ಚಂಡಮಾರುತದ ಪ್ರಭಾವ: ಅವಧಿಗೆ ಮೊದಲೇ ಬೋಟುಗಳ ಲಂಗರು

Team Udayavani, May 21, 2022, 11:24 PM IST

ಚಂಡಮಾರುತದ ಪ್ರಭಾವ: ಅವಧಿಗೆ ಮೊದಲೇ ಬೋಟುಗಳ ಲಂಗರು

ಮಲ್ಪೆ: ರಾಜ್ಯ ಕರಾವಳಿಯಲ್ಲಿ ಸೋಮವಾರದಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಮುಂದಿನ 5 ದಿನಗಳ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರ ಬಿರುಸಾಗಿರುವುದ ರಿಂದ ಬಹುತೇಕ ಬೋಟುಗಳು ಮೀನು ಗಾರಿಕೆಯನ್ನು ನಿಲ್ಲಿಸಿವೆ.

ಮೇ ಮೊದಲ ವಾರದಿಂದ ಆಸಾನಿಚಂಡಮಾರುತದಿಂದಾಗಿ ಆಳ ಸಮುದ್ರ ದಲ್ಲಿ ಗಾಳಿಯ ಅಬ್ಬರ ಸೃಷ್ಟಿಯಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ ಮೀನುಗಾರಿಕೆ ಮುಗಿಸಿ ಬಂದ ಬೋಟುಗಳು ಮತ್ತೆ ತೆರಳಿಲ್ಲ. ಬಹುತೇಕ ಮರದ ಬೋಟುಗಳು ಅವಧಿಗೆ ಮುನ್ನವೇ ಲಂಗರು ಹಾಕಿವೆ.

ಈ ಬಾರಿ ಮೀನುಗಾರಿಕೆ ಋತುವಿನ ಅಂತ್ಯದಲ್ಲಿ ಮೀನು ಲಭ್ಯತೆ ಕಡಿಮೆಯಾಗಿರುವುದು ಮತ್ತು ಡೀಸೆಲ್‌ ದರದ ಹೊರೆಯಿಂದಾಗಿ ಬಹುತೇಕ ಆಳ ಸಮುದ್ರ ಬೋಟುಗಳು ನಷ್ಟ ಅನುಭವಿಸಿವೆ. ತ್ರಿಸೆವೆಂಟಿ, ಸಣ್ಣ ಟ್ರಾಲ್‌ ಬೋಟುಗಳು ಈಗಾಗಲೇ ದಡ ಸೇರಿವೆ. ಮಲ್ಪೆ ಬಂದರಿನಲ್ಲಿ ಶೇ. 50ರಷ್ಟು ಬೋಟುಗಳು ಅವಧಿಗೆ ಮೊದಲೇ ಮೀನುಗಾರಿಕೆ ಮುಗಿಸಿವೆ.

ಇದುವರೆಗೆ ಮೇಲ್ಮಟ್ಟದಲ್ಲಿ ನೀರಿನ ತೇವಾಂಶ ಇರುವುದರಿಂದ ಮೀನು ಸಿಗುವ ಲಕ್ಷಣ ಇಲ್ಲ. ಚಂಡಮಾರುತದಿಂದ ಮಳೆಯಾಗುತ್ತಿದ್ದು, ಸಮುದ್ರದ ನೀರು ತಣ್ಣಗಾಗುವುದರಿಂದ ಮೀನಿನ ಲಕ್ಷಣ ಕಂಡುಬರಲಿದೆ ಎನ್ನಲಾಗಿದೆ. ಅಲ್ಲದೆ ಆಳ ಸಮುದ್ರ ದಲ್ಲಿ ರಾಣಿಮೀನು ಸಿಗುವ ಸಾಧ್ಯತೆಯೂ ಇದೆ. ಋತು ಅಂತ್ಯದಲ್ಲಿ ಲಾಭದಾಯಕ ಮೀನುಗಾರಿಕೆ ಆಗುತ್ತಿದ್ದು, ಈ ಬಾರಿ ಚಂಡಮಾರುತದಿಂದಾಗಿ ಮೀನುಗಾರಿಕೆ ಸಾಧ್ಯವಾಗಿಲ್ಲ. ಹೀಗಾಗಿ ಸರಕಾರ ಮೀನುಗಾರಿಕೆಗೆ ಹೆಚ್ಚುವರಿ ದಿನ ನೀಡಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.

ಚಂಡಮಾರುತದಿಂದಾಗಿ ಈ ಬಾರಿ ಋತುವಿನ ಕೊನೆಯಲ್ಲಿ ಮೀನುಗಾರಿಕೆ ಸಾಧ್ಯವಾಗಿಲ್ಲ. ಮೇ 31ರಂದು ಯಾಂತ್ರಿಕ ಮೀನುಗಾರಿಕೆ ಕೊನೆಯಾಗಬೇಕೆಂದು ಸರಕಾರ ಆದೇಶ ಹೊರಡಿಸಿದೆ. ಮಲ್ಪೆ ಬಂದರಿನಲ್ಲಿ ಮೀನುಗಾರ ಸಂಘದ ನೇತೃತ್ವದಲ್ಲಿ ವಿವಿಧ ಮೀನುಗಾರ ಸಂಘಟನೆಗಳ ಸಹಕಾರದಲ್ಲಿ ನಡೆದ ಸಭೆಯಲ್ಲಿ ಜೂ. 6ರ ವರೆಗೆ ಮೀನು ಖಾಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
– ರತ್ನಾಕರ ಸಾಲ್ಯಾನ್‌, ಕಾರ್ಯದರ್ಶಿ, ಮೀನುಗಾರರ ಸಂಘ, ಮಲ್ಪೆ

ಹವಾಮಾನ ಇಲಾಖೆ ಮೇ 20ರ ವರೆಗೆ ರೆಡ್‌ ಆಲರ್ಟ್‌ ನೀಡಿದೆ. ಜಿಲ್ಲಾಡಳಿತವು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ಕೊಟ್ಟಿದೆ. ಅಲ್ಲಿಯ ವರೆಗೆ ಬೋಟುಗಳಿಗೆ ಡೀಸೆಲ್‌ ನೀಡದಂತೆ ಎಲ್ಲ ಬಂಕ್‌ಗಳಿಗೆ ಸೂಚಿಸಲಾಗಿದೆ.
– ಗಣೇಶ್‌ ಕೆ., ಜಂಟಿ ನಿರ್ದೆಶಕರು, ಮೀನುಗಾರಿಕೆ ಇಲಾಖೆ

ಟಾಪ್ ನ್ಯೂಸ್

ಹಣದಿಂದ ವೈದ್ಯರ ಸೇವೆ ಅಳೆಯಲು ಸಾಧ್ಯವಿಲ್ಲ: ಸುಧಾಕರ್‌

ಹಣದಿಂದ ವೈದ್ಯರ ಸೇವೆ ಅಳೆಯಲು ಸಾಧ್ಯವಿಲ್ಲ: ಸುಧಾಕರ್‌

ಬಾಲಿವುಡ್‌ ನಟ ಶಾರುಖ್ ಖಾನ್ ಅಭಿನಯದ “ಜವಾನ್‌’ಗೆ ಬರೋಬ್ಬರಿ 120 ಕೋಟಿ ರೂ.!

ಬಾಲಿವುಡ್‌ ನಟ ಶಾರುಖ್ ಖಾನ್ ಅಭಿನಯದ “ಜವಾನ್‌’ಗೆ ಬರೋಬ್ಬರಿ 120 ಕೋಟಿ ರೂ.!

ಜನತಾ ಮಿತ್ರ ಜನಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ

ಜನತಾ ಮಿತ್ರ ಜನಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ

ದೇಶದ ಅಭಿವೃದ್ಧಿಯಲ್ಲಿ ಯುವ ವಿಜ್ಞಾನಿಗಳು ಕೈ ಜೋಡಿಸಲಿ: ಜೋಷಿ

ದೇಶದ ಅಭಿವೃದ್ಧಿಯಲ್ಲಿ ಯುವ ವಿಜ್ಞಾನಿಗಳು ಕೈ ಜೋಡಿಸಲಿ: ಜೋಷಿ

1-aa

ಚಿಮ್ಮನಕಟ್ಟಿ: ನಲ್ಲಿ ನೀರಲ್ಲಿ ಕಲುಷಿತ ನೀರು ; 20ಕ್ಕೂ ಹೆಚ್ಚು ಜನ ಆಸ್ಪತ್ರೆಗೆ

1-ddfdf

ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಪುಟ ಸಭೆ ಒಪ್ಪಿಗೆ

Kharge

ಪಕ್ಷಾಂತರ ನಿಷೇಧ ಕಾಯ್ದೆಗೆ ಇನ್ನಷ್ಟು ತಿದ್ದುಪಡಿ ಅಗತ್ಯ: ಖರ್ಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ.ಕ., ಉಡುಪಿಯಲ್ಲಿ ಎಡೆಬಿಡದೆ ಸುರಿದ ಮಳೆ; ಹಲವೆಡೆ ಹಾನಿ

ದ.ಕ., ಉಡುಪಿಯಲ್ಲಿ ಎಡೆಬಿಡದೆ ಸುರಿದ ಮಳೆ; ಹಲವೆಡೆ ಹಾನಿ

tdy-55

ಉಡುಪಿ: ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸನ್ನದ್ಧರಾಗಿ: ಮನೋಜ್‌ ಜೈನ್‌

ಸಹಕಾರ ಸಂಸ್ಥೆಗಳ ಸಾಲದ ಮುದ್ರಾಂಕ ಶುಲ್ಕ ಇಳಿಕೆ

ಸಹಕಾರ ಸಂಸ್ಥೆಗಳ ಸಾಲದ ಮುದ್ರಾಂಕ ಶುಲ್ಕ ಇಳಿಕೆ

ಉದ್ಯಾವರ: ಬಸ್‌ನಿಲ್ದಾಣದಲ್ಲಿ ಕುಸಿದು ಬಿದ್ದು ಬ್ಯಾಂಕ್‌ ಸಿಬಂದಿ ಸಾವು

ಉದ್ಯಾವರ: ಬಸ್‌ನಿಲ್ದಾಣದಲ್ಲಿ ಕುಸಿದು ಬಿದ್ದು ಬ್ಯಾಂಕ್‌ ಸಿಬಂದಿ ಸಾವು

tdy-30

ಪರ್ಕಳ: ಗಾಳಿ – ಮಳೆಯಿಂದ ಅಂಗಡಿ ಮೇಲೆ ಬಿದ್ದ ಮರ; ಅಪಾರ ನಷ್ಟ

MUST WATCH

udayavani youtube

ಭಗವಂತನ ಅನುಗ್ರಹ ಸಂಪಾದಿಸುವುದು ಹೇಗೆ?

udayavani youtube

NEWS BULLETIN 01-07-2022

udayavani youtube

ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

udayavani youtube

ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ

ಹೊಸ ಸೇರ್ಪಡೆ

ಹಣದಿಂದ ವೈದ್ಯರ ಸೇವೆ ಅಳೆಯಲು ಸಾಧ್ಯವಿಲ್ಲ: ಸುಧಾಕರ್‌

ಹಣದಿಂದ ವೈದ್ಯರ ಸೇವೆ ಅಳೆಯಲು ಸಾಧ್ಯವಿಲ್ಲ: ಸುಧಾಕರ್‌

ಬಾಲಿವುಡ್‌ ನಟ ಶಾರುಖ್ ಖಾನ್ ಅಭಿನಯದ “ಜವಾನ್‌’ಗೆ ಬರೋಬ್ಬರಿ 120 ಕೋಟಿ ರೂ.!

ಬಾಲಿವುಡ್‌ ನಟ ಶಾರುಖ್ ಖಾನ್ ಅಭಿನಯದ “ಜವಾನ್‌’ಗೆ ಬರೋಬ್ಬರಿ 120 ಕೋಟಿ ರೂ.!

ಜನತಾ ಮಿತ್ರ ಜನಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ

ಜನತಾ ಮಿತ್ರ ಜನಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ

ದೇಶದ ಅಭಿವೃದ್ಧಿಯಲ್ಲಿ ಯುವ ವಿಜ್ಞಾನಿಗಳು ಕೈ ಜೋಡಿಸಲಿ: ಜೋಷಿ

ದೇಶದ ಅಭಿವೃದ್ಧಿಯಲ್ಲಿ ಯುವ ವಿಜ್ಞಾನಿಗಳು ಕೈ ಜೋಡಿಸಲಿ: ಜೋಷಿ

1-aa

ಚಿಮ್ಮನಕಟ್ಟಿ: ನಲ್ಲಿ ನೀರಲ್ಲಿ ಕಲುಷಿತ ನೀರು ; 20ಕ್ಕೂ ಹೆಚ್ಚು ಜನ ಆಸ್ಪತ್ರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.