಳಬಹುದು. “ಕರ್ನಾಟಕ ಸಂಪದ’ದಲ್ಲಿ 3-4 ಅಂಕಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು. “ಇಮಾನ್‌ದಾರ್‌ ಕೀ ಸಮ್ಮೇಲನ್‌’ದಿಂದ 2-3 ಅಂಕಗಳ‌ ಪ್ರಶ್ನೆಗಳು ಬರಬಹುದು. “ಬಸಂತ್‌ ಕೀ ಸಚ್ಚಾಯಿ’ಯಿಂದ ಬಸಂತ್‌ ಇಮಾನ್‌ದಾರ್‌ ಲಡಾR ಹೈ ಕೈಸೇ ಅಥವಾ “ರಾಜ್‌ಕಿಶೋರ್‌ ಕಿ ಮಾನವೀಯ ಗುಣ್‌’ಗಳ ಬಗ್ಗೆ ಕೇಳಬಹುದು. “ರೊಬೋಟ್‌’ ಪಾಠದಿಂದಲೂ 2-3 ಅಂಕಗಳ ಪ್ರಶ್ನೆಗಳನ್ನು ಕೇಳಬಹುದು.

*ಹಿಂದಿಯಲ್ಲಿ ನಾಲ್ಕು ಅಂಕಗಳ ಕೇಳಬಹುದಾದ ಪ್ರಶ್ನೆಗಳನ್ನು ತಿಳಿಸುವಿರಾ?
-ಮೆಲಿಸಾ, ಮುದರಂಗಡಿ
“ಕರ್ನಾಟಕ ಸಂಪದ’, “ಇಂಟರ್‌ನೆಟ್‌ ಕ್ರಾಂತಿ’ಯಿಂದ ಹೆಚ್ಚಾಗಿ ಪ್ರಶ್ನೆಗಳು ಬರುವ ಸಾಧ್ಯತೆಗಳಿವೆ. ಅದಕ್ಕಾಗಿ ಪಾಠದ ಕೊನೆಯಲ್ಲಿ ಕೇಳಿರುವ ಪ್ರಶ್ನೆಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು. “ಇಂಟರ್‌ನೆಟ್‌ ಕ್ರಾಂತಿ’ ಬಗೆಗಿನ ಮಾಹಿತಿಗಳನ್ನೂ ಕೇಳುವ ಸಾಧ್ಯತೆಗಳಿವೆ. ಪ್ರಬಂಧಕ್ಕೆ ಹಿಂದಿ ವಿಷಯದಲ್ಲಿ ಇಂಟರ್‌ನೆಟ್‌ ಕ್ರಾಂತಿ ಆಧಾರಿತ ವಿಚಾರಗಳು, ಪರಿಸರಕ್ಕೆ ಸಂಬಂಧಿಸಿದವುಗಳು, ಸ್ವತ್ಛ ಭಾರತದ ಬಗೆಗಿನ ಪ್ರಶ್ನೆಗಳನ್ನು ಕೇಳಬಹುದು. ಪಠ್ಯಪುಸ್ತಕದ ಕೊನೆಯಲ್ಲಿ ಕೇಳಿರುವ ಅಭ್ಯಾಸ ಪ್ರಬಂಧಗಳನ್ನು ಕೂಡ ಕೇಳಬಹುದು.

*3-4 ಅಂಕಗಳಿಗೆ ಬರುವ ಪ್ರಶ್ನೆಗಳಿಗೆ ಪಾಯಿಂಟ್ಸ್‌ಗಳು ಅಗತ್ಯವೇ?
-ಪ್ರತೀಕ್ಷಾ, ಬಂಟ್ವಾಳ
ಪಾಯಿಂಟ್ಸ್‌ಗಿಂತಲೂ ವಾಕ್ಯರೂಪದಲ್ಲಿದ್ದರೆ ಒಳ್ಳೆಯ ದು. ಪ್ರಬಂಧಕ್ಕೆ ನೀಡಲಾಗಿರುವ 4 ಪಾಯಿಂಟ್‌ಗಳಲ್ಲಿ ಒಂದೊಂದು ಪಾಯಿಂಟ್‌ಗೆ ಸಂಬಂಧಿಸಿ ವಾಕ್ಯ ಗಳಲ್ಲಿ ಉತ್ತರ ಬರೆಯಬಹುದು. ಭಾಷೆಗೆ ಅದರದ್ದೇ ಆದ ಸೊಬಗಿದೆ. ಅದಕ್ಕಾಗಿ ವಾಕ್ಯ ರೂಪದಲ್ಲಿ ಉತ್ತರ ನೀಡಿದರೆ ಒಳ್ಳೆಯದು. ಪ್ರಬಂಧಾತ್ಮಕ ಉತ್ತರಗಳೇ ಹೆಚ್ಚು ಸೂಕ್ತ. ಭಾವಾರ್ಥಕ್ಕೆ 2 ಪ್ಯಾರಾ ಇದ್ದರೆ ಒಳ್ಳೆಯದು.

ಉಳಿದಂತೆ ಹಿಂದಿಯ “ಕಾಶ್ಮೀರಿ ಸೇಬ್‌’ ಪಾಠದಿಂದ 2 ಅಂಕಗಳ ಪ್ರಶ್ನೆ, ಪ್ರಬಂಧದಲ್ಲಿ “ಸ್ವತ್ಛ ಭಾರತ್‌’, “ಇಂಟರ್‌ನೆಟ್‌ ಕ್ರಾಂತಿ’ ಬಗ್ಗೆ ಬರಬಹುದು. ಪಠ್ಯಪುಸ್ತಕದ ಕೊನೆಯ ಲ್ಲಿರುವ ನಾಲ್ಕು ಉದಾಹರಣೆಗಳನ್ನು ಕೇಳಬಹುದು. ಸಂಸ್ಕೃತದಲ್ಲೂ ಪ್ರಬಂಧಕ್ಕೆ ಪ್ಯಾರಾಗ್ರಾಫ್ನಲ್ಲಿ ಉತ್ತರ ನೀಡಬೇಕು. ಕಂಠಪಾಠಕ್ಕೆ ನಿಗದಿ ಮಾಡಿರುವ ಪದ್ಯವನ್ನೇ ಕೇಳುತ್ತಾರೆ.

ಟಾಪ್ ನ್ಯೂಸ್

ra Ga

ಬಿಜೆಪಿಯ ‘ದ್ವೇಷ’ದ ರಾಜಕಾರಣ ದೇಶಕ್ಕೆ ಅತ್ಯಂತ ಹಾನಿಕಾರಕ:ರಾಹುಲ್ ಗಾಂಧಿ

1-assadsa

ಯುಪಿ: ಮಾಜಿ ಐಪಿಎಸ್ ಅಧಿಕಾರಿ ಅಸೀಮ್ ಅರುಣ್ ಬಿಜೆಪಿಗೆ ಸೇರ್ಪಡೆ

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

Untitled-1

ಸಂಕೇಶ್ವರ: ಮಹಿಳೆಯೋರ್ವಳ ಗುಂಡಿಕ್ಕಿ ಹತ್ಯೆ; ಬೆಚ್ಚಿ ಬಿದ್ದ ಗ್ರಾಮಸ್ಥರು

ಕಾಫಿನಾಡಿನ 27 ಪೊಲೀಸರಿಗೆ ಕೋವಿಡ್ ಪಾಸಿಟಿವ್

ಕಾಫಿನಾಡಿನ 27 ಪೊಲೀಸರಿಗೆ ಕೋವಿಡ್ ಪಾಸಿಟಿವ್

baby

ಬೆಳಗಾವಿ: ಚುಚ್ಚುಮದ್ದು ಪಡೆದ ಬಳಿಕ ಮೂರು ಶಿಶುಗಳ ನಿಗೂಢ ಸಾವು; ತನಿಖೆ ಆರಂಭ

1wer

ಭಯಗೊಳ್ಳದೆ ಚುನಾವಣೆ ಎದುರಿಸಿ: ಅರ್ಚನಾಗೆ ಧೈರ್ಯ ತುಂಬಿದ ಪ್ರಿಯಾಂಕಾ ಗಾಂಧಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸೆಸೆಲ್ಸಿ: ಈ ಬಾರಿ ಪೂರ್ಣ ಪ್ರಮಾಣದ ಪರೀಕ್ಷೆ

ಎಸೆಸೆಲ್ಸಿ: ಈ ಬಾರಿ ಪೂರ್ಣ ಪ್ರಮಾಣದ ಪರೀಕ್ಷೆ

ವಾರಾಂತ್ಯ ಕರ್ಫ್ಯೂ: ಬಹುತೇಕ ವಾಣಿಜ್ಯ ಚಟುವಟಿಕೆ ಸ್ತಬ್ಧ

ವಾರಾಂತ್ಯ ಕರ್ಫ್ಯೂ: ಬಹುತೇಕ ವಾಣಿಜ್ಯ ಚಟುವಟಿಕೆ ಸ್ತಬ್ಧ

ಶ್ರೀಕೃಷ್ಣ ಮಠದಲ್ಲಿ ಚೂರ್ಣೋತ್ಸವ ಸಂಪನ್ನ

ಶ್ರೀಕೃಷ್ಣ ಮಠದಲ್ಲಿ ಚೂರ್ಣೋತ್ಸವ ಸಂಪನ್ನ

ದೇವಸ್ಥಾನ, ಶಾಲೆಗಳ ಕಾಣಿಕೆ ವಾಪಸು

ದೇವಸ್ಥಾನ, ಶಾಲೆಗಳ ಕಾಣಿಕೆ ವಾಪಸು

ಶ್ರೀ ಕೃಷ್ಣಾಪುರ ಶ್ರೀಗಳಿಗೆ ಗೌರವಾರ್ಪಣೆ

ಶ್ರೀ ಕೃಷ್ಣಾಪುರ ಶ್ರೀಗಳಿಗೆ ಗೌರವಾರ್ಪಣೆ

MUST WATCH

udayavani youtube

ನಾವು ಬದಲಾಗೋಣ ಪ್ರಕೃತಿಯನ್ನು ಘೋಷಿಸೋಣಭೂಮಿ ಸುಪೋಷನ ಆಂದೋಲನ

udayavani youtube

ಒಂದು ಕೆ.ಜಿ. ಬಾಳೆ ಹಣ್ಣಿಗೆ 2 ರೂ. : ಸಂಕಷ್ಟದಲ್ಲಿ ಬಾಳೆ ಬೆಳೆದ ರೈತ

udayavani youtube

3-IN-ONE ಮಾದರಿ ವಾಕಿಂಗ್‌ ಸ್ಟಿಕ್‌ ! ಗ್ರಾಮೀಣ ಭಾಗದ ವಿದ್ಯಾರ್ಥಿಯ ಆವಿಷ್ಕಾರ

udayavani youtube

ಉಡುಪಿಯ ರಸ್ತೆಗಳಲ್ಲಿ ಓಡಾಡಿದ Corona Virus !! ವಿಶಿಷ್ಟ ರೀತಿಯಲ್ಲಿ ಜನಜಾಗೃತಿ

udayavani youtube

ಉಡುಪಿ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಕೊರೊನಾ ವೈರಸ್ !

ಹೊಸ ಸೇರ್ಪಡೆ

ra Ga

ಬಿಜೆಪಿಯ ‘ದ್ವೇಷ’ದ ರಾಜಕಾರಣ ದೇಶಕ್ಕೆ ಅತ್ಯಂತ ಹಾನಿಕಾರಕ:ರಾಹುಲ್ ಗಾಂಧಿ

18tipper

ಮರಳು ಸಾಗಾಟ: ಟಿಪ್ಪರ್‌ ವಶ

17women

ಹೆಣ‍್ಣನ್ನು ದೈವತ್ವಕ್ಕೇರಿಸಿದ್ದು 12ನೇ ಶತಮಾನದ ಬಸವಾದಿ ಶರಣರು

1-assadsa

ಯುಪಿ: ಮಾಜಿ ಐಪಿಎಸ್ ಅಧಿಕಾರಿ ಅಸೀಮ್ ಅರುಣ್ ಬಿಜೆಪಿಗೆ ಸೇರ್ಪಡೆ

ಪ್ರಯಾಣಿಕರ ಕೊರತೆ – ಸಂಕಷ್ಟದಲ್ಲಿ ಆಟೋ ಚಾಲಕರು

ಪ್ರಯಾಣಿಕರ ಕೊರತೆ – ಸಂಕಷ್ಟದಲ್ಲಿ ಆಟೋ ಚಾಲಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.