Udayavni Special

ಉಡುಪಿ ಶ್ರೀಕೃಷ್ಣ ಮಠ : ಚಿನ್ನದ ಗೋಪುರ: ಹಲವು ಪರಿಷ್ಕಾರಗಳು


Team Udayavani, Nov 25, 2018, 6:00 AM IST

d-24.jpg

ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಚಿನ್ನದ ತಗಡು ಹೊದೆಸುವ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. 

ಒಟ್ಟು 100 ಕೆ.ಜಿ. ಚಿನ್ನದಿಂದ ತಗಡು ತಯಾರಿಸುವ ಯೋಜನೆಗೆ ಇದುವರೆಗೆ ಸುಮಾರು 60 ಕೆ.ಜಿ. ಚಿನ್ನವನ್ನು ಭಕ್ತರು ನೀಡಿದ್ದಾರೆ. ಇದರಲ್ಲಿ ಚಿನ್ನವೂ ಇದೆ, ಹಣದ ರೂಪದ ಕೊಡುಗೆಯೂ ಇದೆ. ಒಟ್ಟು 2,500 ಚದರಡಿಯ ಗರ್ಭಗುಡಿಯ ಗೋಪುರಕ್ಕೆ ಹಿಂದೆ ತಾಮ್ರದ ತಗಡಿನ ಮೇಲೆ ಚಿನ್ನದ ತಗಡನ್ನು ಹೊದೆಸುವುದು ಎಂಬ ಯೋಜನೆ ಇತ್ತು. ಈಗ ಇದನ್ನು ಪರಿಷ್ಕರಿಸಲಾಗಿದೆ. ಪ್ರಸ್ತುತ ಬೆಳ್ಳಿಯ ತಗಡಿನ ಮೇಲೆ ಚಿನ್ನದ ತಗಡನ್ನು ಮಡಾಯಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸುಮಾರು 500 ಕೆ.ಜಿ. ಬೆಳ್ಳಿ ಹೆಚ್ಚುವರಿಯಾಗಿ ಬೇಕಾಗಿದೆ. ಗುಣಮಟ್ಟದ ಕಾರಣಕ್ಕಾಗಿ ಯೋಜನೆಯನ್ನು ಪರಿಷ್ಕರಿಸಲಾಗಿದೆ. ಸುಮಾರು 32 ಕೋ.ರೂ. ವೆಚ್ಚದ ಯೋಜನೆ ಇದು. 

ಪಾದರಸದ ಮೂಲಕ, ರ್ಯಾಕರಿ ತಂತ್ರಜ್ಞಾನದಿಂದ ಕಾಮ ಗಾರಿ ನಡೆಸಿದರೆ ಬಹಳಷ್ಟು ಚಿನ್ನ ಲುಪ್ತವಾಗುತ್ತದೆ ಎಂಬ ಕಾರಣಕ್ಕೆ ಬಂಗಾರವನ್ನು ಎರಕ ಹೊಯ್ದು ಯಂತ್ರದ ಮೂಲಕ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಗರಿಷ್ಠ ಶೇ. 98ರಷ್ಟು ಚಿನ್ನ ಕಾಮಗಾರಿಗೆ ಸಿಗು ತ್ತದೆ ಎಂಬ ವಿಶ್ವಾಸವಿದೆ. ಹಿಂದೆ ಚಪ್ಪಟೆಯ ತಗಡನ್ನು ಹೊದೆಸುವ ಗುರಿ ಹೊಂದಿದ್ದರೆ ಈಗ ಕುಶಲಕಲೆಯನ್ನು ಹೊಂದಿದ ಹೆಂಚಿನ ಆಕಾರದಲ್ಲಿ ತಗಡು ಹೊದೆಸಲು ನಿರ್ಧರಿಸಲಾಗಿದೆ. ಕಾಮಗಾರಿಯನ್ನು ಗೋಶಾಲೆ ಎದುರು ಸಾರ್ವಜನಿಕ ರಿಗೆ ಕಾಣಿಸುವಂತೆ ನಡೆಸಲು ನಿರ್ಧರಿಸಲಾಗಿದೆ. ಪಾರಂಪರಿಕವಾಗಿ ಚಿನ್ನದ ಕೆಲಸ ಮಾಡಿಕೊಂಡು ಬಂದ ದೈವಜ್ಞ ಸಮಾಜ ಮತ್ತು ವಿಶ್ವಕರ್ಮ ಸಮಾಜದ ಸಹಕಾರ ದಲ್ಲಿ ಕಾಮಗಾರಿಯನ್ನು ನಡೆಸಲಾಗುವುದು ಎಂದು ತಿಳಿದುಬಂದಿದೆ. ವೆಂಕಟೇಶ ಶೇಟ್‌ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುವರು. ಸ್ವರ್ಣ ಗೋಪುರವನ್ನು ರಾಮನವಮಿ ಸಂದರ್ಭ ಸಮರ್ಪಿಸಲು ನಿರ್ಧರಿಸಲಾಗಿದೆ.

ಕೆಳಗಡೆ ನಿಂತು ನೋಡಿದರೆ ಗರ್ಭಗುಡಿಯ ಮೇಲ್ಭಾಗ ಸಂಪೂರ್ಣವಾಗಿ ಗೋಚರಿಸದಿರುವುದರಿಂದ ಮುಂದಿನ ದಿನಗಳಲ್ಲಿ ಗರ್ಭಗುಡಿಯ ಮೇಲ್ಭಾಗ (ಸ್ವರ್ಣಗೋಪುರ)ಕ್ಕೆ ಪ್ರವೇಶ ಕಲ್ಪಿಸುವ ಯೋಜನೆಯೂ ಇದೆ ಎನ್ನಲಾಗಿದೆ. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಾಡಿಗೆ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಉಕ್ರೇನ್‌ ಆಸ್ಪತ್ರೆಗಳಲ್ಲೇ ಬಾಕಿ!

ಬಾಡಿಗೆ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಉಕ್ರೇನ್‌ ಆಸ್ಪತ್ರೆಗಳಲ್ಲೇ ಬಾಕಿ!

ಹಾಲಿನ ಬೃಹತ್‌ ಟ್ಯಾಂಕ್‌ ಸಿದ್ಧಪಡಿಸಿದ ರೈಲ್ವೇ ; 44,660 ಲೀ. ಸಂಗ್ರಹ

ಹಾಲಿನ ಬೃಹತ್‌ ಟ್ಯಾಂಕ್‌ ಸಿದ್ಧಪಡಿಸಿದ ರೈಲ್ವೇ ; 44,660 ಲೀ. ಸಂಗ್ರಹ

ಮೂಳೂರು : ವಾಹನಗಳೆರಡು ಢಿಕ್ಕಿ : ಸಂಚಾರ ಅಸ್ತವ್ಯಸ್ತ

ಮೂಳೂರು : ವಾಹನಗಳೆರಡು ಢಿಕ್ಕಿ, ಸಂಚಾರ ಅಸ್ತವ್ಯಸ್ತ

ಬಾಳೆಗೂ ಬಂತು ಬನಾನಾ ಕೋವಿಡ್‌ ; ಉತ್ತರ ಪ್ರದೇಶ, ಬಿಹಾರವೇ ಪ್ರಧಾನ ಹಾಟ್‌ಸ್ಪಾಟ್‌

ಬಾಳೆಗೂ ಬಂತು ಬನಾನಾ ಕೋವಿಡ್‌ ; ಉತ್ತರ ಪ್ರದೇಶ, ಬಿಹಾರವೇ ಪ್ರಧಾನ ಹಾಟ್‌ಸ್ಪಾಟ್‌

ಲಡಾಖ್, ಎಲ್ ಎಸಿ ಬಳಿ ಸೇನೆ ಜಮಾವಣೆ; ಯುದ್ಧ ಸನ್ನದ್ಧರಾಗಿ ಎಂದು ಕರೆ ಕೊಟ್ಟ ಚೀನಾ

ಲಡಾಖ್, ಎಲ್ ಎಸಿ ಬಳಿ ಸೇನೆ ಜಮಾವಣೆ; ಯುದ್ಧ ಸನ್ನದ್ಧರಾಗಿ ಎಂದು ಕರೆ ಕೊಟ್ಟ ಚೀನಾ

coviod19

ವಿಶ್ವದಾದ್ಯಂತ ಒಂದೇ ದಿನ 1 ಲಕ್ಷ ಜನರಿಗೆ ಸೋಂಕು: ಅಮೆರಿಕದಲ್ಲಿ 1ಲಕ್ಷ ದಾಟಿದ ಮೃತರ ಪ್ರಮಾಣ

‘ಜೈವಿಕ ಸುರಕ್ಷಾ ಕ್ರಿಕೆಟ್‌’ ಅವಾಸ್ತವಿಕ: ರಾಹುಲ್‌ ದ್ರಾವಿಡ್‌

‘ಜೈವಿಕ ಸುರಕ್ಷಾ ಕ್ರಿಕೆಟ್‌’ ಅವಾಸ್ತವಿಕ: ರಾಹುಲ್‌ ದ್ರಾವಿಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂಳೂರು : ವಾಹನಗಳೆರಡು ಢಿಕ್ಕಿ : ಸಂಚಾರ ಅಸ್ತವ್ಯಸ್ತ

ಮೂಳೂರು : ವಾಹನಗಳೆರಡು ಢಿಕ್ಕಿ, ಸಂಚಾರ ಅಸ್ತವ್ಯಸ್ತ

ಕಾಳಿಂಗ ನಾವಡರು ಇಂದಿಗೂ ಯಕ್ಷ ಮಾಣಿಕ್ಯ

ಕಾಳಿಂಗ ನಾವಡರು ಇಂದಿಗೂ ಯಕ್ಷ ಮಾಣಿಕ್ಯ

ಉಡುಪಿ ಜಿಲ್ಲೆ: ಮತ್ತೆ ಮೂವರಿಗೆ ಕೋವಿಡ್ ಸೋಂಕು ; 5,968 ಮಾದರಿ ವರದಿ ನಿರೀಕ್ಷೆಯಲ್ಲಿ

ಉಡುಪಿ ಜಿಲ್ಲೆ: ಮತ್ತೆ ಮೂವರಿಗೆ ಕೋವಿಡ್ ಸೋಂಕು ; 5,968 ಮಾದರಿ ವರದಿ ನಿರೀಕ್ಷೆಯಲ್ಲಿ

ಕೋವಿಡ್ ಪತ್ತೆ: ಹೇರೂರು, ಮೂಡುಬೆಟ್ಟು ಸೀಲ್‌ಡೌನ್‌

ಕೋವಿಡ್ ಪತ್ತೆ: ಹೇರೂರು, ಮೂಡುಬೆಟ್ಟು ಸೀಲ್‌ಡೌನ್‌

ಉಡುಪಿ: ಪೊಲೀಸರಲ್ಲೂ ಸೋಂಕು ಪತ್ತೆ ; ಇಲಾಖೆಯಿಂದ ಹಲವು ಮುನ್ನೆಚ್ಚರಿಕೆ

ಉಡುಪಿ: ಪೊಲೀಸರಲ್ಲೂ ಸೋಂಕು ಪತ್ತೆ ; ಇಲಾಖೆಯಿಂದ ಹಲವು ಮುನ್ನೆಚ್ಚರಿಕೆ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಬಾಡಿಗೆ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಉಕ್ರೇನ್‌ ಆಸ್ಪತ್ರೆಗಳಲ್ಲೇ ಬಾಕಿ!

ಬಾಡಿಗೆ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಉಕ್ರೇನ್‌ ಆಸ್ಪತ್ರೆಗಳಲ್ಲೇ ಬಾಕಿ!

27-May-01

ಭೂ ಸ್ವಾಧೀನಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಿ

ಕೃಷಿಹೊಂಡ-ಬದು ನಿರ್ಮಾಣಕ್ಕೆ  ಆದ್ಯತೆ ನೀಡಿ

ಕೃಷಿಹೊಂಡ-ಬದು ನಿರ್ಮಾಣಕ್ಕೆ ಆದ್ಯತೆ ನೀಡಿ

ಹಾಲಿನ ಬೃಹತ್‌ ಟ್ಯಾಂಕ್‌ ಸಿದ್ಧಪಡಿಸಿದ ರೈಲ್ವೇ ; 44,660 ಲೀ. ಸಂಗ್ರಹ

ಹಾಲಿನ ಬೃಹತ್‌ ಟ್ಯಾಂಕ್‌ ಸಿದ್ಧಪಡಿಸಿದ ರೈಲ್ವೇ ; 44,660 ಲೀ. ಸಂಗ್ರಹ

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಪುನರಾರಂಭ

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಪುನರಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.