ವೃದ್ಧೆಯ ಕಣ್ಣಿನಲ್ಲಿದ್ದ 9 ಸೆಂ. ಮೀ. ಹುಳಕ್ಕೆ  ಉಡುಪಿ ಪ್ರಸಾದ್ ನೇತ್ರಾಲಯದಲ್ಲಿ ಮುಕ್ತಿ 


Team Udayavani, Jun 7, 2021, 11:52 AM IST

ವೃದ್ಧೆಯ ಕಣ್ಣಿನಲ್ಲಿದ್ದ 9 ಸೆಂ. ಮೀ. ಹುಳಕ್ಕೆ  ಉಡುಪಿ ಪ್ರಸಾದ್ ನೇತ್ರಾಲಯದಲ್ಲಿ ಮುಕ್ತಿ 

ಉಡುಪಿ: ಅಪಾರವಾದ ಕಣ್ಣು ನೋವಿನಿಂದ ಪ್ರಸಾದ್ ನೇತ್ರಾಲಯಕ್ಕೆ ಬಂದ ಮಲ್ಪೆಯ 70 ವರ್ಷದ ವೃದ್ಧೆಯ ಬಲ ಕಣ್ಣಿನಿಂದ  ಸುಮಾರು 9  ಸೆ. ಮೀ . ಉದ್ದದಜೀವಂತ ಹುಳವನ್ನು ಯಶಸ್ವಿಯಾಗಿ ಹೊರತೆಗೆದು ನೆಮ್ಮದಿ ನೀಡಿದ ಘಟನೆ ನಡೆದಿದೆ.

ಪ್ರಸಾದ ನೇತ್ರಾಲಯದ ಮುಖ್ಯ ವೈದ್ಯ  ಕರ್ನಾಟಕ ರಾಜ್ಯೋತ್ಸವ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಡಾ . ಕೃಷ್ಣ ಪ್ರಸಾದ್ ಮತ್ತು ಅವರ ತಂಡ  ಭಾನುವಾರ ರಾತ್ರಿತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ಈ ಹುಳದಿಂದ ವೃದ್ಧೆಗೆ ಮುಕ್ತಿನೀಡಿದ್ದಾರೆ .

ನೇತ್ರದಲ್ಲಿನ ಹುಳಬಾಧೆ ಇಂದ ಪೀಡಿತರಾಗಿದ್ದ ವೃದ್ಧೆ , ಜೂ . 1 ರಂದು ಮಂಗಳವಾರ ಬೆಳಗ್ಗೆ ಪ್ರಸಾದ ನೇತ್ರಾಲಯಕ್ಕೆ ಭೇಟಿ ನೀಡಿದ್ದರು. ವಿಪರೀತ ಎಡ ಕಣ್ಣುನೋವಿನ ಬಗ್ಗೆ ವೈದ್ಯರ ಬಳಿ ಸಮಾಲೋಚಿಸಿದ್ದರು. ತುರ್ತಾಗಿ ಪರೀಕ್ಷಿಸಿದ  ಡಾ. ಕೃಷ್ಣಾಪ್ರಸಾದ್ ಜೀವಂತ ಹುಳು ಅಕ್ಷಿಪಟಲದ ಸುತ್ತು ತಿರುಗುತ್ತಲೇ ಇರುವುದನ್ನು ಗಮನಿಸಿ ತುರ್ತು ಚಿಕಿತ್ಸೆಗೆಸಿದ್ಧರಾದರು. ತಡಮಾಡಿದರೆ ಈ ಹುಳು ಮೆದುಳು ಪ್ರವೇಶಿಸಿದರೇ ಮತ್ತಷ್ಟು ಅಪಾಯವೆಂದು ಅರಿತ ಡಾ . ಕೃಷ್ಣಪ್ರಸಾದ್ ಅವರ ಸಹ ವೈದ್ಯರಾದ ಡಾ .ಅಪರ್ಣಾ ನಾಯಕ್ಇ ವರನ್ನೊಳಗೊಂಡ ತಂಡ ನೇತ್ರ  ಚಿಕಿತ್ಸೆಗೆ ಸಿದ್ಧತೆ ನಡೆಸಿತು. ಹುಳವನ್ನು ತತ್ ಕ್ಷಣ ನಿಷ್ಕ್ರಿಯಗೊಳಿಸಲು ಔಷಧಿಯನ್ನು ನೀಡಲಾಯಿತು. ಇದರ ಪರಿಣಾಮವೋ ಏನೋ ಎಡಗಣ್ಣಿನಲ್ಲಿದ್ದ ಹುಳು ಕಾಣದಾಯಿತು. ಅದೇ ಭಾಗದಲ್ಲಿ ಹುಳು ಸತ್ತಿರಬಹುದು ಎಂದು ಅಂದಾಜಿಸಲಾಯಿತು. ಕಣ್ಣು ನೋವು ಮಾಯವಾಯಿತು. ಇದರಿಂದ ತುಸು ನೆಮ್ಮದಿಪಡೆದ ವೃದ್ಧೆ ಮನೆಗೆ ತೆರಳಿದರು .

ಆದರೆ ಭಾನುವಾರ ಬಲಗಣ್ಣಿನಲ್ಲಿ ಮತ್ತೆ ನೋವು ಕಾಣಿಸಿಕೊಂಡಿತು. ವಿಪರೀತ ಕಣ್ಣು ಉರಿ ಮತ್ತು ಕಣ್ಣು ಕೆಂಪಾಯಿತು. ಈ ತನ್ಮಧ್ಯೆ ಮನೆಯವರಿಗೆ ಹುಳವೂ ಹರಿದು ಬರುವುದು ಖಂಡಿತ್.ಇದರಿಂದ ಭಯ ಭೀತರಾದ ಕುಟುಂಬದವರು ವೃದ್ಧೆಯನ್ನು ಪ್ರಸಾದ ನೇತ್ರಾಲಯಕ್ಕೆ ಮತ್ತೆ ಕರೆದುಕೊಂಡು ಬಂದರು.  ಕರೆಗೆ ತುರ್ತಾಗಿ ಸ್ಪಂದಿಸಿದ ಡಾ. ಕೃಷ್ಣಪ್ರಸಾದ್ ಮತ್ತು ಅವರ ತಂಡ ತಡಮಾಡದೆ ತುರ್ತು ಚಿಕಿತ್ಸೆ ಮಾಡಿಯೇ ಬಿಟ್ಟರು.  ಆಶ್ಚರ್ಯವೆಂಬಂತೆ ಸುಮಾರು 9 ಸೆಂ . ಮೀ. ಉದ್ದದ ಜೀವಂತಹುಳು ಹೊರಬಂತು.

26 ವರ್ಷಗಳ ಅನುಭವದಲ್ಲಿ ಒಮ್ಮೆ ರೆಟಿನಾ  ಹಿಂದಿನಿಂದ ಹಾಗೂ ಕಣ್ಣಿನ ಕುಣಿಕೆಯಿಂದ ಹದಿನೈದು ವರ್ಷಗಳ ಹಿಂದೆ ವಿಭಿನ್ನ ರೀತಿಯ ಹುಳವನ್ನು ತಾವೇ ಶಸ್ತ್ರ  ಚಿಕಿತ್ಸೆನಡೆಸಿ ಹೊರತೆಗೆದ್ದಿದ್ದೆವು. ಆದರೆ ಭಾನುವಾರ ಹೊರತೆಗೆದ ಹುಳು ನೇತ್ರದ ಹೊರಪದರದಿಂದ ಹೊರತೆಗೆದ ಪ್ರಥಮ ಹುಳುವಾಗಿದೆ ಎಂದು ಡಾ. ಕೃಷ್ಣಪ್ರಸಾದ್ ತಿಳಿಸಿದ್ದಾರೆ.  ಈ ಹುಳದ ಕುರಿತಾಗಿ ಮತ್ತಷ್ಟು ಅಧ್ಯಯನ ನಡೆಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಮಾಹಿತಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.