Udayavni Special

ಉಡುಪಿ: ಬಿಜೆಪಿಯ ಕೈ ಹಿಡಿದದ್ದು ಹೊಸ ಮತದಾರರು?

Team Udayavani, May 17, 2018, 11:55 AM IST

hosa-matadara.jpg

ಉಡುಪಿ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ “ಸ್ವೀಪ್‌’ ಮಾಡಿದ ಕೀರ್ತಿ ಬಿಜೆಪಿಗೆ. ಮೋದಿ ಅಲೆ ಮತ್ತು “ಹಿಂದುತ್ವ’ ಫ್ಯಾಕ್ಟರ್‌ ಅಂಶಗಳು ಬಿಜೆಪಿಯನ್ನು ಕೈ ಹಿಡಿದಿರ ಬಹುದು. ಆದರೆ ಹೊಸ ಮತದಾರರು ಮೋದಿ ಅಲೆಗೆ ತಲೆದೂಗಿದರೇ?

ಇಂಥದೊಂದು ವ್ಯಾಖ್ಯಾನ ಕೇಳಿ ಬಂದಿರು ವುದು ಉಡುಪಿ ಜಿಲ್ಲೆಯ ಕ್ಷೇತ್ರಗಳಲ್ಲಿ. ಪ್ರಧಾನಿ ಮೋದಿ ಉಡುಪಿಗೆ ಬಂದ ಬಳಿಕ ಆಲೆಯ ತೀವ್ರತೆ ಹೆಚ್ಚಿತ್ತು. 2013ಕ್ಕಿಂತ ಈ ಬಾರಿ ಸರಾಸರಿ ಒಂದು ಕ್ಷೇತ್ರಕ್ಕೆ 20 ಸಾವಿರದಂತೆ ಐದೂ ಕ್ಷೇತ್ರಗಳಲ್ಲಿ 1 ಲಕ್ಷ ಹೊಸ ಮತದಾರರಿದ್ದರು. ಇವರಲ್ಲಿ ಬಹುತೇಕರು ಮೋದಿಯನ್ನು ಮೆಚ್ಚಿ ಕೊಂಡಂತಿದೆ. ಮೋದಿಯವರಿಗೂ ಈ ಅಂಶ  ಬಹುಶಃ ಗೊತ್ತಿತ್ತು. ಯಾಕೆಂದರೆ, ಅವರೂ ತಮ್ಮ ಭಾಷಣದಲ್ಲಿ ಕಾಮನ್‌ ವೆಲ್ತ್‌ ಬೆಳ್ಳಿ ಪದಕ ವಿಜೇತ ಗುರುರಾಜ್‌ ಅವರ ಬಗ್ಗೆ ಎರಡೆರಡು ಬಾರಿ ಪ್ರಸ್ತಾಪಿಸಿ ಅಭಿನಂದಿಸಿದ್ದರು. ಇಲ್ಲಿನ (ಕರಾವಳಿಯ) ಯುವಜನರೆಲ್ಲಾ ಬಹಳ ವಿದ್ಯಾವಂತರು, ಬುದ್ಧಿವಂತರು, ಪರಿಶ್ರಮಿಗಳು ಎಂದು ಹೊಗಳಿದ್ದರು.

ಸ್ವಾವಲಂಬನೆಯ ಆಸಕ್ತಿ ಉಳ್ಳ ನಿಮ್ಮಂಥವರಿಗೇ ಸಹಾಯ ಮಾಡಲು ಮುದ್ರಾ ಯೋಜನೆ ತಂದಿದ್ದಾಗಿಯೂ ಹೇಳಿದ್ದರು. ಸ್ಥಳೀಯ ಯುವಜನರು ಹೊರಗೆಲ್ಲೋ ಹೋಗಿ ದುಡಿಯುವುದಕ್ಕಿಂತ ಇಲ್ಲಿಯೇ ಉದ್ಯೋಗ ಸೃಷ್ಟಿ ಯಾಗಬೇಕು ಎಂದಿದ್ದರು. ಇವೆಲ್ಲವೂ ಯುವಜನರ ಮೇಲೆ ಪ್ರಭಾವ ಬೀರಲು ಮಾಡಿದ ಪ್ರಯತ್ನ. ಇವೆಲ್ಲವೂ ಫ‌ಲ ಕೊಟ್ಟಂತಿದೆ.

ಮತ್ತಷ್ಟು ಅಂಶ
ಪ್ರಮೋದ್‌ ಮಧ್ವರಾಜ್‌ ಬಿಜೆಪಿಗೆ ಸೇರ್ಪಡೆ ಗೊಳ್ಳುತ್ತಾರೆಂಬ ಗುಮಾನಿ ಕಾಂಗ್ರೆಸ್‌ ಪಕ್ಷ ದೊಳಗಿನ ತಲ್ಲಣಕ್ಕೆ ಕಾರಣವಾಯಿತು. ಇದೂ ಸಹ ಬಿಜೆಪಿಗೆ ಅನುಕೂಲ ಕಲ್ಪಿಸಿತು. ಹಾಗೆಯೇ ಕಾಪುವಿನಲ್ಲಿ ಪಕ್ಷದೊಳಗಿದ್ದ ಕೆಲವು ಅಸಮಾ ಧಾನಗಳು ವಿನಯಕುಮಾರ ಸೊರಕೆಗೆ ಮುಳುವಾಯಿತು ಎನ್ನಲಾಗುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಕೆಲವು ನಾಯಕರ ಬಗೆಗೆ ಪಕ್ಷ ದೊಳಗೆ ಅಸಮಾಧಾನವಿತ್ತು ಎನ್ನಲಾಗುತ್ತಿದೆ. 

ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಪೂಜಾರಿಯವರು ಗೆದ್ದೇ ಗೆಲ್ಲು ತ್ತೇವೆಂಬ ಹುಮ್ಮಸ್ಸು ಹೊಂದಿದ್ದರೂ ಅಲ್ಲಿ ಬಿಜೆಪಿ ಗೆಲ್ಲಲು ಮೋದಿ ಅಲೆ ಹಾಗೂ ಸುಕುಮಾರ ಶೆಟ್ಟಿಯವರ ಮೇಲಿದ್ದ ಅನುಕಂಪ ಎಂಬ ಅಭಿಪ್ರಾಯವಿದೆ. ಹೊನ್ನಾವರದಲ್ಲಿ ಪರೇಶ ಮೇಸ್ತರ ಸಾವು, ಈ ಕುರಿತು ಗಂಗೊಳ್ಳಿ ಮೊದ ಲಾದೆಡೆ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ಖಾರ್ವಿ ಸಮುದಾಯದವರ ಪಾಲ್ಗೊಳ್ಳುವಿಕೆ ಇಲ್ಲಿ ಪರಿಣಾಮ ಬೀರಿರುವಂತಿದೆ. 

ಇನ್ನು ಕುಂದಾಪುರ ಮತ್ತು ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಷ್ಟೊಂದು ಗೆಲ್ಲುವ ವಿಶ್ವಾಸ ಹೊಂದಿರಲಿಲ್ಲ. ಇದಕ್ಕೆ ಪೂರಕವಾಗಿ ಕುಂದಾ ಪುರದ ಕಾಂಗ್ರೆಸ್‌ ರಾಕೇಶ್‌ ಮಲ್ಲಿಯವರು ಹೊರಗಿನವರು ಎಂಬ ಅಪವಾದಕ್ಕೆ ಗುರಿ ಯಾದರು. ಕಾರ್ಕಳದಲ್ಲಿ ಅಭ್ಯರ್ಥಿ ಆಯ್ಕೆ ಯಲ್ಲಿ ಉಂಟಾದ ಗೊಂದಲ ಬಿಜೆಪಿಗೆ ವರದಾನ ವಾಯಿತು ಎಂಬ ವ್ಯಾಖ್ಯಾನ ಪ್ರಚಲಿತದಲ್ಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪಂಜಾಬ್ ಸೋಲಿಗೆ ಕಾರಣವಾಯ್ತು ಅಂಪಾಯರ್ ತಪ್ಪು ನಿರ್ಧಾರ! ಗರಂ ಆದ ಸೆಹವಾಗ್

ಪಂಜಾಬ್ ಸೋಲಿಗೆ ಕಾರಣವಾಯ್ತು ಅಂಪಾಯರ್ ತಪ್ಪು ನಿರ್ಧಾರ! ಗರಂ ಆದ ಸೆಹವಾಗ್

ಏಳು ದಶಕಗಳಿಂದ ಕತ್ತಲೆಯಲ್ಲಿ ಬದುಕುತ್ತಿದ್ದ ಗಡಿ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ

ಏಳು ದಶಕಗಳಿಂದ ಕತ್ತಲೆಯಲ್ಲಿ ಬದುಕುತ್ತಿದ್ದ ಗಡಿ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ

ನದಿ ಪಾತ್ರವನ್ನೇ ಬದಲಿಸಿದ ಉತ್ತರಾ ನೆರೆ: ಕಾಪು ಲೈಟ್ ಹೌಸ್ ನ ಸಂಪರ್ಕ ವ್ಯವಸ್ಥೆ ಕಡಿತ

ಹೊಳೆ ಹರಿವಿನ ದಿಕ್ಕನ್ನೇ ಬದಲಿಸಿದ ಉತ್ತರಾ ನೆರೆ:ಕಾಪು ಲೈಟ್ ಹೌಸ್ ನ ಸಂಪರ್ಕ ವ್ಯವಸ್ಥೆ ಕಡಿತ

ಖುಷಿ ಖುಷಿಯ ಸಂಬಂಧಗಳ ಬದುಕು

ಖುಷಿ ಖುಷಿಯ ಸಂಬಂಧಗಳ ಬದುಕು

Camel-Double-Hump

LACಯಲ್ಲಿ ಅವಳಿ ಡುಬ್ಬಗಳ ಒಂಟೆ ಗಸ್ತು

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನದಿ ಪಾತ್ರವನ್ನೇ ಬದಲಿಸಿದ ಉತ್ತರಾ ನೆರೆ: ಕಾಪು ಲೈಟ್ ಹೌಸ್ ನ ಸಂಪರ್ಕ ವ್ಯವಸ್ಥೆ ಕಡಿತ

ಹೊಳೆ ಹರಿವಿನ ದಿಕ್ಕನ್ನೇ ಬದಲಿಸಿದ ಉತ್ತರಾ ನೆರೆ:ಕಾಪು ಲೈಟ್ ಹೌಸ್ ನ ಸಂಪರ್ಕ ವ್ಯವಸ್ಥೆ ಕಡಿತ

ಕುಂಜೂರು‌ ದೇವಳ ಜಲಾವೃತ್ತ: ‘ನೆರೆನೀರು’ ನೆನಪಿಸಿದ “ಪುರಾಣ”

ಕುಂಜೂರು‌ ದೇವಳ ಜಲಾವೃತ್ತ: ‘ನೆರೆನೀರು’ ನೆನಪಿಸಿದ “ಪುರಾಣ”

ಉಡುಪಿ ಇನ್ನು 2ದಿನ ಮಳೆ: ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಡಿಸಿ ಸೂಚನೆ

ಉಡುಪಿ ಇನ್ನು 2ದಿನ ಮಳೆ: ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಡಿಸಿ ಸೂಚನೆ

ಅಂಬಲಪಾಡಿ ಗ್ರಾಮಾಂತರ ಪ್ರದೇಶದಲ್ಲಿ ನೆರೆ ಹಾವಳಿ: ಯುವಕರಿಂದ ಸುರಕ್ಷಾ ಕ್ರಮ

ಅಂಬಲಪಾಡಿ ಗ್ರಾಮಾಂತರ ಪ್ರದೇಶದಲ್ಲಿ ನೆರೆ ಹಾವಳಿ: ಯುವಕರಿಂದ ಸುರಕ್ಷಾ ಕ್ರಮ

ನಗರದಲ್ಲಿ ಜಲಪ್ರಳಯ

ನಗರದಲ್ಲಿ ಜಲಪ್ರಳಯ: ಪ್ರಕೃತಿ ವಿಕೋಪ ಎದುರಿಸಲು ಉಡುಪಿ ಜಿಲ್ಲಾಡಳಿತ ಎಷ್ಟು ಸನ್ನದ್ಧ?

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಪಂಜಾಬ್ ಸೋಲಿಗೆ ಕಾರಣವಾಯ್ತು ಅಂಪಾಯರ್ ತಪ್ಪು ನಿರ್ಧಾರ! ಗರಂ ಆದ ಸೆಹವಾಗ್

ಪಂಜಾಬ್ ಸೋಲಿಗೆ ಕಾರಣವಾಯ್ತು ಅಂಪಾಯರ್ ತಪ್ಪು ನಿರ್ಧಾರ! ಗರಂ ಆದ ಸೆಹವಾಗ್

ಏಳು ದಶಕಗಳಿಂದ ಕತ್ತಲೆಯಲ್ಲಿ ಬದುಕುತ್ತಿದ್ದ ಗಡಿ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ

ಏಳು ದಶಕಗಳಿಂದ ಕತ್ತಲೆಯಲ್ಲಿ ಬದುಕುತ್ತಿದ್ದ ಗಡಿ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ

ನದಿ ಪಾತ್ರವನ್ನೇ ಬದಲಿಸಿದ ಉತ್ತರಾ ನೆರೆ: ಕಾಪು ಲೈಟ್ ಹೌಸ್ ನ ಸಂಪರ್ಕ ವ್ಯವಸ್ಥೆ ಕಡಿತ

ಹೊಳೆ ಹರಿವಿನ ದಿಕ್ಕನ್ನೇ ಬದಲಿಸಿದ ಉತ್ತರಾ ನೆರೆ:ಕಾಪು ಲೈಟ್ ಹೌಸ್ ನ ಸಂಪರ್ಕ ವ್ಯವಸ್ಥೆ ಕಡಿತ

ಖುಷಿ ಖುಷಿಯ ಸಂಬಂಧಗಳ ಬದುಕು

ಖುಷಿ ಖುಷಿಯ ಸಂಬಂಧಗಳ ಬದುಕು

Camel-Double-Hump

LACಯಲ್ಲಿ ಅವಳಿ ಡುಬ್ಬಗಳ ಒಂಟೆ ಗಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.