ಉಡುಪಿ: ನಾಲ್ವರು ಐಸೊಲೇಶನ್ ವಾರ್ಡ್ಗೆ ದಾಖಲು
Team Udayavani, Apr 7, 2020, 5:04 AM IST
ಉಡುಪಿ: ಜಿಲ್ಲೆಯಲ್ಲಿ ಸೋಮವಾರ ನಾಲ್ವರು ಐಸೊಲೇಶನ್ ವಾರ್ಡ್ಗೆ ದಾಖಲಾಗಿದ್ದಾರೆ. ಅವರಲ್ಲಿ ಮೂವರು ಪುರುಷರು, ಓರ್ವ ಮಹಿಳೆ ತೀವ್ರ ಉಸಿರಾಟದ ಸಮಸ್ಯೆ ಇರುವವರು. ಜಿಲ್ಲೆಯಲ್ಲಿ ಒಟ್ಟು ಐಸೊಲೇಶನ್ ವಾರ್ಡ್ಗಳಲ್ಲಿ 23 ಮಂದಿ ಇದ್ದಾರೆ. ಸೋಮವಾರ 9 ಮಂದಿ ಐಸೊಲೇಶನ್ ವಾರ್ಡ್ನಿಂದ ಬಿಡುಗಡೆಗೊಂಡಿದ್ದರೆ, ಈ ವರೆಗೆ 141 ಮಂದಿ ಬಿಡುಗಡೆಗೊಂಡಿದ್ದಾರೆ.
ಸೋಮವಾರ 20 ಮಂದಿ ನೋಂದಣಿ ಮಾಡಿಕೊಂಡಿದ್ದು, ಇದುವರೆಗೆ ನೋಂದಣಿ ಮಾಡಿಕೊಂಡವರ ಒಟ್ಟು ಸಂಖ್ಯೆ 1,996 ಮಂದಿ. ಅವರಲ್ಲಿ ಸೋಮವಾರ 28 ದಿನಗಳ ನಿಗಾ ಪೂರೈಸಿದವರು 219 ಮಂದಿ. ಇದುವರೆಗೆ ಒಟ್ಟು 184 ಜನರು ಪೂರೈಸಿದ್ದಾರೆ. ಸೋಮವಾರ 433 ಮಂದಿ 14 ದಿನಗಳ ನಿಗಾವನ್ನು ಪೂರೈಸಿದ್ದು, ಇದುವರೆಗೆ 1,580 ಮಂದಿ ನಿಗಾ ಅವಧಿಯನ್ನು ಮುಗಿಸಿದ್ದಾರೆ.
ಇದುವರೆಗೆ ಹೋಂ ಕ್ವಾರಂಟೈನ್ನಲ್ಲಿ ದಾಖಲಾದವರು 339, ಸೋಮವಾರ ಆಸ್ಪತ್ರೆ ಕ್ವಾರಂಟೈನ್ಗೆ ದಾಖಲಾದವರು 15 ಮಂದಿ. ಇದುವರೆಗೆ ಒಟ್ಟು 63 ಜನರು ಆಸ್ಪತ್ರೆ ಕ್ವಾರಂಟೈನ್ಗೆ ದಾಖಲಾಗಿದ್ದಾರೆ. ಆಸ್ಪತ್ರೆ ಕ್ವಾರಂಟೈನ್ನಿಂದ ಸೋಮವಾರ 37 ಮಂದಿ ಬಿಡುಗಡೆಗೊಂಡಿದ್ದಾರೆ.
31 ವರದಿ ನೆಗೆಟಿವ್
ಸೋಮವಾರ 36 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಇದುವರೆಗೆ 269 ಜನರ ಮಾದರಿ ಸಂಗ್ರಹಿಸಲಾಗಿತ್ತು. ಸೋಮವಾರ ಸ್ವೀಕರಿಸಿದ ಎಲ್ಲ 31 ವರದಿಗಳು ನೆಗೆಟಿವ್ ಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್