ಭುಜಂಗ ಪಾರ್ಕ್ ಪ್ರಕರಣ: ಉಡುಪಿ ನಗರ ಠಾಣಾ ಎಸ್.ಐ ಅಮಾನತು

Team Udayavani, Nov 12, 2019, 1:20 PM IST

ಉಡುಪಿ: ಉಡುಪಿಯ ಭುಜಂಗ ಪಾರ್ಕ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಠಾಣಾ ಎಸ್.ಐ ಪದ್ಮನಾಭ ಅವರನ್ನು ನವೆಂಬರ್ 11 ರಿಂದ ಅಮಾನತಿನಲ್ಲಿಡಲಾಗಿದೆ.

ಮೂವರು ಹುಡುಗರು ಒಂದು ಹುಡುಗಿಯೊಂದಿಗೆ ಮಾತನಾಡುತ್ತ ಕುಳಿತಿರುವಾಗ ಏಕಾಏಕಿ ಬಂದ ಕೆಲವರು ಗುರುತು ಚೀಟಿ ಕೇಳಿ ನೈತಿಕ ಪೊಲೀಸ್ ಗಿರಿ ನಡೆಸಿದ್ದರು ಎಂಬ ಆರೋಪದ ಘಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅಮಾನತು ಮಾಡಲಾಗಿದೆ. ಈ ಘಟನೆಯ ಸೂಕ್ಷ್ಮತೆ ಅರಿತು ಠಾಣಾಧಿಕಾರಿ ಎಸ್.ಪಿ ನಿಷಾ ಜೇಮ್ಸ್ ಗೆ ತಿಳಿಸಿಲ್ಲವೆಂಬ ಆರೋಪ ಅವರ ಮೇಲಿದೆ.

ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದ್ದು, ಎರಡು ಕಡೆಯಿಂದ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ. ಪ್ರಸ್ತುತ ಮಹಿಳಾ ಠಾಣೆಯ ಎಸ್ಐ ಫೆಮಿನಾ ಅವರು ಪ್ರಭಾರಿಯಾಗಿ ಅಧಿಕಾರ ವಹಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಾರಿಗೆ ತಂದಿರುವ ಫಾಸ್ಟಾಗ್‌ ವ್ಯವಸ್ಥೆ ವಾಹನ ಚಾಲಕ-ಮಾಲೀಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದೇ ಹೇಳಬೇಕಾಗುತ್ತದೆ....

  • ಶಬರಿಮಲೆ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಯಾತ್ರೆ ಆರಂಭವಾಗಿ 28 ದಿನಗಳು ಪೂರೈಸಿದ್ದು, ದೇಗುಲದ ಆದಾಯವು 104 ಕೋಟಿ ರೂ. ದಾಟಿದೆ ಎಂದು ತಿರುವಾಂಕೂರು...

  • ಮುಂಬಯಿ: 'ಶೋಲೆ,' 'ಗರಂ ಹವಾ', 'ತ್ರಿಶೂಲ್‌' ಖ್ಯಾತಿಯ, ಹಿಂದಿ ಸಿನೆಮಾ ಕ್ಷೇತ್ರದ ಹಿರಿಯ ನಟಿ ಗೀತಾ ಸಿದ್ಧಾರ್ಥ್ ನಿಧನ ಹೊಂದಿದ್ದಾರೆ. ಸಿನೆಮಾ ಮತ್ತು ಟಿವಿ ಕಲಾವಿದರ...

  • ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಬೆಳ್ತಂಗಡಿಯ ಮಂಜೊಟ್ಟಿ ಮತ್ತು ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಐವರು ಮೃತಪಟ್ಟಿದ್ದಾರೆ....

  • ನೋಯ್ಡಾ: ನೋಯ್ಡಾದಲ್ಲಿ ರಸ್ತೆ ಬದಿಯಲ್ಲಿ ಬಿರಿಯಾನಿ ಮಾರುತ್ತಿದ್ದ ಯುವಕನ ಮೇಲೆ ಜಾತಿ ಹೆಸರಿನಲ್ಲಿ ನಿಂದಿಸಿ, ಥಳಿಸಲಾಗಿದೆ. ಈ ಬಗೆಗಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ...