ಶ್ರೀಕೃಷ್ಣ ಮಠ: ಹನುಮಜ್ಜಯಂತಿ ಆಚರಣೆ

Team Udayavani, Apr 20, 2019, 6:10 AM IST

ಭಜನಾ ಕಾರ್ಯಕ್ರಮವನ್ನು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ವತಿಯಿಂದ 13ನೇ ವರ್ಷದ ಹನುಮ ಜಯಂತಿ ಉತ್ಸವವು ಶುಕ್ರವಾರ ಮಠದಲ್ಲಿ ಶ್ರದ್ಧಾಭಕ್ತಿಯಿಂದ ಜರಗಿತು.

ಬೆಳಗ್ಗೆ ವಾಯುಸ್ತುತಿ ಪುರಶ್ಚರಣ ಹೋಮ, ಶ್ರೀಕೃಷ್ಣ ಮಹಾಮಂತ್ರ ಹೋಮ, ಮಹಾಮಂತ್ರ ಹೋಮ, ಕಷ್ಣನಿಗೆ ವಜ್ರ ಕವಚ, ಹೂವಿನ ಸೇವೆ ಜರಗಿತು. ಬೆಳಗ್ಗೆ 9.30ರಿಂದ ಮಧ್ವಮಂಟಪದಲ್ಲಿ ವಿವಿಧ ತಂಡ ಗಳಿಂದ ಭಜನೆ, ಚಂದ್ರಶಾಲೆಯಲ್ಲಿ ಬೆಳಗ್ಗೆ 11.30ರಿಂದ 3.30ವರೆಗೆ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಮತ್ತು ಬಳಗದವರಿಂದ ಭಕ್ತಿಗಾನ ಸುಧೆ, ರಾಜಾಂಗಣದಲ್ಲಿ ಪಡುಬಿದ್ರಿ ಚಂದ್ರಕಾಂತ ಹಾಗೂ ಬಳಗದವರಿಂದ ಸುಗಮ ಸಂಗೀತ, ಸಂಜೆ 4ರಿಂದ 7 ರವರೆಗೆ ಪುತ್ತಿಗೆ ಚಂದ್ರಶೇಖರ್‌ ಅವರಿಂದ ಸಾಕೊÕàಫೋನ್‌ ಸೇವೆ ನಡೆಯಿತು.

ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಭಜನಾ ಕಾರ್ಯಕ್ರಮ ಉದ್ಘಾಟಿಸಿದರು ಮತ್ತು ಪಾಕಶಾಲೆಯಲ್ಲಿ ಪಲ್ಲ ಪೂಜೆಯನ್ನು ನೆರವೇರಿಸಿದರು. ಅನಂತರ ರಾಜಾಂಗಣ ದಲ್ಲಿ ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಅನಂತರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ಬ್ರಹ್ಮರಥ, ಸ್ವರ್ಣರಥ, ನವರತ್ನರಥ
ಸೇವೆ ಜರಗಿತು.

ಸೇವಾ ಸಮಿತಿಯ ಪ್ರಮುಖರಾದ ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್‌, ಜಿತೇಶ್‌ ಕಿದಿಯೂರು, ಯವರಾಜ್‌ ಸಾಲ್ಯಾನ್‌ ಮಸ್ಕತ್‌, ಮಧುಸೂದನ ಪೂಜಾರಿ, ಮಾಧವ ಸುವರ್ಣ, ಈಶ್ವರ್‌ ಚಿಟ್ಟಾಡಿ, ಮನೋಹರ್‌ ಶೆಟ್ಟಿ, ಎಂ.ಎಸ್‌. ಭಟ್‌ ಮಲ್ಪೆ, ಮಠದ ಪಿಆರ್‌ಒ ಶ್ರೀಶ
ಕಡೆಕಾರ್‌ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

  • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

  • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...

  • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

  • ಕುಂದಾಪುರ: ಮಳೆ ನೀರಿಂಗಿಸುವ ಮೂಲಕ ನೀರನ್ನು ಕಾದಿಟ್ಟು ಕೊಳ್ಳಿ. ಪ್ರತಿಯೊಬ್ಬರೂ ನೀರುಳಿ ಸುವ ನಿಟ್ಟಿನಲ್ಲಿ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ. ನೀರು ಎಂದರೆ...

  • ಮಂಗಳೂರು: ದೇಶದ 17ನೇ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಇದು ಎ. 11ರಂದು ಆರಂಭವಾದ 7 ಹಂತಗಳ ದೀರ್ಘ‌ ಚುನಾವಣಾ ಪ್ರಕ್ರಿಯೆ; ಪೂರ್ಣಗೊಂಡದ್ದು...