Udayavni Special

ಒಂದೇ ಮಳೆಗೆ ಉಡುಪಿ-ಮಣಿಪಾಲ ಹೆದ್ದಾರಿಯಲ್ಲಿ ಅವಾಂತರ

Udupi-Manipal Highway on the same rainfall

Team Udayavani, Jun 12, 2019, 6:10 AM IST

heddari-avantara

ಉಡುಪಿ: ಚತುಷ್ಪಥ ಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ 169ಎಯ ಉಡುಪಿ-ಮಣಿಪಾಲ ರಸ್ತೆ ಸೋಮವಾರ ತಡರಾತ್ರಿ ಸುರಿದ ಮೊದಲ ಮಳೆಗೆ ಅಪಾಯಕಾರಿಯಾಗಿ ಪರಿಣಮಿಸಿತು.

ಕಾಮಗಾರಿ ಹಿನ್ನೆಲೆಯಲ್ಲಿ ಮಳೆ ಸಂಬಂಧಿ ತೊಂದರೆ ಹಾಗೂ ಕೆಲವೆಡೆ ಒಟ್ಟು ಕಾಮಗಾರಿಯ ಕುರಿತು ಸಾರ್ವಜನಿಕರ ಅಸಮಾಧಾನ, ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಉಡುಪಿ ಶಾಸಕ ಕೆ.ರಘುಪತಿ ಭಟ್‌ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.

ರಸ್ತೆಗೆ ಕೆಸರು
ಸಿಂಡಿಕೇಟ್‌ ಸರ್ಕಲ್‌-ಲಕ್ಷ್ಮೀಂದ್ರನಗರ ಭಾಗದ ಚರಂಡಿ ನೀರು, ಮಳೆನೀರು ಹಾಗೂ ಕಾಮಗಾರಿಗಾಗಿ ಅಗೆದ ಮಣ್ಣು ಐನಾಕ್ಸ್‌ ಚಿತ್ರಮಂದಿರ ಎದುರಿನ ರಸ್ತೆ ಆವರಿಸಿದ ಪರಿಣಾಮ ವಾಹನ ಚಾಲಕರು ತೊಂದರೆಗೀಡಾದರು. “ನಿನ್ನೆ ರಾತ್ರಿ ಎರಡು ಬೈಕ್‌ಗಳು ಸ್ಕಿಡ್‌ ಆಗಿ ಬಿದ್ದಿವೆ’ ಎಂದು ಸ್ಥಳೀಯರು ತಿಳಿಸಿದರು. ಈ ಸ್ಥಳವನ್ನು ಕೂಡ ಶಾಸಕರು ಖುದ್ದಾಗಿ ವೀಕ್ಷಿಸಿದರು.

ಜಾಗ ಪೂರ್ಣ ಬಳಕೆಗೆ ಸೂಚನೆ
ವಿ.ಪಿ.ನಗರ ಮತ್ತು ಲಕ್ಷ್ಮೀಂದ್ರನಗರದ ಕೆಲವೆಡೆ ಹೆದ್ದಾರಿಗಾಗಿ ಮೀಸಲಿಟ್ಟ ಸರಕಾರಿ ಜಾಗವನ್ನು ಪೂರ್ಣವಾಗಿ ಬಳಸಿಲ್ಲ. ಇದರಿಂದಾಗಿ ಬಸ್‌ ಅಥವಾ ಇತರ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಸಮಸ್ಯೆಯಾಗಲಿದೆ. ಈ ಜಾಗವನ್ನು ಪೂರ್ಣವಾಗಿ ಬಳಕೆ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದರು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು “ಲಭ್ಯ ಸರಕಾರಿ ಜಾಗವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಈಗ ಕೆಲವೆಡೆ ಗುರುತು ಹಾಕಿದ ಜಾಗಕ್ಕಿಂತ ಒಳಭಾಗದಲ್ಲಿ ನಿರ್ಮಿಸಿರುವ ಚರಂಡಿ/ ಫ‌ುಟ್‌ಪಾತ್‌ನಲ್ಲಿ ಫ‌ುಟ್‌ಪಾತ್‌ನ್ನು ಮಾತ್ರ ಉಳಿಸಿ ಚರಂಡಿಯನ್ನು ರಸ್ತೆಗಾಗಿ ಮೀಸಲಿಟ್ಟ ಜಾಗದ ಅಂಚಿನಲ್ಲಿ ಪ್ರತ್ಯೇಕವಾಗಿ ರಚಿಸಬೇಕು. ಬಸ್‌ ಬೇ, ಬಸ್‌ ನಿಲ್ದಾಣಗಳಿಗೆ ರಸ್ತೆ ಅಂಚಿನ ಸ್ಥಳವನ್ನು ಬಳಕೆ ಮಾಡಬೇಕು. ಈಗ ನಿಗದಿ ಮಾಡಿರುವ 100 ಅಡಿ ಅಗಲ ಕೂಡ ಮುಂದಿನ 5 ವರ್ಷಗಳ ಅನಂತರ ಸಾಕಾಗದು. ಹಿಂದೆ ಕಲ್ಸಂಕ- ಕಡಿಯಾಳಿ ಭಾಗದಲ್ಲಿ 80 ಅಡಿ ಅಗಲಗೊಳಿಸುವಾಗಲೇ ಕೆಲವರು “ಇಷ್ಟು ಅಗತ್ಯವಿಲ್ಲ. 50 ಅಡಿ ಸಾಕು’ ಎಂದಿದ್ದರು. ಆದರೆ ಈಗ ಅಲ್ಲಿ 80 ಅಡಿ ಕೂಡ ಸಾಕಾಗುತ್ತಿಲ್ಲ ಎಂದು ಹೇಳಿದರು.

ಯು-ಟರ್ನ್ ಡಿಸಿ ಗಮನಕ್ಕೆ
ಲಕ್ಷ್ಮೀಂದ್ರನಗರ- ವಿ.ಪಿ.ನಗರದಲ್ಲಿ ರಸ್ತೆ ಸಮತಟ್ಟು ಇಲ್ಲದುದರಿಂದ ಅಲ್ಲಿ ಯು-ಟರ್ನ್ ನಿರ್ಮಾಣ ಸಾಧ್ಯವೇ ಎಂಬುದನ್ನು ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಆದರೂ ನನ್ನ ಪ್ರಯತ್ನ ನಡೆಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ಮಳೆನೀರು ಹರಿಯುವ ಚರಂಡಿಗೆ ವಸತಿ ಸಂಕೀರ್ಣ, ಹೊಟೇಲ್‌ಗ‌ಳ ಕೊಳಚೆ ನೀರನ್ನು ಕೂಡ ಬಿಡುತ್ತಿರುವುದು, ಕಾಮಗಾರಿ ಸ್ಥಳದಲ್ಲಿ ಸೂಕ್ತ ಎಚ್ಚರಿಕೆ ಫ‌ಲಕ, ಮಾರ್ಗಸೂಚಿ ಫ‌ಲಕಗಳನ್ನು ಅಳವಡಿಸದಿರುವ ಬಗ್ಗೆಯೂ ಸ್ಥಳೀಯರು ದೂರಿದರು.

ವಾರದ ಗಡುವು
ತಾತ್ಕಾಲಿಕ ಚರಂಡಿ, ಒಳರಸ್ತೆಗಳ ಸಂಪರ್ಕ ಮೊದಲಾದ ಕೆಲಸಗಳು ಒಂದು ವಾರದೊಳಗೆ ಪೂರ್ಣಗೊಳ್ಳಬೇಕು. ನಾನು ಮುಂದಿನ ವಾರ ಮತ್ತೂಮ್ಮೆ ಇದೇ ರೀತಿ ಸ್ಥಳ ಭೇಟಿ ಮಾಡಿ ಪರಿಶೀಲಿಸುತ್ತೇನೆ ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.

ನಗರಸಭಾ ಸದಸ್ಯರಾದ ಕಕ್ಕುಂಜೆ ಬಾಲಕೃಷ್ಣ ಶೆಟ್ಟಿ, ಭಾರತಿ ಪ್ರಶಾಂತ್‌, ಅಶೋಕ್‌, ನಾಗರಿಕ ಸಮಿತಿಯ ಅಧ್ಯಕ್ಷ ರವೀಂದ್ರ ಕಾಮತ್‌, ಡಾ| ಸುರೇಶ್‌ ಶೆಣೈ, ರತ್ನಾಕರ್‌ ಶೆಟ್ಟಿಗಾರ್‌ ಉಪಸ್ಥಿತರಿದ್ದರು.

ರಸ್ತೆ ಸಂಪರ್ಕ ಸ್ಥಳಕ್ಕೆ ಜಲ್ಲಿಪುಡಿ
ಒಳರಸ್ತೆಗಳು ಮುಖ್ಯರಸ್ತೆಯನ್ನು ಸಂಪರ್ಕಿಸುವ ಸ್ಥಳದಲ್ಲಿ ಇತ್ತೀಚೆಗೆ ಮಣ್ಣು ಹಾಕಲಾಗಿದೆ. ಆದರೆ ಆ ಮಣ್ಣು ಒಂದು ಮಳೆಗೆ ಕೊಚ್ಚಿ ಹೋಗಿದೆ. ಕೆಲವೆಡೆ ಕುಸಿತ ಉಂಟಾಗಿದೆ ಎಂದು ಸ್ಥಳೀಯರು ಶಾಸಕರ ಗಮನಕ್ಕೆ ತಂದರು.

ಮಣ್ಣನ್ನು ತೆಗೆದು ಅಲ್ಲಿ ತಾತ್ಕಾಲಿಕವಾಗಿ ಜಲ್ಲಿಪುಡಿ ಮಿಶ್ರಣವನ್ನು ಹಾಕಿ ಗಟ್ಟಿಗೊಳಿಸುವಂತೆ ಶಾಸಕರು ಹೆದ್ದಾರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ್‌ ಅವರಿಗೆ ಸೂಚಿಸಿದರು. ಚರಂಡಿ ಮೇಲೆ ನಿರ್ಮಾಣವಾಗಿರುವ ಫ‌ುಟ್‌ಪಾತ್‌ನ ಹಲವೆಡೆ ಇನ್ನೂ ಕೂಡ ಕಾಂಕ್ರೀಟ್‌ ಸ್ಲಾéಬ್‌ಗಳನ್ನು ಹಾಕದೆ ಬಿಟ್ಟಿರುವುದರಿಂದ ಪಾದಚಾರಿಗಳು ಚರಂಡಿಯೊಳಗೆ ಬೀಳುವ ಅಪಾಯವಿದೆ ಎಂದು ಸ್ಥಳೀಯರು ಶಾಸಕರ ಗಮನ ಸೆಳೆದರು. ಇದನ್ನು ಶೀಘ್ರ ಮುಚ್ಚಲು ಶಾಸಕರು ಸೂಚಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೊಲಂಬಿಯಾದಲ್ಲಿ ಶವ ಪೆಟ್ಟಿಗೆಯಾಗಿ ಬದಲಾಗುವ ಮಂಚ!

ಕೊಲಂಬಿಯಾದಲ್ಲಿ ಶವ ಪೆಟ್ಟಿಗೆಯಾಗಿ ಬದಲಾಗುವ ಮಂಚ!

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದು ಬೇಡ: ಸಚಿವರಿಗೆ ಎಸ್ ಜಿ ಸಿದ್ದರಾಮಯ್ಯ ಪತ್ರ

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದು ಬೇಡ: ಸಚಿವರಿಗೆ ಎಸ್ ಜಿ ಸಿದ್ದರಾಮಯ್ಯ ಪತ್ರ

ದಿಲ್ಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿ ಮಡಿಲು ಸೇರಿದ 5 ವರ್ಷದ ವಿಹಾನ್

ದಿಲ್ಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿ ಮಡಿಲು ಸೇರಿದ 5 ವರ್ಷದ ವಿಹಾನ್!

ಶಸ್ತ್ರಾಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ಸೋಂಕು ದೃಢ: ಉಡುಪಿ ಎಸ್ ಪಿ ಕಚೇರಿ ಸೀಲ್ ಡೌನ್?

ಶಸ್ತ್ರಾಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ಸೋಂಕು ದೃಢ: ಉಡುಪಿ ಎಸ್ ಪಿ ಕಚೇರಿ ಸೀಲ್ ಡೌನ್?

ದುಬಾರಿ ವಸ್ತುಗಳು : ಪೆನ್ಸಿಲ್‌ : ಬೆಲೆ: 9 ಲಕ್ಷ 68 ಸಾವಿರ ರೂ

ದುಬಾರಿ ವಸ್ತುಗಳು : ಅಟೋಮ್ಯಾಟಿಕ್‌ ಲೇಸ್‌ ಶೂ ಬೆಲೆ ಕೇಳಿದ್ರೆ ಹುಬ್ಬೇರಿಸುತ್ತೀರಿ!

ಶಾಸಕ ರಘುಪತಿ ಭಟ್ ರವರ ಉಚಿತ ಬಸ್ಸಿನ ಸೇವೆ ರಾಜ್ಯಕ್ಕೆ ಹೊಸ ಪ್ರಯೋಗ – ಶೋಭಾ ಕರಂದ್ಲಾಜೆ

ಶಾಸಕ ರಘುಪತಿ ಭಟ್ ರವರ ಉಚಿತ ಬಸ್ಸಿನ ಸೇವೆ ರಾಜ್ಯಕ್ಕೆ ಹೊಸ ಪ್ರಯೋಗ : ಶೋಭಾ ಕರಂದ್ಲಾಜೆ

ಕೋವಿಡ್: ಎರಡು ತಿಂಗಳ ಬಳಿಕ ಪುನರಾರಂಭ-ಹಲವು ವಿಮಾನ ಸಂಚಾರ ರದ್ದು

ಕೋವಿಡ್: ಎರಡು ತಿಂಗಳ ಬಳಿಕ ಪುನರಾರಂಭ-ಹಲವು ವಿಮಾನ ಸಂಚಾರ ರದ್ದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಸ್ತ್ರಾಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ಸೋಂಕು ದೃಢ: ಉಡುಪಿ ಎಸ್ ಪಿ ಕಚೇರಿ ಸೀಲ್ ಡೌನ್?

ಶಸ್ತ್ರಾಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ಸೋಂಕು ದೃಢ: ಉಡುಪಿ ಎಸ್ ಪಿ ಕಚೇರಿ ಸೀಲ್ ಡೌನ್?

ಶಾಸಕ ರಘುಪತಿ ಭಟ್ ರವರ ಉಚಿತ ಬಸ್ಸಿನ ಸೇವೆ ರಾಜ್ಯಕ್ಕೆ ಹೊಸ ಪ್ರಯೋಗ – ಶೋಭಾ ಕರಂದ್ಲಾಜೆ

ಶಾಸಕ ರಘುಪತಿ ಭಟ್ ರವರ ಉಚಿತ ಬಸ್ಸಿನ ಸೇವೆ ರಾಜ್ಯಕ್ಕೆ ಹೊಸ ಪ್ರಯೋಗ : ಶೋಭಾ ಕರಂದ್ಲಾಜೆ

ಕೃಷ್ಣನೂರಿನಲ್ಲಿ ಮುಂದುವರಿದ ಕೋವಿಡ್ ಕಾಟ

ಕೃಷ್ಣನೂರಿನಲ್ಲಿ ಮುಂದುವರಿದ ಕೋವಿಡ್ ಕಾಟ: ಇಂದು ಮತ್ತೆ 16 ಮಂದಿಗೆ ಸೋಂಕು ಪತ್ತೆ

ಮಹಾರಾಷ್ಟ್ರ ರಾಜ್ಯದಲ್ಲಿರುವವರು ನಮ್ಮ ಸಹೋದರರೆ ; ಕಟೀಲ್ 

ಮಹಾರಾಷ್ಟ್ರ ರಾಜ್ಯದಲ್ಲಿರುವವರು ನಮ್ಮ ಸಹೋದರರೆ ; ಕಟೀಲ್ 

ರವಿವಾರದ ಲಾಕ್‌ಡೌನ್ : ಕಡಲಿಗಿಳಿಯದ ಮೀನುಗಾರರು

ರವಿವಾರದ ಲಾಕ್‌ಡೌನ್ : ಕಡಲಿಗಿಳಿಯದ ಮೀನುಗಾರರು

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಕೊಲಂಬಿಯಾದಲ್ಲಿ ಶವ ಪೆಟ್ಟಿಗೆಯಾಗಿ ಬದಲಾಗುವ ಮಂಚ!

ಕೊಲಂಬಿಯಾದಲ್ಲಿ ಶವ ಪೆಟ್ಟಿಗೆಯಾಗಿ ಬದಲಾಗುವ ಮಂಚ!

ವಾಹನ ಮಾಲೀಕರಿಗೂ ಬಿತ್ತು ಅನಾವಶ್ಯಕ “ದಂಡ’!

ವಾಹನ ಮಾಲೀಕರಿಗೂ ಬಿತ್ತು ಅನಾವಶ್ಯಕ “ದಂಡ’!

ಕೋವಿಡ್ ವಿರುದ್ದ ಸ್ವಯಂ ಲಾಕ್ ಡೌನ್ ಗೆ ಮುಂದಾದ ವಿಟ್ಲ ನಾಗರಿಕರು

ಕೋವಿಡ್ ವಿರುದ್ದ ಸ್ವಯಂ ಲಾಕ್ ಡೌನ್ ಗೆ ಮುಂದಾದ ವಿಟ್ಲ ನಾಗರಿಕರು

ಜಮ್ಮು-ಕಾಶ್ಮೀರ: ಕುಲ್ಗಾಮ್ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರ ಸಾವು

ಜಮ್ಮು-ಕಾಶ್ಮೀರ: ಕುಲ್ಗಾಮ್ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರ ಸಾವು

25-May-19

ಆಯುರ್ವೇದದಿಂದ ಕೋವಿಡ್ ತಡೆ ಸಾಧ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.