ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 36 ಮಂದಿ ಸಾಧಕರು, 4 ಸಂಸ್ಥೆಗಳಿಗೆ ಪ್ರಶಸ್ತಿ
Team Udayavani, Oct 30, 2020, 4:23 PM IST
ಮಣಿಪಾಲ: ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಈ ಬಾರಿ 36 ಮಂದಿ ಸಾಧಕರು ಮತ್ತು ನಾಲ್ಕು ಸಂಘ ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ದೈವಾರಾಧನೆ, ರಂಗಭೂಮಿ, ಸಾಹಿತ್ಯ, ಯಕ್ಷಗಾನ, ಪತ್ರಿಕೋದ್ಯಮ, ಶೈಕ್ಷಣಿಕ, ಕಲೆ, ವೈದ್ಯಕೀಯ, ಸಂಗೀತ, ನೃತ್ಯ, ಸಮಾಜ ಸೇವೆ, ಕ್ರೀಡೆ, ಬಾಲ ಪ್ರತಿಭೆ ವಿಭಾಗದಲ್ಲಿ ಈ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ.
ಬಾಲ ಪ್ರತಿಭೆಗಳಾದ ತನುಶ್ರೀ ಪಿತ್ರೋಡಿ, ಶ್ರಾವ್ಯ ಮರವಂತೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಉಳಿದಂತೆ ವಿದೂಷಿ ಯಶ ರಾಮಕೃಷ್ಣ, ಮೋಟು ಪಾಣಾರ, ಪೂರ್ಣಿಮಾ ಜನಾರ್ಧನ ಕೊಡವೂರು, ಪ್ರಶಸ್ತಿಗೆ ಆಯ್ಕೆಯಾ’ದ ಪ್ರಮುಖರು.