Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ
ಉಡುಪಿ: 481 ಕಡೆ ಸಾರ್ವಜನಿಕ ಗಣೇಶ ಉತ್ಸವ; ದ.ಕ.: 270 ಗಣೇಶೋತ್ಸವ
Team Udayavani, Sep 7, 2024, 7:20 AM IST
ಉಡುಪಿ: ಜಿಲ್ಲಾದ್ಯಂತ ಶನಿವಾರ ಗಣೇಶ ಚತುರ್ಥಿ ವಿಜೃಂಭಣೆಯಿಂದ ನಡೆಯಲಿದೆ. ಶುಕ್ರವಾರ ಗೌರಿ ಹಬ್ಬವನ್ನು ಆಚರಿಸಲಾಗಿದೆ.
ಜಿಲ್ಲೆಯ ಗಣೇಶ ಪೆಂಡಾಲು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ದೇವಸ್ಥಾನ, ಸಂಘ ಸಂಸ್ಥೆಗಳ ವಠಾರದಲ್ಲಿ ಹಬ್ಬದ ಉತ್ಸವಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ನಿಮಿತ್ತ ಹೂ, ಹಣ್ಣು, ಕಬ್ಬು ಮಾರಾಟ ಭರಾಟೆಯೂ ಜೋರಾಗಿತ್ತು. ಬಹುತೇಕ ಕಡೆಗಳಲ್ಲಿ ಶುಕ್ರವಾರ ಸಂಜೆಯೇ ಗಣೇಶನ ಮೂರ್ತಿ ತಂದಿಡಲಾಗಿದ್ದು, ಶನಿವಾರ ಬೆಳಗ್ಗೆ ಪ್ರತಿಸ್ಥಾಪನೆ, ಅನಂತರ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ನಡೆಯಲಿವೆ.
ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಕುರಿತು ಬ್ಯಾನರ್, ಬಂಟಿಂಗ್ಸ್‌ಗಳನ್ನು ಪ್ರಮುಖ ಹಾಗೂ ಇತರ ಯಾವುದೇ ಸ್ಥಳಗಳಲ್ಲಿ ಆಳವಡಿಸುವ ಮುನ್ನ ಮತ್ತು ಗಣಪತಿ ವಿಗ್ರಹಗಳನ್ನು ತರುವ ಮತ್ತು ವಿಸರ್ಜನ ಕಾಲಕ್ಕೆ ನಡೆಸುವ ಮೆರವಣಿಗೆ ಗಳ ಮಾರ್ಗ ಸಂಬಂಧ ಅನುಮತಿಗೆ ಪೊಲೀಸ್ ಇಲಾಖೆಯು ಸಂಬಂಧಪಟ್ಟ ಠಾಣಾಧಿಕಾರಿಗಳಿಂದ ನಿರಾಕ್ಷೇಪಣ ಪತ್ರ ಪಡೆದುಕೊಳ್ಳುವುದು ಕಡ್ಡಾಯ. ಹೀಗಾಗಿ ಬಹುತೇಕ ಎಲ್ಲ ಕಡೆಗಳಲ್ಲೂ ಪೊಲೀಸರ ಅನುಮತಿ ಯಂತೆ ಕಾರ್ಯಕ್ರಮ ನಡೆಯುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 481 ಕಡೆಗಳಲ್ಲಿ ಗಣೇಶೋತ್ಸವ ಪೆಂಡಾಲ್‌ಗೆ ಅವಕಾಶ ವನ್ನು ಪೊಲೀಸ್ ಇಲಾಖೆಯಿಂದ ಒದಗಿಸ ಲಾಗಿದೆ. ಇದರಲ್ಲಿ 406 ಸಾಮಾನ್ಯ, 73 ಸೂಕ್ಷ್ಮ, 2 ಅತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ವೇಳೆ ಪೊಲೀಸರ ವಿಶೇಷ ಭದ್ರತೆ ಇರಲಿದೆ.
ಉಡುಪಿ ನಗರ ಠಾಣೆ ವ್ಯಾಪ್ತಿಯಲ್ಲಿ 27, ಮಲ್ಪೆ- 19, ಮಣಿಪಾಲ -18, ಬ್ರಹ್ಮಾವ ರ-45, ಕೋಟ-44, ಹಿರಿಯಡ ಕ-11, ಬೈಂದೂರು -46, ಗಂಗೊಳ್ಳಿ – 31, ಕೊಲ್ಲೂರು-13, ಕುಂದಾಪುರ ನಗರ-34, ಕುಂದಾಪುರ ಗ್ರಾಮಾಂತರ -25, ಶಂಕರ ನಾರಾಯಣ- 29, ಅಮಾಸೆಬೈಲು- 9, ಕಾ ರ್ಕಳ ನಗರ -27, ಕಾರ್ಕಳ ಗ್ರಾಮಾಂತರ-26, ಅಜೆಕಾರು-12, ಹೆಬ್ರಿ- 21, ಕಾಪು- 16, ಶಿರ್ವ-14, ಪಡುಬಿದ್ರಿಯಲ್ಲಿ 14 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವಗಳಿವೆ ಅನುಮತಿ ನೀಡಲಾಗಿದೆ.
ಬಿಗಿ ಬಂದೋಬಸ್ತ್
ಹಬ್ಬದ ಹಿನ್ನೆಲೆಯಲ್ಲಿ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಬಂದೋಬಸ್ತ್ ಗಾಗಿ ಈಗಾಗಲೇ ಪೊಲೀಸರು ಸನ್ನದ್ಧರಾಗಿದ್ದಾರೆ. ಅಧಿಕಾರಿಗಳು, ಸಿಬಂದಿ ಸಹಿತ ಒಟ್ಟು 800 ಮಂದಿ ಸಿಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗುವುದು. ರಾಜ್ಯ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳು ಸಿದ್ಧವಾಗಿದೆ. ಮೆರವಣಿಗೆ ನಡೆಸುವವರು ಅನುಮತಿಯಲ್ಲಿ ತಿಳಿಸಿದ ರೂಟ್‌ಗಳಲ್ಲಿ ಮಾತ್ರ ಸಂಚಾರ ಮಾಡಬೇಕು. ನಿಯಮಾವಳಿಗಳನ್ನು ಪಾಲಿಸಿಕೊಂಡು ಹಬ್ಬಗಳನ್ನು ಆಚರಣೆ ಮಾಡಿಕೊಂಡರೆ ಉತ್ತಮ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ.ತಿಳಿಸಿದ್ದಾರೆ.
ದ.ಕ.: 270 ಗಣೇಶೋತ್ಸವ
ಮಂಗಳೂರು: ಈ ವರ್ಷ ಮಂಗಳೂರು ನಗರ ಪೊಲೀಸ್ ಕಮಿಷನ ರೆಟ್ ವ್ಯಾಪ್ತಿಯ ಒಟ್ಟು 165 ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ.
ಕಮಿಷನರೆಟ್ ವ್ಯಾಪ್ತಿಯ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವದ ವಿವರ ಇಂತಿದೆ: ಪಣಂಬೂರು ಉಪವಿಭಾಗದ ಪಣಂಬೂರು -7, ಕಾವೂರು-15, ಬಜಪೆ-11, ಸುರತ್ಕಲ್-13, ಮೂಲ್ಕಿ-18, ಮೂಡುಬಿದಿರೆ-29. ದಕ್ಷಿಣ ಉಪವಿಭಾಗ ವ್ಯಾಪ್ತಿಯ ಮಂಗಳೂರು ಗ್ರಾಮಾಂತರ-6, ಕಂಕನಾಡಿ ನಗರ – 7, ಉಳ್ಳಾಲ-9, ಕೊಣಾಜೆ-7. ಕೇಂದ್ರ ಉಪವಿಭಾಗದ ಮಂಗಳೂರು ಉತ್ತರ-6, ಮಂಗಳೂರು ದಕ್ಷಿಣ-15, ಉರ್ವ-4, ಮಂಗಳೂರು ಪೂರ್ವ-13.
ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 105 ಸಾರ್ವಜನಿಕ ಗಣೇಶೋತ್ಸವ ಗಳು ನಡೆಯಲಿವೆ.
ಬಂಟ್ವಾಳ ನಗರ-11, ಬಂಟ್ವಾಳ ಗ್ರಾಮಾಂತರ-15, ವಿಟ್ಲ-20, ಬೆಳ್ತಂಗಡಿ-24, ಧರ್ಮಸ್ಥಳ-19, ಪುಂಜಾಲಕಟ್ಟೆ-7, ವೇಣೂರು-20, ಪುತ್ತೂರು ನಗರ-15, ಪುತ್ತೂರು ಗ್ರಾಮಾಂತರ-17, ಉಪ್ಪಿನಂಗಡಿ-17, ಕಡಬ-13, ಸುಳ್ಯ-16, ಸುಬ್ರಹ್ಮಣ್ಯ -9, ಬೆಳ್ಳಾರೆ-18.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.