Udayavni Special

ಮಲ್ಪೆ ಮುಖ್ಯ ರಸ್ತೆ: ಆಯ ತಪ್ಪಿದರೆ ಅಪಾಯ ಖಚಿತ

ದ್ವಿಚಕ್ರ ಸವಾರರಿಗೆ ಮೃತ್ಯುಕೂಪವಾಗಿ ಕಾಡುತ್ತಿದೆ ಕಾಂಕ್ರೀಟ್‌ ರಸ್ತೆಯ ಇಕ್ಕೆಲಗಳು

Team Udayavani, Oct 14, 2019, 5:01 AM IST

1310MLE1A

ಮಲ್ಪೆ: ರಾಷ್ಟ್ರೀಯ ಹೆದ್ದಾರಿ ಆದಿವುಡುಪಿ- ಮಲ್ಪೆ ಮುಖ್ಯರಸ್ತೆಯ ಕಲ್ಮಾಡಿಯಿಂದ ಮಲ್ಪೆ ಬಸ್ಸು ನಿಲ್ದಾಣದ ವರೆಗೆ ಸುಮಾರು ಒಂದೂವರೆ ಕಿ. ಮೀ. ಅಂತರದ ಕಾಂಕ್ರೀಟ್‌ ರಸ್ತೆಯ ಎರಡೂ ಬದಿಯಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡ ಗುಂಡಿಗಳು ನಿರ್ಮಾಣಗೊಂಡು ದ್ವಿಚಕ್ರ ಸವಾರರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.

ಪ್ರಮುಖ ಮೀನುಗಾರಿಕೆ ವಾಣಿಜ್ಯ ಬಂದರು, ಪ್ರವಾಸಿ ಕೇಂದ್ರವಾದ ಮಲ್ಪೆ ಬೀಚ್‌, ಸೈಂಟ್‌ ಮೇರೀಸ್‌ ದ್ವೀಪವನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯೂ ಇದಾಗಿರುವುದರಿಂದ ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದೆ.

ಎಲ್ಲಿಲ್ಲಿ ಹೊಂಡಗಳು ಇವೆ ?
ಇಲ್ಲಿನ ಫಿಶರೀಸ್‌ ಶಾಲೆ ಬಳಿಯ ಪೆಟ್ರೋಲ್‌ ಬಂಕಿನಿಂದ ಹಿಡಿದು ಮುಖ್ಯ ಬಸ್ಸು ನಿಲ್ದಾಣದವರೆಗೆ ರಸ್ತೆ ಬದಿಯಲ್ಲಿ ಹೊಂಡಗಳದ್ದೇ ಕಾರುಬಾರು. 200 ಮೀಟರ್‌ ಉದ್ದ ರಸ್ತೆಯ ಎರಡೂ ಬದಿಗಳಲ್ಲಿ ಅಲ್ಲಲ್ಲಿ ಭೀಮ ಗಾತ್ರದ ಹೊಂಡ 50ಕ್ಕೂ ಹೆಚ್ಚು ಇವೆೆ. ಮುಖ್ಯರಸ್ತೆಯ ಪೆಟ್ರೋಲ್‌ ಬಂಕ್‌ ಎದುರು, ಏಳೂರು ಮೊಗವೀರ ಭವನ, ರೋಯಲ್‌ ಬಾರ್‌ ಮುಂಭಾಗ, ಮೂರು ರಸ್ತೆ ಕೂಡುವಲ್ಲಿ, ಕಾರ್ತಿಕ್‌ ಬಿಲ್ಡಿಂಗ್‌ ಬಳಿಯಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಿವೆ. ಇಲ್ಲಿನ ದ್ವಿಚಕ್ರ ವಾಹನಗಳು ಬಿಡಿ, ಕಾರುಗಳ ಚಕ್ರವೂ ಹೊಂಡಕ್ಕೆ ಬಿದ್ದರೆ ತಬ್ಬಿಬ್ಟಾಗುವ ಸ್ಥಿತಿ ಇದೆ. ಈ ಅಪಾಯಕಾರಿ ರಸ್ತೆಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಿರುವುದು ಸರ್ವೇ ಸಾಮಾನ್ಯ.

ತೇಪೆಯೂ ನಡೆದಿಲ್ಲ
ರಸ್ತೆಯ ಬದಿಯಲ್ಲಿ ನಿರ್ಮಾಣವಾದ ಹೊಂಡವನ್ನು ಈ ಬಾರಿ ಮಳೆಗಾಲದ ಮೊದಲು ಆಡಳಿತ ಕನಿಷ್ಠ ತೇಪೆ ಮಾಡುವ ಪ್ರಯತ್ನವನ್ನು ನಡೆಸಿಲ್ಲ. ರಸ್ತೆಯ ಬದಿಯ ಹೊಂಡದಲ್ಲಿ ಮಳೆ ನೀರು ನಿಂತು ಹಲವಾರು ಬೈಕ್‌ ಸವಾರರು ರಸ್ತೆಯ ಅಂಚಿಗೆ ಬಂದು ಸ್ಕಿಡ್‌ ಆಗಿ ಬಿದ್ದು ಗಾಯಗೊಂಡ ಅನೇಕ ಘಟನೆಗಳು ನಡೆದಿವೆ.

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರಕಾರ ಇರುವುದರಿಂದ ಹಲವಾರು ವರ್ಷಗಳಿಂದ ನನೆ ಗುದಿಗೆ ಬಿದ್ದ ಈ ರಸ್ತೆಯನ್ನು ವಿಸ್ತರಣೆಗೊಳಿಸಲು ಈಗ ಸೂಕ್ತ ಕಾಲ. ಜನಪ್ರತಿನಿಧಿಗಳು ಇಚ್ಛಾಶಕ್ತಿಯಿಂದ ಅಭಿವೃದ್ಧಿಪಡಿಸಬೇಕೆಂಬ ಆಗ್ರಹ ನಾಗರಿಕರದ್ದು.

ಸಂಚಾರಕ್ಕೆ ಸಂಚಕಾರ
ಮಲ್ಪೆ ಮುಖ್ಯರಸ್ತೆಯಲ್ಲಿ ಒಂದೆಡೆ ವಾಹನಗಳ ಓಡಾಟ ಹೆಚ್ಚಾಗಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಒಂದೆಡೆಯಾದರೆ ಮತ್ತೂಂದಡೆ ರಸ್ತೆಯ ಬದಿಯ ದೊಡ್ಡ ಹೊಂಡಗಳಿಂದ ಮುಖ್ಯರಸ್ತೆಯಲ್ಲಿ ಹೋಗುವುದು ಒಂದು ಸಾಹಸವಾಗುತ್ತದೆ. ಸಂಚಾರಕ್ಕೆ ಸಂಚಕಾರವನ್ನು ತರುವ ಹೊಂಡಗಳನ್ನು ಮುಚ್ಚುವ ಕೆಲಸ ಅತೀ ಶೀಘ್ರದಲ್ಲಿ ಆಗಬೇಕಾಗಿದೆ.
-ಪ್ರದೀಪ್‌ ಟಿ. ಸುವರ್ಣ, ದ್ವಿಚಕ್ರ ಸವಾರರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಾಹ್ಯಾಕಾಶ-ಮನುಕುಲದ ನಡುವೆ ಹೊಸ ಇತಿಹಾಸ ಸೃಷ್ಟಿ

ಬಾಹ್ಯಾಕಾಶ-ಮನುಕುಲದ ನಡುವೆ ಹೊಸ ಇತಿಹಾಸ ಸೃಷ್ಟಿ

ಉಚಿತ ಆನ್ ಲೈನ್‌ ಲೈಬ್ರರಿ ಸಂಪನ್ಮೂಲಗಳ ಕುರಿತು ನಿಮಗೆ ತಿಳಿದಿದೆಯಾ

ಉಚಿತ ಆನ್ ಲೈನ್‌ ಲೈಬ್ರರಿ ಸಂಪನ್ಮೂಲಗಳ ಕುರಿತು ನಿಮಗೆ ತಿಳಿದಿದೆಯಾ

ಕೋವಿಡ್ ಕಳವಳ: ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ಸೀಲ್ ಡೌನ್

ಕೋವಿಡ್ ಕಳವಳ: ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ಸೀಲ್ ಡೌನ್

ತನ್ನ ವಿಭಿನ್ನ ಬೌಲಿಂಗ್ ಶೈಲಿಯ ರಹಸ್ಯ ಬಿಚ್ಚಿಟ್ಟ ಜಸ್ಪ್ರೀತ್ ಬುಮ್ರಾ

ತನ್ನ ವಿಭಿನ್ನ ಬೌಲಿಂಗ್ ಶೈಲಿಯ ರಹಸ್ಯ ಬಿಚ್ಚಿಟ್ಟ ಜಸ್ಪ್ರೀತ್ ಬುಮ್ರಾ

ಖಾಸಗಿ ಬಸ್ ಆರಂಭ: ಮಂಗಳೂರಿನಲ್ಲಿ ಬಸ್ ಗಳಿಗೆ ಸ್ಯಾನಿಟೈಸೇಷನ್

ಖಾಸಗಿ ಬಸ್ ಆರಂಭ: ಮಂಗಳೂರಿನಲ್ಲಿ ಬಸ್ ಗಳಿಗೆ ಸ್ಯಾನಿಟೈಸೇಷನ್

ಚಿಕ್ಕಮಗಳೂರಿನಲ್ಲಿ ಭಾರೀ ಬೆಂಕಿ ಅವಘಡ: ಹೊತ್ತಿ ಉರಿದ ಟಯರ್ ಅಂಗಡಿ

ಚಿಕ್ಕಮಗಳೂರಿನಲ್ಲಿ ಭಾರೀ ಬೆಂಕಿ ಅವಘಡ: ಹೊತ್ತಿ ಉರಿದ ಟಯರ್ ಅಂಗಡಿ

ಮಹಾರಾಷ್ಟ್ರದಲ್ಲಿ ಸಮ – ಬೆಸ ರೀತಿ ಅಂಗಡಿ ಓಪನ್‌

ಮಹಾರಾಷ್ಟ್ರದಲ್ಲಿ ಸಮ – ಬೆಸ ರೀತಿ ಅಂಗಡಿ ಓಪನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ: ಇಂದು ನರ್ಮ್, ಗ್ರಾಮಾಂತರ ಬಸ್‌ ಓಡಾಟ ಅನುಮಾನ

ಉಡುಪಿ: ಇಂದು ನರ್ಮ್, ಗ್ರಾಮಾಂತರ ಬಸ್‌ ಓಡಾಟ ಅನುಮಾನ

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ; ದ.ಕ. ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ; ದ.ಕ. ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ

ಹೆಜಮಾಡಿ ಮಹಾಲಿಂಗೇಶ್ವರ ದೇಗುಲ: ಭೂದಾನ ಶಾಸನ ಪತ್ತೆ

ಹೆಜಮಾಡಿ ಮಹಾಲಿಂಗೇಶ್ವರ ದೇಗುಲ: ಭೂದಾನ ಶಾಸನ ಪತ್ತೆ

ನಿಟ್ಟೂರು, ಕಿನ್ನಿಮೂಲ್ಕಿ ವಾರ್ಡ್‌: ಉಕ್ಕುವ ಕೊಳಚೆ, ರೋಗಭೀತಿ, ಸೊಳ್ಳೆ ಕಾಟದ ಮಳೆಗಾಲ?

ನಿಟ್ಟೂರು, ಕಿನ್ನಿಮೂಲ್ಕಿ ವಾರ್ಡ್‌: ಉಕ್ಕುವ ಕೊಳಚೆ, ರೋಗಭೀತಿ, ಸೊಳ್ಳೆ ಕಾಟದ ಮಳೆಗಾಲ?

ಸ್ವರ್ಣಾ ನದಿಯ ನೀರಾವರಿ ಯೋಜನೆ: ಸ್ಥಳ ಪರಿಶೀಲನೆ

ಸ್ವರ್ಣಾ ನದಿಯ ನೀರಾವರಿ ಯೋಜನೆ: ಸ್ಥಳ ಪರಿಶೀಲನೆ

MUST WATCH

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

ಹೊಸ ಸೇರ್ಪಡೆ

ಕೋವಿಡ್ ವಾರಿಯರ್ಸ್‌ ಸೇವೆ ಶ್ಲಾಘನೆ-ಅಭಿನಂದನೆ

ಕೋವಿಡ್ ವಾರಿಯರ್ಸ್‌ ಸೇವೆ ಶ್ಲಾಘನೆ-ಅಭಿನಂದನೆ

ಬಾಹ್ಯಾಕಾಶ-ಮನುಕುಲದ ನಡುವೆ ಹೊಸ ಇತಿಹಾಸ ಸೃಷ್ಟಿ

ಬಾಹ್ಯಾಕಾಶ-ಮನುಕುಲದ ನಡುವೆ ಹೊಸ ಇತಿಹಾಸ ಸೃಷ್ಟಿ

01-June-03

ಹೊಸದಾಗಿ 6 ಮಂದಿಗೆ ವಕ್ಕರಿಸಿದ ಮಹಾಮಾರಿ

ವಿಪಕ್ಷದ ನಿಗೂಢ ನಡೆ; ನಕ್ಷೆ ತಿದ್ದುಪಡಿಗೆ ಮುಂದಾದ ನೇಪಾಲ

ವಿಪಕ್ಷದ ನಿಗೂಢ ನಡೆ; ನಕ್ಷೆ ತಿದ್ದುಪಡಿಗೆ ಮುಂದಾದ ನೇಪಾಲ

ಉಚಿತ ಆನ್ ಲೈನ್‌ ಲೈಬ್ರರಿ ಸಂಪನ್ಮೂಲಗಳ ಕುರಿತು ನಿಮಗೆ ತಿಳಿದಿದೆಯಾ

ಉಚಿತ ಆನ್ ಲೈನ್‌ ಲೈಬ್ರರಿ ಸಂಪನ್ಮೂಲಗಳ ಕುರಿತು ನಿಮಗೆ ತಿಳಿದಿದೆಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.