ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ


Team Udayavani, Sep 23, 2021, 10:53 PM IST

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

ಕಟಪಾಡಿ : ಉದ್ಯಾವರ ಗ್ರಾಮದಲ್ಲಿ ನಕಲಿ ದಾಖಲಾತಿಯಿಂದ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಂಡಿರುವ ಬಗ್ಗೆ ಉದ್ದಿಮೆದಾರರು, ಪರವಾನಿಗೆ ನೀಡಿದ ಅಧಿಕಾರಿಗಳ ವಿರುದ್ಧ ಎಸಿಬಿ ಗೆ ದೂರು ನೀಡುವ ಸಿದ್ಧತೆಯ ವಿಚಾರದಲ್ಲಿ  ಉದ್ಯಾವರ ಗ್ರಾಮ ಸಭೆಯಲ್ಲಿ ಆರೋಪ ಪ್ರತ್ಯಾರೋಪ, ಅಧಿಕಾರಿಗಳ ವಿರುದ್ಧದ ನಿಲುವುಗಳ ಬಗ್ಗೆ ಸುದೀರ್ಘ ವಾಗ್ವಾದಗಳು ನಡೆದು ಬೆಳಿಗ್ಗೆ ಆರಂಭಗೊಂಡ ಸಭೆಯು ಸಂಜೆ 4 ಗಂಟೆಯವರೆಗೆ ನಡೆದು ಬಳಿಕ ತಾರ್ಕಿಕ ಅಂತ್ಯ ಕಂಡು ಕೊಂಡಿತು.

ಎಸಿಬಿ ಗೆ ದೂರು ನೀಡುವಂತೆ ಪಂಚಾಯತ್ ಸಾಮಾನ್ಯ ಸಭೆಯ ನಿರ್ಣಯ ಕೈಗೊಂಡು ಮುಂದಾಗಿದ್ದರೂ ಸಹಿ ಹಾಕಲು ಕರ್ತವ್ಯ ನಿರತ ಪಿಡಿಒ ಸಹಿ ಹಾಕದೇ ಇರುವ ಬಗ್ಗೆ ಸಭೆಗೆ ಮಾಹಿತಿ ತಿಳಿದಾಗ ಗ್ರಾಮ ಸಭೆಯಲ್ಲಿಯೇ ಪಿಡಿಒ ಸಹಿ ಹಾಕಬೇಕೆಂದು ಒತ್ತಾಯಿಸಲಾಗಿದ್ದು ಪಿಡಿಒ ನಿರಾಕರಿಸಿದ ವಿರುದ್ಧ ಗ್ರಾಮಸ್ಥರು, ಗ್ರಾ.ಪಂ. ಆಡಳಿತವು ಘರಂ ಆಗಿದ್ದು, ಸಹಿ ಹಾಕದಂತೆ ಒತ್ತಡ ಹೇರುವ ಮೇಲಧಿಕಾರಿಗಳು  ಗ್ರಾಮ ಸಭೆಗೆ ಬಂದು ಸ್ಪಷ್ಟನೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿ ಅಧಿಕಾರಿಗಳ ಕ್ರಮದ ವಿರುದ್ಧ ಆರೋಪ ಪ್ರತ್ಯಾರೋಪಗಳನ್ನು ನಡೆಸಿದ್ದು, ವಾಗ್ವಾದಕ್ಕೆ ಕಾರಣವಾಗಿತ್ತು. ಉದ್ದಿಮೆಗಳಿಂದ ಈಗಾಗಲೇ ಉದ್ಯಾವರ ಗ್ರಾಮಸ್ಥರು ನಲುಗಿದ್ದು, ಮತ್ತಷ್ಟು ಉದ್ದಿಮೆಗಳು ಪರಿಸರಕ್ಕೆ ಅಪಾಯ ತಂದೊಡ್ಡುವ ಭೀತಿಯನ್ನು ವ್ಯಕ್ತ ಪಡಿಸಿದ ಗ್ರಾಮಸ್ಥರು ಉದ್ದಿಮೆಗಳಿಂದ ಈಗಾಗಲೇ ಹೊಳೆಯಲ್ಲಿ ಮೀನುಗಳ ಮಾರಣ ಹೋಮ ನಡೆಯುತ್ತಿದೆ. ಪರಿಸರ ವಿನಾಶದತ್ತ ಸಾಗುತ್ತಿದೆ. ನಮಗೆಲ್ಲಾ ವಿಷ ಕೊಟ್ಟಂತಾಗಿದೆ. ಹೊಳೆಯಲ್ಲಿ ಅಳವಡಿಸಲಾಗಿರುವ ಅಕ್ರಮ ಪೈಪ್ಲೈನ್ ಕಿತ್ತೊಗೆಯುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಈ ಎಲ್ಲಾ ಸಮಸ್ಯೆಗಳ ಬಗೆ ಹರಿಸಲು ಮೇಲಧಿಕಾರಿಗಳು ಸಭೆಗೆ ಬರುವಂತೆ ಹಾಗೂ  ಗ್ರಾಮಸ್ಥರು ಪಿಡಿಒ ಸಹಿ ಹಾಕದೇ ಗ್ರಾಮಸಭೆಯಿಂದ ಅಧಿಕಾರಿಗಳನ್ನು ಹೊರ ನಡೆಯಲು ಬಿಡಿವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ನೋಡಲ್ ಅಧಿಕಾರಿಯಾಗಿದ್ದ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತ್ ಕುಮಾರ್ ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಮಾಹಿತಿ ರವಾನಿಸಿದ್ದು, ಮೇಲಧಿಕಾರಿಗಳ ಮಾರ್ಗದರ್ಶನ ಪಡೆದೇ ಅಧಿಕಾರಿ ಸಹಿ ಹಾಕಲು ಸಾಧ್ಯ ಎಂದು ತಿಳಿಸಿದರು. ಮತ್ತಷ್ಟು ರೊಚ್ಚಿಗೆದ್ದ ಗ್ರಾಮಸ್ಥರು, ಉದ್ಯಾವರದ ಜನತೆಗೆ ದ್ರೋಹ ವಂಚನೆಯು ಅಧಿಕಾರಿಗಳ ಆಟಾಟೋಪದಿಂದಲೇ ಉದ್ಯಾವರ ಕುಗ್ರಾಮವಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಆ ಬಳಿಕ ಪಿಡಿಒ ಎರಡು ದಿನಗಳ ಕಾಲಾವಕಾಶದಡಿ ಮೇಲಧಿಕಾರಿಗಳ ಗಮನಕ್ಕೆ ತಂದು ಸಹಿ ಹಾಕುವುದಾಗಿ ವಿನಂತಿಸಿಕೊಂಡ ಮೇರೆಗೆ ಸಭೆಯು ಮುಕ್ತಾಯದ ಹಂತ ತಲುಪಿತ್ತು.

ಅಕ್ರಮಗಳಿಗೆ ಪಂಚಾಯತ್ ಕಡಿವಾಣ ಹಾಕಲಿ:

ಪಂಚಾಯತ್ ಪರವಾನಿಗೆ ಇಲ್ಲದೆ ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಅಕ್ರಮವಾಗಿ ನಡೆಯುವ ಜೂಜಿನ ಅಡ್ಡೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಗ್ರಾಮಸ್ಥರು ಲೋಕೋಪಯೋಗಿಇಲಾಖೆ ರಸ್ತೆಯ ಬದಿಯಲ್ಲಿ ಅನಧಿಕೃತ ಸಂಘ ಸಂಸ್ಥೆಗಳ ಕಟ್ಟಡಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.

ಮೀನುಗಾರಿಕಾ ರಸ್ತೆಯಲ್ಲಿನ ಹೊಂಡಗುಂಡಿಗಳಿಗೆ ಮುಕ್ತಿ ನೀಡಲು ಒತ್ತಾಯಿಸಿದ ಗ್ರಾಮಸ್ಥರು, ಮೆಸ್ಕಾಂ ಇಲಾಖೆಯ ವಿದ್ಯುತ್ ಕಂಬಗಳು,  ರಸ್ತೆಯಂಚಿನಲ್ಲಿ ತೋಡಿರುವ ಗುಂಡಿಯು ಅವಾಂತರವನ್ನು ಸೃಷ್ಟಿಸುತ್ತಿದ್ದು ಗಮನಹರಿಸುವಂತೆ ಒತ್ತಾಯಿಸಿದರು.

ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮಸ್ಥರು ಕೈ ಜೋಡಿಸುವಂತೆ ಅಧ್ಯಕ್ಷ ರಾಧಕೃಷ್ಣ ಶ್ರೀಯಾನ್ ವಿನಂತಿಸಿಕೊಂಡಿದ್ದು, ವೇದಿಕೆಯಲ್ಲಿ ಉಪಾಧ್ಯಕ್ಷೆ ಮಧುಲತಾ ಶಶಿಧರ್, ಗ್ರಾ.ಪಂ. ಸದಸ್ಯರು,  ಪ್ರಭಾರ ಪಿಡಿಒ ಅಶೋಕ್, ವಿವಿಧ ಇಲಾಖಾಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Untitled-1

ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಡಿಡಿಎಲ್‌ಜೆ ರಂಗ ಪ್ರಯೋಗ!

ಡಿಡಿಎಲ್‌ಜೆ ರಂಗ ಪ್ರಯೋಗ!

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ

ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಮೂಳೂರು: ಕಾರು ಢಿಕ್ಕಿ ಹೊಡೆದು ಮಹಿಳೆ ಮೃತ್ಯು

1-ww

ಪರಿಸರ ತತ್ತ್ವಗಳ ಪ್ರಕಾರ ಜೀವನ ಶೈಲಿಯನ್ನು ಬದಲಾಯಿಸಿ :ಮಮತಾ ರೈ

Untitled-1

ರಸ್ತೆ ಅಪಘಾತ: ಕೊಳಲಗಿರಿ ಮೂಲದ ಯುವಕ ಮೃತ್ಯು

300ರ ಬದಲು ಇರುವುದು 22 ಯಂತ್ರಗಳು !

300ರ ಬದಲು ಇರುವುದು 22 ಯಂತ್ರಗಳು !

ನಿರ್ಯಾಣ ಶ್ರೀವಿಶ್ವೇಶತೀರ್ಥರಿಗೆ ನ. 8ರಂದು ಪದ್ಮ ಪ್ರಶಸ್ತಿ ಪ್ರದಾನ

ನಿರ್ಯಾಣ ಶ್ರೀವಿಶ್ವೇಶತೀರ್ಥರಿಗೆ ನ. 8ರಂದು ಪದ್ಮ ಪ್ರಶಸ್ತಿ ಪ್ರದಾನ

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

Untitled-1

ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಡಿಡಿಎಲ್‌ಜೆ ರಂಗ ಪ್ರಯೋಗ!

ಡಿಡಿಎಲ್‌ಜೆ ರಂಗ ಪ್ರಯೋಗ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.