ಉದ್ಯಾವರ: ಬಸ್‌ನಿಲ್ದಾಣದಲ್ಲಿ ಕುಸಿದು ಬಿದ್ದು ಬ್ಯಾಂಕ್ ಸಿಬಂದಿ ಸಾವು
Team Udayavani, Jun 30, 2022, 11:27 PM IST
ಕಾಪು: ಉದ್ಯಾವರ ಬಸ್ ನಿಲ್ದಾಣದಲ್ಲಿ ಕಟ್ಟಿಂಗೇರಿ ಯೂನಿಯನ್ ಬ್ಯಾಂಕ್‌ನ ಮಹಿಳಾ ಸಿಬಂದಿಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಉದ್ಯಾವರ ಗುಡ್ಡೆಯಂಗಡಿ ನಿವಾಸಿ ವಸಂತಿ (55) ಮೃತ ಮಹಿಳೆ.
ಕಂಟ್ಟಿಂಗೇರಿ ಯೂನಿಯನ್ ಬ್ಯಾಂಕ್‌ನಲ್ಲಿ ಉದ್ಯೋಗ ಮಾಡಿಕೊಂಡಿರುವ ವಸಂತಿ ಅವರು ಗುರುವಾರ ಬೆಳಗ್ಗೆ 8.30ಕ್ಕೆ ಬ್ಯಾಂಕ್‌ಗೆ ಹೋಗಲು ಉದ್ಯಾವರದ ಗುಡ್ಡೆಯಂಗಡಿ ಬಸ್ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದಾಗ ಕುಸಿದು ಬಿದ್ದಿದ್ದರು. ಸ್ಥಳೀಯರು ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದರು.
ವಸಂತಿ ಅವರಿಗೆ ಮಧುಮೇಹ ಕಾಯಿಲೆ ಇದ್ದು ಒಂದೂವರೆ ವರ್ಷದ ಮೊದಲು ಎದೆ ಬಡಿತದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಉಡುಪಿ ಮಿತ್ರಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಧು ಮೃತರ ಪುತ್ರ ಹೇಮಂತ್ ಕುಮಾರ್ ಕಾಪು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಿವಮೊಗ್ಗದಲ್ಲಿ ಚೂರಿ ಇರಿತ ಪ್ರಕರಣ: ಉಡುಪಿ ಜಿಲ್ಲೆಯಲ್ಲೂ ಕಟ್ಟೆಚ್ಚರ
ಮಣಿಪಾಲ ಮೀಡಿಯಾ ಗ್ರೂಪ್ಸ್ ಯುನಿಟ್ 1ರಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆ
ಕಾಪು ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ
“ಇನ್ಸ್ಪೆಕ್ಟರ್ ಕರೆಯುತ್ತಿದ್ದಾರೆ’ ಎಂದು ಕರೆದು ಜೈಲಿಗೆ ಅಟ್ಟಿದರು: ಶ್ರೀನಿವಾಸ ಕಾಮತ್
1947ರ ಸ್ವಾತಂತ್ರ್ಯೋತ್ಸವದಲ್ಲಿ ಆರೋಹಣಗೊಂಡ ರಾಷ್ಟ್ರಧ್ವಜ ಕಲ್ಮಾಡಿ ಮನೆಯಲ್ಲಿ ಸುರಕ್ಷಿತ