Udayavni Special

ಪ್ರಿಯಾಂಕಾ ಬಾಣ ಇಲ್ಲದಿದ್ದರೆ ಮೈತ್ರಿ ಹೊಸ ಸೂತ್ರ


Team Udayavani, Mar 17, 2019, 3:13 AM IST

q-22.jpg

ಉಡುಪಿ: ಅಜ್ಜಿಯ ಸಂಬಂಧ ಮೊಮ್ಮಗಳಿಗೆ ತಳಕು ಹಾಕುತ್ತಿದೆಯೇ ? ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್‌ಗೆ ದಕ್ಕಿಸಿಕೊಳ್ಳುವತ್ತ ಜಿಲ್ಲಾ ಘಟಕಗಳು ಕಾರ್ಯನಿರತರಾಗಿರುವ ಹೊತ್ತಿನಲ್ಲೇ ಇಂಥದೊಂದು ಅಭಿಪ್ರಾಯ ಕೇಳಿಬರುತ್ತಿದೆ. ಕೊನೆಯ ಹಂತದಲ್ಲಿ ಈ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲೂಬಹುದು. ಈ ಬಗ್ಗೆ ಪಕ್ಷದ ಮೂಲಗಳನ್ನು ಕೇಳಿದರೆ, ಇಲ್ಲ ಎಂದು ತಳ್ಳಿ ಹಾಕಲು ಮನಸ್ಸು ಮಾಡುತ್ತಿಲ್ಲ. ತಳ್ಳಿ ಹಾಕಲಾಗದು ಎಂದಷ್ಟೇ ಉತ್ತರಿಸುತ್ತವೆ. 

ಈ ಲೆಕ್ಕಾಚಾರದ ಹಿಂದೆ ಕೆಲಸ ಮಾಡುತ್ತಿರುವುದು ಏನಾದರೂ ಮಾಡಿ ಮೈತ್ರಿ ಪಕ್ಷಗಳು ಗರಿಷ್ಠ ಸ್ಥಾನ ಪಡೆಯ ಬೇಕೆಂಬುದು. ಪ್ರಿಯಾಂಕಾ ಕರೆತಂದರೆ ಕರಾವಳಿ ಮತ್ತು ಆಸುಪಾಸಿನ ನಾಲ್ಕೈದು ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು. ಯಾಕೆಂದರೆ, ಚಿಕ್ಕಮಗಳೂರಿನಿಂದ 1978ರಲ್ಲಿ ಸ್ಪರ್ಧಿಸಿ ಇಂದಿರಾ ಗಾಂಧಿ ಗೆಲುವು ಸಾಧಿಸಿದ್ದರು. ಈ ಕ್ಷೇತ್ರಕ್ಕೂ ಕಾಂಗ್ರೆಸ್‌ಗೂ ಭಾವನಾತ್ಮಕ ಸಂಬಂಧವಿದೆ. ರಾಷ್ಟ್ರ ಮಟ್ಟದಲ್ಲಿ ಮೈತ್ರಿಗಳ ಬಿರುಕು ಹೆಚ್ಚುತ್ತಿರು ವಾಗ ರಾಜ್ಯದ ಮೈತ್ರಿಯನ್ನು ಉಳಿಸಿಕೊಳ್ಳುವುದು ಉಭಯ ಪಕ್ಷಗಳಿಗೂ ಅನಿವಾರ್ಯ. ಇದರಿಂದ ರಾಷ್ಟ್ರ ಮಟ್ಟದ ಒಟ್ಟು ಸ್ಥಾನ ಗಳಿಕೆಗೆ ಕೊಂಚ ನೆರವಾಗಬಹುದೆಂಬ ಆಶಾವಾದವೂ ಇದೆ.

ಜೆಡಿಎಸ್‌ ಬಿಗಿಯಲ್ಲಿ ರಾಜಿ?
ಏತನ್ಮಧ್ಯೆ ಜೆಡಿಎಸ್‌ ಪಡೆದುಕೊಂಡ ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡ, ತುಮಕೂರು ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಚರ್ಚೆಯೂ ಚಾಲ್ತಿಯಲ್ಲಿದೆ. ತುಮಕೂರಿನಿಂದ ದೇವೇಗೌಡರು ಸ್ಪರ್ಧಿಸಿದರೆ ಅಚ್ಚರಿ ಘಟಿಸ ಬಹುದು. ಇಲ್ಲದಿದ್ದರೆ ಮೈತ್ರಿ ಅಭ್ಯರ್ಥಿ ಗೆಲ್ಲು ವುದು ಕಷ್ಟವೆಂಬ ಮಾತಿದೆ. ಉಡುಪಿ-ಚಿಕ್ಕಮಗ ಳೂರು, ಉತ್ತರ ಕನ್ನಡದ ಸ್ಥಿತಿ ಇದಕ್ಕಿಂತ ಕನಿಷ್ಠ ಎಂಬುದು ಜೆಡಿಎಸ್‌ಗೂ ತಿಳಿದಿದೆ. ಇದನ್ನೇ ಬಳಸಿಕೊಳ್ಳುವ ಸಾಧ್ಯತೆ ಇರುವ ಕಾಂಗ್ರೆಸ್‌, ಪ್ರಿಯಾಂಕಾ ಪ್ರಯೋಗ ನಡೆಸಲು ಮುಂದಾಗಬಹುದು. ಕಾಂಗ್ರೆಸ್‌ ಒಂದು ವೇಳೆ ದುರ್ಬಲ ಗೊಂಡರೆ ತನ್ನ ನೇತೃತ್ವದ ಸರಕಾರದ ಭವಿಷ್ಯಕ್ಕೂ ಅಪಾಯವಿರುವ ಕಾರಣ ಕೊನೆ ಕ್ಷಣದಲ್ಲಿ ಜೆಡಿಎಸ್‌ ಬಿಗಿ ಸಡಿಲಿಸುವ ಸಂಭವವಿದೆ ಎನ್ನಲಾಗಿದೆ.

ಪರ್ಯಾಯ ಮಾರ್ಗ
ಇದಲ್ಲದೆ, ಜೆಡಿಎಸ್‌- ಕಾಂಗ್ರೆಸ್‌ ಪಕ್ಷದ ಜಂಟಿ ಅಭ್ಯರ್ಥಿಯನ್ನೂ ನಿಲ್ಲಿಸುವ ಚಿಂತನೆಯೂ ಪ್ರಗತಿ ಯಲ್ಲಿದೆ. ಎರಡು ಜಿಲ್ಲೆಗಳ ಸಮ್ಮಿಶ್ರವಾದ ಈ ಕ್ಷೇತ್ರದಲ್ಲಿ, ಜೆಡಿಎಸ್‌-ಕಾಂಗ್ರೆಸ್‌ ಕೂಟವು ಹೊಸ ಸಮ್ಮಿಶ್ರ ನೀತಿ ಜಾರಿಗೊಳಿಸುವ ಲಕ್ಷಣವಿದೆ. ಕಾಂಗ್ರೆಸ್‌ ಅಭ್ಯರ್ಥಿಯು ಜೆಡಿಎಸ್‌ ಟಿಕೆಟ್‌ನಿಂದ ಸ್ಪರ್ಧಿಸುವ ಲೆಕ್ಕಾಚಾರವೂ ನಡೆದಿದೆ. ಇದಕ್ಕೆ ಪೂರಕ ಎಂಬಂತೆ  ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಪ್ರಮೋದ್‌ ಮಧ್ವರಾಜರ ನಡುವೆ ಶನಿವಾರ ಮಾತುಕತೆ ನಡೆದಿದೆ. ಜೆಡಿಎಸ್‌ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಮೊದಲಿಗೆ ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ತಮ್ಮ ಅಭ್ಯರ್ಥಿಯಾದರೆ ಉತ್ತಮ ಎಂದಿತ್ತು. ಆದರೆ ಹೆಗ್ಡೆಯವರು ಪ್ರಸ್ತಾವವನ್ನು ನಿರಾಕರಿಸಿದಾಗ 2 ನೇ ಆಯ್ಕೆಗೆ ಈ ಹೊಸ ಸೂತ್ರ ಎನ್ನಲಾಗಿದೆ.

ಕಾಂಗ್ರೆಸ್‌ ವಿಶ್ವಾಸದಲ್ಲಿ ಜೆಡಿಎಸ್‌ ಸ್ಪರ್ಧೆ
“ಜೆಡಿಎಸ್‌ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಟ್ಟರೂ ಅಚ್ಚರಿಪಡಬೇಕಿಲ್ಲ.  ದೇವೇಗೌಡ, ವಿಶ್ವನಾಥ್‌, ಕುಮಾರಸ್ವಾಮಿಯವರು ಏನು ನಿರ್ಧಾರ ತಳೆಯುತ್ತಾರೆಂದು ಹೇಳ ಲಾಗದು. ಸಮ್ಮಿಶ್ರ ಸರಕಾರವೆಂದರೆ ಕೊಡು ಕೊಳ್ಳುವಿಕೆಯೂ ಸಹಜ’ ಎಂಬ ಜೆಡಿಎಸ್‌ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಧರ್ಮೇಗೌಡರ ಹೇಳಿಕೆ ಹೊಸ ಸೂತ್ರಕ್ಕೆ ಪೂರಕವಾಗಿದೆ. ಇದು ಹೌದಾದರೆ ಪ್ರಮೋದ್‌ ಮಧ್ವರಾಜ್‌ ಮೈತ್ರಿ ಪಕ್ಷಗಳ ಪರವಾಗಿ ಸ್ಪರ್ಧಿಸಲೂಬಹುದು. 

ಮುಖ್ಯಮಂತ್ರಿ ನನ್ನನ್ನು ಕರೆದು ಮಾತನಾಡಿದ್ದು ಹೌದು. ಕಾಂಗ್ರೆಸ್‌ ಅಭ್ಯರ್ಥಿಗೆ ಜೆಡಿಎಸ್‌ ಟಿಕೆಟ್‌ ಕೊಡಲು ತಮ್ಮ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ. ಉಭಯ ಜಿಲ್ಲೆಗಳ ಕಾಂಗ್ರೆಸ್‌ ನಾಯಕರನ್ನು ಕರೆದು ಅವರೇ ಮಾತನಾಡುತ್ತಾರೆ. 
ಪ್ರಮೋದ್‌ ಮಧ್ವರಾಜ್‌, ಕಾಂಗ್ರೆಸ್‌ ನಾಯಕ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

world-wide-covid19

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump-jpeg

ಪರಿಸ್ಥಿತಿ ಬಿಗಡಾಯಿಸುತ್ತಿದೆ, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ: ಟ್ರಂಪ್

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

Water-Drowning

ಜಾರಿ ಬಿದ್ದ ಮೊಬೈಲ್ ತೆಗೆಯಲು ಹೋಗಿ ನಾಲ್ಕು ಕಂದಮ್ಮಗಳು ನೀರುಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEWS-TDY

ಕಾಪು ಬಂಟರ ಸಂಘದ ವತಿಯಿಂ1000 ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆಗೆ ಚಾಲನೆ

ಕಟಪಾಡಿ :  ಗಂಜಿ ಕೇಂದ್ರಕ್ಕೆ ಕಾಪು ತಹಶೀಲ್ದಾರ್ ಭೇಟಿ, ಪರಿಶೀಲನೆ

ಕಟಪಾಡಿ ಗಂಜಿ ಕೇಂದ್ರಕ್ಕೆ ಕಾಪು ತಹಶೀಲ್ದಾರ್ ಭೇಟಿ, ಪರಿಶೀಲನೆ

ಆಹಾರ ಕೊರತೆ: ಸಿಗಡಿ ಕೃಷಿಗೂ ತಟ್ಟಿದ ಕೋವಿಡ್ 19

ಆಹಾರ ಕೊರತೆ: ಸಿಗಡಿ ಕೃಷಿಗೂ ತಟ್ಟಿದ ಕೋವಿಡ್ 19

ಸುರಕ್ಷಾ ಕೆಲಸಗಳಿಗೆ ಆದ್ಯತೆ ನೀಡುತ್ತಿದೆ ರೈಲ್ವೇ

ಸುರಕ್ಷಾ ಕೆಲಸಗಳಿಗೆ ಆದ್ಯತೆ ನೀಡುತ್ತಿದೆ ರೈಲ್ವೇ

ಉಡುಪಿ ಪ್ರಥಮ, ದ.ಕ. ಜಿಲ್ಲೆ ತೃತೀಯ ಪಡಿತರ ಸಾಮಗ್ರಿ ವಿತರಣೆ

ಉಡುಪಿ ಪ್ರಥಮ, ದ.ಕ. ಜಿಲ್ಲೆ ತೃತೀಯ ಪಡಿತರ ಸಾಮಗ್ರಿ ವಿತರಣೆ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

ಎ. 14ರೊಳಗೆ ಪರಿಸ್ಥಿತಿ ಸುಧಾರಿಸಿದರೆ ಲಾಕ್‌ಡೌನ್‌ ಸಡಿಲ

ಎ. 14ರೊಳಗೆ ಪರಿಸ್ಥಿತಿ ಸುಧಾರಿಸಿದರೆ ಲಾಕ್‌ಡೌನ್‌ ಸಡಿಲ

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

ಗಡಿ ಬಂದ್‌ ಸಡಿಲಿಕೆ ಇಲ್ಲ : ಬಿಎಸ್‌ವೈ

ಗಡಿ ಬಂದ್‌ ಸಡಿಲಿಕೆ ಇಲ್ಲ : ಬಿಎಸ್‌ವೈ

ನಮಾಜ್‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರ್ಜಿ

ನಮಾಜ್‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರ್ಜಿ